ನಾನು ಓದಿದ ಶಾಲೆ ಹಾಗೂ ನನ್ನ ಹವ್ಯಾಸಗಳು

ಬದಲಾಯಿಸಿ
 

ನನ್ನ ಹೆಸರು ಮಾನ್ಯ. ನನ್ನ ಊರು ಚಿಕ್ಕಮಗಳೂರು. ಬೆಟ್ಟ ಗುಡ್ಡಗಳನ್ನು ಹೊಂದಿದ ನಾಡು. ಕೆಮಣ್ಣಗುಂಡಿ, ಮುಳ್ಳಯ್ಯನಗಿರಿ, ಬಾಬಾಬುಡನಗಿರಿ ಮುಂತಾದ ಕಣ್ಣು ಸೆಳೆಯುವಂತಹ ಸ್ಥಳಗಳನ್ನು ಕಾಣಬಹುದು. ನಾನು ಓದಿದ ಶಾಲೆಯ ಹೆಸರು ಪೂಣ೯ ಪ್ರಙ್ಞ. ಅಲ್ಲಿ ನಾನು ನನ್ನ ಜೀವನದ ಅತ್ಯಂತ ಸಂತೋಷಕರ ಹಾಗೂ ವಿಸ್ಮಯಕರವಾದ ಕ್ಷಣಗಳನ್ನು ಕಳೆದೆ. ಆ ಶಾಲೆ ನನ್ನ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ನನ್ನ ಶಾಲೆಯಿಂದ ನಾನು ಬಹಳಷ್ಟು ಕಲಿತೆ. ಓದುವುದಕ್ಕಿಂತ ಹೆಚ್ಚಾಗಿ ಆಟ ಆಡುವುದರಲ್ಲಿ ನನಗೆ ಬಹಳ ಆಸಕ್ತಿ ಇತ್ತು. ನನ್ನ ಪ್ರಿಯವಾದ ಆಟವೆಂದರೆ ಬ್ಯಾಡ್ಮಿಂಟನ್. ನನಗೆ ಬ್ಯಾಡ್ಮಿಂಟನ್ ಅಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕೆಂಬ ಆಸಕ್ತಿ ಇತ್ತು ಆದರೆ ದುರದೃಷ್ಟಕರವಾಗಿ ನನ್ನ ಆಸೆ ನೆರವೇರಲಿಲ್ಲ. ಬ್ಯಾಡ್ಮಿಂಟನ್ ಅಲ್ಲಿ ನನ್ನ ಪ್ರಿಯ ಆಟಗಾತಿ೯ ಸೈನ ನೆಹವಾಲ್. ಅವಳ ಹಾಗೆಯೇ ನಾನು ಅಟ ಆಡಬೇಕೆಂಬ ಛಲ ನನ್ನಲ್ಲಿತ್ತು.

ನಾನು ಬೇಟಿ ಮಾಡಿದ ಸ್ಥಳ ಹಾಗು ಕಲಿತ ವಿಷಯಗಳು

ಬದಲಾಯಿಸಿ
 
 

ನಾನು ಚಿಕ್ಕವಳಿದ್ದಾಗ ಒಮ್ಮೆ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿಗೆ ಬೇಟಿ ನೀಡಿದ್ದೆ. ಆವಾಗ ನನಗೆ ಅವರು ಯಾರು ಸಾಹಿತ್ಯ ಕ್ಷೇತ್ರದಲ್ಲಿ ಅವರ ಸ್ಥಾನವೇನೆಂದು ತಿಳಿದಿರಲಿಲ್ಲ. ಅವರ ಬಗ್ಗೆ ತಿಳಿದ ನಂತರ ಅಂತಹ ಮಹಾನ್ ವ್ಯಕ್ತಿ ಹುಟ್ಟಿ ಬೆಳೆದು ಬಂದ ರೀತಿ, ಕನ್ನಡ ಕ್ಷೇತ್ರದಲ್ಲಿ ಅವರಿಗೆ ಇರುವ ಗೌರವವನ್ನು ಕಂಡು ಹೆಮ್ಮೆ ಅನಿಸಿತು. ಹೀಗೆಯೇ ಒಂದು ಬಾರಿ ಹೊಸ ವಷ೯ದಂದು ನಮ್ಮ ಇಡೀ ಕುಟುಂಬದವರ ಮಧ್ಯದಲ್ಲಿ ಸಿ.ಅಶ್ವತ್ ಅವರು ಒಬ್ಬರಾಗಿದ್ದರು. ಸಂಗೀತ ಕ್ಷೇತ್ರದಲ್ಲಿ ತುಂಬಾ ದೊಡ್ಡ ಹೆಸರು ಮಾಡಿರುವ ವ್ಯಕ್ತಿ ಆ ವಿಷೇಶ ದಿನದಂದು ನಮ್ಮಲ್ಲಿ ಒಬ್ಬರಾದುದು ಬಹಳ ಸಂತೋಷಕರವಾದ ವಿಷಯವಾಗಿತ್ತು. ಅವರ ಧ್ವನಿ ಅವರ ಹಾಡಿನ ಸಾಲುಗಳು ಕೊಡುವ ಅಥ೯ ಇವೆಲ್ಲವು ಹೊಸ ವಷ೯ವನ್ನು ಹರುಷದಿಂದ ಕಳೆಯುವಂತೆ ಮಾಡಿತು. ಹೀಗೆಯೇ ಒಂದು ಬಾರಿ ನಮ್ಮ ಶಾಲೆಯ ಕನ್ನಡ ಪಂಡಿತರು ಶಿವರಾಮ ಕಾರಂತರು ಬರೆದಿದ್ದ ಒಂದು ಪಾಠವನ್ನು ಮಾಡುವಾಗ ಅವರು ಬರೆದ್ದಿದ್ದ ಮತ್ತೊಂದು ಪುಸ್ತಕ 'ಚೋಮನ ದುಡಿ'ಯನ್ನು ಓದಲು ಹೇಳಿದರು. ನಾನು ಆ ಪುಸ್ತಕವನ್ನು ಓದಿದೆ. ಬಹಳ ಸುಂದರವಾದ ಕಥೆ ಅದು. ಆ ಕಥೆ ನನಗೆ ಬಹಳಷ್ಟು ವಾಸ್ತವ್ಯವನ್ನು ತಿಳಿಸಿಕೊಟ್ಟಿತು.

ಶಾಲಾ ವಾಷಿ೯ಕೋತ್ಸವ

ಬದಲಾಯಿಸಿ
 

ಸಣ್ಣವರಿದ್ದಾಗ ಶಾಲಾ ವಾಷಿ೯ಕೊತ್ಸವ ಅಂದರೆ ನಮಗೆಲ್ಲರಿಗೂ ಬಹಳ ಸಂತೋಷವಾಗುತ್ತಿತ್ತು. ಆ ತಿಂಗಳಂದು ಶಾಲೆಯಲ್ಲಿ ಯಾವ ಶಿಕ್ಷಕರು ಪಾಠವನ್ನು ಮಾಡುತ್ತಿರಲಿಲ್ಲ. ನೃತ್ಯ, ಹಾಡು, ನಾಟಕ ಮುಂತಾದವುಗಳ ಅಭ್ಯಾಸವನ್ನು ಮಾಡುವುದರಲ್ಲಿ ತೊಡಗಿರುತ್ತಿದ್ದೆವು. ಮೋಜು ಮಸ್ತಿಯನ್ನು ಮಾಡಿಕೊಂಡು ಸಮಯವನ್ನು ಕಳೆಯುತ್ತಿದ್ದೆವು. ಶಾಲೆಯಲ್ಲಿ ಕಳೆದ ದಿನಗಳನ್ನು ಎಂದೂ ಹಿಂದಿರುಗಿ ಪಡೆಯಲು ಸಾಧ್ಯವಿಲ್ಲ. ಶಿಕ್ಷಕರ ದಿನಾಚರಣೆ, ಮಕ್ಕಳ ದಿನಾಚರಣೆ ಮುಂತಾದವುಗಳನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೆವು. ಶಾಲೆಯಲ್ಲಿ ನಡೆದ ಎಲ್ಲಾ ಸ್ಪಧೆ೯ಗಳಲ್ಲೂ ಭಾಗವಹಿಸುತ್ತಿದ್ದೆ. ಹಲವು ಬಾರಿ ವಿಜೇತಳು ಕೂಡ ಆಗಿದ್ದೆ.

ಬೆಂಗಳೂರಿಗೆ ಬಂದ ಮೊದಲನೆಯ ದಿನಗಳು

ಬದಲಾಯಿಸಿ

ಶಾಲೆಯಲ್ಲಿ ಓದು ಮುಗಿದ ನಂತರ ಮುಂದಿನ ಓದಿಗಾಗಿ ಬೆಂಗಳೂರಿಗೆ ಬಂದೆ. ಹನ್ನೆರಡು ವಷ೯ ಒಂದೇ ಶಾಲೆಯಲ್ಲಿ ಓದಿದ ನನಗೆ ಬೆಂಗಳೂರಿಗೆ ಹೂಂದಿಕೂಳ್ಳಲ್ಲು ಸ್ವಲ್ಪ ಸಮಯ ಬೇಕಾಯಿತು. ಮೌಂಟ್ ಕಾಮ೯ಲ್ ಕಾಲೇಜಿಗೆ ಸೇರಿಕೂಂಡೆ. ಮೊದಲನೆ ವಷ೯ ನಾನು ಯಾರ ಸ್ನೇಹವನ್ನು ಮಾಡಲಿಲ್ಲ. ನಾನು ಎಲ್ಲರನ್ನು ನನ್ನ ಗೆಳೆಯ ಗೆಳೆತಿಯರನ್ನಾಗಿ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ನನ್ನ ಹತ್ತಿರ ಯಾರು ಚೆನ್ನಾಗಿ ಇರುತ್ತಾರೋ ನಾನು ಅವರ ಹತ್ತಿರ ಚೆನ್ನಾಗಿ ಇರುತ್ತೇನೆ. ಇನ್ನೊಬ್ಬರು ನನ್ನನ್ನು ಹಂಗಿಸಿದರೆ ನಾನು ಅದಕ್ಕೆ ತಲೆಯನ್ನು ಕೆಡಿಸಿಕೊಳ್ಳವುದಿಲ್ಲ. ನಾವೇನೆಂದು ನಮಗೆ ತಿಳಿದಿರಬೇಕು ಇನ್ನೊಬ್ಬರಿಗಲ್ಲ. ಹೀಗೆ ಸಮಯ ಕಳೆಯುತ್ತ ನಾನು ಸ್ನೇಹಿತರನ್ನು ಮಾಡಿಕೊಂಡೆ. ಮನೆಯಿಂದ ಮೊದಲನೇ ಬಾರೀ ದೂರ ಬಂದು ಓದುತ್ತಿದುದರಿಂದ ಮೊದಮೊದಲಿಗೆ ಬಹಳ ಸಂಕಟವೆನಿಸುತ್ತಿತ್ತು ನಂತರ ಹೊಂದಿಕೊಳ್ಳಲು ಪ್ರಯತ್ನಿಸಿದೆ. ಆದರೆ ಶಾಲಾ ದಿನಗಳಷ್ಟು ಮಜಾ ಇರಲಿಲ್ಲ. ಅಲ್ಲಿನ ಜನರ ಮಾತಿಗೂ ಇಲ್ಲಿನ ಜನರ ಮಾತಿಗೂ ಬಹಳ ವ್ಯತ್ಯಾಸವಿತ್ತು. ಶಾಲೆಯಲ್ಲಿ ಆಟ ಆಡುವುದೇ ನನ್ನ ಜೀವನವಾಗಿತ್ತು ಆದರೆ ಬೆಂಗಳೂರಿಗೆ ಬಂದ ನಂತರ ಆಟ ಆಡುವುದನ್ನು ಬಿಟ್ಟೆ. ಅದು ನನಗೆ ದುಃಖವನ್ನು ಉಂಟು ಮಾಡಿತು, ಅದನ್ನು ನಾನು ಯಾರ ಹತ್ತಿರವು ಹೇಳಿಕೊಳ್ಳಲಾರೆ. ಹೀಗೆಯೇ ನನ್ನ ಸ್ನೇಹಿತರೊಂದಿಗೆ ಚೆನ್ನಾಗಿ ಹೊಂದುಕೊಂಡೆ. ನಾನು ಹೆಚ್ಚು ಸಮಯ ಅವರೊಂದಿಗೆ ಕಳೆಯಲು ಪ್ರಾರಂಬಸಿದೆ. ಇದರ ಮಧ್ಯದಲ್ಲಿ ಓದುವುದು ಇದ್ದದ್ದೆ. ಹಾಗೆಯೇ ಎರಡು ವಷ೯ ಕಳೆದದ್ದು ಗೊತ್ತೇ ಆಗಲಿಲ್ಲ. ಸಮಯ ಕಳೆದದ್ದು ತಿಳಿಯುವುದೇ ಇಲ್ಲ.

ಮುಂದಿನ ಶಿಕ್ಷಣ

ಬದಲಾಯಿಸಿ

ಅದಾದ ನಂತರ ಮುಂದಿನ ಶಿಕ್ಷಣವನ್ನು ಪಡೆಯಲು ಕ್ರೈಷ್ಟ್ ಯನಿವಸಿ೯ಟಿಗೆ ಸೇರಿಕೊಂಡೆ. ಹೀಗೆ ಕೆಲವು ಸಮಯದ ನಂತರ ಹೊಸ ಸ್ನೇಹಿತರನ್ನು ಮಾಡಿಕೊಂಡೆ. ಜೀವನವನ್ನು ಬದಲಾಯಿಸುವಂತ ಸಮಯವಿದು, ಮಾಡಲು ಬಹಳಷ್ಟು ಕೆಲಸ. ನಾವು ಶಾಲೆಯಲ್ಲಿರುವಾಗ ಯಾವಾಗ ದೊಡ್ಡವರಾಗುತ್ತೇವೆಂದೆನೆಸುತ್ತಿತ್ತು. ಶಾಲೆಯಲ್ಲಿ ಮಾಡುತ್ತಿದ್ದ ಹಾಗೆ ದೊಡ್ಡವರಾದಮೇಲೆ ಮಾಡಲು ಇರುವುದಿಲ್ಲ, ಬರೆಯಲು ಇರುವುದಿಲ್ಲ, ಓದಲು ಕಡಿಮೆ ಇರುತ್ತದೆ ಎಂದು ನಾವೆಲ್ಲರೂ ನಂಬಿದ್ದೆವು. ಶಾಲೆಯಲ್ಲಿನ ಶಿಕ್ಷಕರ ಬೈಗುಳ ನಮ್ಮ ಜೀವನವನ್ನು ಬದಲಾಯಿಸುತ್ತದೆ ಎಂದು ಅಂದುಕೊಂಡಿರಲಿಲ್ಲ. ಈವಾಗ ಅನ್ನಿಸುತ್ತದೆ ಶಾಲಾ ದಿನಗಳನ್ನು ಎಂದಿಗೂ ಹಿಂದಿರುಗಿ ಪಡೆಯಲು ಸಾಧ್ಯವಿಲ್ಲ, ಅದನ್ನು ಮತ್ತೆ ಅನುಭವಿಸಲು ಸಾಧ್ಯವಿಲ್ಲವೆಂದು.