ವಿಕಿಪೀಡಿಯ ನನ್ನ ಮೆಚ್ಚಿನ ತಾಣ. ನಾನು ಅಚಾನಕ್ ಆಗಿ ಕನ್ನಡವು ಇಲ್ಲಿಗೂ ತನ್ನ ಪಾದವನ್ನ್ಯ್ ಚಾಚಿರುವದನ್ನೌ ಕಂಡೆ. ಏನ್ರೀ ನಮಗೆ ಗೊತ್ತೆ ಇರಲಿಲ್ಲಾ, ವಿಕಿಪೀಡಿಯದಲ್ಲೂ ಕನ್ನಡ ತನ್ನ ತುತ್ತೂರಿ ಬಾರಿಸಿಬಿಟ್ಟಿದೆ! ಕೂಡಲೇ ನನ್ನನ್ನು ಇದರೊಂದಿಗೆ ಜೋದಿಸಲು ನೊಂದಾಯಿಸಿದೆ, ಮಾರ್ಚ ೩೧ ೨೦೦೬ ರಂದು. ಆದೂ ಯುಗಾದಿ ಹಬ್ಬದ ನಂತರದ ದಿನ.


ಇವನು ಯಾರಾಪ, ಮೂಗುತೂರಿಸಾಕ ಬಂದ ಅಂತೀರೇನು? ಸ್ವಲ್ಪ ತಡೀರಿ, ಅದನ್ನ ಹೇಳಾಕತ್ತೀನಿ.

ಭರತ ಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ ಮಿನುಗುತಿಹ ಕನ್ನಡದ ಜ್ಯೋತಿ ನಾನು.

ಕನ್ನಡದ ತಾಯಿ ತಾವರೆಯ ಪರಿಮಳವುಂಡು ಬೀರುತಿಹ ಗಾಳಿ ನಾನು.


ಹಿ ಹಿ ಹಿ ಸುಮ್ಮನೆ ಅಂದ್ಯಾ ಬಿಡ್ರಿ, ಯವಾಗರ ನಾನು ಬೇಂದ್ರೆಯವರನ್ನ ಹಿಂಗ ಅವರ ಯಾವದರ ಹಾಡ ಹೇಳಿ ನೆನಿಪಿಸ್ಕೊಂತಿರತೀನಿ. ನಾನು ನವೀನ ರವಿಂದ್ರ ಹಿರೇಮಠ ಅಂತ. ಹುಟ್ಟಿದ್ದು ಬಾಗಲಕೋಟಿಯೊಳಗ, ಮತ್ತ ಬೆಳದಿದ್ದೂ, ಸಾಲಿ ಕಲಿತಿದ್ದೂ ಎಲ್ಲ ಎಲ್ಲಿ ಅಂತೀರೇನು? ಎಲ್ಲಾ ಅಲ್ಲೆ ನೊಡ್ರೆಪ. ಯಾರಿಗೆ ಹಡವ್ವನ ಬಿಟ್ಟು ದೂರ ಹೊಗಾಕ ಮನಸ್ಸು ಬರತೈತಿ ಹೇಳ್ರಿ?


ಬಾಗಲಕೋಟಿ ಬಸವೇಶ್ವರ ಹೈಸ್ಕೂಲಿನ್ಯಾಗ, ಬಸವೇಶ್ವರ ಸೈನ್ಸ ಕಾಲೇಜಿನ್ಯಾಗ ಓದಿ, ಕಡೀಗೆ ಬಸವೇಶ್ವರ ಇಂಜನೀಯರಿಂಗ ಕಾಲೇಜಿನ್ಯಾಗ ನನ್ನ ಬಿ.ಇ. ಡಿಗ್ರಿ ಮುಗಿಸಿದೆ. ಆಲ್ಲಿಂದ ಮುಂದೆ ಪೂನಾದಾಗ ತುಸು ದಿನ ಒಂದು ಕಂಪನ್ಯಾಗ ಕೆಲಸ ಮಾಡಿ, ಹೊಳ್ಳಿ ನಮ್ಮ ಬೆಂಗಳೂರಿಗೆ ಬಂದು, software ಕಂಪನ್ಯಾಗ ಸೆಟ್ಲ್ ಆಗೇನ್ರಿ.


ನನಗೂ ಕೈಲಾದಷ್ಟು ಇಲ್ಲಿ ನನ್ನ ಕಾಣಿಕೆ ಕೊಡೋಣ ಅಂತ ಐತಿ. ಆದ್ರ ಹೆಂಡ್ತಿ ಬಿಡತಾಳ ಅಂತ ತಿಳಕೊಂಡೀರೇನು? ಮತ್ತ ಕಂಪ್ಯೂಟರ ಮುಂದ ಕುಂತ್ರ್ಯಾ? ಅದನ್ನ ಮಾಡೂದಿತ್ತಂದ್ರ ನನ್ನ್ಯಾಕ ಲಗ್ನಾ ಆದ್ರಿ ಅಂತ ತಡಾಕಿಲ್ಲದ ಸುರು ಮಾಡೇ ಬಿಡತಾಳ. ಅಂದಂಗ ನಮ್ಮ ಮನೆಯವ್ರು ದಾವಣಗೇರೆ ಯವರು.


ನನ್ನೂರು [ಬಾಗಲಕೋಟಿ].


ನೀವು ಯೆಲ್ಲೆರ ಹೊಗ್ರಿ, ನಿಮ್ಮ ಊರು ಕೊಡೊ ಆನಂದ ಸಿಗುತ್. ನೀವು ಏನೇ ಹೇಳ್ರಿ ನಮ್ಮ ಊರ ನಮಗ ಚಂದ, ನಮ್ಮ ಭಾಷೆ ನ ನಮ ಶೋಭ.

ಇನ್ನ ಇದನ್ನ ಬರದಿಲ್ಲ. ತುಸು ಟಾಯಮ್ ಕೊಡ್ರಿ ಬರೀತೀನಿ.