ಫ್ಲಿಪ್ಕಾರ್ಟ್


  ಫ್ಲಿಫ್ಕಾರ್ಟ್ ಭಾರತದ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ವಿದ್ಯುನ್ಮಾನ ವಾಣಿಜ್ಯ ಸಂಸ್ಥೆಯಾಗಿದೆ. ಇದನ್ನು ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಅವರು ಅಕ್ಟೋಬರ್ ೨೦೦೭ ರಂದು ಸ್ಥಾಪಿಸಿದರು. []                                 
ಸಚಿನ್ ಬನ್ಸಾಲ್

ಏಪ್ರಿಲ್ ೨೦೧೭ರ ಹೊತ್ತಿಗೆ ಕಂಪನಿಯು $೧೧.೬ ಶತಕೋಟಿ ಮೌಲ್ಯದಲ್ಲಿತ್ತು. ಇವರ ಸೇವೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿದೆ.


ಇತಿಹಾಸ

   ಅಮೆಜ಼ಾನ್.ಕಾಂಗೆ ಕೆಲಸ ಮಾಡುತ್ತಿದ್ದ ಸಚಿನ್ ಬನ್ಸಾಲ್ ಹಾಗು ಬಿನ್ನಿ ಬನ್ಸಾಲ್ ಭಾರತದಲ್ಲಿ ಇ-ಕಾಮರ್ಸ್ ಕಂಪನಿಯನ್ನು ಪ್ರಾರಂಬಿಸುವ ಕಲ್ಪನೆಯನ್ನು ಹೊಂದಿದ್ದ. ಇಬ್ಬರೊ ಐಐಟಿಯ ಹಳೆಯ ವಿದ್ಯಾರ್ಥಿಗಳು. ಅವರು ಅಮೆಜ಼ಾನ್.ಕಾಂ ಅಲ್ಲಿ ರಾಜಿನಾಮೆ ನೀಡಿ ಹೊಸ ಕಂಪನಿಯನ್ನು ಪ್ರಾರಂಬಿಸಿದರು, ಅದುವೆ ಫ್ಲಿಪ್ಕಾರ್ಟ್ ಆನ್ಲೈನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್. 

ಆರಂಭಗೊಳ್ಳಲು ಫ್ಲಿಪ್ಕಾರ್ಟ್ ಪುಸ್ತಕಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಇದು ಶಿಘ್ರದಲ್ಲೇ ವಿಸ್ತರಿಸಿತು ಮತ್ತು ವಿವಿಧ ಸರಕುಗಳನ್ನು ನೀಡಲಾರಂಭಿಸಿತು. ಆರಂಭದಿಂದಲೇ ಹೊಸತನವನ್ನು ಕಲ್ಪಿಸುವುದು ಪ್ಲಿಪ್ಕಾಟ್ ಇಂಡಿಯಾನ್ ಇ-ಕಾಮರ್ಸ್ನ ಕೆಲವು ಗಮನಾರ್ಹ ವೈಶಿಷ್ಟ್ಯಗಳನ್ನು ಹೊಂದಿದೆ.[]

ಈ ಕಂಪನಿಯ ಸಿ.ಇ.ಒ ಕಲ್ಯಾಣ್ ಕೃಷ್ಣಮೂರ್ತಿ. ೨೦೧೬ ರಲ್ಲಿ ೩೩೦೦೦ಕ್ಕು ಹೆಚ್ಚು ಉದ್ಯಮಿಗಳಿದ್ದರು.


ಅಕ್ಟೋಬರ್ ಮತ್ತು ನವೆಂಬರ್ ೨೦೧೧ರಲ್ಲಿ ಫ್ಲಿಪ್ಕಾರ್ಟ್ ಮೈಮ್360.ಕಾಂ ಹಾಗು ಚಕ್ಪಕ್.ಕಾಂ ಎಂಬ ವೆಬ್ಸೈಟ್ ಗಳನ್ನು ಸ್ವಾಧೀನಪಡಿಸಿಕೊಂಡಿತು. ಅನಂತರ ಫೆಬ್ರವರಿ ೨೦೧೨ರಲ್ಲಿ ಇವರು ಫ್ಲೈಟ್ ಡಿಜಿಟಲ್ ಮ್ಯೂಸಿಕ್ ಸ್ಟೋರನ್ನು ಬಿಡುಗಡೆ ಮಾಡಿದರು. ಆದರೆ ಅದನ್ನು ೧೭ ಜೂನ್, ೨೦೧೩ರಲ್ಲಿ ಫ್ಲೈಟ್ ಡಿಜಿಟಲ್ ಮ್ಯೂಸಿಕ್ ಸ್ಟೋರನ್ನು ಉಚಿತ ಮ್ಯೂಸಿಕ್ ಸೈಟ್ಸ್ ಆಗಮನದಿಂದ ಮುಚ್ಚಲಾಯಿತು. 


ಹಣಕಾಸಿನ ವಿಚಾರ

 ಮೊದಲಿಗೆ ವ್ಯಾಪಾರವನ್ನು ಸ್ಥಾಪಿಸಲು ವೆಬ್ಸೈಟ್ ಮಾಡಲು ಮಾತ್ರ ರೂ.೪೦೦,೦೦೦ (ಯು.ಎಸ್.$೬೨೦೦) ಖರ್ಚು ಮಾಡಿದರು. ನಂತರ ಸಾಹಸೋದ್ಯಮ ಬಂಡವಾಳ ನಿಧಿ (ವೆಂಚರ್ ಕ್ಯಾಪಿಟಲ್) ಅಕ್ಸೆಲ್ ಇಂಡಿಯಾದಿಂದ ೨೦೦೯ರಲ್ಲಿ $೧ ಮಿಲಿಯನ್ ಮತ್ತು ಟೈಗರ್ ಗ್ಲೋಬಲ್ನಿಂದ ೨೦೧೦ರಲ್ಲಿ $೧೦ ಮಿಲಿಯನ್ ಹಾಗು ಜೂನ್ ೨೦೧೧ರಲ್ಲಿ $೨೦ ಮಿಲಿಯನ್ ತೆಗೆದುಕೊಂಡರು.
 ನವೆಂಬರ್ ೨೦೧೨ ರಂದು, ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್, ೧೯೯೯ರ ಎಫ್ಡಿಐ ನಿಬಂಧೆನೆಗಳನ್ನು ಉಲ್ಲಂಘಿಸಿದ ಕಂಪನಿಗಳಲ್ಲಿ ಫ್ಲಿಪ್ಕಾರ್ಟ್ ಒಂದಾಗಿತ್ತು.
೨೦೦೮-೨೦೦೯ರಲ್ಲಿ ಫ್ಲಿಪ್ಕಾರ್ಟ್ ಮಾರಟ ವರದಿ ರೂ.೪೦ ಮಿಲಿಯನ್ (ಯೂ.ಎಸ್. $೬೨೦,೦೦೦), ೨೦೦೯-೨೦೧೦ರಲ್ಲಿ  ರೂ.೨೦೦ ಮಿಲಿಯನ್(ಯೂ.ಎಸ್ $೩.೧ ಮಿಲಿಯನ್), ೨೦೧೦-೨೦೧೧ರಲ್ಲಿ ರೂ.೭೫೦ ಮಿಲಿಯನ್ (ಯೂ.ಎಸ್.$೧೨ ಮಿಲಿಯನ್). ೨೦೧೨-೨೦೧೩ರ ಸಾಲಿಗೆ ಪ್ಲಿಪ್ಕಾರ್ಟ್ ರೂ. ೨.೮ ಶತಕೋಟಿ (ಯೂ.ಎಸ್. $೪೪ ದಶಲಕ್ಷ) ನಷ್ಟವನ್ನು ವರದಿ ಮಾಡಿದೆ. 

ಅಕ್ಟೋಬರ್ ೬, ೨೦೧೪ರಂದು, ಫ್ಲಿಪ್ಕಾರ್ಟ್ ಕೆವಲ ೧೦ ಗಂಟೆಗಳಲ್ಲಿ "ದಿ ಬಿಗ್ ಬಿಲಿಯನ್ ಡೇ" ಎಂಬ ಕಾರ್ಯಯೋಜನೆಯಲ್ಲಿ ಸುಮಾರು ರೂ.೬.೫ಶತಕೋಟಿ(billion) ಮೌಲ್ಯದಷ್ಟು ಉತ್ಪನ್ನಗಳು ಮಾರಾಟವಾಗಿ ಇ-ಕಾಮರ್ಸ್ನಲ್ಲಿಇತಿಹಾಸವನ್ನು ಸೃಷ್ಠಿಮಾಡಿತು.

ಸ್ವಾಧೀನಗಳು ೨೦೧೦: ವಿರೆಡ್, ಸಾಮಾಜಿಕ ಪುಸ್ತಕ ಅನ್ವೇಷಕ ಉಪಕರಣ ೨೦೧೧: ಮೈಮ್೩೬೦, ಡಿಜಿಟಲ್ ಪ್ಲಾಟ್ಫಾರ್ಮ್ ಕಂಪೆನಿ ೨೦೧೪: ಮಿಂತ್ರ, ಅಂದಾಜು ರೊ.೨೦ ಬಿಲಿಯನ್ (ಯುಎಸ್ $.೩೧೦ ಮಿಲಿಯನ್) ವ್ಯವಹಾರದಲ್ಲಿ ಪಡೆದುಕೊಂಡಿತು ೨೦೧೬: ಎಪ್ರಿಲ್ನಲ್ಲಿ, ಫ್ಲಿಪ್ಕಾರ್ಟ್ ಪಾವತಿ ಪ್ರಾರಂಭದ ಫೋನ್ ಪೇ ಅನ್ನು ಸ್ವಾಧೀನಪಡಿಸಿಕೊಂಡಿತು.


ನಿಯಂತ್ರಣ ಕ್ರಮ ಮತ್ತು ಮೊಕದ್ದಮೆಗಳು

  ೩೦ ನವೆಂಬರ್, ೨೦೧೨ರಂದು ಫ್ಲಿಪ್ಕಾರ್ಟ್ ಕಛೇರಿಗಳನ್ನು ಎನ್ಫೋರ್ಸ್ಮ್ಂಟ್ ಡೈರೆಕ್ಟರೇಟ್ ದಾಳಿ ಮಾಡಿದರು ಮತ್ತು ಸಂಸ್ಥೆಯ ದಾಖಲೆಗಳು ಮತ್ತು ಕಂಪ್ಯೂಟರ್ ಹಾರ್ಡ್ ಡ್ರೈವ್ಗಳನ್ನು ವಶಪಡಿಸಿಕೊಂಡರು.

ಅಗಸ್ಟ್ ೨೦೧೬ರಂದು, ದಿ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್, ಫ್ಲಿಪ್ಕಾರ್ಟ್ನ್ನು ಫಾರಿನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್ ಉಲ್ಲಂಘಿಸಿದೆ ಎಂದು ಹೇಳಿದೆ. ಅದರಂತೆ ಭಾರತ ಸರಕಾರವು ೨೦೧೬ರಲ್ಲಿ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ಅನ್ನು, ಫ್ಲಿಪ್ಕಾರ್ಟ್ ಆನ್ಲೈನ್ ಸೇವೆಗಳನ್ನು ತನಿಖೆ ಮಾಡಲು ಸೂಚಿಸಿತು ಹಾಗು ಫೆಬ್ರವರಿ, ೨೦೧೬ರಲ್ಲಿ ಮಹಾರಾಷ್ಟ್ರದ ಆರೋಗ್ಯ ಸಚಿವ, ಜೆ.ಪಿ.ನಡ್ಡ, ಎಫ್.ಡಿ.ಎ( ಫೂಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೆಶ್ನ)ರ ಮೂಲಕ ಮಾನ್ಯ ಪರವಾನಗಿಯನ್ನು ಇಲ್ಲದೆ ಔಷದಿಗಳನ್ನು ಮಾರಟಮಾಡಿದಕ್ಕೆ ಕ್ರಮಗಳನ್ನು ಕೈಗೊಂಡಿತ್ತು.


ವಿಶೇಷ ಉತ್ಪನ್ನ ಉಡಾವಣೆಗಳು

೧. ಮೊಟೊರೊಲಾ ಮೊಬಿಲಿಟಿ:

    ಮೊಟೊರೊಲಾ ಮೊಬಿಲಿಟಿಯನ್ನು ಗೂಗಲ್ ರವರು, ಲೆನೊವೊ ಎಂಬ ಕಂಪನಿಗೆ ಮಾರಾಟ ಮಾಡಿದರು. ಫೆಬ್ರವರಿ ೫, ೨೦೧೪ರಲ್ಲಿ ಲೆನೊವೊ ಮತ್ತು ಫ್ಲಿಪ್ಕಾರ್ಟ್ ಜೊತೆಗೂಡಿ ಭಾರತದಲ್ಲಿ ಮೊಟೊ ಜಿ ಎಂಬ ಸ್ಮಾರ್ಟ್ ಫೊನ್ನನ್ನು ಬಿಡುಗಡೆ ಮಾಡಿತು. ಮೊಟೊ ಎಕ್ಸ್ ಆಂಡ್ರೈಡ್ ಸ್ಮಾರ್ಟ್ ಫೊನ್ನನ್ನು ೧೯ ಮಾರ್ಚ್, ೨೦೧೪ರಂದು ಹಾಗು ೧೩ ಮೇ, ೨೦೧೪ರಂದು ಕಡಿಮೆ ಬೆಲೆಯ ಮೊಟೊ ಇ ಯನ್ನು ಮಾರಾಟ ಮಾಡಲು ಶುರುಮಾಡಿದರು.

‍‍‍೨.ಮೈಕ್ರೊಮಾಕ್ಸ್ ಯು ಯುನಿಕ್:

ಇದ್ದನ್ನು ಫ್ಲಿಕಾರ್ಟ್ ೨೭ ಜೂಲೈ, ೨೦೧೭ರಂದು ಮೈಕ್ರೊಮಾಕ್ಸ್ ಇನ್ಫರ್ಮ್ಯಾಟಿಕ್ಸ್ ಅಂಗಸಂಸ್ಥೆಯಾಗಿ ಯು ಯುನಿಕ್ 2(Yu Yunique 2) ಅನ್ನು ಬಿಡುಗಡೆ ಮಾಡಿದರು.


ಸ್ವಂತ ಉತ್ಪನ್ನಗಳು

  • ಫ್ಲಿಪ್ಕಾರ್ಟ್ ಅದರದೆಯಾದ ಹೊಸ ಎಲೆಕ್ಟ್ರಾನಿಕ್ ಬ್ರ್ಯಾಂಡ "ಡಿಜಿಫ್ಲಿಪ್" ಅನ್ನು ಸ್ಥಾಪಿಸಿತು. ಜೂಲೈ ೨೦೧೪ರಲ್ಲಿ ಡಿಜಿಫ್ಲಿಪ್ ಎಲೆಕ್ಟ್ರಾನಿಕ್ ಉತ್ಪನಗಳಾದ ಟಾಬ್ಲೆಟ್,

ಮೊಬೈಲ್ ಫೋನ್ ಮತ್ತು ಫಾಬ್ಲೆಟ್ಗಳನ್ನು ಮತ್ತು ನೆಟ್ವರ್ಕಿಂಗ್ ರೂಟರನ್ನು ಬಿಡುಗಡೆ ಮಾಡಿದರು.

ಡಿಜಿಫ್ಲಿಪ್ ಲೋಗೊ
  • "ಸಿಟ್ರಾನ್" ಎಂಬ ಹೆಸರಿನಲ್ಲಿ ಗೃಹೋಪಯೋಗಿ ವಸ್ತುಗಳು, ಅಡುಗೆ ಉಪಯುಕ್ತತೆಗಳು ಮತ್ತು ವಯಕ್ತಿಕ ಆರೋಗ್ಯಕ್ಕೆ ಬೇಕಾದ ವಸ್ತುಗಳನ್ನು ಪ್ರಾರಂಬಿಸಿದರು.
  • ಫ್ಲಿಪ್ಕಾರ್ಟ್ ನವೆಂಬರ್ ೨೦೧೭ರಲ್ಲಿ "ಬಿಲಿಯನ್" ಎಂಬ ಹೆಸರಿನಲ್ಲಿ ಮೊಬೈಲ್ ಫೋನ್ಗಳನ್ನು ಪ್ರಾರಂಬಿಸಿದರು.


ಪ್ರಶಸ್ತಿಗಳು ಮತ್ತು ಮಾನ್ಯತೆಗಳು

  1. ಏಪ್ರಿಲ್ ೨೦೧೬ರಲ್ಲಿ, ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರನ್ನು ಟೈಮ್ ಮ್ಯಾಗಝೀನ್ನಲ್ಲಿ ೧೦೦ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಹೆಸರಿಸಲಾಯಿತು.
  2. ಸಚಿನ್ ಬನ್ಸಾಲ್ ಗೆ ೨೦೧೨-೨೦೧೩ ವರ್ಷದ ಉದ್ಯಮಿ ಪ್ರಶಸ್ತಿಯನ್ನು ಎಕನಾಮಿಕ್ ಟೈಮ್ಸ್ ನೀಡಿದರು.
  3. ಫ್ಲಿಪ್ಕಾರ್ಟ್.ಕಾಂ ಸಿ.ಎನ್.ಬಿ.ಸಿ 18 (CNBC 18) ರ 'ಇಂಡಿಯಾ ಬಿಸಿನಸ್ ಲೀಡರ್ ಅವಾರ್ಡ್ಸ್ 2012' ವರ್ಷದ ಯಂಗ್ ಟರ್ಕಿಯ ಗೌರವಕ್ಕೆ ಪಾತ್ರವಾಗಿತ್ತು.
  4. ಸೆಪ್ಟೆಂಬರ್ ೨೦೧೫ರಲ್ಲಿ ಬಿನ್ನಿ ಬನ್ಸಾಲ್ ಮತ್ತು ಸಚಿನ್ ಬನ್ಸಾಲ್ರವರು ಫೋರ್ಬ್ಸ್ ಇಂಡಿಯಾ ರಿಚ್ ಲಿಸ್ಟ್ನಲ್ಲಿ $೧.೩ ಶತಕೋಟಿ ಮೌಲ್ಯದೊಂದಿಗೆ ಭಾರತದ ೮೬ನೇ ಶ್ರೀಮಂತ ವ್ಯಕ್ತಿ ಎಂದು ಹೆಸರಿಸಿದ್ದರು.[]

ಉಲ್ಲೇಖನ

  1. https://en.wikipedia.org/wiki/Flipkart
  2. https://successstory.com/companies/flipkart
  3. https://en.wikipedia.org/wiki/Binny_Bansal