ಎ.ಎನ್. ಶೀತಲ್ ಸ್ವಾಮಿ
Selfieee
ಜನನ
ಬೆಂಗಳೂರು
ರಾಷ್ಟ್ರೀಯತೆಭಾರತೀಯರು
ವಿದ್ಯಾಭ್ಯಾಸಬಿ.ಬಿ.ಎ
ವೃತ್ತಿವಿದ್ಯಾಭ್ಯಾಸ

ಹಾಯ್...ನಾನು ಎ.ಎನ್. ಶೀತಲ್ ಸ್ವಾಮಿ. ಕ್ರೈಸ್ಟ್ ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಪ್ರಥಮ ಬಿ.ಬಿ.ಎ ದ್ವಿತೀಯ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದೇನೆ. ನಿಮಗೆ ನನ್ನ ಬಗ್ಗೆ ತಿಳಿಸುವುದಕ್ಕಿಂತಲೂ ನನ್ನ ಕುಟುಂಬದ ಕಿರುಪರಿಚಯ ಮಾಡಿಕೊಡಲು ಆಶಿಸುತ್ತೇನೆ.ನಾವು ಹೆಚ್.ಎಸ್.ಆರ್ ಬಡಾವಣೆಯಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ನಾನು ಮತ್ತು ನನ್ನ ಇಬ್ಬರು ಮುದ್ದಿನ ತಂಗಿಯರು ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಅದರಲ್ಲೂ ನಾನು ಎಂದರೆ ತುಂಬಾ ಅಕ್ಕರೆ. ನಾನು ಹಿರಿಯ ಮಗಳಾದ ಕಾರಣ ಹೆಚ್ಚಿನ ಆದ್ಯತೆ ಕೊಡುತ್ತಾರೆ. ನಾನು ಬಿಡುವಿನ ಸಮಯದಲ್ಲಿ ನನ್ನ ತಾಯಿಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತೇನೆ. ನನ್ನ ತಂದೆಯವರು ಹೇಳದ ಕೆಲಸವನ್ನು ಮಾಡುತ್ತೇನೆ. ಹಾಗೇ ನನ್ನ ತಂಗಿಯರಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುತ್ತೇನೆ.

ಪ್ರವಾಸ

ಬದಲಾಯಿಸಿ

ನಮ್ಮ ಮನೆಯಲ್ಲಿ ರಜಾ ದಿನಗಳಲ್ಲಿ ಎಲ್ಲರೂ ಸೇರಿ ಪ್ರವಾಸಕ್ಕೆ ಹೋಗುತ್ತೇವೆ. ನಮಗೆ ಚಿಕ್ಕಮಗಳೂರಿಗೆ ಪ್ರವಾಸ ಹೋಗುವುದೆಂದರೆ ತುಂಬಾ ಇಷ್ಟ. ಅಲ್ಲಿಯ ವಾತಾವರಣ, ಪ್ರಕ್ಋತಿಯ ಸೊಬಗು , ಬೆಟ್ಟಗುಡ್ಡಗಳು, ನೀರಿನ ಝರಿಗಳು...ಇವೆಲ್ಲಾ ತುಂಬಾ ಸೊತೋಷ ನೀಡುವುದರಿಂದ ಪದೇ ಪದೇ ಅಲ್ಲಿಗೆ ಹೋಗಲು ಇಷ್ಟಪಡುತ್ತೇವೆ.ಪ್ರತಿ ಭಾನುವಾರ ನಾವು ಕನಕಪುರ ರಸ್ತೆಯಲ್ಲಿರುವ ಪಿರಮಿಡ್ ವ್ಯಾಲಿಗೆ ಹೋಗಿ ಧ್ಯಾನವನ್ನು ಮಾಡುತ್ತೇವೆ. ಅಲ್ಲಿಗೆ ಹೋದಾಗ ಮನಸ್ಸಿಗೆ ನೆಮ್ಮಧಿ, ಸಂತೋಷ ಸಿಗುತ್ತದೆ.

ಹವ್ಯಾಸ

ಬದಲಾಯಿಸಿ

ನನಗೆ ಭರತನಾಟ್ಯ ಎಂದರೆ ತುಂಬಾ ಇಷ್ಟ. ನಾನು ಐದು ವರ್ಷ ಭರತನಾಟ್ಯವನ್ನು ಕಲಿತಿದ್ದೇನೆ. ಅನೇಕ ಕಡೆಗಳಲ್ಲಿ ಸಮೂಹ ನೃತ್ಯಗಳಲ್ಲಿ ಭಾಗವಹಿಸಿದ್ದೇನೆ. ಕಾರ್ ಡ್ರೈವಿಂಗ್ ಮಾಡುವುದೂ ಸಹ ನನ್ನ ಪ್ರಿಯವಾದ ಹವ್ಯಾಸವಾಗಿದೆ. ಎಲ್ಲಾ ರೀತಿಯ ಕಾರುಗಳನ್ನು ಓಡಿಸಿದ್ದೇನೆ. ಕುಟುಂಬದವರ ಜೊತೆ, ಸ್ನೇಹಿತೆಯರ ಜೊತೆ ಲಾಂಗ್ ಡ್ರೈವಿಂಗ್ ಹೋಗುವುದನ್ನು ಹೆಚ್ಚು ಇಷ್ಟಪಡುತ್ತೇನೆ.ಶಾಪಿಂಗ್ ಎಂದರೂ ಸಹ ನನಗೆ ತುಂಬಾ ಇಷ್ಟ. ಆಗಾಗ್ಗೆ ಸ್ನೇಹಿತೆಯರ ಜೊತೆ ಮಾಲ್, ಹೋಟೆಲ್, ಸಿನಿಮಾಗೆ ಹೋಗುತ್ತಿರುತ್ತೇನೆ. ಹಬ್ಬ ಹರಿದಿನಗಳಲ್ಲಿ ಕುಟುಂಬದವರ ಜೊತೆ ಹೊರಗೆ ಹೋಗುತ್ತಿರುತ್ತೇನೆ. ಪುಟ್ಟ ಮಕ್ಕಳ ಜೊತೆ ಕಾಲಕಳೆಯುವುದನ್ನೂ ಸಹ ನಾನು ಇಷ್ಟಪಡುತ್ತೇನೆ. ಸಂಬಂಧಿಕರ,ಪರಿಚಿತರ ಮಕ್ಕಳೊಂದಿಗೆ ಸಮಯ ಕಳೆಯುತ್ತೇನೆ. ಅವರ ಜೊತೆ ಆಟವಾಡುತ್ತಾ, ಅವರಿಗೆ ತಿನ್ನಿಸುವುದು, ಸ್ನಾನ ಮಾಡಿಸುವುದು, ಅಲಂಕಾರ ಮಾಡುವುದು, ಆರೈಕೆ ಮಾಡುವುದು ನನ್ನ ಪ್ರೀತಿಯ ಕೆಲಸವಾಗಿದೆ.

ನನ್ನ ಗುರಿ

ಬದಲಾಯಿಸಿ

ನನ್ನ ತಂದೆ ಸಮಾಜ ಸೇವಕರಾಗಿರುವುದರಿಂದ ನನಗೂ ಸಹ ಅವರಂತೆ ಸಮಾಜಸೇವೆ ಮಾಡಬೇಕೆಂಬ ಅಭಿಲಾಷೆಯಿದೆ. ಅದನ್ನು ನನ್ನ ತಂದೆಯವರ ಬಳಿ ವ್ಯಕ್ತಪಡಿಸಿಯೂ ಇದ್ದೇನೆ. ನನ್ನ ಈ ಆಸಕ್ತಿಯನ್ನು ಕೇಳಿ ನನ್ನ ತಂದೆಯವರು ತುಂಬಾ ಸಂತೋಷಪಟ್ಟರು ಹಾಗೂ ನನಗೆ ಈ ದಿಶೆಯಲ್ಲಿ ಎಲ್ಲಾ ರೀತಿಯ ಸಹಕಾರ, ಸಲಹೆ, ಮಾರ್ಗದರ್ಶನ ನೀಡುತ್ತೇನೆಂದು ಭರವಸೆಯನ್ನು ನೀಡಿದ್ದಾರೆ.ಇದು ನನ್ನ ಮತ್ತು ನನ್ನ ಕುಟುಂಬದ ಒಂದು ಕಿರುಪರಿಚಯ.