ಸದಸ್ಯ:Nandinikyadav/ನನ್ನ ಪ್ರಯೋಗಪುಟ

ಮಿಂಚು ಹುಳ
ದೀಪ

ಎಲೆಲೆ! ದೇಪದ ಮಲ್ಲಿ,

ಎದೆಯ ಕತ್ತಲೆಯಲ್ಲಿ

ಪದುಮ ದೀಪದ ಹಿಡಿದು

ಬಾಗಿ ನಿಂತು

ಕವಿಗಿನಿತೆ ಬೆಳಕಿನಲ್ಲಿ

ಎಂಬ ಕಿರುನಗೆಯಲ್ಲಿ

ಹಿಗ್ಗಿ ಹೂವಾಯ್ತಿಂತು

ಪ್ರಾಣ ತಂತು.

ನೀನೆ ಕಂಚಿನ ಬೊಂಬೆ ?

ಅಲ್ಲ ಮಿಂಚಿನ ಬೊಂಬೆ ?

ಹಂಬಲವನೆದೆಯೊಳಗೆ

ತುಂಬಿದೊಲುಮೆ.

ಎಲ್ಲಿತ್ತೊ ಒಂದು ದನಿ,

ಎಲ್ಲಿತ್ತೊ ಒಂದು ಬನಿ,

ನಿನ್ನಿಂದ ಹಾಡಾಯ್ತು

ಅಮೃತವಾಯ್ತು.


   ಡಾ ಕೆ ಎಸ್ ನರಸಿಂಹಸ್ವಾಮಿಯವರು ಭಾರತದ ಮಹಾಕವಿಗಳಲ್ಲಿ ಒಬ್ಬರಾಗಿದ್ದಾರೆ.ಇವರು ೧೯೧೫ರಲ್ಲಿ ಜನಿಸಿದರು.ಇವರ ಸ್ಥಳ ಮಂಡ್ಯಾ ಜಿಲ್ಲೆಯ ಕಿಕೇರಿ 

ಇವರು ೧೯೩೪ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು.ಇವರ ಆನೇಕ ಕೃತಿಗಳಲ್ಲಿ ಮೈಸೂರು ಮಲ್ಲಿಗೆ ಕೃತಿಯು ಬಹಳ ಪ್ರಸ್ಸಿದ್ದಿ ಹೊಂದಿದೆ.ಇವರು ಬಹಳಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಇವರ ಎಷ್ಟೋ ಪ್ರಸ್ಸಿದ್ದಿ ಕವನಗಳಲ್ಲಿ "ದೀಪದ ಮಲ್ಲಿ"ಪದ್ಯವು ಒಂದಾಗಿದೆ.

  ಪ್ರಸ್ತುತ ಪದ್ಯದಲ್ಲಿ ನರಸಿಂಹಸ್ವಾಮಿಯವರು ಮಿಂಚಿನ ಹುಳವನ್ನು "ದೀಪದ ಮಲ್ಲಿ" ಎಂದು ವರ್ಣಿಸಿದ್ದಾರೆ.ಈ ಪದ್ಯದಲ್ಲಿ ಆ ಹುಳು ಬೀರುವ ಮಿಂಚನ್ನು ದೀಪಕ್ಕೆ

ಹೋಲಿಸಲಾಗಿದೆ.ದೀಪವು ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಕೊಡುತ್ತದೆ ಹಾಗೆಯೆ ಆ ಹುಳುವು ಮಿಂಚನ್ನು ಬೀರುತ್ತಾ ಬೆಳಕನ್ನು ಕೊಡುತ್ತದೆ ಎಂದು ಕವಿಯು ಪ್ರಸ್ತುತ ಪದ್ಯದಲ್ಲಿ ತಿಳಿಸಿದ್ದಾರೆ.

ಮಿಂಚು ಹುಳವು ತನ್ನ ಎದೆಯಲ್ಲಿ ಬೆಳಕನ್ನು ಬೀರುತ್ತ ಕತ್ತಲೆಯನ್ನು ದೂರ ಮಾಡುತ್ತದೆ.ಹಾಗೆಯೆ ಅದು ಕಮಲದಂತಹ ಬೆಳಕನ್ನು ತನ್ನ ಎದೆಯಲ್ಲಿ ಹಿಡಿದು,

ಬಾಗಿನಿಂತು ಬೆಳಕನ್ನು ಕತ್ತಲೆ ಎಡೆಗೆ ಚಲ್ಲುತ್ತದೆ.ಕವಿಗಿನಿತೆ ಬೆಳಕಿನಲ್ಲಿ ಆ ಮಿಂಚಿನ ಹುಳವು (ದೀಪದ ಮಲ್ಲಿ) ಕಿರುನಗೆಯನ್ನು ಬೀರುತ್ತಾ ಆ ಕಿರುನಗೆಯಲ್ಲಿ ಹಿಗ್ಗಿ ಹಿಗ್ಗಿ ಹೂವಿನಂತೆ ಕಾಣುತ್ತದೆ. ಈ ರೀತಿ ಮಿಂಚಿನ ಹುಳವು (ದೀಪದ ಮಲ್ಲಿ)ಹಿಗ್ಗಿ ಹೊವಾದಾಗ ಪ್ರಾಣ ತಂದುಕೊಡುತ್ತದೆ ಎಂದು ಕವಿ ಈ ಪದ್ಯದಲ್ಲಿ ತಿಳಿಸಿದ್ದಾರೆ.

  ಕವಿ ಪ್ರಸ್ತುತ ಪದ್ಯದಲ್ಲಿ ಮಿಂಚಿನ ಹುಳದ ಮಹಾತ್ವವನ್ನಲ್ಲದೆ ಆದರ ಆಕಾರ ಹಾಗು ಚಟುವಟಿಕೆಗಳನ್ನು ವರ್ಣಿಸಿ ಹೇಳಿದ್ದಾರೆ.ಕವಿಯು ಮಿಂಚಿನ ಹುಳವನ್ನು ಕಂಚಿನ ಗೊಂಬೆಗೂ ಹೋಲಿಸಿ ಓದುಗರಿಗೆ ಪ್ರಶ್ನೆಯನ್ನು ಕೆಳಿದ್ದಾರೆ  ಮತ್ತು ಬರಿ ಕಂಚಿನ ಗೊಂಬೆಗೆ ಹೋಲಿಸದೆ ಮಿಂಚಿನ ಗೊಂಬೆಗೂ ಹೋಲಿಸಿ ಪ್ರಶ್ನಿಸಿದ್ದಾರೆ.ಕವಿಯ ಮಿಂಚಿನ ಹುಳುವು ಮಿಂಚನ್ನು ಸಾರುವುದರಿಂದ ಅದನ್ನು ಮಿಂಚಿನ ಗೊಂಬೆ ಎಂದು ಕರೆದಿದ್ದಾರೆ.ಮಿಂಚಿನ ಹುಳುವು ಮಿಂಚನ್ನು ಬೀರುತ್ತದೆ ಅದನ್ನು ದೀಪಕ್ಕೆ ಹೋಲಿಸಿರುವುದರಿಂದ ಅದನ್ನು ಕಂಚಿನ ಗೊಂಬೆಯಂದು ಕರೆದಿದ್ದಾರೆ ,ಎಕೆಂದರೆ ದೀಪವು ಕಾಂಚಿನಿಂದಲೂ ಮಾಡಲಾಗುತ್ತದೆ ಆದರಿಂದ ಕವಿ ಈ ರೀತಿ ಹೇಳಿದ್ದಾರೆ.

ನಂತರ ಕವಿಯು ಹಂಬಲವನೆದೆಯೊಳಗೆ ತುಂಬಿದೊಲುಮೆ ಎಂದು ಮಿಂಚಿನ ಹುಳವನ್ನು ಕರೆದಿದ್ದಾರೆ .

ಕವಿಯು ಬರಿ ಮಿಂಚು ಹುಳದ ಮಹಾತ್ವವವನ್ನಲ್ಲದೆ ಅದರ ದನಿ ಮತ್ತು ಬನಿಯ ಕುರಿತು ಹೇಳಿದ್ದಾರೆ.ಅದರ ಶಬ್ದವನ್ನು ಕೇಳಿ ಕವಿಯು ಎಲ್ಲಿತ್ತೊ ಒಂದು ದನಿ ಮತ್ತು ಎಲ್ಲಿತ್ತೊ ಒಂದು ಬನಿ ಎಂದು ಅದರ ಕುರಿತು ಹೇಳಿದ್ದಾರೆ.ಕವಿಯು ಮಿಂಚು ಹುಳದ ಶಬ್ದವು ಹಾಡಿನಂತ್ತೆ ಇರುತ್ತದೆ ಎಂದು ಹೇಳಿದ್ದಾರೆ ಮತ್ತು ಆ ಹಾಡಿನಿಂದ ಆಮೃತವಾಯ್ತು ಎಂದು "ನಿನ್ನಿಂದ ಹಾಡಾಯ್ತು ಅಮೃತವಾಯ್ತು"ಈ ಸಾಲಿನಲ್ಲಿ ತಿಳಿಸಿದ್ದಾರೆ . 
ಹೀಗೆ ಕವಿಯ "ದೀಪದ ಮಲ್ಲಿ" ಎಂಬ ಪದ್ಯದಲ್ಲಿ ಮಿಂಚಿನ ಹುಳುವಿನ ಮಹಾತ್ವವನ್ನು ತಿಳಿಸಿದ್ದಾರೆ . ಈ ಪ್ರಸ್ತುತ ಪದ್ಯದಲ್ಲಿ ಕವಿಯು ಮಿಂಚಿನ ಹುಳುವನ್ನು ದೀಪಕ್ಕೆ ಹೋಲಿಕೆ ಮಾಡಿದ್ದಾರೆ .ದೀಪವು ಹೇಗೆ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತದೊ ಹಾಗೆಯೇ ಮಿಂಚು ಹುಳುವು ಕತ್ತಲಲ್ಲಿ ಬೆಳಗುತ್ತದೆ .ದೀಪದ ಹೋಲಿಕೆಯನ್ನಲ್ಲದೆ ಕವಿಯು ಅದರ ದನಿ ಕುರಿತು ಈ ಪ್ರಸ್ತುತ ಕವನದಲ್ಲಿ ಹೇಳಲಾಗಿದೆ.



ಉಲ್ಲೇಖಗಳು http://kannnada.oneindia.com/literatura https://wikipedia.org