Nikitha 123456
ನಿಗಮ ಎಂಬುದು ಒಂದು ಕ್ರಮಬದ್ಧ(ವ್ಯವಸ್ಥಿತ) ವ್ಯಾಪಾರ ಸಂಘಟನೆಯಾಗಿದ್ದು, ಸಾರ್ವಜನಿಕವಾಗಿ ನೋಂದಾಯಿಸಲಾದ ಹಕ್ಕುಪತ್ರದ ನಿಯಮಾವಳಿಯ ಆಧಾರ ಹೊಂದಿದೆ. ಇದನ್ನು ಪ್ರತ್ಯೇಕ ಕಾನೂನಿನ ಘಟಕವೆಂದು ಗುರುತಿಸಲಾಗುತ್ತದೆ. ಇದು ಅದರದೇ ಆದ ಸವಲತ್ತು ಮತ್ತು ಜವಾಬ್ದಾರಿಯನ್ನು ಹೊಂದಿದ್ದು, ಇದರ ಸದಸ್ಯರ ವ್ಯಕ್ತಿಗತ ಚಟುವಟಿಕೆಗಳಿಗಿಂತ ಭಿನ್ನವಾಗಿದೆ. ನಿಗಮಗಳಲ್ಲಿ ಅನೇಕ, ವಿಭಿನ್ನ ರಚನೆಗಳಿವೆ, ಅವುಗಳಲ್ಲಿನ ಬಹುಪಾಲನ್ನು ವ್ಯಾಪಾರ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ನಿಗಮಗಳು,ಕಾರ್ಪೋರೆಟ್ ಕಾನೂನಿನ ಉತ್ಪನ್ನವೆಂಬಂತೆ ಅಸ್ತಿತ್ವದಲ್ಲಿವೆ. ಅಲ್ಲದೇ ಅವುಗಳ ನಿಯಮಗಳು,ನಿಗಮ,ಸಾಲದಾತರು, ಷೇರುದಾರರು, ಮತ್ತು ಕೆಲಸ ಮಾಡುವ ಶ್ರಮಿಕ ನೌಕರರನ್ನು ನೋಡಿಕೊಳ್ಳುವ ಆಡಳಿತ ಮಂಡಳಿಯ ಆಸಕ್ತಿಯನ್ನು ಸಮತೋಲನದಲ್ಲಿಡುತ್ತದೆ. ಆಧುನಿಕ ಕಾಲದಲ್ಲಿ, ನಿಗಮಗಳು ಆರ್ಥಿಕ ಬದುಕಿನ (ಜೀವನದ) ಪ್ರಮುಖ ಭಾಗವಾಗಿ ಬೆಳೆಯುತ್ತಿವೆ.
ಸೀಮಿತ ಹೊಣೆಗಾರಿಕೆಯು ನಿಗಮದ ಒಂದು ಪ್ರಮುಖ (ಆದರೆ ಸಾರ್ವತ್ರಿಕವಾಗಲ್ಲ) ಗುಣಲಕ್ಷಣವಾಗಿದೆ. ಒಂದು ವೇಳೆ ನಿಗಮ ವಿಫಲವಾದಲ್ಲಿ, ಸಾಮಾನ್ಯವಾಗಿ ಷೇರುದಾರರು ಕೇವಲ ಅವರ ಪಾಲಿನ ಬಂಡವಾಳವನ್ನು ಮಾತ್ರ ಕಳೆದುಕೊಳ್ಳುತ್ತಾರೆ ಹಾಗು ನೌಕರರು ಅವರ ಕೆಲಸ ಕಳೆದುಕೊಳ್ಳುತ್ತಾರೆ. ಆದರೆ ನಿಗಮದ ಸಾಲದಾತರಿಗೆ ಪಾವತಿಸಬೇಕಾದ ಸಾಲಕ್ಕೆ ಇವರು ಜವಾಬ್ದಾರರಾಗುವುದಿಲ್ಲ.
ಸಹಜವಾದ ವ್ಯಕ್ತಿಯಾಗಿಲ್ಲದಿದ್ದರೂ ಕೂಡ ಕಾನೂನು ನಿಗಮಗಳನ್ನು ಸಹಜವಾದ ವ್ಯಕ್ತಿಯಂತೆ("ಜನರು") ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿವೆ ಎಂದು ಪರಿಗಣಿಸುತ್ತದೆ. ನಿಗಮಗಳು, ನಿಜವಾದ ವ್ಯಕ್ತಿಯ ಮೇಲೆ ಮತ್ತು ರಾಷ್ಟ್ರದ ಮೇಲೆ ಮಾನವ ಹಕ್ಕುಗಳನ್ನು ಚಲಾಯಿಸಬಹುದಾಗಿವೆ,ಅಲ್ಲದೇ ಅವು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಜವಾಬ್ದಾರರಾಗಬಲ್ಲವು. ನಿಗಮಗಳ ಸದಸ್ಯರು ಸಂಘಟನಾ ಪ್ರಮಾಣಪತ್ರ(ಸರ್ಟಿಫಿಕೆಟ್ ಆಫ್ ಇನ್ ಕಾರ್ಪೊರೇಷನ್)ವನ್ನು ಪಡೆದ ನಂತರ ಇವುಗಳು ತಮ್ಮ ಅಸ್ತಿತ್ವದೊಂದಿಗೆ "ಹುಟ್ಟುತ್ತವೆ". ಅಲ್ಲದೇ ಕಾನೂನು ಸಮ್ಮತ ಕಾರ್ಯಚಟುವಟಿಕೆ ಉಲ್ಲಂಘಿಸಿದಾಗ, ನ್ಯಾಯಾಲಯದ ಆದೇಶದ ಮೇರೆಗೆ ಅಥವಾ ಷೇರುದಾರರು ಸ್ವತಃ ಇದನ್ನು ಮುಂದುವರೆಸಲು ನಿರಾಕರಿಸಿದಾಗ ಇವು "ಕೊನೆಗಾಣು"ತ್ತವೆ. ದಿವಾಳಿತನದ ಫಲಿತಾಂಶವೆಂದರೆ ನಿಗಮದ "ಸಾವೆನಿಸಿದೆ". ಸಾಲದಾತರು ನ್ಯಾಯಾಲಯದ ಆದೇಶದಂತೆ ನಿಗಮವನ್ನು ಅಂತಿಮ ತೀರ್ಮಾನದಡಿ ಅಂತ್ಯಗೊಳಿಸಲು ಒತ್ತಾಯಿಸಿದಾಗ ನಿಗಮ ವಿಸರ್ಜಿಸಲ್ಪಟ್ಟು ದಿವಾಳಿಯಾಗುತ್ತದೆ. ಆದರೆ ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ನಿಗಮವನ್ನು ಪುನಃ ನಿರ್ಮಿಸಲಾಗಿದೆ. ನಿಗಮಗಳು, ವಂಚನೆ ಮತ್ತು ನರಹತ್ಯೆಯಂತಹ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಅಪರಾಧಿ ಸ್ಥಾನದಲ್ಲಿ ನಿಂತಿರುವುದು ರುಜುವಾತಾಗಿವೆ.
ಆದರೂ ಬೇರೆ ಬೇರೆ ಕಾನೂನು ವಲಯಗಳಲ್ಲಿ ಕಾರ್ಪೋರೆಟ್ ನಿಯಮಾವಳಿ ಭಿನ್ನವಾಗಿರುತ್ತದೆ. ವ್ಯಾಪಾರ ನಿಗಮದ ಪ್ರಮುಖ ನಾಲ್ಕು ಗುಣಲಕ್ಷಣಗಳು ಕೆಳಕಂಡಂತಿವೆ:
ಕಾನೂನು ವ್ಯಕ್ತಿತ್ವ ಸೀಮಿತ ಹೊಣೆಗಾರಿಕೆ ವರ್ಗಾಯಿಸಬಲ್ಲ ಷೇರುಗಳು ನಿರ್ದೇಶಕರ ಮಂಡಳಿ ವ್ಯವಸ್ಥೆಯಡಿ ಕೇಂದ್ರೀಕೃತ ಆಡಳಿತ