ಪರಿಚಯ: ಹೆಸರು ಮಂಥನ್ ನಾನು ಹುಟ್ಟಿದ್ದು ಕುಮಟಾ ಕಾರವಾರ ಜಿಲ್ಲೆಯಲ್ಲಿ ದಿನಾಂಕ ೧೨-೮-೧೯೯೯ ರಾತ್ರಿ ೯:೨೦ ರಂದು ಜನಿಸಿದೆ. ನನ್ನ ತಂದೆ-ತಾಯಿಯ ಹೆಸರು ಮಲ್ಲಿಕಾರ್ಜುನ ಮತ್ತು ಮಂಗಳ. ನನ್ನ ತಂದೆ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನನಗೆ ಮೇಘಾ ಎಂಬ ಅಕ್ಕ ಇದಾರೆ.

ವಿದ್ಯಾಬ್ಯಾಸ:ನಾನು ನನ್ನ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ನಾನು ಬಾಲ್ಯದಲ್ಲಿ ಬಹಳ ತುಂಟನಾಗಿದ್ದೆ. ನಾನು ಪ್ರಾಥಮಿಕ ಪಾಠಶಾಲೆಯನ್ನು ಗ್ರಾಮರ್ ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭಿಸಿದೆ. ೧ ರಿಂದ ೫ನೀ ತರಗತಿಯವರೆಗೆ ಗ್ರಾಮರ್ ಪಬ್ಲಿಕ್ ಶಾಲೆಯಲ್ಲಿ ಓದಿದೆ. ಅಲ್ಲಿ ನಾನು ಆಟ-ಪಾಠದಲ್ಲಿ ಮುಂದಿದೆ. ನಂತರ ಪೋಲಿಸ್ ಪಬ್ಲಿಕ್ ಶಾಲೆಯಲ್ಲಿ ೬ನೇ ತರಗತಿಯಿಂದ ೧೦ನೀ ತರಗತಿಯವರೆಗೆ ಓದಿದೆ. ನಾನು ಅಲ್ಲಿ ಬಹಳ ಚೆನ್ನಾಗಿ ಓದುತ್ತಿದೆ.

ಅಲ್ಲಿ ನಾನು ಕ್ರೀಡಾ ವಿಭಾಗದಲ್ಲಿ ಮುಂದಿದೆ, ನನಗೆ ಕ್ರೀಡಾ ವಿಭಾಗದಲ್ಲಿ ಬಹಳ ಆಸಕ್ತಿ ಇತ್ತು. ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ನಾನು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಕ್ರೀಡೆಯಲ್ಲಿ ಹವ್ಯಾಸ:ನನಗೆ ಖೋಖೋ, ಕಬಡ್ಡಿಯಲ್ಲಿ ಬಹಳ ಆಸಕ್ತಿ ಇತ್ತು. ಅದೇ ರೀತಿ ವಿದ್ಯಾಭ್ಯಾಸದಲ್ಲಿ ಮುಂದುವರಿದ. ನನಗೆ ಬ್ಯಾಸ್ಕೆಟ್ ಬಾಲ್ಯನಲ್ಲಿ ಕೆವಿನ್ ಅಂದರೆ ಬಹಳ ಇಷ್ಟ. 

ಅದೇ ರೀತಿ ೧೦ನೇ ತರಗತಿಯಲ್ಲಿ ನನಗೆ ಉತ್ತಮವಾದ ಫಲಿತಾಂಶ ಬಂದಿತ್ತು. ನಾನು ಶೇಕಡಾ ೮೦ ರಷ್ಟು ಅಂಕ ಪಡೆದೆ. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಂತ ಫ್ರಾನ್ಸಿಸ್ ಪಿ.ಯು ಕಾಲೇಜ್ ನಲ್ಲಿ ಮುಂದುವರೆಸಿದೆ. ನಾನು ವಾಣಿಜ್ಯ ವಿಭಾಗವನ್ನು ಆರಿಸಿಕೊಂಡು. ವಾಣಿಜ್ಯ ವಿಭಾಗದಲ್ಲಿ ನನಗೆ ಉತ್ತಮವಾದ ಆಸಕ್ತಿ ಇತ್ತು. ಅದೇ ರೀತಿ ಕ್ರೀಡೆಯನ್ನು ಮುಂದುವರೆಸಿದೆ. ನನಗೆ ಡ್ರಾಮಾ, ಸಂಗೀತದಲ್ಲಿ ಹೆಚ್ಚು ಆಸಕ್ತಿ ಇತ್ತು. ನನಗೆ ಪಿ.ಯು.ಸಿ ಯಲ್ಲಿ ಉತ್ತಮವಾದ ಗೆಳೆಯ ಗೆಳತಿಯರು ಇದ್ದರು, ಅವರು ನಿಖಿಲ್, ಕಾರ್ತಿಕ್, ಬಾಲು ಮುಂತಾದವರು ಇದ್ದರು. ನನಗೆ ಕವಿಗಳಲ್ಲಿ ಕುವೆಂಪು, ದಾ. ರಾ. ಬೇಂದ್ರೆಯವರು ಕೃತಿಗಳು ನನಗೆ ಬಹಳ ಇಷ್ಟ. ಹಾಗೆ ಪಿ.ಯು.ಸಿ ಯಲ್ಲಿ ಉತ್ತಮವಾದ ಫಲಿತಾಂಶ ಬಂದಿತ್ತು. ನನಗೆ ೫೨೮ ಅಂಕಗಳ ಬಂದಿತ್ತು. ನಂತರ ಉನ್ನತ ವಿದ್ಯಾಭ್ಯಾಸಕ್ಕೆ ನನ್ನ ಮೆಚ್ಚಿನ ಕಾಲೇಜ್ ಆದ ಕ್ರೈಸ್ಟ್ ಯೂನಿವರ್ಸಿಟಿ ಸೇರಿಕೊಂಡೆ. ಏಕೆಂದರೆ ಅಲ್ಲಿ ಯನ್ನತ ಶಿಕ್ಷಣ, ಯನ್ನತ ಕ್ರೀಡೆ ಹೆಚ್ಚು ಒತ್ತು, ಒಲವು ನೀಡುತ್ತಾರೆ.

                             ಧನ್ಯವಾದಗಳು!!