Monika1940554
ಪರಿಚಯ:
ಬದಲಾಯಿಸಿನನ್ನ ಹೆಸರು ಮೋನಿಕಾ.ಕೆ.ನಾನು ೩ನೇ ಮೇ ೨೦೦೧ರಲ್ಲಿ ಜನಿಸಿದೆ.ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನನ್ನ ಜನ್ಮಸ್ಥಳ.ನನ್ನ ತಾಯಿಯ ಹೆಸರು ಕವಿತ ಮತ್ತು ನನ್ನ ತಂದೆಯ ಹೆಸರು ಕುಮಾರ್.ನನ್ನ ತಂದೆ ತಾಯಿಗೆ ನಾನು ಹಿರಿಯ ಮಗಳು.ನನ್ನ ತಂಗಿಯ ಹೆಸರು ಯಶಸ್ವಿನಿ.ಕೆ.ಈಗ ಅವಳು ದ್ವಿತೀಯ ಪಿ.ಯು.ಸಿ.ಓದುತ್ತಿದ್ದಾಳೆ.ನನ್ನ ತಮ್ಮನ ಹೆಸರು ಯಶ್ವಂತ್.ಕೆ.ಈಗ ೮ನೇ ತರಗತಿಯಲ್ಲಿ ಓದುತ್ತಿದ್ದಾನೆ.ನನ್ನ ಪ್ರಾಥಮಿಕ ಹಾಗು ಹಿರಿಯ ಪ್ರಾಥಮಿಕ ಶಿಕ್ಷಣ ಕಾರ್ಮಲ್ ಕಾನ್ವಂಟ್ ಹೈ ಸ್ಕೂಲಿನಲ್ಲಿ ಮುಗಿಸಿದೆ.ನಾನು ೧೦ನೇ ತರಗತಿಯಲ್ಲಿ ಶೇಖಡ ೯೫% ಅಂಕಗಳನ್ನು ಗಳಿಸಿದೆ.ನನ್ನ ಪಿ.ಯು.ಸಿ.ಶಿಕ್ಷಣವನ್ನು ಸಂತ ಫ್ರಾನ್ಸಿಸರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ,ದ್ವಿತೀಯ ಪಿಯುಸಿಯಲ್ಲಿ ಶೇಖಡ ೯೧% ಅಂಕ ಗಳಿಸಿದೆ. ನನ್ನ ಸ್ನೇಹಿತೆಯ ಹೆಸರು ಶ್ರಾವಣಿ.ಎಂ.ನಾನು ಅವಳನ್ನು ಮೊದಲು ಭೇಟಿ ಮಾಡಿದ್ದು ೩ನೇ ತರಗತಿಯಲ್ಲಿ.ಅಂದಿನಿಂದಲೂ ನಾವಿಬ್ಬರು ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದೇವೆ.ಈಗ ನಾನು ಬೆಂಗಳೂರಿನ ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿರ್ವಸಿಟಿಯಲ್ಲಿ ನನ್ನ ಬಿ.ಎಸ್.ಸಿ.ಪದವಿಯನ್ನು ಮಾಡುತ್ತಿದ್ದೇನೆ.ನನಗೆ ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದು,ಬಣ್ಣಗಾರಿಕೆಯಲ್ಲಿ ಬಹಳ ಆಸಕ್ತಿ.ಪ್ರಬಂಧ ರಚನೆಗಳಲ್ಲಿ,ಕವಿತೆಗಳನ್ನು ಬರೆಯುವುದರಲ್ಲಿ ವಿಶೇಷ ಅಸಕ್ತಿ.ನಾನು ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರಬೇಕಾದರೆ,ಚಿತ್ರಕಲೆ ಮತ್ತು ಪ್ರಬಂಧ ರಚನೆಯಲ್ಲಿ ಮೊದಲನೇ ಪ್ರಶಸ್ತಿ ಸಿಕ್ಕಿತು. ನನಗೆ ಪಕ್ಷಿಗಳೆಂದರೆ ಬಹಳ ಇಷ್ಟ.ಹೊಸ ಜಾಗಗಳಿಗೆ ಹೋಗುವುದೆಂದರೆ ಉತ್ಸಾಹ.ನನ್ನ ಜೀವನದಲ್ಲಿ ನನ್ನ ತಂದೆ ತಾಯಿ ಮತ್ತು ಗುರುಗಳು ನನಗೆ ಆದರ್ಶವಾಗಿದ್ದಾರೆ.
ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನನ್ನ ತಾಯಿಯನ್ನು ಸಂರ್ಪಕಿಸುತ್ತೇನೆ.ನನ್ನ ತಂದೆ ತಾಯಿ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದವರು.ನನಗೆ ನನ ತಾಯಿ ತಯಾರಿಸುವ ಅಡುಗೆ ಇಷ್ಟ .ಬಹುಶಃ ಈಗ ಕಾಣೆಯೇ ಆಗಿರುವಂತಹ ಲಂಬಾಣಿ ಸಮುದಾಯಕ್ಕೆ ಸೇರಿದವರು.ಈ ನನ್ನ ಸಮುದಾಯದ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಕುರಿತು ನನಗೆ ಬಹಳಷ್ಟು ಹೆಮ್ಮೆ.ಆದರೆ ಈಗ ನಮ್ಮವರೇ ನಮ್ಮ ಸಂಸ್ಕೃತಿಯನ್ನು ಮರೆತ್ತಿದ್ದಾರೆ.ನನಗೆ ಈ ಪದ್ಧತಿಗಳನ್ನು ಕಲಿಯುವುದು ಮತ್ತು ಸಂಯೋಜಿಸಲು ಬಹಳ ಇಷ್ಟ.ನಮ್ಮ ಊರಿನಲ್ಲಿ ನಡೆಯುವ ಗೋದಿಯ "ತೀಜೆ" ಹಬ್ಬ ನನಗೆ ಬಹಳ ಇಷ್ಟ. ನನ್ನ ಮುತ್ತಜ್ಜಿ ಶಾಂತಾಬಾಯಿ,ಅವರು ಈ ಪದ್ಧತಿಗಳನ್ನು ಎತ್ತಿ ಹಿಡಿದಿದ್ದರು.ತಾವೇ ತಮ್ಮ ಕೈಯಿಂದ ತಮ್ಮ ವಸ್ತ್ರಗಳನ್ನು ಹೊಲಿಯುತ್ತಿದ್ದರು.ಅಂತಹ ಬಟ್ಟೆಯನ್ನು ನಮ್ಮಲ್ಲಿ "ಪೇಟಿಯಾ"ಎಂದು ಕರೆಯುತ್ತೇವೆ.ಅದರ ಮೇಲೆ ಸಣ್ಣ ಕನ್ನಡಿಗಳ ಚೂರುಗಳನ್ನು,ಸಣ್ಣ ಬಣ್ಣ-ಬಣ್ಣದ ದಾರದ ಹೂಗಳನ್ನು ಹೊಲೆದು ಅಲಂಕರಿಸುವರು.ಅವರು ನನಗಾಗಿ ಒಂದು 'ಪೇಟಿಯಾ'ವನ್ನು ಹೊಲೆದಿದ್ದಾರೆ.ಆದರೆ ಈಗ ಯಾರು ಸಹ ಇಂತಹ ಪದ್ಧತಿಗಳನ್ನು ಆಚರಿಸುತ್ತಲೇ ಇಲ್ಲ.ಹಾಗಾಗಿ ಇದು ನನಗೆ ಬೇಸರ ತರುವ ವಿಷಯ.ಹೀಗೇ ಮುಂದುವರೆದರೆ,ಇವು ಸಂಪೂರ್ಣವಾಗಿ ಮಾಯವಾಗಿಬಿಡುತ್ತವೆ.ಹಾಗಾಗಿ ನನ್ನ ಸಂಸ್ಕೃತಿಯನ್ನು ಮರಳಿ ಜೀವಂತಗೊಳಿಸುವುದು ನನ್ನ ಕಾಳಜಿ.
ನನ್ನ ಆಸಕ್ತಿಗಳು:
ಬದಲಾಯಿಸಿನನಗೆ ದೋಸೆ ಎಂದರೆ ಬಹಳ ಇಷ್ಟ .ಹೂವುಗಳಲ್ಲಿ ಗುಲಾಬಿ ಹೂವೆಂದರೆ ಬಹಳ ಇಷ್ಟ .ನಾನು ಪದವಿ ಪೂರ್ವ ಮಾಡಿದ ಕಾಲೇಜಿನಲ್ಲಿ ಆಂಗ್ಲ ಭಾಷೆಯನ್ನು ಅಧ್ಯಾ ಪಿಸು ತ್ತಿದ್ದ ರೂಪಾ ಎಂಬ ಶಿಕ್ಷಕಿ ಬಹಳ ಇಷ್ ಎಂದರೆ ಬಹಳ ಉತ್ಸಾಹ .ನಾನು ೧೦ನೇ ತರಗತಿಯಲ್ಲಿ ಇರಬೇಕಾದರೆ ನಮ್ಮ ಶಾಲೆಯಿಂದ ಪ್ರವಾಸಕ್ಕೆ ವಂಡರ್ ಲಾಗೆ ಕರೆದುಕೊಂಡು ಹೋಗಿದ್ದರು .ಇದು ನನಗೆ ಬಹಳ ಖುಷಿ ಕೊಟ್ಟ ಪ್ರವಾಸ .ಇದು ನಮ್ಮ ಶಾಲೆಯಿಂದ ನಾವು ಹೋಗುವ ಕೊನೆಯ ಪ್ರವಾಸ ಎಂದು ಬೇಸರ ಒಂದು ಕಡೆ.ನಾವೆಲ್ಲರೂ ಬೆಳಗ್ಗೆ ಬೇಗ ಎದ್ದು ತಯಾರಾಗಿ ಶಾಲೆಯ ಬಸ್ಸಿನಲ್ಲಿ ಕುಳಿತೆವು .ನಮ್ಮ ಶಿಕ್ಷಕರೆಲ್ಲರೂ ನಮ್ಮೊಂದಿಗೆ ಇದ್ದರು .ಬಸ್ಸಿನಲ್ಲಿ ಹಾಡುಗಳಿಗೆ ನಾವೆಲ್ಲರೂ ಕುಣಿಯುತ್ತಿದ್ದವು .ವಂಡರ್ಲಾ ತಲುಪಿದ ನಂತರ ಸ್ನೇಹಿತರೊಂದಿಗೆ ಕುಣಿದಾಡುತ್ತಾ ಹೋಗಿ ಎಲ್ಲಾ ತರಹದ ಆಟಗಳನ್ನ ನಾಡಿದ್ದು .ನಂತರ ಊಟಕ್ಕಾಗಿ ಎಲ್ಲರೂ ಸೇರಿದೆವು .ಊಟ ಮುಗಿಸಿ ನೀರಿನಲ್ಲಿ ಆಟವಾಡಿ,ಸಂಜೆಯಾದಾಗ ಮತ್ತೆ ಬಸ್ಸನ್ನು ಹತ್ತಿದೆವು .ಆಗ ಎಲ್ಲರೂ ಬೇಸರದಲ್ಲಿದ್ದರು .ಅಂದು ರಾತ್ರಿ ಎಲ್ಲರೂ ಮನೆಗೆ ಸೇರಿ ಮುಂದಿನ ದಿನ ಬಹಳಷ್ಟು ವಿದ್ಯಾರ್ಥಿಗಳು ಶಾಲೆಗೆ ಬರಲೇ ಇಲ್ಲ.
ನಮ್ಮ ನೃತ್ಯ :
ಬದಲಾಯಿಸಿಹಾಡುವುದು ನಮ್ಮ ವರ್ಗದ ಒಂದು ಜನಪದ ಪ್ರಕಾರವಾದರೆ ,ಮತ್ತೊಂದು ಪ್ರಸಿದ್ಧ ಜನಪದ ಪ್ರಕಾರವೆಂದರೆ ನೃತ್ಯ .ನಮ್ಮ ನೃತ್ಯ ನಮ್ಮ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು .ಮುಂಗೈ ಮತ್ತು ಕಾಲುಗಳಿಗೆ ದಪ್ಪನೆಯ ಬೆಳ್ಳಿ ಕಡಗ ,ಕಿವಿಯಲ್ಲಿ ಜೋತು ಬೀಳುವಷ್ಟು ಆಭರಣ ,ತುಂಬಿದ ನೆರಿಗೆಗಳಿಂದ ಕೂಡಿದ ತುಂಡು ಲಂಗ ,ಲಂಗದ ಮೇಲೆ ಅಂಗೈ ಅಗಲದ ಕನ್ನಡಿಗಳು ಹಾಗೂ ಅಡವಿಯಿಂದ ಸಂಗ್ರಹಿಸಿದ ಮಣಿಗಳ ಚಿತ್ತಾರ ,ಕುತ್ತಿಗೆಯಲ್ಲಿ ಇಳಿಬಿಟ್ಟ ಆರೇಳು ಮಣಿಸರ ,ಬೆರಳುಗಳಿಗೆ ತಾಮ್ರ ಹಾಗೂ ಹಿತ್ತಾಳೆ ಉಂಗುರ ಧರಿಸಿ ಭಾವಾವೇಶ ಗಳಿಲ್ಲದೆ ನರ್ತಿಸುತ್ತಾರೆ .ಸಮೂಹ ಗಾಯನದಲ್ಲಿ ನಡುನಡುವೆ ಚಪ್ಪಾಳೆ ಹಾಕಿಕೊಳ್ಳುತ್ತಾ ಲಯ ಭರಿತವಾಗಿ ಕುಣಿಯುತ್ತೇವೆ .
ನಮ್ಮ ಹಬ್ಬ:
ಬದಲಾಯಿಸಿದೀಪಾವಳಿ ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ.; ಇದನ್ನುವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ,ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ.
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತುಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನುಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ [ಬಲಿಪಾಡ್ಯಮಿ] ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿಆಚರಿಸಲಾಗುತ್ತದೆ.
ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ನಮ್ಮ ಹಬ್ಬ.
ನನ್ನ ಊರು:
ಬದಲಾಯಿಸಿನಾನು ಊರಿಗೆ ಹೋದಾಗ ನನ್ನ ತಮ್ಮ ತಂಗಿಯರ ಜೊತೆ ಆಡಲು ಬಹಳ ಸಂತೋಷ .ಊರಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಹೊಗಲು ಬಹಳ ಖುಷಿ .ನಾವು ಚಿತ್ರದುರ್ಗದ ಗಿದ್ದರೂ ಸಹ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ನೋಡೇ ಇರಲಿಲ್ಲ .ಒಂದು ಬಾರಿ ನಾವು ಊರಿಗೆ ಹೋದಾಗ ನಾನು ನನ್ನ ತಂದೆಗೆ ಕೋರ್ಟಿಗೆ ಹೋಗೋಣ ಎಂದಾಗ ಅವರು ಒಪ್ಪಿ ನಾವೆಲ್ಲರೂ ತಯಾರಾದೆವು .ಬಸ್ಸಿನಲ್ಲಿ ಹೊರಟು ,ನಾನು ಬಸ್ಸಿನ ಕಿಟಕಿಯ ಬಳಿ ಕುಳಿತಿದ್ದರಿಂದ ಆ ಹಸಿರಾದ ಗಿಡ ಮರಗಳನ್ನು ನೋಡಿ ಮನಸ್ಸಿಗೆ ಶಾಂತಿ ಮತ್ತು ಅವುಗಳು ಗಾಳಿಗೆ ಆಡುವುದನ್ನು ಕಂಡು ಬಹಳ ಸಂತೋಷವಾಯಿತು .ನಾವು ಕೋಟೆಯನ್ನು ತಲುಪಿದ ನಂತರ ಟಿಕೆಟ್ ಪಡೆದು ಒಳಗೆ ನಡೆಯಲು ಆರಂಭಿಸಿದೆವು. ಆ ಕಲ್ಲುಗಳ ಮೇಲೆ ನಡೆಯುತ್ತಾ ಇದ್ದ ಹಾಗೆ ಒಂದಿಷ್ಟು ದೂರದಲ್ಲಿ ,'ಓಬವ್ವನ ಕಿಂಡಿ' ಯನ್ನು ಕಂಡೆವು .ಹಾಗೇ ಸಾಗುತ್ತಾ ನಮ್ಮೆಲ್ಲರಿಗೂ ದಣಿವಾಗಿ ಕೋಟೆಯ ಕ್ಯಾಂಟೀನ್ ಗೆ ಹೋಗಿ ಐಸ್ಕ್ರೀಮ್ ತಿಂದೆವು .ಅದನ್ನು ಈಗಲೂ ನನಗೆ ಮರೆಯಲಾಗುವುದಿಲ್ಲ .ಮತ್ತು ಅಲ್ಲಿಂದ ನಾವು ಮುರುಘಾ ಮಠಕ್ಕೆ ಹೋದೆವು .ಅಲ್ಲಿನ ವಾತಾವರಣ ಬಹಳ ಶಾಂತಿಯುತವಾಗಿತ್ತು .ಅಲ್ಲಿ ಅನೇಕ ಪ್ರಾಣಿಗಳು ,ನವಿಲಿನ ಕುಣಿತ ,ಆನೆಗಳು ,ಎಲ್ಲವೂ ಇದ್ದವು .ನಾನು ಮತ್ತು ನನ್ನ ತಂಗಿ ಒಂಟೆ ಸವಾರಿಯನ್ನೂ ಮಾಡಿದ್ದು ನನಗೆ ಈಗಲೂ ನೆನಪಿದೆ.ಈ ನೆನಪುಗಳನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ .
ಮೊದಲು ಚಿತ್ರದುರ್ಗವನ್ನು ಚಿತ್ತಾಲ ದುರ್ಗ್ ಎಂದು ಕರೆಯಲಾಗುತ್ತಿತ್ತು .ಇಲ್ಲಿನ ಪ್ರವಾಸ ಸ್ಥಳಗಳು :ಚಿತ್ರದುರ್ಗದ ಕೋಟೆ ,ವಾಣಿ ವಿಲಾಸ ಸಾಗರ ,ಚಂದ್ರಾವಳಿ ತೋಟ ,ಜೋಗಿಮಟ್ಟಿ ,ಕಲ್ಲಿನ ಕೋಟೆ ಗಾಯತ್ರಿ ಜಲಾಶಯ ಮತ್ತು ಮುರುಘಾ ಸ್ವಾಮಿ ಮಠ .ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ಉಕ್ಕಿನ ಕೋಟೆ ಎಂದು ಕರೆಯುತ್ತಾರೆ .ಕೋಟೆಯ ಸಂಕೀರ್ಣದಲ್ಲಿರುವ ಹಿಡಂಬೇ ಶ್ವರ ದೇವಾಲಯವು ಅತ್ಯಂತ ಪುರಾತನವೂ ಹಾಗೂ ನೋಡಲು ಆಸಕ್ತಿದಾಯಕ ವು ಆಗಿದೆ .
ಮುರುಘ ಸ್ವಾಮಿ ಮಠ .
ಬದಲಾಯಿಸಿಮುರುಗ ಸ್ವಾಮಿ ಮಠದಲ್ಲಿ ಅನೇಕ ಗೊಂಬೆಗಳು ,ಮೂರ್ತಿಗಳು ಮತ್ತು ಕಲ್ಲಿನಿಂದ ಕಟ್ಟಿದ ಪ್ರಾಣಿಗಳ ಪುತ್ಥಳಿಗಳು ಬಹಳ ಮನಮೋಹಕವಾಗಿರುತ್ತವೆ .ನನಗೆ ಅಲ್ಲಿ ಹೋಗಲು ಬಹಳ ಇಷ್ಟ .ಅಲ್ಲಿಗೆ ನಾನು ಮತ್ತೆ ಮತ್ತೆ ಹೋಗಲು ಬಯಸುತ್ತೇನೆ .ಆದರೆ ಅಂದು ಅಲ್ಲಿ ಹೋದಾಗ ನನ್ನ ಕೈಯಲ್ಲಿ ಕ್ಯಾಮೆರಾ ಇರಲಿಲ್ಲ .ಆದ್ದರಿಂದ ನನ್ನ ಜೀವನದಲ್ಲಿ ನಡೆದ ಸಂತೋಷದ ಘಟನೆಗಳನ್ನು ನನ್ನ ಕಣ್ಮುಂದೆ ತರುವ ಫೋಟೊಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ .ಮುಂದಿನ ಬಾರಿ ಹೋದಾಗ ಖಂಡಿತ ನಾನು ಅಲ್ಲಿನ ಚಿತ್ರಗಳನ್ನು ತರಲು ಆಶಿಸುತ್ತೇನೆ .