ಬಾದಾಮಿಯ ಭೂತನಾಥ ದೇವಾಲಯ

ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಗುಹಾ ದೇವಾಲಯಗಳ ಪಕ್ಕದಲ್ಲಿ ಅಗಸ್ತ್ಯ ತೀರ್ಥ ಎಂಬ ಕೆರೆಯಿದೆ. ಈ ಕೆರೆಯಲ್ಲಿ ಎರಡು ಸುಂದರ ದೇವಾಲಯಗಳಿವೆ.ಇವುಗಳಿಗೆ ಭೂತನಾಥ ದೇವಾಲಯ ಎಂದು ಹೆಸರು. ಅಗಸ್ತ್ಯ ತೀರ್ಥದ ಪೂರ್ವದಲ್ಲಿರುವ ದೇವಾಲಯ ಹಳೆಯದು. ಇದನ್ನು ವಾತಾಪಿಯ ಚಾಲುಕ್ಯರು ಕಟ್ಟಿಸಿದ್ದರು. ಉತ್ತರ ಮತ್ತು ದಕ್ಷಿಣ ಭಾರತೀಯ ಶೈಲಿಯ ಅಪೂರ್ವ ಸಂಗಮವನ್ನು ಈ ದೇವಾಲಯದ ರಚನೆಯಲ್ಲಿ ಕಾಣಬಹುದು.ತೀರ್ಥದ ಈಶಾನ್ಯ ಭಾಗದಲ್ಲಿರುವ ಮಲ್ಲಿಕಾರ್ಜುನ ದೇವಾಲಯವನ್ನು ಕಲ್ಯಾಣಿಯ ಚಾಲುಕ್ಯರು ಕಟ್ಟಿಸಿದ್ದರು. ಇದರಲ್ಲಿ ಚಾಲುಕ್ಯರ ಪಿರಾಮಿಡ್ ಶೈಲಿಯ ವಾಸ್ತುಶಿಲ್ಪದ ಮಾದರಿಯನ್ನು ಕಾಣಬಹುದು.

ಒಂದು ಕಾಲದಲ್ಲಿ ಈ ದೇವಾಲಗಳು ಜೈನರ ವಶದಲ್ಲಿದ್ದವು. ಆ ಬಳಿಕ ಶೈವರು ಇಲ್ಲಿ ಶಿವಲಿಂಗ ಮತ್ತು ನಂದಿಯನ್ನು ಸ್ಥಾಪಿಸಿದರು.