ಹುಟ್ಟಿ ಹನ್ನೊಂದನೇಯ ದಿನಕ್ಕೆ ಇಟ್ಟ ಹೆಸರು ನಾಗರಾಜ್. ಸದ್ಯಕ್ಕೆ ಕರೆಯಲ್ಪಡುತ್ತಿರುವುದು ನಾಗರಾಜ್ ಶೆಟ್ಟಿ ನೈಕಂಬ್ಳಿ. ಈ ಭುವಿಯ ಬೆಳಕು ಕಂಡಿದ್ದು ಮತ್ತು ಓದಿ ಬೆಳೆದ ಊರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೈಕಂಬ್ಳಿ. ಓದಿದ್ದು ಜೆಎಸ್‌ಎಸ್ ಮೈಸೂರಿನಲ್ಲಿ. ಆರಂಭಿಕ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ.


ಪ್ರಸ್ತುತ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಬುದು ವೃತ್ತಿ.

ಪ್ರೇರಣಾ ಯುವ ವೇದಿಕೆ (ರಿ.) ನೈಕಂಬ್ಳಿ, ಜೈ ಭಾರ್ಗವ ಬಳಗ, ಟೀಮ್ ಅಭಿಮತ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಳಮದ್ದಳೆ ಘಟಕ ನೈಕಂಬ್ಳಿ, ಯಕ್ಷ ಸಂಕ್ರಾಂತಿ ಮಿತ್ರ ಕೂಟ, ಎಂಬೆಲ್ಲ ವಿವಿಧ ಸಮಾನ ಮನಸ್ಕರೊಡನೆ ಶ್ರಮವಹಿಸಲಾಗಿದೆ.

ತಾಳಮದ್ದಳೆಯಲ್ಲಿ ಅರ್ಥ ಹೇಳುವುದು, ಯಕ್ಷಗಾನದ ವೇಷಗಳನ್ನು ಮಾಡುವುದು ಎಂಬೆಲ್ಲ ಪ್ರಯತ್ನಗಳನ್ನು ಮಾಡಲಾಗಿದೆ.

ಯಕ್ಷಸಂಕ್ರಾಂತಿ ಎಂಬ ಯಕ್ಷಗಾನದ ಕಾರ್ಯಕ್ರಮಗಳನ್ನು ಬೆಂಗಳೂರು, ಮಾರಣಕಟ್ಟೆ, ಮೈಸೂರು, ಹೊಸಕೋಟೆ ಹೀಗೆ ವಿವಿಧ ಭಾಗಗಳಲ್ಲಿ ಸಂಘಟಿಸಲಾಗಿದೆ.

ಲೇಖನಗಳು, ಜಾಲತಾಣದಲ್ಲಿ ಬರವಣಿಗಳು, ಓದಿನ ಆಸಕ್ತಿ ಈ ತನಕ ಜೀವಂತಿಕೆ ಇರಿಸಿದ ಬದುಕಿನ ಖುಷಿಗಳು.