ಸದಸ್ಯ:Moses7v/sandbox
==ಮುನ್ನ್ನುಡಿ== ಧನುಶ್ ಎಂದೇ ಪ್ರಸಿದ್ಧರಾದ ವೆಂಕಟೇಶ್ ಪ್ರಭು ಕಸ್ತೂರಿ ರಾಜ ಎಂಬ ಇವರು ಟಾಲಿವುಡ್ ಎಂಬ ತಮಿಳು ಸಿನಿಮಾ ರಂಗದ ನಟ, ನಿರ್ಮಾಪಕ, ಗಾಯಕ ಹಾಗೂ ಸಾಹಿತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರಾದ ಕಸ್ತೂರಿ ರಾಜಾರವರ "ತುಳ್ಳುವದೋ ಇಳಮೈ " ಎಂಬ ಚಲನಚಿತ್ರದ ಮೂಲಕವಾಗಿ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂಬಂದ ಹತ್ತು ವರ್ಷಗಳಲ್ಲಿ ಇವರು ಸುಮಾರು 25 ಚಲನಚಿತ್ರಗಳಲ್ಲಿ ಅಭಿನಯಿಸಿದರು. ನಿರ್ದೇಷಕ ವೇಲ್ರಾಜ್ ರವರ "ವೇಲಯಿಲ್ಲಾ ಪಟ್ಟದಾರಿ" ಎಂಬ ಚಲನಚಿತ್ರವು ಇವರ 25ನೇ ಚಲನಚಿತ್ರವಾಗಿತ್ತು. ಈ ಚಿತ್ರದಲ್ಲಿ ಮೂಡಿಬಂದ "ಅಮ್ಮಾ ಅಮ್ಮಾ" ಎಂಬ ಹಾಡಿನ ಸಾಹಿತ್ಯ ರಚನೆಗಾಗಿ ಇವರಿಗೆ "ಫಿಲಿಮ್ ಫೇರ್" ಪ್ರಶಸ್ತಿ ದೊರಕಿತು. 2010ರ ಇಸವಿಯಲ್ಲಿ, "ಆಡುಕಳಂ" ಚಿತ್ರಕ್ಕಾಗಿ ಇವರಿಗೆ ಅತ್ಯುತ್ತಮ ನಟರಿಗಾದ " ರಾಷ್ಟ್ರೀಯ ಪ್ರಶಸ್ತಿ" ದೊರಕಿತು. 2011 ಇಸವಿಯಲ್ಲಿ "3" ಚಿತ್ರದ "ಕೊಲವೆರಿ ಡೀ" ಹಾಡಿನ ಮೂಲಕವಾಗಿ ಇವರಿಗೆ ಅಂತರಾಷ್ಟ್ರೀಯ ಗಮನ ಸಿಗಲಾರಂಭಿಸಿತು.ಪುದುಪೆಥೈ ಎಂಬ ಚಿತ್ರದಲ್ಲಿ ತನ್ನ ಸಹೋದರನೊಂದಿಗೆ ಅಭಿನಯಿಸಿದರು.ಈ ಚಿತ್ರದಲ್ಲಿ ಅವರು ವಿಮರ್ಷಕರ ಹೊಗಳಿಕೆಯನ್ನು ಸಂಪಾದಿಸಿದರು. ಈ ಚಿತ್ರದ ತೆಲುಗು ಪರಿಣಾಮವು ಢೂಲ್ಪೆಟ್ ಎಂಬ ನಾಮದಲ್ಲಿ ಸೃಷ್ಟಿಸಲಾಯಿತು. ಇವರ ತಿರುವಿಳಯಾಡಲ್ ಆರಂಬಮ್ ಎಂಬ ಚಿತ್ರದಲ್ಲಿ ಶ್ರೇಯಾ ಛರನ್ ರವರೊಂದಿಗೆ ಅಭಿನಯಿಸಿ ವ್ಯಾವಹಾರಿಕ ಚಿತ್ರಮಂಡಳಿಯಲ್ಲೂ ಇವರಿಗೆ ಹೆಸರನ್ನು ತಂದು ಕೊಟ್ಟಿತು.ಇವರ ಮೊದಲ ನಿರ್ಮಾಪಣೆಯಾದ ಪರಟ್ಟೈ ಎನ್ಗಿರ ಅಳಗುಸುಂದರಮ್ ಎಂಬ ಚಿತ್ರವು ಯಶಸ್ಸನ್ನು ಕಾಣಲಿಲ್ಲ. ಈ ಚಿತ್ರವು ಕನ್ನಡದ ಶಿವರಾಜ್ ಕುಮರ್ ಅಭಿನಯದ ಜೋಗಿ ಚಿತ್ರದ ಮರುಪ್ರದರ್ಷಣೆಯಾಗಿದ್ದು ತಮಿಳಿನಲ್ಲಿ ಸೊಲನ್ನು ಕಂಡು ಬರಲು ನೆಚ್ಚಿಕೆಯ ಮಾರುಪಡೆಗಳೇ ಕಾರಣವೆಂದು ತಂಡದ ಅಭಿಪ್ರಾಯ ಹೊರಬಂದಿತು.ಹೀಗಾದರೂ ಇವರ ಎರಡನೆಯ ಚಿತ್ರವಾದ ಪೊಲ್ಲಾಥವನ್ ಚಿತ್ರವು ಜನರ ಮೆಚ್ಚುಗೆಯನ್ನು ಪಡೆಯಿತು.ಈ ಚಿತ್ರವು ಇಟಲೀ ಭಾಷೆಯ ದೀ ಬೈಸೈಕಲ್ ತೀವ್ಸ್ ಎಂಬ ಚಿತ್ರವನ್ನು ಆದಾರವಾಗಿ ಕೊಂಡು ನಿರ್ಮಿತವಾದ ಚಿತ್ರ.ಇವರ ಸಹೋದರರ ತೆಲುಗು ಚಿತ್ರವು ಇವರ ಮುಂದಿನ ಚಿತ್ರಕ್ಕೆ ಆಧಾರವಾಯಿತು. ಹೀಗಾಗಿ ಮಿತ್ರನ್ ಜವಹರ್ ರವರಿಗೊಂದಿನ ಚಿತ್ರವು ಯಾರಡಿ ನೀ ಮೊಹಿನಿ ಎಂದು ಹೆಸರಿತವಾಗಿ ಯಶಸ್ಸನ್ನು ಪಡೆಯಿತು. ಮುಂದೆ ಇವರ ಮಾವರಾದ ಸೂಪರ್ ಸ್ಟಾರ್ ರಜಿನಿಕಾಂತ್ ರವರ ಕುಸೇಲನ್ ಚಿತ್ರದಲ್ಲಿ ಅಥಿತಿಯಾಗಿ ಭಾಗವಹಿಸಿದರು. ಸೂರಜ್ ರವರ ರಚನೆಯಲ್ಲಿ ಪಡಿಕ್ಕಾಥವನ್ ಚಿತ್ರದಲ್ಲಿ ಇವರ ಪಾದಾರ್ಪಣೆಯಾಯಿತು. ಇವರ ಮುಂದಿನ ಎರಡು ಚಿತ್ರಗಳಾದ ಕುಟ್ಟಿ ಮತ್ತು ಉತ್ತಮ ಪುತ್ತಿರನ್ ಎಂಬ ಚಿತ್ರಗಳು ನಿರ್ದೇಶಕರಾದ ಮಿತ್ರನ್ ಜವಹರ್ ರವರೊಂದಿಗೆ ಆಯಿತು. ಇವರ ಮುಂದಿನ ಚಿತ್ರವಾದ ಆಡುಕಳಮ್ ಸುಮಾರು ಮೂರು ವರುಷಗಳ ಕಾಲ ಚಿತ್ರಿಸಲ್ಪಡುತ್ತಿತ್ತು. ಪ್ರಮುಖ ನಿರ್ದೇಷಕರಾದ ವೆಟ್ರಿಮಾರನ್ ರವರೊಂದಿಗೆ ಈ ಚಿತ್ರವು ನಿರ್ಮಿಸಲಾಯಿತು. ಈ ಚಿತ್ರದಲ್ಲಿ ಇವರು ಗ್ರಾಮೀಣರಾಗಿದ್ದು ಹುಂಜಗಳನ್ನು ಸಾಕಿ ಜಗಳವಾಡಿಸುವ ಪಾತ್ರವನ್ನು ಧರಿಸಿದ್ದರು. ಇದು ತಮ್ಮ ಕನಸಿನ ಚಿತ್ರವೆಂದು ಬಿಡುಗಡೆಯ ಪೂರ್ವದಲ್ಲೇ ಹೇಳಿದ್ದರು. ಈ ಚಿತ್ರವು ಒಳ್ಳೆಯ ಹೆಸರನ್ನು ಪಡೆದು ಆರು ರಾಷ್ಟ್ರ ಪ್ರಶಸ್ತಿಗಳಾನ್ನು ಗಳಿಸಿತು. ಇವರು ಉತ್ತಮ ನಾಯಕನಿಗಾದ ರಾಷ್ಟ್ರ ಪ್ರಷಸ್ತಿ ಯನ್ನು ಗಳಿಸಿದರು. ಈ ಸಾಲಿನಲ್ಲಿ ಇವರೇ ಕಡಿಮೆ ವಯಸ್ಸಿನವರಾಗಿದ್ದರು. ಇವರ ಮಾವನವರಾದ ಸೂಪರ್ಸ್ತಾರ್ ರಜಿನಿಕಾಂತ್ ರವರ ಮಾಪಿಳ್ಳೈ ಚಿತ್ರವನ್ನು ಇವರು ಪುನರ್ಸ್ರುಷ್ಟಿ ಮಾಡಿದರು. ಇವರು ನಿರ್ದೇಶಕರಾದ ಹರಿಯವರೊಂದಿಗೆ ಮಾಡಿದ ವೇಂಘೈ ಚಿತ್ರವು ಹೆಸರನ್ನು ಸಾಮಾನ್ಯವಾಗಿಯೇ ಗಳಿಸಿತು. ಮತ್ತೊಮ್ಮೆ ಇವರು ತಮ್ಮ ಸಹೋದರನಾದ ಸೆಲ್ವರಾಘವನ್ ರವರ ಮಯ್ಕ್ಕಮ್ ಎನ್ನ ಎಂಬ ಚಿತ್ರದಲ್ಲಿ ಅಭಿನಯಿಸಿದರು. ಶ್ರುತಿ ಹಾಸ್ಸನ್ ರವರೋದಿಗೆ ಇವರು ತಮ್ಮ ಪತ್ನಿಯ ನಿರ್ದೇಶನದಲ್ಲಿ ೩ ಚಿತ್ರದಲ್ಲಿ ನಟಿಸಿದರು. ಕೊಲವೆರಿ ಹಾಡಿನ ಪ್ರಮುಖತೆಯಿಂದಾಗಿ ಈ ಚಿತ್ರವು ಸೋಲನ್ನು ಕಾಣಲಿಲ್ಲ. ೨೦೧೩ ರಲ್ಲಿ ಇವರು ಪಾರ್ವತಿ ಮೇಣ್ನ್ರವರೊಂದಿಗೆ ಮರಿಯಾನ್ ಚಿತ್ರದಲ್ಲಿ ನಟಿಸಿದ್ದರು. ಇವರ ಮುಂದಿನ ಚಿತ್ರವಾದ ನೈಯ್ಯಾಂಡಿಯಲ್ಲಿ ಎ ಸರುಕುನಮ್ ರವರೊಂದಿಗೆ ನಿರ್ಮಿಸ್ದಿದರು. ಈ ಚಿತ್ರವು ಬಾಕ್ಸ್ ಆಫಿಸಲ್ಲಿ ಹೊಸ ಗುರುತನ್ನು ಸೃಷ್ಟಿಸಿತ್ತು. ೨೦೧೪ ರ ಇವರ ವೇಲಯಿಲ್ಲ ಪತ್ತಥಾರಿ ಚಿತ್ರವು ಗುರುತುಗಳನ್ನು ಮುರಿಯುವಷ್ಟು ಹೊಸಸ್ ಗುರುತನ್ನು ಸೃಷ್ಟಿಸಿತ್ತು. ಇದು ಇವರ ೨೫ನೇ ಚಿತ್ರವಾಗಿದ್ದು ಮತ್ತಷ್ಟು ಪ್ರಮುಖವಾಯಿತು. ಇವರ ಮುಂದಿನ ಚಿತ್ರವಾದ ಶಮಿತಾಬ್ ಅಮಿತಾಭ್ ಬಚ್ಚನ್ ರವರೊಂದಿಗೆ ಬಾಲ್ಕಿಯವರ ನಿರ್ದೇಶದಲ್ಲಿ ತೆರೆಕಂಡಿತು. ಇವರ ಮುಂದಿನ ಚಿತ್ರವಾದ ಅನೇಗನ್ ಕೇ ವೀ ಆನಂದ್ ರವರ ನಿರ್ದೇಶನದಲ್ಲಿ ತೆರೆಕಂಡು ಹೊಸತೆನಿಸಿತು. ಇವರ ಮುಂದಿನ ಮಾರಿ ಚಿತ್ರವು ಹಾಸ್ಯ ಹಾಗೂ ಶೃಂಗಾರವನ್ನು ಒಳಾಗೊಂಡಿತ್ತು. ಈ ಚಿತ್ರದಲ್ಲಿ ಇವರೊಂದಿಗೆ ಕಾಜಲ್ ಅಗರ್ವಾಲ್, ರೋಬೊ ಶಂಕರ್ ಮತ್ತು ವಿಜಯ್ ಯೇಸುದಾಸ್ ರವರು ಅಭಿನಯಿಸಿದರು. ಈ ಚಿತ್ರದ ಸಂಗೀತವ ಅನಿರುದ್ಧ್ ರವಿಛಂದರ್ ರವರಿಂದ ಸೃಷ್ಟಿಸಲಾಗಿದ್ದು ಲೋಕಾಧ್ಯಂತ ಓಡಾಡಿ ಗೆದ್ದಿತು.