ಸದಸ್ಯ:Mathew nicolas dsouza/ಅರುಣ್ ಭಾದುರಿ
ಅರುಣ್ ಭಾದುರಿ | |
---|---|
ಜನನ | [೧] | ೭ ಅಕ್ಟೋಬರ್ ೧೯೪೩
ಮೂಲಸ್ಥಳ | ಮುರ್ಷಿದಾಬಾದ್, ಪಶ್ಚಿಮ ಬಂಗಾಳ, ಭಾರತ |
ಮರಣ | 17 December 2018[೨] | (aged 75)
ಸಂಗೀತ ಶೈಲಿ | ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಅರೆ ಶಾಸ್ತ್ರೀಯ ಸಂಗೀತ, ಭಕ್ತಿಪೂರ್ವಕ, ಠುಮ್ರಿ |
ವೃತ್ತಿ | ಗಾಯಕ |
ಸಕ್ರಿಯ ವರ್ಷಗಳು | ೧೯೫೦–೨೦೧೮ |
ಅರುಣ್ ಭಾದುರಿ (೭ ಅಕ್ಟೋಬರ್ ೧೯೪೩ - ೧೭ ಡಿಸೆಂಬರ್ ೨೦೧೮) ಭಾರತೀಯ ಶಾಸ್ತ್ರೀಯ ಸಂಗೀತದ ಗಾಯಕ .
ಭಾದುರಿ ಅವರು ಮೊದಲಿಗೆ ಎ. ದೌದ್ ಖಾನ್ ಮತ್ತು ಸಗಿರುದ್ದೀನ್ ಖಾನ್ ಅವರಿಂದ ತಾಲೀಮ್ ತೆಗೆದುಕೊಂಡರು. ನಂತರ ಅವರು ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ವಿದ್ವಾಂಸರಾಗಿ ಸೇರಿಕೊಂಡರು. ರಾಂಪುರ-ಸಹಸ್ವಾನ್ ಘರಾನಾದ ಇಶ್ತಿಯಾಕ್ ಹುಸೇನ್ ಖಾನ್ ಮತ್ತು ಜ್ಞಾನ್ ಪ್ರಕಾಶ್ ಘೋಷ್ ಅವರೊಂದಿಗೆ ತರಬೇತಿ ಪಡೆದರು. ಆರಂಭಿಕ ಜೀವನದಲ್ಲಿ ಅವರ ಸಂಗೀತದ ಸಹಚರರು ತಬಲಾ ವಾದಕ ನಿತ್ಯಾ ಗೋಪಾಲ್ ಸಹಾ, ಗಾಯಕ ಅಮಲೇಂದು ಲಾಹಿರಿ, ಸಂಗೀತಗಾರ ರಾಮಪ್ರಸಾದ್ ಮೈತ್ರಾ ಮುಂತಾದವರು.
ಭಾದುರಿ ಅವರು ೨೦೧೪ ರಲ್ಲಿ ಬಂಗಾ ಬಿಭೂಷಣ ಪ್ರಶಸ್ತಿ ಪಡೆದರು [೩]
ಸಾವು
ಬದಲಾಯಿಸಿಅರುಣ್ ಭಾದುರಿ ಅವರು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಕೋಲ್ಕತ್ತಾದ ಆಸ್ಪತ್ರೆಯಲ್ಲಿ ೧೭ ಡಿಸೆಂಬರ್೨೦೧೮ ರಂದು ನಿಧನರಾದರು [೪]
ಉಲ್ಲೇಖಗಳು
ಬದಲಾಯಿಸಿ- ↑ "Artist of The Month Pandit Arun Bhaduri". itcsra.org.
- ↑ "Vocalist Pandit Arun Bhaduri passed away". timesofindia.indiatimes.com.
- ↑ "Pandit Arun Bhaduri honoured with Banga Bibhusan Award by the Governor of West Bengal, MK Narayanan and West Bengal's Chief Minister Mamata Banerjee at Science city in Kolkata, West Bengal on May 20, 2014". timescontent.com.
- ↑ "Renowned Vocalist Pandit Arun Bhaduri died at 75". ndtv.com.
[[ವರ್ಗ:೨೦೧೮ ನಿಧನ]] [[ವರ್ಗ:೧೯೪೩ ಜನನ]]