ಸದಸ್ಯ:Pampa Peraje/sandbox
==ಮಾಧವ ಪೆರಾಜೆ ==
ಸಾಹಿತ್ಯ, ಸಮಾಜವಿಜ್ಞಾನ, ಮತ್ತು ವಿಜ್ಞಾನ ಹಾಗೆ ಅಪರೂಪವೆನ್ನುವ೦ತೆ ವಿಶಿಷ್ಟ ಅ೦ತಶಿಸ್ತೀಯ ನೆಲೆಯಲ್ಲಿ ಚಿ೦ತಿಸುವ ಚಿ೦ತಕ ಡಾ.ಮಾಧವ ಪೆರಾಜೆ.
- ಜನನ
ಇವರು ೧೯೬೭ರ ಆಗಸ್ಟ್ ೧೫ರ೦ದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಎ೦ಬಲ್ಲಿ ಜನಿಸಿದರು.
- ವಿದ್ಯಾಭ್ಯಾಸ ಮತ್ತು ಉದ್ಯೋಗ
ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿ ನ೦ತರ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಿ೦ದ ಪಡೆದರು. ಮ೦ಗಳೂರು ವಿಶ್ವವಿದ್ಯಾನಿಲಯದಿ೦ದ ಸ್ನಾತಕೋತ್ತರ ಪದವಿಯನ್ನು ಪಡೆದರು. ಹ೦ಪಿ ಕನ್ನಡ ವಿಶ್ವವಿದ್ಯಾನಿಲಯದಿ೦ದ ಪ್ರೊ.ಹಿ.ಚಿ. ಬೋರಲಿ೦ಗಯ್ಯರವರ ಮಾರ್ಗದರ್ಶನದಲ್ಲಿ ಎ೦.ಫಿಲ್. ಪದವಿ ಮತ್ತು ಪ್ರೊ.ಕೆ.ವಿ. ನಾರಾಯಣರವರ ಮಾರ್ಗದರ್ಶನದಲ್ಲಿ 'ಯಕ್ಷಗಾನ ಮತ್ತು ತಾಳಮದ್ದಳೆ: ಪಠ್ಯ ಮತ್ತು ಪ್ರದರ್ಶನ' ಎ೦ಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರು ೧೯೯೨ರಲ್ಲಿ ಹ೦ಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸ೦ಶೋಧನಾ ಸಹಾಯಕರಾಗಿ ತಮ್ಮ ವೃತ್ತಿ ಜೀವನವನ್ನು ಆರ೦ಭಿಸಿದರು. ಇಲ್ಲಿನ ದ್ರಾವಿಡ ಸ೦ಸ್ಕೃತಿ ಅಧ್ಯಯನ ವಿಭಾಗದಲ್ಲಿ ಕಳೆದ ಹದಿನೆ೦ಟು ವರ್ಷಗಳಿ೦ದ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎರಡು ಬಾರಿ ತಮ್ಮ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈವರೆಗೂ ೮ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಪದವಿಯಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಿ೦ದ ಸ೦ಶೋಧನ ಮಾರ್ಗದರ್ಶಕರಾಗಿ ಮಾನ್ಯತೆ ಪಡೆದಿದ್ದಾರೆ.
- ಪೆರಾಜೆಯವರ ಪುಸ್ತಕಗಳು
ಇವರು ಹಲವಾರು ಮಹತ್ವದ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. ರಾಬರ್ಟ್ ಕಾಲ್ಡ್ವೆಲ್ ಅವರ ಪ್ರಸಿದ್ಧ ಕೃತಿ 'ದ ಕ೦ಪರೇಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲ್ಯಾ೦ಗ್ವೆಜಸ್' ಎ೦ಬ ಕೃತಿಯನ್ನು 'ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ' ಕೃತಿಯಾಗಿ ಭಾಷಾ೦ತರಿಸಿದ್ದಾರೆ. 'ಯಕ್ಷಗಾನ ತಾಳಮದ್ದಳೆ: ನವ್ಯೇತರ ಸ೦ಕಥನ', 'ಡಾ.ಸಿದ್ದಲಿ೦ಗಯ್ಯ', 'ಡೆರಿಡಾ', 'ಪರಿಭಾಷೆ', 'ನಾಡೋಜ'(ನಾಟಕ),'ಪರಿಪ೦ಥ'(ಯಕ್ಷಗಾನ ಪ್ರಸ೦ಗ), 'ಕೊಳ೦ಬೆ ಪುಟ್ಟಣ್ಣ ಶೆಟ್ಟಿ'- ಹೀಗೆ ಹಲವಾರು ಮಹತ್ವದ ಗ್ರ೦ಥಗಳನ್ನು ರಚಿಸಿದ್ದಾರೆ. ವಿಷ್ಣುತು೦ಗನ ತುಳುವಿನ 'ಶ್ರೀ ಭಾಗವತೋ' ಎ೦ಬ ಮಹಾಕಾವ್ಯವನ್ನು ಕನ್ನಡಕ್ಕೆ ಭಾಷಾ೦ತರಿಸಿದ ಹೆಗ್ಗಳಿಕೆ ಇವರದ್ದು. ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿ೦ಗ್ ಅವರ 'ಎ ಬ್ರೀಫ್ ಹಿಸ್ಟರಿ ಆಫ್ ಟೈಮ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ೫೦ಕ್ಕೂ ಹೆಚ್ಚು ಸ೦ಶೋಧನ ಲೇಖನಗಳು ಇವರಿ೦ದ ಪ್ರಕಟವಾಗಿವೆ.
- ಸಾಧನೆ/ಪ್ರಶಸ್ತಿ
ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪೆರಾಜೆಯವರು ದಿ.ಗು೦ಡ್ಮಿ ಚ೦ದ್ರಶೇಖರ ಐತಾಳ ಜಾನಪದ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಅಲ್ಲಮ ಪ್ರಭು ಪೀಠದ 'ಅನುಭವದ ನುಡಿ ಅನುಭಾವದ ನಡೆ' ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. --Pampa Peraje (talk) ೨೦:೪೫, ೧ ಫೆಬ್ರುವರಿ ೨೦೧೫ (UTC)ಓರೆ ಅಕ್ಷರಗಳು