Manoj.c.ammannavar

ನನ್ನ ಪರಿಚಯ

ಬದಲಾಯಿಸಿ

ನನ್ನ ಹೆಸರು ಮನೋಜ್. ನಾನು 04-09-2001 ರಂದು ಬೆಂಗಳೂರುನಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಚಂದಪ್ಪ, ಅವರು ಒಬ್ಬ ಮಾಜಿ ಸೈನಿಕ. ನನ್ನ ತಾಯಿಯ ಹೆಸರು ಮಾಲಾ, ಅವರು ಗೃಹಿಣಿ. ನನ್ನ ಅಣ್ಣನ ಹೆಸರು ಮಂಜುನಾಥ್, ಅವನು ಡಿಪ್ಲೊಮಾ ವಿದ್ಯಾರ್ಥಿ. ನಾನು ಬೆಳದಿದ್ದು ಬೆಂಗಳೂರಿನಲ್ಲಿ.

ಶೈಕ್ಷಣಿಕ ಜೀವನ

ಬದಲಾಯಿಸಿ

ನಾನು ನರ್ಸರಿಯಿಂದ ಒಂಬತ್ತನೆಯ ತರಗತಿವರೆಗೆ ಸಿಸಾ ಕೇಂದ್ರ ಶಾಲೆಯಲ್ಲಿ ಓದಿದೆ. ಕಾರಣಾಂತರಗಳಿಂದ ಹತ್ತನೆಯ ತರಗತಿಯನ್ನು ದೊಮ್ಮಲೂರಿನ ಸರ್ಕಾರಿ ಶಾಲೆಯಲ್ಲಿ ಮುಗಿಸಿದೆ. ನನಗೆ ಅಂಗ್ಲ ಭಾಷೆಯ ಬಳಕೆ ಕಷ್ಟವಾಗುತ್ತದೆ. ನನಗೆ ಮೊದಮೊದಲು ಕನ್ನಡ ಭಾಷೆ ಬರೆಯಲು ಕಷ್ಟವಾಗುತ್ತಿತು. ಸಮಯ ಕಳೆದಂತೆ ನನ್ನ ಬರೆವಣಿಗೆ ಚೆನ್ನಾಗಿ ಮೂಡಿಬಂದಿತ್ತು. ನನಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿಯಾಗಿತ್ತು. ನಾನು ಶಾಲೆಯಲ್ಲಿ ವಾಲಿಬಾಲ್ ಟೀಮ್ ನ ನಾಯಕನಾಗಿದ್ದೆ. ನಾನು ಫುಟ್ ಬಾಲ್ ಮತ್ತು ಕ್ರಿಕೆಟ್ ಕೊಚಿಂಗ್ ಗೆ ಹೋಗಿದ್ದೆನೆ. ನಾನು ಶಾಲೆಯಲ್ಲಿ ಇರುವಾಗ ಎಲ್ಲ ಕ್ಷೇತ್ರದ ಚಟುವಟಿಗೆಗಳಲ್ಲಿ ಭಾಗ್ವಹಿಸುತ್ತಿದ್ದೆ. ನನ್ನ ಶಾಲೆಯ ಶಿಕ್ಷಕರು ನನಗೆ ತುಂಬ ಪ್ರೊಥ್ಸಾಹ ನೀಡುತಿದ್ದರು. ನಾನು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 95% ಗಳಿಸಿ ಶಾಲೆಗೆ ಟೊಪ್ಪರ್ ಆದೆ. ನಾನು ಪದವಿ ಪೂರ್ವ ಶಿಕ್ಷಣವನ್ನು ಕೃಪಾನಿಧಿ ಕಾಲೇಜಿನಲ್ಲಿ ಮುಗಿಸಿದೆ. ಪದವಿ ಪೂರ್ವ ಶಿಕ್ಷಣ ಪಡೆಯುವ ಸಮಯದಲ್ಲಿ ನನ್ನ ಆರೊಗ್ಯದಲ್ಲಿ ವ್ಯತ್ಯಾಸವಾಗಿ ಹೆಚ್ಚು ಸಮಯ ಕಾಲೇಜಿನಲ್ಲಿ ಕಳೆಯಲು ಆಗಲಿಲ್ಲ. ಕೃಪಾನಿಧಿ ಕಾಲೆಜಿನಲ್ಲಿ ನನಗೆ ಸ್ನೇಹಿತರು ಕಡಿಮೆ ಜನ. ಅಲ್ಲಿನ ಶಿಕ್ಷಕರಿಗೆ ನನ್ನ ಹೆಸರೇ ಗೊತ್ತಿರಲಿಲ್ಲ. ನಾನು ಶಾಲೆಯಲ್ಲಿದ್ದಹಗೆ ಕೃಪಾನಿಧಿ ಕಾಲೇಜಿನಲ್ಲಿ ಇರಲಿಲ್ಲ. ನನ್ನ ಪರಿಸರದಲ್ಲಿ ತುಂಬ ಬದಲಾವಣೆ ಆಗಿತ್ತು. ಹಾಗೊಹೀಗೊ ಕಷ್ಟ ಪಟ್ಟು ಓದಿ ಪದವಿ ಪೂರ್ವ ಶಿಕ್ಷಣವನ್ನು 90% ಗಳಿಸಿ ಮುಗಿಸಿದೆ. ನಮ್ಮ ಸಮಗ್ರ ಅಭಿವೃದ್ಧಿಗೆ ಅವಕಾಶಗಳ ಸಾಗರವಾದಂತಹ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದಬೇಕೆಂಬ ನನ್ನ ಕನಸು ನನಸಾಗಿರುವುದು ನನ್ನ ಪುಣ್ಯವೇ ಸರಿ. ವರ್ತಮಾನದಲ್ಲಿ ನಾನು ಬಿ. ಕಾಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

ವೈಯಕ್ತಿಕ ಜೀವನ

ಬದಲಾಯಿಸಿ

ನಾನು ಚಿಕ್ಕ ವಯಸ್ಸಿನಿಂದಲೇ ಬೆಂಗಳೂರಲ್ಲಿ ಇರುವುದರಿಂದ ನನಗೆ ಇಲ್ಲಿನ ಎಲ್ಲಾ ಜಾಗಗಳು ಚೆನ್ನಾಗಿ ತಿಳಿದಿದೆ. ನನನ್ನು ಎಲ್ಲಿ ಬಿಟ್ಟರೂ ಒಬ್ಬನೆ ಮನೆಗೆ ಮರಳಿ ಬರವಷ್ಟು ನಂಬಿಕೆ ಇದೆ. ನನಗೆ ಕಾರ್ ಒದಿಸಬೇಕೆಂದು ತುಂಬ ಆಸೆ. ನಾನು ವಾಹನಗಳನ್ನು ಓಡಿಸುವುದು ಸುಲಭವಾಗಿ ಕಳಿತುಬಿಟ್ಟೆ. ನನಗೆ ಓದುವುದರಲ್ಲಿ ಆಸಕ್ತಿ ಕಡಿಮೆ ಇದ್ದರೂ ಪರೀಕ್ಷೆಯ ಸಮಯಗಳಲ್ಲಿ ಚೆನ್ನಾಗಿ ಓದಿ ಬರಿಯುತ್ತೇನೆ. ನನಗೆ ಶಿಕ್ಷಕರು ಪಾಠ ಮಾಡುವಾಗ ಹೆಚ್ಚು ಗಮನ ಸೆಳೆಯುವುದಿಲ್ಲಾ. ಹಾಗಂತ ಬೇರೆಯವರನ್ನು ತೊಂದರೆ ಕೊಡುವುದಿಲ್ಲ. ನನಗೆ ಅರ್ಥ ಆಗದಿದ್ದಾಗ ಪ್ರಶ್ನೆ ಕೇಳಿ ಅಭ್ಯಾಸ ಇಲ್ಲ. ಅದಕ್ಕೆ ಸುಮ್ಮನೇ ಕುಳಿತುಬಿಡುತ್ತೇನೆ. ಆದರೆ ನಾನು ಯಾವಾಗಲೂ ಶಿಕ್ಷಕರು ಎಲ್ಲಿ ನನಗೆ ಪ್ರಶ್ನೆ ಕೇಳಿವರೋ ಎಂದು ಭಯಪಡುತ್ತೀನಿ.ನಾನು ಕರ್ಣಾಟಕ ಬಿಟ್ಟು ಇಲ್ಲಿವರೆಗೆ ಎಲ್ಲಿಯೂ ಹೋಗಿಲ್ಲ. ನನಗೂ ರಜೆದಿನಗಳಲ್ಲಿ ದೂರ ಪ್ರಯಾಣ ಮಾಡಬೇಕೆಂದು ಆಸೆ. ಆದರೆ ಇರುವ ಪರಿಸ್ಥಿತಿಯಿಂದ ಅಮ್ಮನಿಗೆ ಏನು ಕೇಳಲು ಮನಸ್ಸು ಬರುವುದಿಲ್ಲ. ನಮ್ಮ ಊರಿಗೆ ಹೋಗಿ ಎರಡು ಮೂರು ವರ್ಷವಾಗಿದೆ. ರಜೆದಿನಗಳಲ್ಲಿ ಗೆಳೆಯರೊಡನೆ ಕಾಲ ಕಳೆಯುತ್ತೀನಿ. ಒಮೊಮ್ಮೆ ನನ್ನ ವಯಸ್ಸಿನವರು ಚೆನ್ನಾಗಿರುವುದನ್ನು ಕಂಡಾಗ ಬೇಜಾರಾಗುತ್ತದೆ. ಆದರೆ ಆದೇ ನೋವು ನಮಗೆ ಭವಿಷ್ಯದಲ್ಲಿ ಸಹಾಯವಾಗುತ್ತದೆ ಎಂದು ಯೋಚಿಸಿ ಸುಮ್ಮನಾಗಿಬಿಡುತ್ತೇನೆ. ನಮ್ಮ ಸ್ವಂತ ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ. ನನ್ನ ತಂದೆ ತಾಯಿ ಇಬ್ಬರೂ ಅಲ್ಲೇ ಜನಿಸಿದ್ದು, ಆದರೆ ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಂದೆ ನಮ್ಮ ಜೊತೆಯಲ್ಲಿ ಇರುವುದಿಲ್ಲ. ನನಗೆ ಮತ್ತು ಅಣ್ಣನಿಗೆ ನಮ್ಮ ತಾಯಿಯೇ ನೆರಳು. ತಾಯಿಯೇ ನಮ್ಮನ್ನು ನೋಡಿಕೊಂಡಿದ್ದಾರೆ. ವಯಸ್ಸಾದುದರಿಂದ ಅವರಿಗೆ ಎಲ್ಲಿಯೂ ಕೆಲಸ ಸಿಗದ ಕಾರಣ, ಇರುವ ಆಸ್ತಿಯನ್ನು ನೋಡಿಕೊಳ್ಳುತ್ತ ನಮ್ಮನ್ನು ಸಾಕುತ್ತಿದ್ದಾರೆ. ನನಗೆ ಕಮರ್ಷಿಯಲ್ ಫೀಲ್ಡ್ ನಲ್ಲಿ ಆಸಕ್ತಿ ಹೆಚ್ಚು. ನಾನು ಎಂ. ಬಿ. ಎ ಪದವಿ ಮುಗಿಸಿ ಒಳ್ಳೆಯ ಕೆಲಸ, ಸ್ಥಾನ ಮಾನ ಗಲಿಸಬೇಕೆಂಬುದು ನನ್ನ ಗುರಿ.