ನಾನು ಮೇಘನಾ ಹೆಗಡೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವಳಾಗಿದ್ದು, ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿರುತ್ತೇನೆ. ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಕನ್ನಡ ಕಾದಂಬರಿಗಳನ್ನ ಓದುವುದು, ಹಾಡುವುದು ಮತ್ತು ಚಿತ್ರಗಳನ್ನ ಬಿಡಿಸುವುದು ನನ್ನ ಹವ್ಯಾಸಗಳಾಗಿವೆ.