ಮೊಸಸ್

ಮುನ್ನುಡಿ

ಬದಲಾಯಿಸಿ

ನನ್ನ ಹೆಸರು ಮೊಸೆಸ್.ನನ್ನ ತಂದೆಯ ಹೆಸರು ವಿಜಯ ರಾಜು, ತಾಯಿ ಶಾಂತಿ. ನನಗೆ ತಂಗಿಯೊಬ್ಬಳಿದ್ದಾಳೆ, ಅವಳ ಹೆಸರು ಮಿಲ್ಕಾ. ನಾನು ಓದಿದ ಶಾಲೆ ಕಾರ್ಮೆಲ್ ಜ್ಯೋತಿ. ನನಗೆ ವಿಧ್ಯಾಭ್ಯಾಸದೊಂದಿಗೆ ಕ್ರೀಡಾಕೂಟದಲ್ಲಿ ಅಭಿಮಾನ. ಸಣ್ಣ ವಯಸ್ಸಿನಲ್ಲಿ ನನ್ನ ವ್ಯಸಂಗ ಬಹಳ ಚನ್ನಾಗಿತ್ತು. ಅದರೊಂದಿಗೆ ಹಲವು ಸ್ಪರ್ಥೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ಥಿಗಳನ್ನು ಪಡೆದಿದ್ದೇನೆ. ನನ್ನ ಬಾಳಿನ ತಿರುಗುಮೊನೆಯು ನನ್ನ ತಂದೆ ತೀರಿಕೊಂಡಿದ್ದು.

ಪೂರ್ವ ಜೀವನ

ಬದಲಾಯಿಸಿ
ಆಗ ನಾನು ನನ್ನ ಹತ್ತನೆಯ ತರಗತಿಯ ಪಲಿತಾಂಷವನ್ನು ಎದುರುನೋಡಿ ಕಾಯುತ್ತಿದ್ದ ಸಂದರ್ಭವದು. ಅದರ ನಂತರ ನನ್ನ ಬಂಧು ಮಿತ್ರರು ನನ್ನನ್ನು ಯಾವುದದರು ಕೆಲಸವನ್ನು ಹುಡುಕಿಕೊಳ್ಳಲು ಆಲೋಚಿಸಿದರು. ಆಗಲೇ ನನ್ನ ವಿಧ್ಯಾಭ್ಯಾಸ ಮುಗಿಯಿತೆಂದು ಭಾವಿಸಿದೆ. ಆದರೆ ನನ್ನ ತಾಯಿ ನಾನು ಕೆಲಸ ಮಾಡುವುದರ ಬದಲು ತಾನು ಕೆಲಸ ಮಾಡುವುದನ್ನು ಬಯಸಿದರು. ಅಷ್ಟೇಯಲ್ಲದೆ ನನ್ನ ವಿಧ್ಯಾಭ್ಯಾಸವನ್ನು ಮುಂದುವರೆಸಲು ಹೇಳಿ ದೂಡಿದರು. ನನ್ನ ತಾಯಿಯ ಸಹೋಧ್ಯೋಗಿಗಳೀಂದ ಸ್ವಲ್ಪ ಸಹಾಯವೂ ದೊರೆಯಿತು. ಕ್ರೈಸ್ಟ್ ಯೂನಿವರ್ಸಿಟಿಯ ಬಗ್ಗೆ ತಿಳಿದಿದರೂ ನಾನು ಅದರಲ್ಲಿ ಆಸಕ್ತಿ ತೋರಲಿಲ್ಲ. ಯಾರೋ ಪರಿಚಯದವರ ಮಾತಿನಂತೆ ನಾನು ಈ ಯೂನಿವರ್ಸಿಟಿಯನ್ನು ಸಂಪರ್ಕಿಸಲು, ಅದೃಷ್ಟವಶವಾಗಿ ನನಗೆ ಇಲ್ಲಿ ಓದುವ ಅವಕಾಶ ಸಿಕ್ಕಿತು. 

ಚಟುವಟಿಕೆಗಳು

ಬದಲಾಯಿಸಿ

ಓದಿನೊಂದಿಗೆ ಇಲ್ಲಿರುವ ಹಳವು ಹೆಚ್ಚಿನ ವಿಷಯಗಳು ನಾನು ಮುಂದುವರೆಯಲು ಸಹಕಾರಿಯಾಯಿತು. ಹೀಗಾಗಿ ನಾನು ಇಂದು ಈ ವಿಶ್ವವಿಧ್ಯಾಲಯದಲ್ಲಿರುವೆ. ಕ್ರೈಸ್ಟ್ ವಿಶ್ವವಿಧ್ಯಾಲಯದಲ್ಲಿರುವ ಕೆಲವು ಅಧಿಕಾರಿಗಳು ನನ್ನ ವಿಧ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಿದ್ದಾರೆ. ಇಲ್ಲಿರುವ ಕಂಪ್ಯೂಟರ್ ಮತ್ತು ಪುಸ್ತಕಾಲಯದ ವ್ಯವಸ್ಥೆಯಿಂದಾಗಿ ನಾನು ಮತ್ತಷ್ಟು ಬೆಳೆಯುವುದಕ್ಕೆ ನಾಂದಿಯಾಯಿತು. ನನಗೆ ಬಹಳವಾಗಿ ಹಿಡಿಸುವ ಅಡುಗೆ ಚಿಕೆನ್ ಬಿರಿಯಾನಿ. ನನಗೆ ಇಷ್ಟವಾದ ಸ್ಥಳ ಲಾಲ್ ಭಾಗ್ ಯಾಕೆಂದರೆ ನನಗೆ ಸಸ್ಯ ವಿಗ್ನಾನದಲ್ಲಿ ಬಹಳವಾಗಿ ಆಸಕ್ತಿಯಿದೆ.ನಾನು ಕ್ರಿಡೆಗಳಲ್ಲಿ ಆಸಕ್ತನಾದದ್ದರಿಂದ ಚಿಕ್ಕದಿಂದ ಇಗ್ಗಿನವರೆಗೆ ಎಲ್ಲಾ ಕ್ರಿಡಾ ಕೂಟ್ಟಗಲಲ್ಲಿ ಭಾಗವಹಿಸುತಿದ್ದೆನೆ.ನನ್ನ ಅಪ್ತಾ ಮಿತ್ರನು ಅಶ್ವಿನ್.ಅವನ್ನು ನನ್ನ ಎಲ್ಲಾ ಕಷ್ಟದಲ್ಲಿಯು ನನಗೆ ಸಹಾಯವಗಿದ್ದಾನೆ.ನನಗೆ ಈ ವಿಶ್ವ ವಿಧ್ಯಾಲಯ ತುಂಬ ಹೊಸದಾಗಿದೆ ಏಕೆಂದರೆ ನಾನು ವ್ಯಾಸಂಗ ಮಾಡ್ಡಿದ ಹಳ್ಳೆಯ ಕಾಲೇಜಿನಿಂದ ವಿವಿಧ ರೀತಿಯಲ್ಲಿ ಇದು ವತ್ಯಾಸವಾಗಿದೆ.ನಾನು ಬಿ.ಇ.ಎಸ್ ಕಾಲೇಜಿನಲ್ಲಿ ನನ್ನ ಹನ್ನೆರಡೆನೆಯ ತರಗತಿ ಮುಗಿಸಿದೆ.ಒಳ್ಳೆಯ ಅಂಕಗಳನೆ ಗಲ್ಲಿಸಿದೆ.ನನ್ನ ನೆಚ್ಚಿನ ಆಟ್ಟಗಾರ ರೈನ.ನನಗೆ ವಾಧ್ಯಗಲಲ್ಲಿಯು ಬಹಳ ಆಸಕ್ತಿ.ಟಬಲ ಮತ್ತು ಕೊಳಲು ನನಗೆ ಪ್ರಿಯಾವದ ವಾಧ್ಯಗಲು.ನನ್ನಗೆ ಇಷ್ಟವಾದ ಪ್ರಾಣಿ ಹುಲ್ಲಿ.ರಾಷ್ಟ್ರದ ಪ್ರಾಣಿಯನ್ನುವುದಕಲ್ಲ.ನನಗೆ ಇಷ್ಟವಾದ ಹಕ್ಕಿ ಗಿಳ್ಳಿ.ಇಗ ನಾನು ಶಾರದ ನಗರದಲ್ಲಿ ನಿವಾಸಿಸುತಿದ್ದೆನೆ.ನನಗೆ ಬಹಳ ಇಷ್ಟವಾದ ವಿಷಯವೆಂದರೆ ಸಸ್ಯಶಾಸ್ತ್ರ. ಇದು ಗಿಡ, ಮರ, ಸಸಿಗಳು ಮತ್ತು ಅದರ ಭಾಗಗಳು, ಜನನ, ಮರಣ, ಚಲನ ಮುಂತಾದವುಗಳನ್ನು ಹೇಳುವ ವಿಜ್ಞಾನದ ಒಂದು ಭಾಗ. ವಿಂಗ್ಸ್ ಆಫ್ ಫಯರ್ ನನಗೆ ಬಹಳವಾಗಿ ಹಿಡಿಸಿದ ಕೃತಿ.

ನನ್ನ ನೆಚ್ಚಿನ ಪುಸ್ತಕ

ಬದಲಾಯಿಸಿ
ಭಾರತದೇಷದ ಮಾಜಿ ಪ್ರಧಾನಿಯವರಾದ ಭಾರತರತ್ನ ಪದ್ಮಭೂಷಣ ಡಾಕ್ಟರ್ ಅಬ್ದುಲ್ ಕಲಾಂ ರವರು ಬರೆದಿದ್ದಾರೆ. ಭಾರತೀಯರು ಹಲವು ಬಗೆಗಳ ವ್ಯಥೆಗಳನ್ನು ಅನುಭವಿಸುತ್ತಿರುವುದು ಮತ್ತು ಅವುಗಳಿಗೆ ತೀರ್ವನ್ನು ಕಂಡುಕೊಳ್ಳಬಹುದದ ಮಾರ್ಘಗಳನ್ನು ಈ ಪುಸ್ತಕದಲ್ಲಿ ಅವರು ಹೇಳಿದ್ದರೆ. ಈ ಪುಸ್ತಕವು ಅವರ ಆತ್ಮಕಥನವೂ ಹೌದು. ಇವರು ತಮ್ಮ ಹಲವು ಕೃತಿಗಳಿಂದ ದೇಷದ ಯುವಕರಿಗೆಲ್ಲಾ ಮಾರ್ಘದರ್ಷಿಗಳಾಗಿದ್ದಾರೆ. ಹೀಗೆ ಅವರು ನನಗೂ ಮಾರ್ಘದರ್ಷಿಯಾದರು. ಫಾದರ್ ಜೋಬಿಯವರು ನನಗೆ ಕ್ರೈಸ್ಟ್ ವಿಶ್ವವಿಧ್ಯಾಲಯದಲ್ಲೇ ತುಂಬಾ ಇಷ್ಟವಾದ ಉಪನ್ಯಾಸಕರು. ಇವರ ಪ್ರಭಾವದಿಂದಲೇ ನನಗೆ ಸಸ್ಯಶಾಸ್ತ್ರ ಹಿಡಿಸಲು ಆರಂಭಿಸಿತು. ಅವರ ಪ್ರಭಾವದಿಂದ ನಾನು ಈ ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಂಡೆ. ಸಧ್ಯಕ್ಕೆ ಬಿ. ಎಸ್ ಸೀ ಒಳ್ಳೆಯ ಅಂಖಗಳೊಂದಿಗೆ ಮುಗಿಸುವುದು ನನ್ನ ಆಸೆ. 

ಮೊದಲು ನನ್ನ ಮನೆ ಶಾಲೆಯ ಪಕ್ಕದಲ್ಲೇ ಇತ್ತು. ಆದರಿಂದ ನನ್ನನ್ನು ಪ್ರಯಾಣದ ಆಯಾಸ ಹೆಚ್ಚಾಗಿ ಕಾಡುತ್ತಿರಲಿಲ್ಲ. ಆದರೆ ಈಗ ಮನೆಯಿಂದ ವಿಶ್ವವಿಧ್ಯಾಲಕ್ಕೆ ಹದಿನಾರು ಕಿಲೋಮೀಟರ್ಗಳ ದೂರವಿದ್ದು ನಾನು ಮೂರು ಬಸ್ಸನ್ನು ಹತ್ತಿ ಬರಬೇಕಾಗಿರುವ ಕಾರಣದಿಂದಗಿ ಪ್ರಯಾಣದ ಅಯಾಸ ಕಾಡುವುದಷ್ಟೇ ಅಲ್ಲದೆ ಮೊದಲ ತರಗತಿಗೂ ಸೇರಲಾಗದ ಸಂಧರ್ಭವು ಸೃಷ್ಟಿಯಾಗಿದೆ. ನಾನು ಮಧ್ಯಾನದ ಊಟಕ್ಕೆ ಏನನ್ನು ತರುವುದಿಲ್ಲ ಏಕೆಂದರೆ ನನಗೆ ವಿಶ್ವವಿಧ್ಯಾಲಯದಲ್ಲೆ ಊಟದ ವ್ಯವಸ್ಥೆ ಮಾಡಲಾಗಿದೆ.

ಸಂಗೀತ ಅಭಿರುಚಿ

ಬದಲಾಯಿಸಿ

ನನಗೆ ಸಂಗೀತದಲ್ಲೂ ಬಹಳ ಆಸಕ್ತಿಯಿದೆ. ಅದರಲ್ಲೂ ಭಕ್ತಿಗೀತೆಗಳು ನನಗೆ ಬಹಳ ಚೆನ್ನಾಗಿ ಬರುವ ಕಾರಣದಿಂದಾಗಿ ಬಹಳೈಷ್ಟವೂ ಆಯಿತು. ನಾನು ಮೊದಲನೆಯ ಸೆಮೆಸ್ಟರ್ಲ್ಲಿದ್ದಾಗ ವಿಶ್ವವಿಧ್ಯಾಲಯದಲ್ಲಿನ ಶಿಸ್ತುಗಳು ನನಗೆ ವಿಭಿನ್ನವಾದುದೆಂದೆನಿಸಿದವು. ಆದರೆ ಕಾಲಕ್ರಮೇಣವಾಗಿ ನಾನು ಈ ಶಿಸ್ತುಗಳಿಗೆ ಹೊಂದಿಕೊಂಡೆ. ಈಗ ನನಗೆ ಈ ವಿಶ್ವವಿಧ್ಯಾಲಯದ ಶಿಸ್ತುಗಳನ್ನೆಲ್ಲವನ್ನೂ ಪಾಲಿಸಿ ಒಳ್ಳೆಯ ಅಂಖಗಳೊಂದಿಗೆ ಉತೀರ್ಣವಾಗುವೆ ಎಂಬ ನಂಬಿಕೆ ಹುಟ್ಟಿದೆ. ಹೀಗೆ ನನ್ನ ಜೀವನ ಇಲ್ಲಿ ವರೆಗೆ ಸಾಗಿದೆ. ಮುಂಬರುವ ಕಾಲಗಳಲ್ಲಿ ಮತ್ತಷ್ಟು ಶುಭಸನ್ನಿವೇಶಗಳಿಗಾಗಿ ಕಾಯುತ್ತಿದ್ದೇನೆ. ಮುಂಬರುವ ಕಾಲವು ಮತ್ತಷ್ಟು ಉತ್ತಮವಾಗಿರುತ್ತದೆ ಎಂದು ಬಯಸುತ್ತಾ ಕುತೂಹಲದಿಂದ ಮುನ್ನೋಡುತ್ತಿದ್ದೇನೆ.