ಮಂಜುನಾಥ, ತಂದೆ ಫಕೀರಪ್ಪ ಉಪ್ಪಾರ, ಗ್ರಾಮ: ಬೆದವಟ್ಟಿ, ಅಂಚೆ: ಯಡಿಯಾಪುರ, ತಾಲೂಕು : ಕುಕನೂರು, ಜಿಲ್ಲೆ : ಕೊಪ್ಪಳ, ಪಿನ್ ಕೋಡ್: ೫೮೩ ೨೩೦. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆದವಟ್ಟಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಸರಕಾರಿ ಸಂಯುಕ್ತ ಪ್ರೌಢ ಶಾಲೆ ಶಿರೂರು ಇಲ್ಲಿ ಪ್ರೌಢ ಶಿಕ್ಷಣವನ್ನು (ಶೇಕಡಾ ೬೧.೬೪%) ಪಡೆಯಲಾಗಿದೆ. ಪದವಿ ಪೂರ್ವ ಶಿಕ್ಷಣವನ್ನು ಶೇಕಡಾ ೮೧.೮೩% ಫಲಿತಾಂಶದೊಂದಿಗೆ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಅಳವಂಡಿಯಲ್ಲಿ ಪಡೆಯಲಾಗಿದೆ. ಅದೇ ಸ್ಥಳದಲ್ಲಿರುವ ಶ್ರೀ ಶಿವಮೂರ್ತಿಸ್ವಾಮಿ ಇನಾಂದಾರ್ ಕಟ್ಟಿಮನಿ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿಯಲ್ಲಿ (ಶೇಕಡಾ ೮೧.೭೪%) ಪದವಿಯನ್ನು ಪಡೆಯಲಾಗಿದೆ. ವಿಶ್ವದಲ್ಲಿಯೇ ಕನ್ನಡ ಭಾಷೆಗಾಗಿ ಸ್ಥಾಪನೆ ಆಗಿರುವ ಏಕೈಕ ವಿಶ್ವವಿದ್ಯಾಲಯವಾದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು (ಶೇಕಡಾ ೭೪.೦೯%) ಪಡೆದು ಅದೇ ವಿಭಾಗದಲ್ಲಿ ಪ್ರೊ ಕೆ ಎಂ ಮೇತ್ರಿ ಅವರ ಮಾರ್ಗದರ್ಶನದಲ್ಲಿ "ಉಪ್ಪಾರರ ಸಾಮಾಜಿಕ ಸ್ಥಿತಿಗತಿ"ಎಂಬ ವಿಷಯದ ಕುರಿತು ಪಿಎಚ್ ಡಿ ಅಧ್ಯಯನ ಮಾಡುತ್ತಿರುವೆ.

ನನ್ನ ಹವ್ಯಾಸಗಳು: ಸಂಶೋಧನಾತ್ಮಕ ಲೇಖನಗಳನ್ನು ಬರೆಯುವುದು ಮತ್ತು ವಿವಿಧ ಅಂತಾರಾಷ್ಟ್ರೀಯ, ರಾಷ್ಟ್ರೀಯ, ಸ್ಥಳೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪತ್ರಿಕೆಗಳನ್ನ ಮಂಡಿಸುವುದು. ಗಾಯನ, ನೃತ್ಯ, ಕಸೂತಿ ಕಲೆ, ಪುಸ್ತಕಗಳನ್ನು ಓದುವುದು, ವಿಕಿಪೀಡಿಯಾದಲ್ಲಿ ಲೇಖನಗಳನ್ನು ಅನುವಾದಿಸಿ ಪ್ರಕಟಿಸುವುದು ಮೊದಲಾದವುಗಳಾಗಿವೆ.