Muthusudha
Joined ೪ ಆಗಸ್ಟ್ ೨೦೧೫
♦ಬಿ.ಸಿ.ಎ♦
ಆಧುನಿಕ ಯುಗದಲ್ಲಿ ಆಧುನೀಕರಣ ಅವಶ್ಯಕ ಮತ್ತು ಎಟುಕದಷ್ಟು ದೂರ ಮುಂದುವರೆದಿದೆ. ಅವುಗಳಲ್ಲಿ ಒಂದು ಗಣಕಯಂತ್ರವೂ ಒಂದು.ಗಣಕಯಂತ್ರದಿಂದ ಹಲವು ಬದಲಾವಣೆಗಳು ಸಾಧ್ಯವಾಗಿವೆ. ಗಣಕಯಂತ್ರದ ತಂತ್ರಜಾನ ಮತ್ತು ನಿರ್ವಹಣೆಯ ವಿಧ್ಯೆಯನ್ನು ಕಲಿಸುವ ಒಂದು ಕೋರ್ಸು ಬಿ.ಸಿ.ಎ(ಬ್ಯಾಚುಲರ್ ಓಫ್ ಕಂಪ್ಯೂಟರ್ ಅಪ್ಲಿಕೇಷನ್). ಐಟಿ ಕಂಪೆನಿಗಳಲ್ಲಿ ಉಂಟಾದ ಬೃಹತ್ ಬೃಹತ್ ಬದಲಾವಣೆ ಮತ್ತು ಭವಿಷ್ಯದಲ್ಲಿ ಆಗಬೇಕಾದ ಬದಲಾವಣೆಗಾಗಿ ಕಂಪ್ಯೂಟರ್ ಕಲಿಕೆಗೆ ಅಧಿಕ ಬೇಡಿಕೆ ಇದೆ. ಈ ಬದಲಾವಣೆ ಕಂಪ್ಯೂಟರ್ ಪದವಿ ಪಡೆದವರಿಗೆ ಅಧಿಕ ಲಾಭವನ್ನುಂಟು ಮಾಡುತ್ತಿದೆ. ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಲಿಚ್ಛಿಸುವ ಜನರಿಗೆ ಬಿ.ಸಿ.ಎ ಒಂದು ಪ್ರಚಲಿತ ಕೋರ್ಸ್ ಆಗಿದೆ.ಇದು ೩ ವರ್ಷದ ಕೋರ್ಸ್ ಆಗಿದ್ದು ಇಲ್ಲಿ ಡಾಟಾಬೇಸ್,ನೆಟ್ ವರ್ಕಿಂಗ್,ದಾಟಾ ಸ್ಟ್ರಕ್ಚರ್,ಪ್ರೋಗ್ರಾಮಿಂಗ್ ಎಂಬಿತ್ಯಾದಿಗಳನ್ನು ಕಲಿಸಲಾಗುತ್ತದೆ. ಈ ಪದವಿ ಯು ನಮ್ಮ ಭಾರತ ದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತುಂಬಾ ಬೇಡಿಕೆಯನ್ನು ಹೊಂದಿದೆ. ೩ ವರ್ಷದ ಕೋರ್ಸು ಮುಗಿದ ನಂತರ ಐಬಿಎಮ್,ಒರಾಕಲ್,ಇನ್ಫೊಸಿಸ್,ಗೂಗಲ್ ಗಳಂತಹ ಕಂಪೆನಿಗಳಲ್ಲಿ ಕೆಲಸ ಪಡೆಯಬಹುದು.ಈ ಕೋರ್ಸು ಖಾಸಗಿ ವಲಯದಲ್ಲಿ ಮಾತ್ರವಲ್ಲದೆ ಸರಕಾರಿ ವಲಯದಲ್ಲೂ ಉಧ್ಯೋಗ ವನ್ನು ಪಡೆಯಲು ಸಹಾಯಕ. ಇಂಜಿನೀಯರಿಂಗ್ ಕೋರ್ಸನ್ನು ಪಡೆಯಲು ಅಸಮರ್ಥರಾದಲ್ಲಿ ಈ ಕೋರ್ಸು ಕಂಪ್ಯೂಟರ್ ವಿಭಾಗದಲ್ಲಿ ಆಸಕ್ತರನ್ನು ಉತ್ತಮ ಭವಿಷ್ಯದೆಡೆಗೆ ಕೊಂಡೊಯ್ಯುತ್ತದೆ. ಈ ಕೋರ್ಸನ್ನು ೧೨ರಲ್ಲಿ ಯಾವುದೇ ವಿಭಾಗವನ್ನು ಆರಿಸಿದವರೂ ಕೂಡಾ ವ್ಯಾಸಂಗ ಮಾಡಬಹುದು. ಈ ಕೋರ್ಸನ್ನು ಮುಗಿಸಿ ಸ್ನಾತಕೋತ್ತರ ಪದವಿ ಎಂದರೆ ಎಮ್.ಸಿ.ಎ ಯನ್ನು ಪಡೆದರೆ ಇನ್ನೂ ಹೆಚ್ಚಿನ ಅವಕಾಶಗಳು ಲಭ್ಯವಿದೆ. ಈ ಕೋರ್ಸನ್ನು ಪೂರ್ತಿಗೊಳಿಸಿದ ನಂತರ ಸಿಸ್ಟಮ್ ಇಂಗಿನೀಯರ್ ಆಗಿ ಬೃಹತ್ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಬಹುದು. ಎಲ್ಲಾ ಕೋರ್ಸುಗಳಿಗೂ ಅದರದ್ದೇ ಆದ ಹೆಗ್ಗಳಿಕೆಗಳಿವೆ. ಅದರಂತೆ ಈ ಕೋರ್ಸು ಉತ್ತಮ ಅವಕಾಶಗಳನ್ನೀಯುತ್ತದೆ. ಐಟಿ ವಿಭಾಗವು ಅತೀ ಹೆಚ್ಚು ಸಂಬಳ ಪಡೆಯಬಹುದಾದ ವಿಭಾಗದಲ್ಲಿ ಒಂದು. ಪ್ರಾರಂಭದ ಹಂತದಲ್ಲಿ ೨೫೦೦೦ ದಿಂದ ೪೦೦೦೦ ಪ್ರತಿ ತಿಂಗಳು ದುಡಿಯಬಹುದು. ಸ್ನಾತಕೋತ್ತರ ಪದವಿ ಮತ್ತು ಕೆಲಸದಲ್ಲಿನ ಅನುಭವ ಹೆಚ್ಚಾದಂತೆ ಸಂಬಳವೂ ಹೆಚ್ಚುವುದು.