ಬೆಸುಗೆ
ಬೆಸುಗೆ
ಬದಲಾಯಿಸಿಲೋಹಗಳ ತಗಡು, ತಂತಿ ಮುಂತಾದವುಗಳನ್ನು ಒಂದರೊಡನೊಂದು ಒಗ್ಗೂಡಿಸಲು ಅಥವಾ ಬಂಧಿಸಲುಮಿಶ್ರಲೋಹ ಬಂಧಕ(Solder)ವನ್ನು ಬಳಸಲಾಗುತ್ತದೆ.ಬೆಸುಗೆಗೆ ಬಳಸುವ ಮಿಶ್ರಲೋಹದ ಕರಗುವ ಬಿಂದು ಕಡಿಮೆಯಾಗಿದ್ದು, ಬೆಸೆಯಲ್ಪಡುವ ಎರಡೂ ಲೋಹಗಳ ಮಧ್ಯೆ ತೆಳುಪದರವಾಗಿ ಹರಡಿಕೊಳ್ಳವುದು.ಸಾಮಾನ್ಯವಾಗಿ ಉಪಯೋಗಿಸುವ ಬೆಸುಗೆಯ ಮಿಶ್ರಲೋಹಗಳಲ್ಲಿ ಸೀಸ ಮತ್ತು ತವರಗಳ ಪ್ರಮಾಣಗಳು ಶೇಕಡಾ ೫೦ ರಷ್ಟಿರುತ್ತವೆ. ಸೀಸಗಳ ತಗಡು ಮತ್ತು ಕೊಳವೆ ಬೆಸೆಯಲು ವಿಶೇಷವಾಗಿ ಬಳಸುವ ಬೆಸುಗೆಯ ಮಿಶ್ರಲೋಹದಲ್ಲಿ ಶೇಕಡಾ೬೦ ರಷ್ಡು ಸೀಸ ಮತ್ತು ಶೇಕಡಾ೪೦ ರಷ್ಟು ತವರ ಇರುತ್ತದೆ.ಬೆಸುಗೆಗೆ ಉಪಯೋಗಿಸಲಾಗುವ ಮಿಶ್ರಲೋಹಕ್ಕೆ ಹೆಚ್ಚು ಕರಗುವ ಬಿಂದು ಇರಬೇಕು. ಶೇಕಡಾ ೪೦ ರಷ್ಟು ಸೀಸ ಮತ್ತು ಶೇಕಡಾ ೬೦ ರಷ್ಟು ತವರವಿರುವ ಬೆಸುಗೆ ಮಿಶ್ರಲೋಹದ ಕರಗುವ ಬಿಂದು ಮತ್ತು ಹರಡುವಿಕೆ ಸೀಸವಿರುವ ಬೆಸುಗೆ ಮಿಶ್ರಲೋಹಕ್ಕಿಂತ ಕಡಿಮೆ. ಆದ್ದರಿಂದ ಇದನ್ನು ಹೆಚ್ಚಾಗಿ ಸೀಸ ಮತ್ತಿತರ ಕೆಡಿಮೆ ಕರಗುವ ಬಿಂದುವಿರುವ ಮಿಶ್ರಲೋಹಗಳನ್ನು ಒಗ್ಗೂಡಿಸಲು ಉಪಯೋಗಿಸುವರು. ಬೆಸುಗೆಗೆ ಮಿಶ್ರಲೋಹದ ಕರಗುವ ಬಿಂದುವನ್ನು ಮತ್ತಷ್ಟು ಕಡಿಮೆ ಮಾಡಲು ಬಿಸ್ಮತ್ ಲೋಹವನ್ನು ಸೇರಿಸುವರು.
ಲೋಹದ ತಗಡುಗಳು,ತಂತಿ ಮುಂತಾದವುಗಳ ಬೆಸುಗೆ ಮಾಡಬೇಕಾದ ಮೇಲ್ಮೈ ಯನ್ನು ಅಂದರೆ ಬೆಸುಗೆ ಮಾಡಬೇಕಾದ ಭಾಗವನ್ನು ಮರಳು ಕಾಗದದಿಂದ ಚೆನ್ನಾಗಿ ಉಜ್ಜಿ ಶುದ್ಧಗೊಳಿಸಬೇಕು.ಲೋಹಗಳ ಮೇಲ್ಮೈ ಮೇಲೆ ಶೇಖರವಾಗಿರುವ ಲೋಹದ ಆಕ್ಸೈಡುಗಳನ್ನು ಸ್ರಾವಕ ವಸ್ತು ಉಪಯೋಗಿಸಿ ತೆಗೆದು ಹಾಕುವರು. ಬೆಸುಗೆ ಮಿಶ್ರಲೋಹವನ್ನು ಕರಗಿಸಲು ಮತ್ತು ಬೆಸೆಯಬೇಕಾದ ಲೋಹಗಳ ಭಾಗಗಳನ್ನು ಕಾಯಿಸಲು ಬೇಕಾಗುವ ಶಾಖ ಪಡೆಯಲು ಬೆಸೆಯುವ ಕಬ್ಬಿಣ ಬಳಸುವುದು ವಾಡಿಕೆ. ಬೆಸೆಯುವ ಉಪಕರಣದ ತುದಿಯಲ್ಲಿ ,ತಾಮ್ರದ ಅಗ್ರ ಭಾಗವಿದ್ದು, ಇದರ ಆಕಾರ ಉಪಯೋಗಕ್ಕೆ ತಕ್ಕಂತೆ ಇರುವುದು. ಇದನ್ನು ಅನಿಲ ಜ್ವಾಲೆಯಿಂದಾಗಲೀ ಅಥವಾ ವಿದ್ಯುತ್ ಹರಿಸಿ ನಿರಂತರವಾಗಿ ಕಾದಿರುವಂತೆ ಮಾಡಬಹುದು.ನಂತರ ಬೆಸುಗೆ ಮಿಶ್ರ ಲೋಹವನ್ನು ಬೆಸಯಬೇಕಾದ ಲೋಹಗಳ ಮಧ್ಯ ಇಟ್ಟು, ಅದು ಕರಗಿ ಎರಡೂ ಲೋಹಗಳೂ ಒಗ್ಗೂಡಿದ ನಂತರ ಹೆಚ್ಚು ಬೆಸುಗೆ ಮಿಶ್ರಲೋಹದ ಭಾಗವನ್ನು ಒರಸಿ ತೆಗೆದು ಹಾಕಲಾಗುವುದು.[೧]
ಉಲ್ಲೇಖಗಳು
ಬದಲಾಯಿಸಿ- ↑ ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ವಿಶ್ವಕೋಶ (ಸಂಪುಟ ೧೨)