ಸದಸ್ಯ:Manojaroor1997/ನನ್ನ ಪ್ರಯೋಗಪುಟ

ಅಸಿಟಿಲೀನ್

ಅಸಿಟಿಲೀನ್ ಒಂದು ಬಣ್ಣರಹಿತ,ಜ್ವಲನಶೀಲಅನಿಲ. ಮುಖ್ಯವಾಗಿ ಬೆಸುಗೆಅನಿಲವಾಗಿ ಹಾಗೂ ಔದ್ಯಮಿಕ ಕಚ್ಛಾವಸ್ತುವಾಗಿ ವ್ಯಾಪಕ ಬಳಕೆಯಲ್ಲಿದೆ.ಇದನ್ನು ೧೮೩೬ರಲ್ಲಿ ಎಡ್ಮಂಡ್ ಡೇವಿ೧೮೩೬ರಲ್ಲಿ ಕಂಡುಹಿಡಿದರು.ಅನಂತರ ಫ್ರೆಂಚ್ ರಸಾಯನಶಾಸ್ತ್ರಜ್ಞ್ನ ಮರ್ಸಿಲೀನ್ ಬೆರ್ತೆಲೋಟ್ ೧೮೬೦ರ ವೇಳೆಗೆ ವಿದ್ಯುತ್ ಛಾಪ ಬಳಸಿಕೊಂಡು ಇಂಗಾಲ ಹಾಗೂ ಜಲಜನಕ ದಿಂದ ಇದನ್ನು ಪಡೆಯುವ ವಿಧಾನವನ್ನು ಅಭಿವೃದ್ಧಿ ಪಡಿಸಿದ.ಇದು ಆಮ್ಲಜನಕದೊಂದಿಗೆ ಉರಿಯುವಾಗ ೩೩೧೬ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆಯನ್ನು ಕೊಡುವುದರಿಂದ ಔದ್ಯೋಗಿಕವಾಗಿ ಬಹಳ ಬಳಕೆಯಲ್ಲಿದೆ.ಇದನ್ನು ಪ್ಲಾಸ್ತಿಕ್‍ಗಳ ಉತ್ಪಾದನೆಯಲ್ಲಿ ಕಚ್ಛ್ಹಾವಸ್ತುವಾಗಿ ಬಳಸುತ್ತಾರೆ.ಜೀವಸತ್ವಗಳ ಉತ್ಪಾದನೆಯಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ.

ಅಸಿಟಲೀನ್ ಒಂದು ಹೈಡ್ರೊಕಾರ್ಬನ್ . ತ್ರಿಬಂಧಗಳಿರುವ (ಟ್ರಿಪಲ್‍ಬಾಂಡ್) ಅಪರ್ಯಾಪ್ತ (ಅನ್‍ಸ್ಯಾಚುರೇಟೆಡ್) ಹೈಡ್ರೊಕಾರ್ಬನ್‍ಗಳಲ್ಲಿ ಅತ್ಯಂತ ವಿರಳ ಹೈಡ್ರಾಕಾರ್ಬನ್. ಅಣುಸೂತ್ರ C2H2 . ಅಸಿಟಲೀನ್ ಬಣ್ಣವಿಲ್ಲದ ಅನಿಲ . ಸಾಂದ್ರತೆ ಗಾಳಿಗಿಂತ ಸ್ವಲ್ಪ ಮಾತ್ರ ಕಡಿಮೆ. ಶುದ್ಧ ಅಸಿಟಲೀನ್‍ಗೆ ಒಂದು ಲಘು ಮತ್ತು ವಿಶಿಷ್ಟ ವಾಸನೆ ಇದೆ. ಆದರೆ ಸಾಮಾನ್ಯವಾಗಿ ಅದನ್ನು ಕ್ಯಾಲ್ಸಿಯಂ ಕಾರ್ಬೈಡಿನಿಂದ ತಯಾರಿಸುವಾಗ ಅದರೊಂದಿಗೆ ಫಾಸ್ಫೀನ್, ಮೊದಲಾದ ಕಲ್ಮಷಗಳಿರುವುದರಿಂದ ಅದರ ವಾಸನೆ ಬಹು ಕೆಟ್ಟದಾಗಿರುವುದು. ನೀರಿನಲ್ಲಿ ಅಸಿಟಲೀನ್ ಸ್ವಲ್ಪಮಟ್ಟಿಗೆ ವಿಲೀನವಾಗುವುದು. ಆದರೆ ಅಸಿಟೋನ್‍ನಲ್ಲಿ ಬಹುವಾಗಿ ವಿಲೀನವಾಗುವುದು. ಸಾಮಾನ್ಯ ಉಷ್ಣತೆಯಲ್ಲಿ ಹನ್ನೆರಡು ವಾಯುಭಾರ ಸಂಮರ್ದ ಹಾಕಿದರೆ ಒಂದು ಮಿಲಿಲೀಟರ್ ಅಸಿಟೋನ್‍ನಲ್ಲಿ ಮುನ್ನೂರು ಮಿಲಿಲೀಟರ್ ಆಸಿಟಲೀನ್ ವಿಲೀನವಾಗುವುದು. ವಾಣಿಜ್ಯ ಉದ್ದೇಶಗಳಿಗಾಗಿ ಅಸಿಟಲೀನನ್ನು ಸಿಲಿಂಡರುಗಳಲ್ಲಿ ತುಂಬಿ ಮಾರುವರು. ಆದರೆ ಅಧಿಕಸಂಮರ್ದದಲ್ಲಿ ಅದು ದ್ರವೀಕೃತವಾಗುವುದರಿಂದಲೂ ದ್ರವ ಅಸಿಟಲೀನ್ ಆಸ್ಫೋಟಿಸುವ ಸಂಭವ ಹೆಚ್ಚಾಗಿರುವುದರಿಂದಲೂ ಅಸಿಟಲೀನನ್ನು ಅಸಿಟೋನ್ ದ್ರವದಲ್ಲಿ ವಿಲೀನಗೊಳಿಸಿ ಆ ದ್ರಾವಣವನ್ನು ಸಿಲಿಂಡರುಗಳಲ್ಲಿ ತುಂಬಿ ಮಾರುಕಟ್ಟೆಗೆ ಕಳಿಸುತ್ತಾರೆ.

ಅಸಿಟಲೀನನ್ನು ಗಾಳಿಯಲ್ಲಿ ಉರಿಸಿದಾಗ ಅತ್ಯಂತ ಪ್ರಕಾಶಮಾನವಾದ ಬೆಳಕು ಬರುತ್ತದೆ. ಈ ಗುಣವನ್ನುಪಯೋಗಿಸಿಕೊಂಡು, ವಿಶೇಷರೀತಿಯಲ್ಲಿ ತಯಾರಿಸಿದ ಅಸಿಟಲೀನ್ ದೀಪಗಳನ್ನು ನಿರ್ಮಿಸಿದ್ದಾರೆ. ಈಗ ವಿದ್ಯುದ್ದೀಪಗಳು ವಿಶೇಷವಾಗಿ ಬಳಕೆಗೆ ಬಂದಿರುವುದರಿಂದ ಅಸಿಟಲೀನ್ ದೀಪಗಳು ಹಿಂದೆ ಬಿದ್ದಿವೆ. ಆದರೂ ಜರೂರು ಸಂದರ್ಭಗಳಲ್ಲಿ ಮತ್ತು ಸ್ಥಳದಿಂದ ಸ್ಥಳಕ್ಕೆ ಸುಲಭವಾಗಿ ಒಯ್ಯಬಹುದಾದಂಥ ದೀಪಗಳು ಬೇಕಾದಾಗ ಈಗಲೂ ಅಸಿಟಲೀನ್ ದೀಪವೇ ಜನಪ್ರಿಯವಾಗಿದೆ, ಕ್ಯಾಲ್ಸಿಯಂ ಕಾರ್ಬೈಡ್ ಮೇಲೆ ನೀರನ್ನು ತೊಟ್ಟಿಕ್ಕಿಸುವ ಪುಟ್ಟ ಅಸಿಟಲೀನ್ ಉತ್ಪಾದಕದೊಂದಿಗೆ ಅದನ್ನು ಉರಿಸುವ ಉಪಕರಣವನ್ನೂ ಸೇರಿಸಿ ಅಡಕವಾಗಿರುವ ಅಸಿಟಲೀನ್ ದೀಪಗಳನ್ನು ತಯಾರಿಸುತ್ತಾರೆ. ಆಕ್ಸಿಜನ್ನಿನಲ್ಲಿ ಅಸಿಟಲೀನ್ ದಹಿಸಿದಾಗ ಒಂದು ಮಿಲಿಲೀಟರ್ ಅಸಿಟಲೀನ್‍ಗೆ 192.3 ಕ್ಯಾಲೊರಿಯಷ್ಟು ಉಷ್ಣ ಉತ್ಪತ್ತಿಯಾಗುತ್ತದೆ. ಇದನ್ನು ಉಪಯೋಗಿಸಿಕೋಂಡು ಆಕ್ಸಿ-ಅಸಿಟಲೀನ್ ಜ್ವಾಲೆ ಎಂಬ ಸುಮಾರು 3300 ಸೆಂ. ಗ್ರೇ. ಉಷ್ಣತೆಯ ಜ್ವಾಲೆಯನ್ನು ಉತ್ಪತ್ತಿ ಮಾಡಬಹುದು. ಈ ಜ್ವಾಲೆಯನ್ನು ಲೋಹಗಳನ್ನು ಬೆಸೆಯಲು ಕತ್ತರಿಸಲು ಉಪಯೋಗಿಸುತ್ತಾರೆ.