ಸದಸ್ಯ:Myschandru/ಎ. ಕೆ. ಸಿಂಗ್
ಅಜಯ್ ಕುಮಾರ್ ಸಿಂಗ್ | |
---|---|
ಅಧಿಕಾರ ಅವಧಿ ಜುಲೈ ೮, ೨೦೧೩ – ಆಗಸ್ಟ್ ೧೭, ೨೦೧೬ | |
ಪೂರ್ವಾಧಿಕಾರಿ | ಭೂಪಿಂದರ್ ಸಿಂಗ್ |
ಉತ್ತರಾಧಿಕಾರಿ | ಜಗದೀಶ್ ಮುಖಿ |
ಅಧಿಕಾರ ಅವಧಿ ಜುಲೈ ೧೮, ೨೦೧೪ – ಮೇ ೨೯, ೨೦೧೬ | |
ಪೂರ್ವಾಧಿಕಾರಿ | ವಿರೇಂದ್ರ ಕಟಾರಿಯಾ |
ಉತ್ತರಾಧಿಕಾರಿ | ಕಿರಣ್ ಬೇಡಿ |
ವೈಯಕ್ತಿಕ ಮಾಹಿತಿ | |
ಜನನ | ೧೧ ಜನವರಿ ೧೯೫೩ |
ಲೆಫ್ಟಿನೆಂಟ್ ಜನರಲ್ ಅಜಯ್ ಕುಮಾರ್ ಸಿಂಗ್, ಪಿವಿಎಸ್ಎಂ, ಎವಿಎಸ್ಎಂ, ಎಸ್ಎಂ, ವಿಎಸ್ಎಂ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ [೧] [೨] ಅವರು ರೆವಾ ಸೈನಿಕ್ ಶಾಲೆ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಭಾರತೀಯ ಸೇನೆಯ ದಕ್ಷಿಣ ಕಮಾಂಡ್ನ ಮಾಜಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. [೩]
ಸಿಂಗ್ ಅವರನ್ನು ೨೦೧೩ರ ಜುಲೈನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ೧೧ನೇ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಯಿತು ಮತ್ತು ೨೦೧೩ರ ಜುಲೈ ೮ರಂದು ಅಧಿಕಾರ ವಹಿಸಿಕೊಂಡರು.[೪] ಅವರಿಗೆ ೨೦೧೪ರ ಜುಲೈಯಿಂದ ೨೦೧೬ರ ಮೇವರೆಗೆ ಪುದುಚೇರಿಯ ಆಡಳಿತದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.
ಅಂಡಮಾನ್ ನ ಮೊದಲ ವೈದ್ಯಕೀಯ ಕಾಲೇಜು, ಎಎನ್ಐಐಎಂಎಸ್(ANIIMS) [೫] ಮತ್ತು ಮತ್ತು ದಕ್ಷಿಣ ಅಂಡಮಾನ್ ನ ಎರಡನೇ ಪದವಿ ಕಾಲೇಜು, ಎಎನ್.ಸಿಓಎಲ್(ANCOL) ಅನ್ನು ಪ್ರಾರಂಭಿಸುವ ಮೂಲಕ ಅಂಡಮಾನ್ ಸಮಾಜಕ್ಕೆ ನೀಡಿದ ಕೊಡುಗೆಗಳಿಗೆ ಸಿಂಗ್ ಹೆಸರುವಾಸಿಯಾಗಿದ್ದಾರೆ.[೬]
೨೦೧೬ರ ಆಗಸ್ಟ್ ೧೯ರಂದು ಅಧಿಕಾರವನ್ನು ಹಸ್ತಾಂತರಿಸಿದ ನಂತರ ಸಿಂಗ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ [೭] ನಿರ್ಗಮಿಸಿದರು.
ಏರ್ ವರ್ಕ್ಸ ನ ಸ್ವತಂತ್ರ ನಿರ್ದೇಶಕರಾಗಿ ಎ. ಕೆ. ಸಿಂಗ್ ಅವರನ್ನು ನೇಮಿಸಲಾಯಿತು.[೮]
ಪ್ರಶಸ್ತಿಗಳು ಮತ್ತು ಅಲಂಕಾರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Sanjib Kumar Roy (17 ಆಗಸ್ಟ್ 2016). "(Prof) Jagdish Mukhi appointed Lt Governor of AN Islands: Lt Governor expresses gratitude to Islanders for their support & love". Andaman Sheekha. Retrieved 14 ಜೂನ್ 2016.
- ↑ "Najeeb Jung to be new Delhi LG". 2013. Archived from the original on 5 ಜುಲೈ 2013. Retrieved 5 ಜುಲೈ 2013.
- ↑ "Profile of Lieutenant Governor Andaman & Nicobar Islands". Andaman & Nicobar Administration. Archived from the original on 2 ಏಪ್ರಿಲ್ 2015. Retrieved 4 ಜುಲೈ 2013.
- ↑ "Lieutenant Governor of the Andaman and Nicobar Islands". Archived from the original on 2 ಏಪ್ರಿಲ್ 2015. Retrieved 12 ಮಾರ್ಚ್ 2014.
- ↑ "Andaman Sheekha LG expresses gratitude to PM, HM and MoH for Medical College". 2015. Retrieved 3 ಸೆಪ್ಟೆಂಬರ್ 2015.
- ↑ "Andaman Sheekha LG lays foundation stone for ANCOL". 2015. Retrieved 3 ಸೆಪ್ಟೆಂಬರ್ 2015.
- ↑ "LG delivers farewell address at DBRAIT". 2016. Archived from the original on 21 ಆಗಸ್ಟ್ 2016. Retrieved 20 ಆಗಸ್ಟ್ 2015.
- ↑ "Air Works appoints A K Singh independent director". The Times of India. 19 ಮೇ 2020.
Government offices | ||
---|---|---|
ಪೂರ್ವಾಧಿಕಾರಿ ಭೂಪಿಂದರ್ ಸಿಂಗ್ |
ಅಂಡಮಾನ್ ಮತ್ತು ನಿಕೋಬಾರ್ನ ಲೆಫ್ಟಿನೆಂಟ್ ಗವರ್ನರ್ ೨೦೧೩–೨೦೧೬ |
ಉತ್ತರಾಧಿಕಾರಿ ಜಗದೀಶ್ ಮುಖಿ |