ನನ್ನ ಹೆಸರು ಮರ್ವಿನ್ ನನ್ನ ಬಗ್ಗೆ ಹೇಳುವುದದ್ದರೆ ನಾನು ಬಂಟ್ವಾಳದವನು ನಾನು ನನ್ನ ವಿದ್ಯಾಭ್ಯಾಸವನ್ನು ಬಂಟ್ವಾಳದ ಸರಕಾರಿ ಶಾಲೆಯಲ್ಲಿ ಮಾಡಿದೆ ಮತ್ತೆ ಅದೇ ಶಾಲೆಯಲ್ಲಿ ನಾನು ೧೦ನೇ ವರೆಗೆ ಕಲಿತೆ ಅದರ ನಂತರ ನನ್ನ ಪಿಯುಸಿ ವಿಧ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದೆ. ಮಂಗಳೂರಿನಲ್ಲಿ ಪದುವ ವಿದ್ಯಾಸಂಸ್ದೆಯಲ್ಲಿ ನಾನು ನನ್ನ ಪಿಯುಸಿ ಕಲಿತೆ ಈ ಎರಡು ವರ್ಷದಲ್ಲಿ ಕಲಿಕೆ ಮಾತ್ರವಲ್ಲಾದೇ ಹಲವಾರು ಹೊಸ ಹೊಸ ವಿಷಯಗಳನ್ನು ಕಲಿತೆ ಮತ್ತು ಮಂಗಳೂರಿನಲ್ಲಿ ಹೇಗೆ ಜೀವಿಸಬಹುದೆಂದು ಕಲಿತೆ ಮತ್ತೆ ನನ್ನ ವಿಧ್ಯಾಭ್ಯಾಸದ ಸಮಯದಲ್ಲಿ ನಾನು ವಿಧ್ಯಾರ್ಧಿ ನಿಲಯದಲ್ಲಿ ನಿಲ್ಲುತ್ತಿದ್ದೆ. ಮತ್ತೆ ಈ ಕಾಲೇಜು ಮತ್ತು ನನ್ನ ವಿದ್ಯಾರ್ಧಿ ನಿಲಯ ಹತ್ತಿರ ಇದ್ದ ಕಾರಣ ನಾನು ಕಾಲೇಜುಗೆ ಹೋಗಿ ನನಗೆ ಪಾಠದ ಬಗ್ಗೆ ಇದ್ದ ಸಮಸ್ಯೆಗಳನ್ನು ಶಿಕ್ಷಕರಲ್ಲಿ ಕೇಳಿ ಅದನ್ನು ಬಗೆಹರಿಸಿದೆ. ಈ ಕಾಲೇಜಿನ ಶಿಕ್ಷಕರ ಬಗ್ಗೆ ಹೇಳುವುದಾದರೆ ಅವರು ತುಂಬಾ ಸಹಾಯವಂತರು ಮತ್ತು ಈ ಕಾಲೇಜಿನ ಪರಿದಸರ ನನ್ನ ವಿಧ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಯುತು. ನನ್ನ ಪಿಯುಸಿ ನಂತರ ನಾನು ಮಂಗಳೂರಿನ ಪ್ರತಿಷ್ಟ ಕಾಲೇಜುಗಳಲ್ಲಿ ಒಂದಾದ ಸಂತ ಆಲೋಸಿಯಸ್ ಗೆ ನನ್ನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಬಂದೆ. ಈ ಕಾಲೇಜಿನ ವಾತಾವರಣ ನನ್ನ ವಿಧ್ಯಾಭ್ಯಾಸಕ್ಕೆ ಬಹಳ ಅನುಕೂಲವಾಗಿದೆ. ಅದಲ್ಲಾದೇ ಇಲ್ಲಿನ ಶಿಕ್ಷಕರು ಗೆಳೆತನದ ಮನೋಭವದಲ್ಲಿ ನಮ್ಮನ್ನು ನೋಡುತ್ತಾರೆ. ಮತ್ತೆ ನಮಗೆ ಪಾಠದ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುತ್ತಾರೆ. ಅದಲ್ಲಾದೇ ಅವರು ತರಗತಿಯಲ್ಲಿ ಪಾಠದೊಂದಿಗೆ ನಮ್ಮ ಮನವನ್ನು ಸಂತೋಷಗೊಳ್ಳಿಸುವಂತಹ ಕಧೆಗಳನ್ನು ಹೇಳುತ್ತಾರೆ. ಈ ಕಾಲೇಜಿನ ವಿಶೇಷತೆಯನ್ನು ಹೇಳುವುದಾದರೆ ಇಲ್ಲಿ ಶಿಸ್ತುನ್ನು ಕಲಿಸುತ್ತಾರೆ. ಮತ್ತು ಇಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಅದಲ್ಲಾದೇ ಕಂಪ್ಯೂಟರ್ ಶಿಕ್ಷಣ ಕೋಡುತ್ತಾರೆ.ಇನ್ನೂ ಹೇಳುವುದ್ದಾರೆ ಈ ಕಾಲೇಜಿನಲ್ಲಿ ನಾನು ನನ್ನ ಒಂದು ವರ್ಷದ ವಿಧ್ಯಾಭ್ಯಾಸ ಮುಗಿಸಿ ಈಗ ಎರಡನೇ ವರ್ಷ ಕಲಿಯುತ್ತಿದ್ದೇನೆ. ಮತ್ತೆ ಈ ಕಾಲೇಜಿನಲ್ಲಿ ಸಹಾಯ ಎಂಬ ಯೋಜನೆ ನಡೆಸುತ್ತಾರೆ. ಈ ಯೋಜನೆಯಲ್ಲಿ ನಾವು ಬಡವರಿಗೆ ಸಹಾಯಮಾಡಲು ಇರುತ್ತದೆ. ಈ ಯೋಜನೆ ನನಗೆ ತುಂಬಾ ಉತ್ತಮ ಎನಿಸುತ್ತದೆ. ಮತ್ತೆ ಈ ಕಾಲೇಜಿನಲ್ಲಿ ನಮ್ಮ ಆಸಕ್ತಿಗಳನ್ನು ಹೊರತರಲು ಆ ವಿವಿಧ ತಂಡಗಳನ್ನು ಮಾಡಿದ್ದರೆ ಅದರಲ್ಲಿ ನಾನು ಸಂಗೀತ ತಂಡಕ್ಕೆ ಸೇರಿದ್ದೇನೆ. ಮತ್ತೆ ನಾನು ಈ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆಯಾನಿಸುತ್ತದೆ.

ಆಸಕ್ತಿಗಳು ನಾನು ಕೃಷಿ ಮಾಡುವ ಕುಟುಂಬದಿಂದ ಬಂದ ಕಾರಣ ನನಗೆ ಕೃಷಿಯ ಬಗ್ಗೆ ತುಂಬಾ ಆಸಕ್ತಿ ಇದೆ. ನಾನು ಯಾವಾಗ ರಜೆಯಲ್ಲಿ ಮನೆಯಲ್ಲಿ ಇರುವಾಗ ನಾನು ಕೃಷಿ ಕೆಲಸಗಳನ್ನು ಮಾಡುತ್ತೇನೆ. ಇದು ಬಿಟ್ಟು ನನ್ನ ಬೇರೆ ಆಸಕ್ತಿ ಗಳೆಂದರೆ ಹಾಡುವುದು ಕಥೆಪುಸ್ತಕ ಮತ್ತು ಮುಖ್ಯ ವ್ಯಕ್ತಿಗಳ ಜೀವನದ ಬಗ್ಗೆ ಇರುವ ಪುಸ್ತಕಗಳನ್ನು ಓದಲು ನನಗೆ ತುಂಬಾ ಅಸಕ್ತಿ. ಅದಲ್ಲಾದೇ ಬೇರೆಯವರಿಂದ ಸಂಗೀತವನ್ನು ಕಲಿಯಿತ್ತೇನೆ.

ನಾನು ನನ್ನ ಜೀವನದಲ್ಲಿ ಕಲಿತ ಮುಖ್ಯ ವಿಷಯಗಳೆಂದರೆ ನನ್ನ ಹಿರಿಯರನ್ನು ಮತ್ತು ಶಿಕ್ಷಕರನ್ನು ಗೌರವದಿಂದ ಕಾಣುವುದು ಮತ್ತು ಅವರು ಹೇಳಿದ ಬುದ್ಧಿವಾದಗಳನ್ನು ಒಳ್ಳೆಯ ರೀತಿಯಲ್ಲಿ ಕಲಿಯುದು ಮತ್ತು ಬೇರೆ ವಿಧ್ಯಾರ್ಧಿಗಳಿಗೆ ಮತ್ತು ನನ್ನಕ್ಕಿಂತ ಕಿರಿಯರಿಗೆ ನಾನು ಆದರ್ಶವಾಗಿ ಇರುವುದು ಮತ್ತು ಅದಲ್ಲಾದೇ ನನ್ನ ಕಲಿಕೆಯನ್ನು ಒಳ್ಳೆಯ ರೀತಿಯಲ್ಲಿ ಮಾಡುವುದು ಮತ್ತು ಶಿಕ್ಷಕರು ಹೇಳಿದ ಕೆಲಸಗಳನ್ನು ಅವರು ಹೇಳಿದದ್ದನ್ನು ನಾವೇ ಮುಗಿಸುವುದು ಇದು ನಾನು ನನ್ನ ಜೀವನದಲ್ಲಿ ಕಲಿತ ಮುಖ್ಯ ವಿಷಯ.