ಸದಸ್ಯ:Msvishwa/sandbox
"ಒಟ್ಟಾರೆ ಒಪ್ಪಿಗೆ"
ಬದಲಾಯಿಸಿಒಂದು ವಿಷಯದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರಿಗೂ ಒಪ್ಪಿಗೆಯಾಗುವಂತಹ ತೀರ್ಮಾನವನ್ನು "ಒಟ್ಟಾರೆ ಒಪ್ಪಿಗೆ" ಎನ್ನುತ್ತೇವೆ. ಆದರೆ ಇದು "ಒಮ್ಮತ"ವಾಗಬೇಕೆಂದೇನು ಇಲ್ಲ. ಸಾಮಾನ್ಯವಾಗಿ ಒಂದು ಚರ್ಚೆಯನ್ನು ಒಂದು ವಾರ ನಡೆಸಲು ಅನುಮತಿ ಕೊಡಬಹುದು. ಕೆಲವೊಮ್ಮೆ ಒಂದುವಾರದ ಬಳಿಕವೂ ಏನೂ ತೀರ್ಮಾನವಿರದಿರಬಹುದು. ಚರ್ಚೆಯೇ ನಡೆಯದೆ ಹೀಗಾಗಬಹುದು ಅಥವ ಚರ್ಚೆಯು ಅಂತ್ಯಕಾಣದೆ ಮುಂದುವೆರಯುತ್ತಿರಬಹುದು. ಇಂತಹ ಸಂದರ್ಭಗಳಲ್ಲಿ ವಿಕಿಯ ನಿಯಂತ್ರಕರು ಅಥವ ಹಿರಿಯ/ಅನುಭವಸ್ಥ ಸಂಪಾದಕರು ಚರ್ಚೆಯನ್ನು ಇನ್ನೂ ಕೆಲವು ದಿನಗಳು ಮುಂದುವರೆಯುವಂತೆ ಅನುಮತಿ ಕೊಡಬಹುದು. ಚರ್ಚೆಯನ್ನು ಒಂದು ಕಾರ್ಯಸಾಧ್ಯ ಒಪ್ಪಂದದೆಡೆಗೆ ಮುಂದುವರೆಸಲು ಸದಸ್ಯರನ್ನು ಒತ್ತಾಯಿಸಬೇಕು ಅಥವ ಹುರಿದುಂಬಿಸಬೇಕು. ಒಂದು ವಿಷಯದ ಚರ್ಚೆಯನ್ನು ಮುಗಿಸಲು ಯಾವುದೇ ಕಾಲಮಿತಿಯಿಲ್ಲದಿದ್ದರೂ ಅದು ತಿಂಗಳುಗಟ್ಟಲೆ ಎಳೆಯದಂತೆ ನೋಡಿಕೊಳ್ಳಬೇಕು. ಮಾರ್ಗದರ್ಶನ ಸೂತ್ರಗಳು ಹಾಗು ಕಾರ್ಯನೀತಿಗಳ ಒಟ್ಟಾರೆ ಒಪ್ಪಿಗೆಯು ಸರ್ವಸಮ್ಮತಿಯಲ್ಲದಿದ್ದರೂ ವಿವೇಚನೆಯಿಂದ ಕೂಡಿರಬೇಕು. ಒಂದು ಪ್ರಸ್ತಾಪವನ್ನು ಮತದಾನದ ಮೂಲಕ ತೀರ್ಮಾನಿಸಲಾಗುವುದಿಲ್ಲ. ಆದ್ದರಿಂದ ಪ್ರತಿಯೊಂದು ಅಭಿಪ್ರಾಯವನ್ನು ಕೂಲಂಕುಷವಾಗಿ ಪರಿಶೀಲಿಸಬೇಕು.
ಒಂದು ಚರ್ಚೆಯನ್ನು ಯಾರು ಕೊನೆಗಾಣಿಸಬೇಕು
ಬದಲಾಯಿಸಿದೊಡ್ಡ ಸಮುದಾಯಗಳಲ್ಲಿ ಮುಖ್ಯವಾದ ಚರ್ಚೆಯನ್ನು ಸಾಮಾನ್ಯವಾಗಿ ನಿಯಂತ್ರಕರು ಮುಗಿಸುತ್ತಾರೆ. ವಿಕಿಯ ಕಾರ್ಯನೀತಿಗಳನ್ನು ಮತ್ತು ಮಾರ್ಗದರ್ಶನ ಸೂತ್ರಗಳನ್ನು ಬಲ್ಲ ಹಾಗು ಒಂದು ಚರ್ಚೆಯನ್ನು ಹೇಗೆ ತೀರ್ಮಾನಿಸಬೇಕೆಂದು ಅರಿತ ಹಿರಿಯ ಅಥವ ಅನುಭವಸ್ಥ ಸಂಪಾದಕರೂ ಕೂಡ ಅದನ್ನು ಮುಕ್ತಾಯಗೊಳಿಸಬಹುದು. ಸಾಮಾನ್ಯವಾಗಿ ಚರ್ಚೆಯಲ್ಲಿ ಪಾಲ್ಗೊಂಡ ಸಂಪಾದಕರು ಮುಕ್ತಾಯ ಮಾಡಬಾರದು. ಸಕ್ರಿಯ ನಿಯಂತ್ರಕರು, ಸಂಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಇರದಿದ್ದ ಪಕ್ಷದಲ್ಲಿ ಸ್ಪಷ್ಟವಾದ ಒಟ್ಟಾರೆ ಒಪ್ಪಿಗೆ ಇದ್ದರೆ ಚರ್ಚೆಯಲ್ಲಿ ಭಾಗಿಯಾದವರೂ ಚರ್ಚೆಯನ್ನು ಮುಗಿಸಬಹುದು. ಆದರೆ ಅವರು ಚರ್ಚೆಯ ಪ್ರಸ್ತಾಪ ಮಾಡಿರುವರಾಗಿರಬಾರದು.
ಒಂದು ಚರ್ಚೆಯನ್ನು ಔಪಚಾರಿಕವಾಗಿ ಕೊನೆಗಾಣಿಸಬೇಕೆ? ಚರ್ಚೆಯನ್ನು ಕೊನೆಗಾಣಿಸುವ ಬಗೆಯೇನು?
ಬದಲಾಯಿಸಿಒಂದು ಚರ್ಚೆಯನ್ನು ಔಪಚಾರಿಕವಾಗಿಯೇ ಕೊನೆಗಾಣಿಸಬೇಕೆಂದು ವಿಕಿಪೀಡಿಯದ ಸೂಚನೆ. Archive top ಮತ್ತು Archive bottom ಎಂಬ ಟೆಂಪ್ಲೇಟುಗಳನ್ನು ಬಳಸಬಹುದಾದರೂ ಇದು ಕಡ್ಡಾಯವಲ್ಲ. ಕೊನೆಗಾಣಿಸುವಾತ ಎಲ್ಲ ವಾದಸರಣಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಕೊನೆಗಾಣಿಸಬೇಕು. ಅದರೊಂದಿಗೆ ಮುಕ್ತಾಯದ ಟಿಪ್ಪಣಿಯನ್ನು ಬರೆಯಬೇಕು.
(ಬಾಕ್ಸ್‍ನಲ್ಲಿ)
ಸದಭ್ಯಾಸ: ಒಟ್ಟಾರೆ ಒಪ್ಪಿಗೆಯೇನು, ಏನು ಮಾಡಬೇಕು ಎಂಬ ಸ್ಪಷ್ಟವಾದ ಟಿಪ್ಪಣಿಯೊಂದಿಗೆ ವಿವರವಾದ ಮುಕ್ತಾಯ ಹೇಳಿಕೆಯನ್ನು ಕೊನೆಗಾಣಿಸುವಾತ ಬರೆಯಬೇಕು.
ಈ ಕೆಳಗಿನ ತೆರೆಯಚ್ಚಿನಲ್ಲಿ ನಿಯಂತ್ರಕನೊಬ್ಬನು Archive top ಮತ್ತು Archive bottom ಟೆಂಪ್ಲೇಟುಗಳನ್ನು ಬಳಸಿ ಚರ್ಚೆಯನ್ನು ಕೊನೆಗಾಣಿಸಿದ್ದಾನೆ. ಹಾಗೆಯೇ ಚಿಕ್ಕದಾದ ಅರ್ಥಪೂರ್ಣ ಸಾರಾಂಶವನ್ನೂ ಬರೆದಿದ್ದಾನೆ. <<screen-shot>>
ಚರ್ಚೆಯು ಮತದಾನದ ಒಂದು ಬದಲೀ ವ್ಯವಸ್ಥೆ
ಬದಲಾಯಿಸಿಕೆಲವು ವಿಕಿಪೀಡಿಯ ಯೋಜನೆಗಳಿಗೆ ಔಪಚಾರಿಕವಾದ ಮತದಾನದ ವ್ಯವಸ್ಥೆಯಿಲ್ಲ. ಇಂತಹ ಕಡೆ ಚರ್ಚೆಯನ್ನು ಮತದಾನಕ್ಕೆ ಬದಲು ವ್ಯವಸ್ಥೆಯಂತೆ ಬಳಸಬೇಕು.
ಅನುಷ್ಠಾನ ಅಥವ ನೆರವೇರಿಸುವುದು
ಬದಲಾಯಿಸಿಸಮುದಾಯದ ಒಟ್ಟಾರೆ ಒಪ್ಪಿಗೆಯನ್ನು ನೆರವೇರಿಸುವುದು ಕೊನೆಯ ಭಾಗ. ಚರ್ಚೆ ಪ್ರಸ್ತಾಪಿಸಿದ ಸದಸ್ಯನೂ ಸೇರಿದಂತೆ ಯಾವುದೇ ಸಂಪಾದಕನು ಅಗತ್ಯ ಬದಲಾವಣೆಗಳನ್ನು ಮಾಡಬಹುದು. ಆದರೆ ಅವರು ಕಡ್ಡಾಯವಾಗಿ ಸಮುದಾಯದ ಸದಸ್ಯರ ಒಟ್ಟಾರೆ ಒಪ್ಪಿಗೆಯನ್ನು ಅಥವ ತೀರ್ಮಾನ ಮತ್ತು ಸಲಹೆಗಳನ್ನು ಪಾಲಿಸಬೇಕು.
ಅಸ್ತಿತ್ವದಲ್ಲಿರುವ ಕಾರ್ಯನೀತಿಯನ್ನು ಬದಲಾಯಿಸುವುದು
ಬದಲಾಯಿಸಿಅಸ್ತಿತ್ವದಲ್ಲಿರುವ ಒಂದು ಕಾರ್ಯನೀತಿಯನ್ನು ಬದಲಾಯಿಸುವುಲು ಅಥವ ಉತ್ತಮಪಡಿಸಲು ಸಂಪಾದಕರು ಹಿಂದೆ ವಿವರಿಸಿದ ಸೂತ್ರವನ್ನೇ ಪಾಲಿಸಬೇಕು. ಎಂದರೆ, ಪ್ರಸ್ತಾಪಮಾಡುವುದು, ಚರ್ಚಿಸುವುದು ಮತ್ತು ಒಟ್ಟಾರೆ ಒಪ್ಪಿಗೆಯನ್ನು ಪಡೆಯುವುದು. ಒಂದು ಕಾರ್ಯನೀತಿಯ ತಿದ್ದುಪಡಿಗಳನ್ನು ಅದರ ಚರ್ಚಾಪುಟದಲ್ಲೂ ಚರ್ಚಿಸಬಹುದು.
Enforcements (ಕನ್ನಡ ಪದ?)
ಬದಲಾಯಿಸಿಸಂಪಾದಕರು ಕಾರ್ಯನೀತಿಗಳನ್ನು ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿ ಲೇಖನಗಳನ್ನು ಬರೆಯಬೇಕು. ಯಾವುದೇ ಸಂಪಾದಕ ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ಅಂತಹವರು ನಿಯಮಗಳನ್ನು ಪಾಲಿಸುವಂತೆ ಇತರ ಸಂಪಾದಕರು ಮನವೊಲಿಸಬೇಕು. ಇದು ಫಲಕೊಡದಿದ್ದರೆ ಮುಂದಿನ ದಿನಗಳಲ್ಲಿ ಆಡಳಿತಾತ್ಮಕ ಕ್ರಮಗಳಿಂದ ಒತ್ತಾಯಪಡಿಸುವಂತಹ ದಾರಿಯನ್ನು ಅವಲಂಬಿಸಬಹದು.
ಇದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು:
೧. ಸೂಚನೆ: ಸಂಪಾದಕರಿಗೆ ಅವರ ತಪ್ಪುಗಳನ್ನು ಸೂಚಿಸಿ ಕಾರ್ಯನೀತಿ, ಮಾರ್ಗದರ್ಶನಗಳನ್ನು ಅನುಸರಿಸುವಂತೆ ಹೇಳುವುದು.
೨. ಎಚ್ಚರಿಕೆ: ಸೂಚನೆಯ ಬಳಿಕವೂ ಒಬ್ಬ ಸಂಪಾದಕನು ವಿಚ್ಛಿದ್ರಕಾರಕ (disruptive) ಸಂಪಾದನೆಗಳನ್ನು ಮಾಡಿದಲ್ಲಿ ಅವನಿಗೆ ಎಚ್ಚರಿಕೆಯನ್ನು ನೀಡಬೇಕು.
"ಸೂಚನೆಗೂ ಎಚ್ಚರಿಕೆಗೂ ವ್ಯತ್ಯಾಸ" ಆರಂಭದಲ್ಲಿ ಸಾಮಾನ್ಯವಾಗಿ ಸೂಚನೆಯನ್ನು ಸೌಜನ್ಯದಿಂದ ಹೇಳಲಾಗುವುದು. ಸಂಪಾದಕನೊಂದಿಗೆ ಮಾತಾಡಿ ಅವನ ತಪ್ಪುಗಳನ್ನು ತಿಳಿಯಪಡಿಸುವುದೇ ಇದರ ಮುಖ್ಯ ಉದ್ದೇಶ. ಆದರೆ ಒಬ್ಬ ಸಂಪಾದಕನಿಗೆ ವಿಚ್ಛಿದ್ರಕಾರಿ ಸಂಪಾದನೆಗಳನ್ನು ನಿಲ್ಲಿಸುವಂತೆ ಹೇಳುವುದು ಎಚ್ಚರಿಕೆಯ ಸಂದೇಶವಾಗಿರುತ್ತದೆ. ಇದರಲ್ಲಿ ನಿರ್ಬಂಧದಂತಹ ಕ್ರಮಗಳನ್ನೂ ಸಹ ತಿಳಿಸಬಹುದು.
"ಕಡೆಯ ಎಚ್ಚರಿಕೆ" ಸೂಚನೆ ಮತ್ತು ಎಚ್ಚರಿಕೆಗಳ ಬಳಿಕವೂ ಸಂಪಾದಕನು ವಿಚ್ಛಿದ್ರಕಾರಕ ಸಂಪಾದನೆಗಳನ್ನು ನಿಲ್ಲಿಸದಿದ್ದರೆ, ಅವನಿಗೆ ಕಡೆಯ ಬಾರಿ ಎಚ್ಚರಿಕೆಯನ್ನು ಕೊಡಬಹುದು.
೩. ದೂರು ನೀಡುವಿಕೆ: ಮುಂದಿನ ಹಂತ ದೂರು ನೀಡುವುದು. ಎಚ್ಚರಿಕೆಯ ಹೊರತಾಗಿಯೂ ಒಬ್ಬ ಸಂಪಾದಕನು ವಿಚ್ಛಿದ್ರಕಾರಿ ಸಂಪಾದನೆಗಳನ್ನು ನಿಲ್ಲಿಸದಿದ್ದರೆ, ಅವನ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ನಿಯಂತ್ರಕರಲ್ಲದ ಸಂಪಾದಕರೂ ಇಂತಹದರ ಬಗ್ಗೆ ದೂರು ಸಲ್ಲಿಸಬಹುದು. ನಂತರ ನಿಯಂತ್ರಕರು ನೇರವಾಗಿ ಸಂಪಾದಕನನ್ನು ನಿರ್ಬಂಧಿಸಬಹುದು.
ಈ ಕೆಳಗಿನ ಸ್ಥಳಗಳಲ್ಲಿ (places) ದೂರನ್ನು ನೀಡಬಹುದು:
(ಅ) ನಿಯಂತ್ರಕರ ಸೂಚನಾಫಲಕ: ವಿಕಿಪೀಡಿಯದಲ್ಲಿ ನಿಯಂತ್ರಕರ ಸೂಚನಾಫಲಕವಿದ್ದರೆ ದೂರು ನೀಡಲು ಇದು ಅತ್ಯಂತ ಸೂಕ್ತ ಜಾಗ. ಏಕೆಂದರೆ ನಿಯಂತ್ರಕರು ಆಗಾಗ ಈ ಸೂಚನಾಫಲಕವನ್ನು ಗಮನಿಸುತ್ತಿರುತ್ತಾರೆ.
(ಆ) ಅರಳಿಕಟ್ಟೆ: ಪ್ರತ್ಯೇಕ ಸೂಚನಾಫಲಕವಿಲ್ಲದಿದ್ದರೆ ಅರಳಿಕಟ್ಟೆಯಲ್ಲಿ ಕೂಡ ದೂರನ್ನು ವರದಿಮಾಡಬಹುದು.
(ಇ) ನಿಯಂತ್ರಕರ ಚರ್ಚಾಪುಟ: ಒಬ್ಬ ನಿಯಂತ್ರಕನನ್ನು ನೇರವಾಗಿ ಆತನ ಚರ್ಚಾಪುಟದಲ್ಲಿ ಸಂಪರ್ಕಿಸಿ ವರದಿ ಮಾಟಬಹುದು.
ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಅರಳಿಕಟ್ಟೆಯಲ್ಲೇ ಎಲ್ಲ ವಿಚಾರವಿನಿಮಯವಾಗುವುದರಿಂದ ಅದೇ ಅತ್ಯಂತ ಪ್ರಶಸ್ತ ಸ್ಥಳ. --> is this addition ok? this is not present in the original doc.
೪. ನಿರ್ಬಂಧ: Enforcementನಲ್ಲಿ ಕೊನೆಯ ಹಂತ ನಿರ್ಬಂಧಿಸುವುದು. ಸಂಪಾದಕರು ಸಂಪಾದನೆ ಮಾಡದಂತೆ ತಾಂತ್ರಿಕವಾಗಿ ತಡೆಯುವುದು ಇದರ ರೀತಿ. ವಿಕಿಪೀಡಿಯದಲ್ಲಿ ನಿಯಂತ್ರಕರು ಮಾತ್ರವೇ ಸಂಪಾದಕರನ್ನು ಮತ್ತು ಐಪಿ ವಿಳಾಸವನ್ನು ನಿರ್ಬಂಧಿಸಬಹುದು. ಕೊನೆಯ ಎಚ್ಚರಿಕೆಯ ಹೊರತಾಗಿಯೂ ಒಬ್ಬ ಸಂಪಾದಕನು ತನ್ನ ಸಂಪಾದನಾ ಶೈಲಿಯನ್ನು ಬದಲಾಯಿಸದಿದ್ದರೆ ಅವನನ್ನು ನಿರ್ಬಂಧಿಸಬೇಕಾಗುತ್ತದೆ.
(ಅ) ತಾತ್ಕಾಲಿಕ ನಿರ್ಬಂಧ: ಮೊದಲಿಗೆ ಸಂಪಾದಕರನ್ನು ತಾತ್ಕಾಲಿಕವಾಗಿ, ಅಂದರೆ ೪೮-೭೨ ಗಂಟೆಗಳ ಕಾಲ ನಿರ್ಬಂಧಿಸಬಹುದು. ಮುಂದೆ ಕೆಲವು ವಾರಗಳು ಅಥವ ತಿಂಗಳಮಟ್ಟಿಗೂ ನಿರ್ಬಂಧ ಜಾರಿಮಾಡಬಹುದು.
(ಆ) ಅನಿರ್ದಿಷ್ಟ ನಿರ್ಬಂಧ: ಒಬ್ಬ ಸಂಪಾದಕನು ತನ್ನ ಸಂಪಾದನಾ ಶೈಲಿಯಲ್ಲಿ ಯಾವುದೇ ಬದಲಾವಣೇಯನ್ನು ತರದಿದ್ದರೆ ಅಂತಹ ಸಂಪಾದಕನನ್ನು ಅನಿರ್ದಿಷ್ಟಾವಧಿಗೆ ನಿರ್ಬಂಧಿಸಬೇಕು.
ನಿರ್ಬಂಧನೆಯ ನಂತರ ಸಂಪಾದಕನ ಚರ್ಚಾಪುಟದಲ್ಲಿ ಆತನನ್ನು ತಾತ್ಕಾಲಿಕವಾಗಿ ಅಥವ ಅನಿರ್ದಿಷ್ಟ ಅವಧಿಗೆ ನಿರ್ಬಂಧಿಸಿರುವುದನ್ನು ತಿಳಿಸಬೇಕು. ಅಂತಹ ಸಂದೇಶದಲ್ಲಿ ಈ ಕೆಳಗಿನ ಮಾಹಿತಿಗಳನ್ನು ನೀಡಬೇಕು:
೧. ನಿರ್ಬಂಧದ ಕಾರಣ: ನಿರ್ಬಂಧಿಸಿರುವುದರ ಕಾರಣವೇನು
೨. ನಿರ್ಬಂಧದ ಅವಧಿ: ತಾತ್ಕಾಲಿಕವೇ ಅಥವ ಅನಿರ್ದಿಷ್ಟಾವಧಿಯೇ? ತಾತ್ಕಾಲಿಕವಾದರೆ ನಿರ್ಬಂಧ ಎಂದು ತೀರುತ್ತದೆ?
೩. ನಿರ್ಬಂಧವನ್ನು ತೆರವುಗೊಳಿಸುವುದರ ಕ್ರಮ: ತೆರವುಗೊಳಿಸುವಂತೆ ಸಂಪಾದಕನು ಬೇಡಿಕೆ ಸಲ್ಲಿಸುವುದರ ರೀತಿ.
ಭಾರತೀಯ ವಿಕಿಪೀಡಿಯ ಸಮುದಾಯಗಳು ಎದುರಿಸುವ ಸಾಮಾನ್ಯ ಸಮಸ್ಯೆಗಳು
ಬದಲಾಯಿಸಿ೧. ಕಾರ್ಯನೀತಿಯ ತಪ್ಪಿಹೋದ ಪುಟಗಳು: ಕೆಲವು ವಿಕಿಪೀಡಿಯಗಳಲ್ಲಿ ಮುಖ್ಯವಾದ ಹಲವು ಕಾರ್ಯನೀತಿಯ ಪುಟಗಳು ತಪ್ಪಿಹೋಗಿವೆ. ಸಂಪಾದಕರಿಗೆ ಬೇಕಾದಲ್ಲಿ ಅವರು ಇಂಗ್ಲಿಷ್ ವಿಕಿಯ ಮೊರೆಹೋಗಬೇಕಾಗುತ್ತದೆ. ಐದು ವಿಕಿಪಿಢಿಯಗಳ ಕಾರ್ಯನೀತಿಗಳನ್ನು ಇಂಗ್ಲಿಷ್ ವಿಕಿಯೊಂದಿಗೆ ಹೊಂದಿಸಿ ನೋಡಿ, ಮುಖ್ಯ ಕಾರ್ಯನೀತಿಗಳ ಸ್ಥಿತಿಯನ್ನು ದಾಖಲಿಸಲಾಗಿದೆ. ಇದರ ಇತ್ತೀಚಿನ ಆವೃತ್ತಿಯನ್ನು ಇಲ್ಲಿ ನೋಡಬಅಹುದಾಗಿದೆ (tinyurl.com/a2kpolicymap).
೨. ಅಪೂರ್ಣ ಅಥವ ಅನುವಾದರಹಿತ ಕಾರ್ಯನೀತಿಯ ಪುಟಗಳು:
ಭಾರತದ ಎಲ್ಲಾ ವಿಕಿಪೀಡಿಯಗಳಲ್ಲಿರುವ ಮತ್ತೊಂದು ಸಾಮಾನ್ಯ ಸಮಸ್ಯೆಯೆಂದರೆ ಅಪೂರ್ಣವಾದ ಅಥವ ಅನುವಾದರಹಿತ ಕಾರ್ಯನೀತಿಯ ಪುಟಗಳು. ಇಂತಹ ಪುಟಗಳು ದೊಡ್ಡ ಸಂಖ್ಯೆಯಲ್ಲಿರುವುದು ಸಮಸ್ಯೆಯ ಮಟ್ಟವನ್ನು ಇನ್ನೂ ಹೆಚ್ಚಾಗಿಸಿದೆ. ಕಾರ್ಯನೀತಿಯ ಪುಟಗಳನ್ನು ರಚಿಸುವುದಕ್ಕೆ ಸಾಮಾನ್ಯವಾಗಿ ಇಂಗ್ಲಿಷ್ ವಿಕಿಯನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ. ಇಂತಹ ಪುಟಗಳನ್ನು ಅನುವಾದ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಹಳಷ್ಟು ಪುಟಗಳು ಸರಿಯಾಗಿ ಅನುವಾದವಾಗಿರುವುದಿಲ್ಲ. ಕೆಲವು ಪುಟಗಳಂತೂ ಇಂಗ್ಲಿಷ್‍ನ ನಕಲಿನಂತೆ ಕಾಣುತ್ತದೆ. ಇದನ್ನು ಒಡಿಯ, ತೆಲುಗು ಮತ್ತು ಇತರೆ ಕೆಲವು ವಿಕಿಗಳಲ್ಲಿ ಕಾಣಬಹುದು. ಮುಖ್ಯ ಕಾರ್ಯನೀತಿ ಪುಟಗಳ ಅಗತ್ಯವಲ್ಲದೇ ಅವುಗಳು ಆಯಾ ಭಾರತೀಯ ಭಾಷೆಯಲ್ಲಿಯೇ ಇರಬೇಕೆಂಬುದು ಭಾರತೀಯ ವಿಕಿಪೀಡಿಯನ್ನರ ಅನಿಸಿಕೆಯಾಗಿದೆ.
ಈ ಕೆಳಗಿನ ತೆರೆಯಚ್ಚಿನಲ್ಲಿ ಒಡಿಯ ವಿಕಿಯಲ್ಲಿರುವ "ಕೃತಿಸ್ವಾಮ್ಯ" ಕಾರ್ಯನೀತಿಯ ಪುಟವನ್ನು ನೋಡಬಹುದು. ಅನುವಾದವನ್ನು ಇಲ್ಲಿ ಮಾಡಿಲ್ಲವೆಂದು ಗಮನಿಸಬಹುದು.
<<screen shot, copyright - odiya>>
೩. ಕ್ರಿಯಾಶೀಲ ಅನುವಾದಕರ, ಸಂಪಾದಕರ ಕೊರತೆ:
ಬಹಳಷ್ಟು ಭಾರತೀಯ ವಿಕಿಪೀಡಿಯಗಳಲ್ಲಿ ಕ್ರಿಯಾಶೀಲ ಅನುವಾದಕರು, ಸಂಪಾದಕರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಕಾರಣದಿಂದ ಕಾರ್ಯನೀತಿಯ ಪುಟಗಳು ಕಡೆಗಾಣಿಸಲ್ಪಟ್ಟಿವೆ.
<<ಹೇಳಿಕೆಗಳ ಬಾಕ್ಸ್>>
ಸಮಸ್ಯೆಗಳ ನಿವಾರಣೆ
ಬದಲಾಯಿಸಿವಿಕಿಪೀಡಿಯನ್ನರ ಅಭಿಪ್ರಾಯದಂತೆ ಈ ಕೆಳಗಿನ ಕ್ರಮಗಳನ್ನು ಜಾರಿಗೊಳಿಸಬಹುದು.
೧. ಸಮರ್ಪಿತ ಕಾರ್ಯಪಡೆ: ತಮ್ಮ ವಿಕಿಪೀಡಿಯದ ಕಾರ್ಯನೀತಿಯ ಪುಟಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಕೆಲಸ ಮಾಡುವಂತಹ ಕಾರ್ಯಪಡೆಗಳನ್ನು ರಚಿಸಬೇಕೆಂಬುದು ಭಾರತೀಯ ವಿಕಿಪೀಡಿಯನ್ನರ ಸಲಹೆಯಾಗಿದೆ. <<ಹೇಳಿಕೆ>>
೨. ಮೀಡಿಯವಿಕಿ ಅನುವಾದ ಮಾಡುವ ತಂತ್ರಾಂಶದ ಬಳಕೆ:
ಮೀಡಿಯವಿಕಿಯ ಅನುವಾದ ಮಾಡುವ ತಂತ್ರಾಂಶವನ್ನು ಬಳಸಿ ಕಾರ್ಯನೀತಿಯ ಪುಟಗಳನ್ನು ರಚಿಸುವುದು ಇನ್ನೊಂದು ಸಲಹೆ. ಬಹುತೇಕ ವಿಕಿಪೀಡಿಯನ್ನರ ಅಭಿಪ್ರಾಯದಂತೆ ಕಾರ್ಯನೀತಿಯ ಅನುವಾದವು ಶ್ರಮದಾಯಕ ಮತ್ತು ಬೇಸರಬರಿಸುವ ಕೆಲಸವಾಗಿದೆ. ಮೀಡಿಯವಿಕಿಯ ಅನುವಾದ ಮಾಡುವ ತಂತ್ರಾಂಶವನ್ನು ಬಳಸಿ ಈ ಕೆಲಸವನ್ನು ಸುಲಭಗೊಳಿಸಬಹುದು.
<<ಹೇಳಿಕೆಗಳು>>
ಈ ಸಲಹೆಯನ್ನು ಸ್ವಲ್ಪ ಪರಿಶೀಲಿಸೋಣ. ಅನುವಾದ ಮಾಡುವುದಕ್ಕೆ ಮೀಡಿಯವಿಕಿಯ ಒಂದು ಎಕ್ಸ್‍ಟೆನ್ಶನ್ ಲಭ್ಯವಿದೆ. ಇದನ್ನು ಸಾಮಾನ್ಯವಾಗಿ ಮೆಟಾವಿಕಿ, ಮೀಡಿಯವಿಕಿಯಲ್ಲಿ ಬಳಸುತ್ತಾರೆ. ಇದರಲ್ಲಿ ಸುಲಭವಾಗಿ ಬಳಸುವಂತಹ ಅನುವಾದದ ಸಾಧನವಿದೆ. ಇದು ಒಂದು ಪುಟನ್ನು ಚಿಕ್ಕ ಚಿಕ್ಕ ವಿಭಾಗಗಳಾಗಿಸುತ್ತದೆ. ಈ ಕೆಳಗಿನ ತೆರೆಯಚ್ಚು ಈ ಸಾಧನವನ್ನು ತೋರಿಸುತ್ತದೆ:
<<screen_shot>>
ಇದು ಬಳಕೆಯಲ್ಲಿ ಬರುತ್ತದೆಯೋ ಇಲ್ಲವೊ ಆದರೆ ಕುತೂಹಲಕಾರಿಯಂತೂ ಹೌದು.
|