ಪರಿಚಯ ಬದಲಾಯಿಸಿ

ನನ್ನ ಹೆಸರು ನಿತಿನ್ ಕುಮಾರ್ ಆರ್. ನಾನು 1999 ಏಪ್ರಿಲ್ 3 ರಂದು ಬೆಂಗಳೂರಿನಲ್ಲಿರುವ ಹಿಮಲಯ ಆಸ್ಪತ್ರೆಯಲ್ಲಿ ರಾಜು ಮತ್ತು ಭಾಗ್ಯ ದಂಪತಿಯ ಮಗನಾಗಿ ಜನಿಸಿದೆ. ನನ್ನ ತಂದೆ ಬೊಮ್ಮಸಂದ್ರ ದಲ್ಲಿರುವ ಕಬ್ಬಿಣದ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನ್ನ ತಾಯಿ ಗೃಹಿಣಿ. ನನ್ನ ಅಕ್ಕನ ಹೆಸರು ನೇತ್ರ.ನನ್ನ ಅಕ್ಕ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ವಿದ್ಯಾಭ್ಯಾಸ ಬದಲಾಯಿಸಿ

 
ವಿಧಾನ ಸೌಧ

ನಾನು ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿರುವ ಎಸ್ ಎಫ್ ಎಸ್ ಶಾಲೆಯಲ್ಲಿ ಮುಗಿಸಿದೆ. ನನ್ನ ಅಕ್ಕ ನನಗೆ ಓದುವು ದರಲ್ಲಿ ಸಹಾಯವನ್ನು ಮಾಡಿದ್ದಾಳೆ. ನಾನು ಶಾಲೆಯಲ್ಲಿ ಓದುವಾಗ ವಿದ್ಯಾಭ್ಯಾಸದ ಜೊತೆಗೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದೆ. ನನಗೆ ನೃತ್ಯ ಮಾಡುವುದೆಂದರೆ ಬಹಳ ಇಷ್ಟ.ಶಾಲೆಯಲ್ಲಿ ನಡೆಸುವ ಹಲವಾರು ಕಾರ್ಯಕ್ರಮಗಳಲ್ಲಿ ನಾನು ನೃತ್ಯವನ್ನು ಮಾಡಿ ಗೆದ್ದಿದ್ದೇನೆ. ಶಾಲೆಯಲ್ಲಿ ನಡೆಸುವ ಎಲ್ಲಾ ಚಟುವಟಿಕೆಗಳಲ್ಲಿ ನಾನು ಭಾಗವಹಿಸಿದೆ. ಶಿಕ್ಷಕರ ದಿನಾಚರಣೆಯಲ್ಲಿ ನಾನು ಮತ್ತು ನನ್ನ ಸ್ನೇಹಿತರು ಸೇರಿ ಮಾಡಿದೆವು.ನನಗೆ ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಬರಲು ಕಾರಣ ನನಗೆ ಚೆನ್ನಾಗಿ ಹೇಳಿಕೊಟ್ಟ ನನ್ನ ಶಾಲೆಯ ಶಿಕ್ಷಕರು. ಅವರು ನನಗೆ ಹಲವಾರು ರೀತಿಯಲ್ಲಿ ಸಹಾಯವನ್ನೂ ಮಾಡಿದ್ದಾರೆ. ಹತ್ತನೆಯ ತರಗತಿ ಪರೀಕ್ಷೆ ಮುಗಿದಮೇಲೆ ನಾನು ಮತ್ತು ನನ್ನ ಸ್ನೇಹಿತರು ಮಂಗಳೂರಿಗೆ ಹೋಗಿ ಒಳ್ಳೆಯ ಸಮಯವನ್ನು ಕಳೆದೆವು.ಬೇಸಿಗೆ ರಜೆಯಲ್ಲಿ ನಾನು ನನ್ನ ತಂದೆ-ತಾಯರೊಂದಿಗೆ ಊರಿಗೆ ಹೋಗಿ ಅಲ್ಲಿಯೂ ಸಹ ಒಳ್ಳೆಯ ಸಮಯವನ್ನು ಕಳೆದೆ.ನಾನು ಹತ್ತನೇ ತರಗತಿಯಲ್ಲಿ 625ದಕ್ಕೆ ಶೇಕಡಾ 585 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನಲ್ಲಿ ಪಾಸಾಗಿದೆ.ನಾನು ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜಿಗೆ ತೆರಳಿದಾಗ ನನ್ನ ಸಂತೋಷದ ಜೊತೆಗೆ ನನಗೆ ಬಹಳ ದುಃಖವಾಯಿತು.

ಕಾಲೇಜಿನ ದಿನಗಳು ಬದಲಾಯಿಸಿ

 
ಕ್ರೈಸ್ಟ್ ಯೂನಿವರ್ಸಿಟಿ
 
ಗೋವಾ ಚರ್ಚ್
 

ನಾನು ಒಳ್ಳೆಯ ಅಂಕಗಳನ್ನು ಹತ್ತನೇ ತರಗತಿಯಲ್ಲಿ ಪಡೆದು ಡೈರಿ ಸರ್ಕಲ್ ನಲ್ಲಿರುವ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ನನ್ನ ಶಿಕ್ಷಣವನ್ನು ಮುಂದುವರಿಸಿದೆ.ನನಗೆ ವೊದಲು ಯಾರು ಪರಿಚಯ ವಾಗಲಿಲ್ಲ.ನಂತರ‌‌ ನಾನು ಎಲ್ಲರೊಂದಿಗೆ ಸರಿವೊಂದಿದೆ.ನನಗೆ ಹಲವಾರು ಸೇಹ್ಮಿತರಾದರು. ನನಗೆ ಓದುವುದರ ಜೊತೆಗೆ ಹಲವಾರು ಸಮಯದಲ್ಲಿ ಹಲವಾರು ಒಳ್ಳೆಯ ಕತೆ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ.ನಾನು ಫುಟ್ಬಾಲ್ ಎಂಬ ಕ್ರೀಡೆಯನ್ನು ಸಹಾ ಇಷ್ಟಪಟ್ಟು ಆಡುತ್ತಿದ್ದೆ.ದಿನ ಕಳೆದಂತೆ ಪರೀಕ್ಷೆ ಹತ್ತಿರವಾಯಿತು.ಚೆನ್ನಾಗಿ ಓದಿ ಪರೀಕ್ಷೆಯನ್ನು ಬರೆದು ನಾನು ಅಲ್ಲಿಯು ಸಹಾ ಒಳ್ಳೆಯ ಅಂಕಗಳನ್ನು ಪಡೆದೆ.ನಾನು ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಮುಗಿಸಿದೆ.ನಂತರ ನನಗೆ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಸೀಟು ಸಿಕ್ಕಿತು. ನಾನು ಈಗ ಬಿಕಾಂ ವಿದ್ಯಾರ್ಥಿಯಾಗಿ ಕ್ರೈಸ್ಟ್ ಯುನಿವರ್ಸಿಟಿ ಯಲ್ಲಿ ಓದುತ್ತಿದೇನೆ.ನಾನು ಮನೆಯಲ್ಲಿರುವಾಗ ಟೀವಿಯನ್ನು ನೋಡಿ ಕಾಲ ಕಳೆಯುತ್ತೇನೆ.ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಲು ತುಂಬಾ ಇಷ್ಟ ನನಗೆ.ಹಲವಾರು ಚಿತ್ರಗಳನ್ನು ನಾನು ನನ್ನ ಸ್ನೇಹಿತರೊಡನೆ ಚಿತ್ರಮಂದಿರಗಳಲ್ಲಿ ನೋಡಿದ್ದೇನೆ.ನನಗೆ ಸ್ನೇಹಿತರೊಂದಿಗೆ ಸುತ್ತಾಡುವುದಂದರೆ ಬಹಳ ಇಷ್ಟ.ರಜೆ ದಿನಗಳಲ್ಲಿ ನಾನು ನನ್ನ ಸ್ನೇಹಿತರೊಡನೆ ಗೋವಾ ಮತ್ತು ಮಂಗಳೂರಿಗೆ ಹೋಗಿದೆ.ಅಲ್ಲಿ ನಾವೆಲ್ಲರೂ ಸೇರಿ ಒಳ್ಳೆಯ ಸಮಯವನ್ನು ಕಳೆದೆ.ನಾನು ಕಾಲೇಜಿನಲ್ಲಿ ಕೂಡುವ ಎಲ್ಲಾ ರೀತಿಯ ಪ್ರಾಜೆಕ್ಟ್ಗಳನ್ನು ಆಸಕ್ತಿಯಿಂದ ಮಾಡಿ ಮುಗಿಸುತ್ತೇನೆ.ಓಳ್ಳೆಯ ಅಂಕಗಳನ್ನು ಸಹಾ ನಾನು ಗಳಿಸುತ್ತೇನೆ. ಕಾಲೇಜಿನಲ್ಲಿ ನಡೆಯುವ ಹಲವಾರು ಚಟುವಟಿಕೆಗಳಲ್ಲಿ ನಾನು ಭಾಗವಹಿಸುತ್ತೇನೆ. ಭಾಗವಹಿಸಿರುವ ಚಟುವಟಿಕೆಗಳಲ್ಲಿ ನಾನು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದೇನೆ. ಇನ್ನೂ ಹಲವಾರು ಚಟುವಟಿಕೆಗಳಲ್ಲಿ ನಾನೂ ಭಾಗವಹಿಸುತ್ತಿದ್ದೇನೆ. ಅದರ ಜೊತೆಗೆ ನನಗೆ ನನ್ನ ಕುಟುಂಬದೊಡನೆ ಕಾಲ ಕಳೆಯುವುದೆಂದರೆ ನನಗೆ ತುಂಬಾ ಇಷ್ಟ. ನನ್ನ ಕುಟುಂಬದಲ್ಲಿ ನಡೆಯುವ ಎಲ್ಲಾ ಸಮಾರಂಭಗಳಲ್ಲೂ ಸಹ ನಾನು ಭಾಗವಹಿಸಲು ಇಷ್ಟಪಡುತ್ತೇನೆ. ಅದರ ಜೊತೆಗೆ ನಾನು ಕರ್ನಾಟಕದಲ್ಲಿರುವ ಹಲವಾರು ಜಾಗಗಳಿಗೆ ಹೋಗಿ ನನ್ನ ಕುಟುಂಬ ದೊಡನೆ ಸಮಯವನ್ನು ಕಳೆದಿದ್ದೇನೆ. ಈ ಮೂಲಕ ನನಗೆ ಸಂತೋಷವೂ ಸಹ ಆಗಿದೆ. ನನಗೆ ತಿನ್ನುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಸಿಹಿ ತಿಂಡಿಗಳು ಎಂದರೆ ನನಗೆ ತುಂಬಾ ಇಷ್ಟ. ನನಗೆ ಇಷ್ಟವಾದ ನಾಯಕ ಯಶ್. ಇಷ್ಟವಾದ ನಾಯಕಿ ರಾಧಿಕಾ ಪಂಡಿತ್. ನನಗೆ ಬೈಕಿನಲ್ಲಿ ಹೋಗುವುದೆಂದರೆ ಬಹಳ ಇಷ್ಟ.

ಗುರಿ ಬದಲಾಯಿಸಿ

ನನ್ನ ಗುರಿ ನಾನು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದು ಮತ್ತು ಒಳ್ಳೆಯ ಕಂಪನಿಯಲ್ಲಿ ಕೆಲಸವನ್ನು ಮಾಡಿ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದು. ಅದರ ಜೊತೆಗೆ ನಾನು ಸಿಎ ಆಗಬೇಕೆಂಬ ಆಸೆ. ಇದರ ಜೊತೆಗೆ ನಾನು ಒಳ್ಳೆಯ ಸಾಧನೆಯನ್ನು ಮಾಡಬೇಕೆಂಬುದು ನನ್ನ ಆಸೆ ಮತ್ತು ಕೆಲವರಿಗೆ ಸಹಾಯವನ್ನು ಮಾಡಲು ನನಗೆ ಇಷ್ಟ. ಈ ಮೂಲಕ ನಾನು ನನ್ನ ತಂದೆ ಮತ್ತು ತಾಯಿಗೆ ಒಳ್ಳೆಯ ಮಗನಾಗಿ ಇರಲು ಇಷ್ಟಪಡುತ್ತೇನೆ. ನನಗೆ ನೃತ್ಯ ಮಾಡುವುದರಲ್ಲಿ ಆಸಕ್ತಿ ಇರುವುದರಿಂದ ನಾನು ನೃತ್ಯವನ್ನು ಸಹಾ ಮಾಡುತ್ತೇನೆ.ನನ್ನ ತಂದೆತಾಯಿಯರ ಆಸೆಯನ್ನು ನಾನು ಪೂರ್ಣಗೊಳಿಸುತ್ತೇನೆ ಮತ್ತು ಅವರಿಗೆ ತಕ್ಕ ಮಗನಾಗಿ ಜೀವನವನ್ನು ಸಾಗಿಸಲು ಇಷ್ಟಪಡುತ್ತೇನೆ.