ಸದಸ್ಯ:Niekambli Nagaraj Shetty/ನನ್ನ ಪ್ರಯೋಗಪುಟ
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸ೦ಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎ೦ಬುದು ಒಂದು ಅಭಿಪ್ರಾಯ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪು ಗೊ೦ಡಿತೆ೦ದು ಶಿವರಾಮ ಕಾರ೦ತರ "ಯಕ್ಷಗಾನ ಬಯಲಾಟ" ಎ೦ಬ ಸ೦ಶೋಧನಾ ಪ್ರಬಂದಗಳ ಸಂಕಲನದಲ್ಲಿ ಹೇಳಿದೆ.[೩] ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎ೦ಬುದು ಬಹಳ ವಿದ್ವಾ೦ಸರು ಒಪ್ಪುವ ವಿಚಾರ.[೪]