ಸದಸ್ಯ:PREEMA JASMINE FERRAO/ನನ್ನ ಪ್ರಯೋಗಪುಟ

ಗುರುತ್ವಕರ್ಷಣ ತರಂಗ

ಗುರುತ್ವಕರ್ಷಣ ತರಂಗಗಳನ್ನು ಕಂಡುಹಿಡಿದ್ದದ್ದು ಹೇಗೆ? ಆಕಾಶದ ವಿವಿಧ ಭಾಗಗಳಿಂದ ಬರುತ್ತಿರುವ ಸೂಕ್ಷ್ಮ ಕಿರಣಗಳ ಶೋಧನೆ ನಡೆಸುತ್ತಿದ್ದ ಅಮೇರಿಕಾದ ವಿಜ್ಞಾನಿಗಳು 1964ರಲ್ಲಿ ರೇಡಿಯೋ ದೂರದರ್ಶಕ ಬಳಸಿ 'ವಿಶ್ವ ಹಿನ್ನೆಲೆ ಕಿರಣ'ವನ್ನು ಕಂಡುಹಿಡಿದರು. 'ವಿಶ್ವ ಹಿನ್ನೆಲೆ ಕಿರಣ'ವು ಅತಿಶೀತಲ ತಾಪಮಾನ ಮೈನಸ್ 737 ಡಿಗ್ರಿ ಸೆಲ್ಸಿಯಸ್ ಹೊಂದಿದೆ. ಇವುಗಳನ್ನು ಮತ್ತಷ್ಟು ಶೋಧಿಸಲು 1992 ರಲ್ಲಿ ಕೋಬ್ (ಸಿಒಬಿಇ) ಎಂಬ ಉಪಗ್ರಹವನ್ನು ಬಳಸಲಾಯಿತು. ಇದರಿಂದ ಬೇರೆ ಬೇರೆ ಜಾಗದ ಸಾಂದ್ರತೆಗನುಗುಣವಾಗಿ ಉಷ್ಣಾಂಶದಲ್ಲಿ ವ್ಯತ್ಯಾಸವಿರುವುದು ತಿಳಿಯಿತು. ಇಂದಿನ ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ರಚನೆಗಳನ್ನು ಈ ವಿಭಿನ್ನ ಸಾಂದ್ರತೆಯು ಬೀಜಾಂಕುರದಂತೆ ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ. ಬೆಳಕು ತರಂಗದಂತೆ ಕೆಲವೊಂದು ದಿಕ್ಕಿನಲ್ಲಿ ಹೊಯ್ದಾಡುತ್ತದೆ. ಇದನ್ನು ಧ್ರುವೀಕರಣ ಎನ್ನುತ್ತಾರೆ. ಆ ಸಂದರ್ಭದಲ್ಲಿ ರೂಪುಗೊಂಡ ಪ್ರತಿ ಪೋಟಾನ್ ಗೆ ಈ ಧ್ರುವೀಕರಣವಿರುತ್ತದೆ. ಆದರೆ ಗುರುತ್ವವು ಬೆಳಕನ್ನು ಒಳಗೊಂಡಂತೆ ವಿಶ್ವದಲ್ಲಿರುವ ಎಲ್ಲವನ್ನೂ ವಕ್ರಗೊಳಿಸುತ್ತದೆ. 'ವಿಶ್ವ ಹಿನ್ನೆಲೆ ಕಿರಣ'ವು ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ಅಕ್ಕಪಕ್ಕದಲ್ಲಿ ವಿಶ್ವದ ಮೂಲಕ ಚಲಿಸುವಾಗ ಅಷ್ಟು ದೊಡ್ಡ ಆಕಾಶಕಾಯಗಳ ಗುರುತ್ವಶಕ್ತಿಯಿಂದಾಗಿ ವಕ್ರಗೊಳ್ಳುತ್ತದೆ. ಹೀಗೆ ವಕ್ರಗೊಂಡಾಗ ಬಿ-ವಿಧಾನದ ಧ್ರುವೀಕರಣ ಉಂಟಾಗುತ್ತದೆ. ಕಳೆದ ವಾರ ದಕ್ಷಿಣ ಧ್ರುವದ ಬಳಿ ಬೈಸೆಪ್-2 ಎಂಬ ದೂರದರ್ಶಕವು 'ವಿಶ್ವ ಹಿನ್ನೆಲೆ ಕಿರಣ'ದಲ್ಲಿರುವ ಬಿ-ವಿಧಾನದ ಗುರುತ್ವಕರ್ಷಣ ತರಂಗಗಳನ್ನು ದಾಖಲಿಸಿದೆ. 1929ರಲ್ಲಿ ಹಬಲ್ ಎಂಬ ಪ್ರಖ್ಯಾತ ಖಗೋಳವಿಜ್ಞಾನಿ ಅತಿ ಶಕ್ತಿಶಾಲಿ ದೂರದರ್ಶಕಗಳನ್ನು ಬಳಸಿದ. ಅದರಲ್ಲಿ ದೂರದ ಆಕಾಶಕಾಯಗಳು ದೂರ ದೂರ ಸರಿಯುತ್ತಿರುವುದನ್ನು ಗಮನಿಸಿ ವಿಶ್ವ ವಿಸ್ತಾರವಾಗುತ್ತಿದೆ ಎಂದು ಪ್ರತಿಪಾದಿಸಿದ. 1927ರಲ್ಲಿ ಬೆಲ್ಜಿಯಂ ದೇಶದ ಪಾದ್ರಿ ಮತ್ತು ಖಗೋಳವಿಜ್ಞಾನಿ ಜಾರ್ಜ್ ಲಿಮೈಟ್ರೆ ಮಹಾಸ್ಫೋಟದ ಸಿದ್ದಾಂತವನ್ನು ನೆನ್ನೆಯಿಲ್ಲದ ದಿನ ಎಂದು ಕರೆದ. ಏಕೆಂದರೆ ಮಹಾಸ್ಫೋಟವೆಂಬುದು ಕಾಲ ಮತ್ತು ಸ್ಥಳ ಆರಂಭವಾದ ಕ್ಷಣವಾಗಿತ್ತು. ಮಹಾಸ್ಫೋಟ ಸಂಭವಿಸಿದಾಗಿನಿಂದ ಸ್ಥಳದ ಉದ್ದಕ್ಕೂ ದ್ರವ್ಯವನ್ನು ಏಕತೆರನಾಗಿ ಕೂರಿಸಲು ವಿಜ್ಞಾನಿಗಳು ಹೆಣಗುತ್ತಿದ್ದರು. ಹೀಗಾಗಿ ಮಹಾಸ್ಫೋಟ ಸಂಭವಿಸಿದ ಸೆಕೆಂಡಿನ ಮೊದಲ ಕ್ಷಣಾರ್ಧದಲ್ಲಿ ವಿಶ್ವ ತೀವ್ರಗತಿಯಲ್ಲಿ ವಿಸ್ತರಣೆ ಅಥವಾ ಹಿಗ್ಗಿದೆ ಎಂದು 1970ರಿಂದೀಚೆಗೆ ಪ್ರತಿಪಾದಿಸತೊಡಗಿದರು. ಆದರೆ ಇದನ್ನು ಖಾತರಿಪಡಿಸಿಕೊಳ್ಳುವುದೇ ಸಮಸ್ಯೆಯಾಗಿತ್ತು. ವಿಶ್ವ ಹಿಗ್ಗಿದ್ದಲ್ಲಿ ಮಾತ್ರವೇ ಆದಿಸ್ವರೂಪದ ಗುರುತ್ವ ತರಂಗಗಳು ರೂಪುಗೊಳ್ಳಲು ಸಾಧ್ಯವಿತ್ತು. ಇದೀಗ ಆದಿಸ್ವರೂಪದ ಗುರುತ್ವ ತರಂಗಗಳನ್ನು ದಾಖಲಿಸಲು ಸಾಧ್ಯವಾಗಿರುವುದರಿಂದ ಮಹಾಸ್ಫೋಟದ ಸೆಕೆಂಡಿನ ಮೊದಲ ಕ್ಷಣಾರ್ಧದಲ್ಲಿ ವಿಶ್ವ ವೇಗದಿಂದ ಹಿಗ್ಗಿದೆ ಎಂದು ಅರ್ಥ.