ಆತ್ಮಬಲ
ಭಗವಂತನ ಅದ್ಭುತ ಸೃಷ್ಟಿಯಲ್ಲಿ ಒಂದು ಮಾನವನ ಸೃಷ್ಟಿ. ಆತ ಮಾನವನಿಗೆ ಉಳಿದ ಎಲ್ಲಾ ಜೀವಿಗಳಿಗಿಂತ ಹೆಚ್ಚು ಶಕ್ತಿ, ಸಾಮಾಥ್ಯವನ್ನು ನೀಡಿದ್ದಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ಜೀವನಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ.
ಜನತೆ ತಮ್ಮ ಸುಖಕ್ಕಿಂತ ಹೆಚಹಚು ದು:ಖಕ್ಕೆ ಪ್ರಾಮುಖ್ಯ ಕೊಡುತ್ತಾರೆ. ಏನನ್ನೋ ಪಡೆದುಕೊಂಡ ಸಂತೋಷಕ್ಕಿಂತ ಹೆಚ್ಚು ಏನಾನ್ನಾದರೂ ಕಳೆದುಕೊಂಡ ದು:ಖವೇ ಕಾಡುತ್ತದೆ. ಯಾವುದೇ ತೊಂದರೆ ಬರಲಿ ಚಿಂತೆಗೆ ಬಿದ್ದು ಒದ್ದಾಡುತ್ತಾರೆ.
ಜೀವನದಲ್ಲಿ ಯಾರಿಗೆ ಕಷ್ಟ ಬರುವುದಿಲ್ಲ ಹೇಳಿ? ನಮಗೆ ಎಷ್ಟೇ ಕಷ್ಟ ಬಂದರು ಅದನ್ನು ಎದುರಿಸುವೆ ಎನ್ನುವ ಶಕ್ತಿ ಸಾಮಾಥ್ಯ ನಮ್ಮಲ್ಲಿರಬೇಕು. ಕಷ್ಟವು ಕೂಡ ಅದೇ ರೀತಿ, ಆದರೆ ಆ ಕಷ್ಟವನ್ನು ಎದುರಿಸಲು ನಮ್ಮಲ್ಲಿ ಆತ್ಮಬಲವಿರಬೇಕು. ಯಾವುದೇ ಕಾಯವನ್ನು ಸಾಧಿಸಲು ಸಾಧ್ಯವಾದ ಶಕ್ತಿ ನಮ್ಮಲ್ಲಿರಬೇಕು. ಆದರೆ ಅದಕ್ಕಾಗಿ ಮನಸ್ಸು ಮತ್ತು ಆತ್ಮಬಲ ಬೇಕು. ಮಾನವನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಲೇಬೇಕು.