Navya1940463
ನನ್ನ ಬಗ್ಗೆ
ನನ್ನ ಹೆಸರು ಎಮ್.ನವ್ಯ ನನ್ನ ಮಾತೃ ಭಾಷೆ ಕನ್ನಡ. ನಾನು ಒಂದರಿಂದ ಹತ್ತನೇ ತರಗತಿಯವರೆಗೆ ಹೆಚ್ ಎ ಎಲ್ ಜ್ಞಾನ ಜ್ಯೋತಿ ಶಾಲೆಯಲ್ಲಿ ಓದಿದ್ದೇನೆ. ನಂತರ ಪದವಿ ಪೂರ್ವ ಶಿಕ್ಷಣವನ್ನು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಓದಿದ್ದೇನೆ.ಈಗ ನನ್ನ ಪದವಿ (ಬಿ ಎಸ್ಸಿ) ಶಿಕ್ಷಣವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮುಂದುವರಿಸುತ್ತಿದ್ದೇನೆ.
ನನ್ನ ತಂದೆಯ ಹೆಸರು ಮಹಲಿಂಗಪ್ಪ ಎನ್ ಎನ್ . ನನ್ನ ತಾಯಿಯ ಹೆಸರು ಕೆ ಎಸ್ ಭಾಗ್ಯ ಮತ್ತು ನನ್ನ ತಂಗಿಯ ಹೆಸರು ಪ್ರಿಯ ಎಂ. ನನ್ನ ತಂದೆ ಎಚ್. ಎ. ಎಲ್. ನಲ್ಲಿ ಕೆಲಸ ಮಾಡುತಿದಾರೆ. ನನ್ನ ತಾಯಿ ಗೃಹಿಣಿ. ನನ್ನ ತಂಗಿ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಓದುತಿದಾಳೆ.
ನನ ಕಾಲೇಜಿನಲ್ಲಿ ಮತ್ತು ಶಾಲೆಯಲ್ಲಿ ತುಂಬಾ ಒಳ್ಳೆಯ ಶಿಕ್ಷಕರಿದ್ದರು. ಶಾಲೆಯ ಶಿಕ್ಷಕರು ನನಗೆ ತುಂಬಾ ಪ್ರೊತ್ಸಾಹಿಸುತಿದ್ದರು.ನಾನು ನನ್ನ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತೇನೆ, ಹಾಡು ಕೆಳುತ್ತೇನೆ, ಪುಸ್ತಕ ಓದುತ್ತೇನೆ ಮತ್ತು ಹಾಡು ಹಾಡುತ್ತೇನೆ .ಚಿತ್ರ ಬಿಡಿಸುವುದೆಂದದರೆ ನನಗೆ ತುಂಬಾ ಇಷ್ಟವಾದಮತ್ತು ಶಾಲೆಯಲ್ಲಿ ತುಂಬಾ ಒಳ್ಳೆಯ ಶಿಕ್ಷಕರಿದ್ದರು. ಶಾಲೆಯ ಶಿಕ್ಷಕರು ನನಗೆ ತುಂಬಾ ಪ್ರೊತ್ಸಾಹಿಸುತಿದ್ದರು.ನಾನು ನನ್ನ ಬಿಡುವಿನ ಸಮಯದಲ್ಲಿ ಚಿತ್ರ ಬಿಡಿಸುತ್ತೇನೆ, ಹಾಡು ಕೆಳುತ್ತೇನೆ, ಪುಸ್ತಕ ಓದುತ್ತೇನೆ ಮತ್ತು ಹಾಡು ಹಾಡುತ್ತೇನೆ .ಚಿತ್ರ ಬಿಡಿಸುವುದೆಂದದರೆ ನನಗೆ ತುಂಬಾ ಇಷ್ಟವಾದ ಹವ್ಯಾಸ .
ನಾನು ಐ.ಸಿ.ಎಸ್.ಸಿ ಪಟ್ಯ ಕ್ರಮದಲ್ಲೇ ಓದಿದರೂ ನನಗೆ ಕನ್ನಡ ಭಾಷೆಯ ಮೇಲೆ ತುಂಬಾ ಅಭಿಮಾನ. ನನಗೆ ಕನ್ನಡ ಭಾಷೆಯ ಮೇಲೆ ಗೌರವ ಇದೆ. ನನ್ನ ಸಹಪಾಠಿಗಳೊಂದಿಗೂ ನಾನು ಕನ್ನಡದಲ್ಲೇ ಮತನಾಡುವುದು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಗುರಿ ಇರಬೇಕು. ಹಾಗೆಯೇ ನನ್ನ ಗುರಿ ಶಿಕ್ಷಕಿಯಾಗುವುದು. ನಾನು ಮುಂದೆ ಭೌತಶಾಸ್ತ್ರದ ಶಿಕ್ಷಕಿಯಾಗ ಬೇಕು ಎಂದು ಕೊಂಡಿದ್ದೇನೆ. ಎಲ್ಲರಿಗೂ ಪಾಠವನ್ನು ಹೇಳಿಕೊಡುವುದೆಂದರೆ ನನಗೆಮೆಚ್ಚುಗೆಯ ವಿಷಯ. ಶಿಕ್ಷಕಿಯಾಗಿ ಜೀವನದಲ್ಲಿ ಮುಂದುವರೆಯುತ್ತೇನೆ ಎಂದರೆ ಮನೆಯಲ್ಲಿ ಎಲ್ಲರೂ ಪ್ರೋತ್ಸಾಹಿಸುತ್ತರೆ.
ಶಿಕ್ಷಕಿಯಾಗಿ ಮಕ್ಕಳಿಗೆ ಅಥವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಹೇಳಿಕೊಡಬಹುದು. ಈ ರೀತಿ ಮಾರ್ಗದರ್ಶಿಯಾಗಿ ನಡೆಯುವಂತೆ ಹೇಳಿಕೊಡಬಹುದು ಮತ್ತು ಈ ರೀತಿಯಾಗಿ ಉಪದೇಶ ಮಡಲು ಶಿಕ್ಷಕರಿಂದಲ್ಲದೆ ಯಾರಿಂದಲು ಸಾಧ್ಯಾವಿಲ್ಲ. ವಿಧ್ಯಾರ್ಥಿಗಳೆ ದೇಶದ ಮುಂದಿನ ಕಂಬಗಳು.
ಶಿಕ್ಷಕರ ಉದ್ಯೋಗಕ್ಕಿಂತ ಬೇರೆ ಯಾವ ಉದ್ಯೋಗವು ಉತ್ತಮವಿಲ್ಲ ಎಂದು ನನ್ನ ಅಭಿಪ್ರಾಯ. ಒಳೆಯ ಶಿಕ್ಷಕರಿಂದ ಹಾಗೂ ಅವರ ಶಿಕ್ಷಣದಿಂದ ಅತಿ ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರಬಹುದು.
ಈಗಿನ ವಿದ್ಯಾರ್ಥಿಗಳಿಗೆ ಒಳೆಯ ಮಾರ್ಗ ಯಾವುದು, ಕೆಟ್ಟ ಮಾರ್ಗ ಯಾವುದು ಎಂದು ತಿಳಿಯುವುದಿಲ್ಲ . ಹೀಗಾಗಿ ಪೋಷಕರು ಮತ್ತು ಶಿಕ್ಷಕರು ಈ ವಿಷಯದಲ್ಲಿ ಅತಿ ಹೆಚ್ಚಾಗಿ ಗಮನ ಕೊಡಬಹುದು.
ಈ ಎಲ್ಲಾ ಕಾರಣಗಳಿಂದಾಗಿ ನಾನು ಶಿಕ್ಷಕರ ಪಾತ್ರ ವಹಿಸಬೇಕೆಂದು ತೀರ್ಮಾನ ಮಾಡಿದ್ದೇನೆ.
ನನ್ನ ಮನೆಯಲ್ಲಿ ಕನ್ನಡ ಭಾಷೆಯಲ್ಲದೆ ಬೇರೆ ಯಾವ ಭಾಷೆಯನ್ನು ಮಾತನಾಡುವುದಿಲ್ಲ. ಕನ್ನಡ ಭಾಷೆ ಎಂದರೆ ಮನೆಯಲ್ಲಿ ಎಲ್ಲರಿಗೂ ಅಭಿಮಾನ. ಮನೆಯ ಎಲ್ಲಾ ಸದಸ್ಯರಿಗೂ ಕನ್ನಡ ಭಾಷೆಯ ಮೇಲೆ ತುಂಬಾ ಗೌರವ. ಕನ್ನಡ ಭಾಷೆಯ ಸಿನಿಮಾವನ್ನು ಮಾತ್ರ ಚಿತ್ರ ಮಂದಿರಕ್ಕೆ ಹೋಗಿ ನೋಡುತ್ತೇವೆ.
ಎಂಟು ಜ್ಞಾನ ಪೀಠ ಪ್ರಶಸ್ತಿ ಬಂದಿರುವ ನನ್ನ ಕನ್ನಡ ಭಾಷೆಯಂದರೆ ಎಲ್ಲಿಲ್ಲದ ಅಕ್ಕರೆ ಪ್ರೀತಿ. ಮನೆಯಲ್ಲಿ ಕನ್ನಡ ಭಾಷೆಯ ಪುಸ್ತಕಗಳನ್ನು ಬಹಳ ಹೆಚ್ಚಾಗಿ ಓದುತ್ತಾರೆ. ಹೀಗೆ ನನ್ನ ಎಲ್ಲಾ ಹವ್ಯಾಸಗಳೆಂದರೆ ನನ್ನ ಮನೆಯವರಿಗೆ ತುಂಬಾ ಇಷ್ಟ. ನನ್ನ ಹುಟ್ಟೂರು ಹಾಸನ
ಹಾಸನ
ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ.
ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.
ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ
ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ. ಜೈನಸ್ಮಾರಕಗಳಿಂದ ಕೂಡಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳವು ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ.
ಜನಪ್ರಿಯವಾಗಿ 'ಬಡವರ ಊಟಿ' ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 183 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಈ ನಗರವು ತನ್ನಲ್ಲಿರುವ ಹಾಸನಾಂಬೆಯ ದೇವಸ್ಥಾನದಿಂದಾಗಿ ಖ್ಯಾತಿ ಪಡೆಯುತ್ತಿದ.
ಹಾಸನವು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಕಾರ್ಯಸ್ಥಾನ. ದಕ್ಷಿಣ ಭಾರತದ ವಿಸ್ತಾರದ ಆಳ್ವಿಕೆಯನ್ನೊಳಗೊಂಡ ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿ ಹಾಸನ ಜಿಲ್ಲೆಯನ್ನು ತಮ್ಮ ಆಡಳಿತದ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದರು.