Mohammod ashfaq
Joined ೧೧ ಫೆಬ್ರವರಿ ೨೦೧೫
ಮೈಕೇಲ್ ಫ್ಯಾರಡೆ
ಮೈಕೇಲ್ ಫ್ಯಾರಡೆ, (22 ಸೆಪ್ಟೆಂಬರ್ 1791 – 25 ಆಗಸ್ಟ್ 1867) ಓರ್ವ ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾಗಿದ್ದು (ಅಥವಾ ಆ ಕಾಲದ ಪರಿಭಾಷೆಯಲ್ಲಿ ಹೇಳುವುದಾದರೆ ಭೌತಶಾಸ್ತ್ರಜ್ಞ ), ವಿದ್ಯುತ್ಕಾಂತತೆ ಹಾಗೂ ವಿದ್ಯುದ್ರಸಾಯನಶಾಸ್ತ್ರ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ.
ಒಂದು DC ವಿದ್ಯುತ್ ಪ್ರವಾಹವನ್ನು ಹೊತ್ತೊಯ್ಯುತ್ತಿರುವ ವಾಹಕವೊಂದರ ಸುತ್ತ ಇರುವ ಕಾಂತೀಯ ಕ್ಷೇತ್ರವನ್ನು ಫ್ಯಾರಡೆ ಅಧ್ಯಯನ ಮಾಡಿದ, ಮತ್ತು ಭೌತಶಾಸ್ತ್ರದಲ್ಲಿನ ವಿದ್ಯುತ್ಕಾಂತೀಯ ಕ್ಷೇತ್ರದ ಪರಿಕಲ್ಪನೆಗೆ ಸಂಬಂಧಿಸಿದಂತಿರುವ ತಳಹದಿಯನ್ನು ಪ್ರಮಾಣೀಕರಿಸಿದ. ವಿದ್ಯುತ್ಕಾಂತೀಯ ಪ್ರೇರಣೆ, ಪಾರಕಾಂತೀಯತೆ, ಹಾಗೂ ವಿದ್ಯುದ್ವಿಚ್ಛೇದನದ ನಿಯಮಗಳನ್ನು ಅವನು ಆವಿಷ್ಕರಿಸಿದ. ಬೆಳಕಿನ ಕಿರಣಗಳ ಮೇಲೆ ಕಾಂತೀಯತೆಯು ಪ್ರಭಾವ ಬೀರಬಲ್ಲದು ಎಂಬುದನ್ನು ಹಾಗೂ ಈ ಎರಡೂ ವಿದ್ಯಮಾನಗಳ ನಡುವೆ ಒಂದು ಆಧಾರವಾಗಿರುವ ಸಂಬಂಧವಿದೆ ಎಂಬುದನ್ನು ಅವನು ಪ್ರಮಾಣೀಕರಿಸಿದ.