ಸದಸ್ಯ:Naveenkumar.V.Bhat/ನನ್ನ ಪ್ರಯೋಗಪುಟ
ಬೆಳಕಿನ ದ್ವಿವರ್ತನೆ:ಬೆಳಕು ಏಕ ಕಾಲಕ್ಕೆ ಕಣ ಹಾಗೂ ಅಲೆಯಂತೆ ವತಿ೯ಸುತ್ತದೆ.ಇದನ್ನು ಬೆಳಕಿನ ದ್ವಿವರ್ತನೆ ಎಂದು ಕರೆಯುತ್ತಾರೆ. ಈ ವಿದ್ಯಮಾನವನ್ನು ಕ್ವಾಂಟಮ್ ಭೌತಶಾಸ್ತ್ರದ ನೆರವಿನಿಂದ ಶೋಧಿಸಲಾಯಿತು. ಯಾವುದೇ ಮಾನವ ನಿರ್ಮಿತ ಉಪಕರಣಗಳು ಬೆಳಕಿನ ಈ ಉಭಯ ಸ್ವಭಾವವನ್ನು ಏಕಕಾಲಕ್ಕೆ ಸೆರೆಹಿಡಿಯುವ ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ ನಮಗೆ ಬೇರೆ ಬೇರೆ ಸಮಯದಲ್ಲಿ ಬೆಳಕು ಒಂದು ಕಣ ಅಥವಾ ಅಲೆಯಂತೆ ಮಾತ್ರ ಗೋಚರಿಸುತ್ತದೆ.[೧]
ಇತಿಹಾಸ
ಬದಲಾಯಿಸಿಬೆಳಕು ಎರಡು ಸೀಳುಗಂಡಿಯ ಮೂಲಕ ಹಾದು ಹೋದಾಗ ಅದು ಅಲೆಯಂತೆ ವ್ಯತೀಕರಣ ಪರಿಣಾಮವನ್ನು ತೋರಿಸುತ್ತದೆ.ಇದನ್ನು ಥಾಮಸ್ ಯಂಗ್ ಎನ್ನುವ ವಿಜ್ಞಾನಿ ೧೮೦೧ ರಲ್ಲಿ ಶೋಧಿಸಿದನು.ನೇರಳಾತೀತ ಕಿರಣಗಳು ಒಂದು ಲೋಹದ ಮೇಲೆ ಬಿದ್ದಾಗ ಅದು ಇಲೆಕ್ಟ್ರಾನುಗಳನ್ನು ಹೊರಸೂಸುತ್ತದೆ. ಈ ವಿದ್ಯಮಾನವನ್ನು ಆಲ್ಬರ್ಟ ಐನ್ ಸ್ಟೈನ್ ೧೯೦೫ ರಲ್ಲಿ ಶೋಧಿಸಿ ಅದನ್ನು 'ದ್ಯುತಿ ವಿದ್ಯುತ್ ಪರಿಣಾಮ' ಎಂದು ಕರೆದರು. ಈ ಮೂಲಕ ಬೆಳಕು ಕೇವಲ ಅಲೆಯಂತೆ ಮಾತ್ರವಲ್ಲ ಅದು ಕಣದಂತೆಯೂ ವರ್ತಿಸುತ್ತದೆ ಎಂಬುದನ್ನು ಸಾಧಿಸಿದರು.
ಬೆಳಕಿನ ದ್ವಿವರ್ತನೆ ಹಾಗೂ ಕ್ವಾಂಟಮ್ ಸಿದ್ಧಾಂತ
ಬದಲಾಯಿಸಿಬೆಳಕಿನ ಕ್ವಾಂಟಮ್ ಸಿದ್ಧಾಂತವು ಬೆಳಕು ಫೋಟಾನ್ ಎಂಬ ಕಣಗಳಿಂದ ಆಗಿದೆ ಹಾಗೂ ಆ ಕಣಗಳು ಅಲೆಯ ಗುಣಗಳನ್ನು ಹೊಂದಿವೆ ಎಂದು ಹೇಳುತ್ತದೆ.[೨]
ಬೆಳಕಿನ ದ್ವಿವರ್ತನೆಯ ಪರಿಣಾಮಗಳು
ಬದಲಾಯಿಸಿಬೆಳಕಿನ ಕಣರೂಪವು ಹೇಗೆ ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ ಎಂಬುದನ್ನು ತಿಳಿಸಿದರೆ, ಅದರ ಅಲೆರೂಪವು ಹೇಗೆ ಬೆಳಕು ವಸ್ತುಗಳ ಸುತ್ತ ಬಾಗುತ್ತದೆ ಎಂಬುದನ್ನು ವಿವರಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ