ಅರ್ಕಿಮಿಡೀಸ್:

ಅರ್ಕಿಮಿಡೀಸ್ (ಕ್ರಿ.ಪೂ 287 – ಕ್ರಿ.ಪೂ 212) ಎಂಬಾತನು ಗ್ರೀಕ್ ನ ಗಣಿತಜ್ಞ,ಭೌತಶಾಸ್ತ್ರಜ್ಞ, ಯಂತ್ರಶಿಲ್ಪಿ (ಎಂಜಿನಿಯರ್), ಆವಿಷ್ಕರ್ತ ಹಾಗು ಖಗೋಳ ವಿಜ್ಞಾನಿ. ಇವನ ಜೀವನದ ಬಗ್ಗೆ ಅತ್ಯಲ್ಪ ಮಾಹಿತಿಯಿದೆಯಾದರೂ, ಈತನನ್ನು ಪ್ರಾಚೀನ ಕಾಲದ ವಿಜ್ಞಾನಿಗಳಲ್ಲಿ ಪ್ರಮುಖನೆಂದು ಭಾವಿಸಲಾಗಿದೆ. ಭೌತಶಾಸ್ತ್ರದ ಪ್ರಗತಿಯಲ್ಲಿ ಸ್ಥಾಯಿಜಲಶಾಸ್ತ್ರ , ಸ್ಥಾಯಿಶಾಸ್ತ್ರ ಮತ್ತು ಸನ್ನೆಕೊಲಿನ ನಿಯಮಗಳನ್ನು ಪ್ರತಿಪಾದಿಸಿದನು. ಇವನನ್ನು ಪ್ರಾಯೋಗಿಕ ವಿಜ್ಞಾನದ ಜನಕನೆಂದು ಕರೆಯುತ್ತಾರೆ.ತನ್ನ ಕಾಲದಲ್ಲೇ ತನ್ನ ಸಂಶೋಧನೆಗಳಿಗೆ ಪ್ರಸಿದ್ಧನಾಗಿದ್ದರೂ ಸಂಶೋಧನೆಗಳ ಬಗ್ಗೆ ಹೆಚ್ಚಿನ ಒತ್ತು ಕೊಡದೆ ಗಣಿತಶಾಸ್ತ್ರ ಬೆಳೆವಣಿಗೆಗೇ ತನ್ನೆಲ್ಲಾ ಪ್ರತಿಭೆ ಧಾರೆ ಎರೆದನು.