ವಿಶು:

ವಿಶು ಹಬ್ಬ ಎಂದರೆ ನಮ್ಮ ತುಳುನಾಡಿಗೆ ಹೊಸ ವರ್ಷದ ಸಂಭ್ರಮ. ಜನ ಮನೆ ಮನೆಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಬಿಸು ಪರ್ಬ ಎಂಬುದು ಯುಗಾದಿ ಹಬ್ಬಕ್ಕೆ ಸಮಾನವಾದ ಹಬ್ಬ. ಮಾಂಸದ ಖಾದ್ಯವನ್ನು ವಿಶು ಹಬ್ಬಕ್ಕೆ ತುಳುನಾಡಿನಲ್ಲಿ ಮಾಡುವುದು ವಾಡಿಕೆ.

ಹೀಗೆ ನಮ್ಮ ತುಳುನಾಡಿನ ಪರಂಪರೆ ಅನನ್ಯವಾದುದು. ನಾಗರೀಕರಣ ಬೆಳೆದರೂ ವಿದೇಶಿ ಸಂಸ್ಕೃತಿ ನಮ್ಮನ್ನು ಆಕ್ರಮಿಸಿಕೊಂಡರೂ ತುಳು ಸಂಸ್ಕೃತಿ ಮಾತ್ರ ತನ್ನ ಛಾಪನ್ನು ಇನ್ನೂ ಉಳಿಸಿಕೊಂಡಿದೆ. ಹಾಗಾಗಿ ತುಳುನಾಡಿನಲ್ಲಿ ತುಳುವಿನ ರಕ್ಷಣೆಗಾಗಿ ಹೋರಾಟಗಳು ನಡೆಯುತ್ತಿವೆ. ಪ್ರಸ್ತುತ ಕರ್ನಾಟಕ ಸರಕಾರ ಪಠ್ಯ ಮಾಲಿಕೆಯಲ್ಲೂ ತುಳುವನ್ನು ಸೇರಿಸಿಕೊಂಡಿದೆ. ತುಳುನಾಟಕ, ಕವನಗಳು ನಿರಂತರವಾಗಿ ಬಿಡುಗಡೆ ಹೊಂದುತ್ತಿದೆ. ತುಳು ಸಂಘಗಳು, ತುಳು ಕೂಟಗಳು ಅಲ್ಲಲ್ಲಿ ರಚನೆಯಾಗಿವೆ. ತುಳುವಿನ ಮಹತ್ವ ಮರೆಯಾಗದಿರಲಿ ಎಂಬುದೇ ನಮ್ಮೆಲ್ಲರ ಹಾರೈಕೆ.