ಕಲ್ಲಿದ್ದಲು

ಬದಲಾಯಿಸಿ

ಸುಮಾರು ೨೦೦ ಮಿಲಿಯನ್ ವರ್ಷಗಳ ಹಿಂದೆ, ದೈತ್ಯಾಕಾರದ ಮರಗಳು ಬೆಚ್ಚಗಿನ ಹಾಗೂ ನೀರು ತುಂಬಿದ ಪ್ರದೇಶಗಳಲ್ಲಿ ಬೆಳೆದು ಭೂಮಿಯ ಬಹುಪಾಲು ಭಾಗವನ್ನು ಆವರಿಸಿಕೊಂಡಿದ್ದವು. ಆ ಮರಗಳು ಸೂರ್ಯನ ಶಕ್ತಿಯನ್ನು ತೆಗೆದುಕೊಂಡು ಅದರಿಂದ ತಮ್ಮ ಕಟ್ಟಿಗೆಯನ್ನು ಮಾಡಲು ಉಪಯೋಗವಾಗುತ್ತಿತ್ತು. ಕಾಲಾನಂತರ ಆ ಮರಗಳು ಸತ್ತಾಗ ಅವುಗಳ ಕಾಂಡ, ಕೊಂಬೆಗಳು ನೆಲದಲ್ಲಿ ಹೂತುಹೋದವು. ಇವುಗಳು ತದನಂತರ ಕಲ್ಲಿದ್ದಲುಗಳಾಗಿ ಪರಿವರ್ತಿತಗೊಂಡವು.

ನಾವು ಕಲ್ಲಿದ್ದಲನ್ನು ಸುಟ್ಟಾಗ, ಹಿಂದೆ ಆ ಮರಗಳು ಶೇಖರಿಸಿದ್ದ ಶಕ್ತಿಯನ್ನು ಬಿಡುಗಡೆ ಮಾಡುತ್ತೇವೆ. ಈ ಶಕ್ತಿಯು ಹಲವಾರು ವರುಷಗಳಿಂದ ಶೇಖರಿಸಿಟ್ಟಂತದ್ದಾಗಿದೆ. ಕಲ್ಲಿದ್ದಲು ಅನೇಕ ವರುಷಗಳ ಹಿಂದೆ ಉಗಮವಾದ್ದರಿಂದ ಇದನ್ನು ಪಳೆಯುಳಿಕೆಗಳ ಇಂಧನ ಎಂದೂ ಕರೆಯುತ್ತಾರೆ. ಇದು ಜನರು ಉಪಯೋಗಿಸಿದ ಮೊತ್ತ ಮೊದಲ ಪಳೆಯುಳಿಕೆ ರೂಪದ ಇಂಧನವಾಗಿದೆ. ಪೆಟ್ರೋಲಿಯಂ ಎರಡನೇ ಸ್ಥಾನದಲ್ಲಿದೆ.

ರೂಪುಗೊಳ್ಳುವಿಕೆ

ಬದಲಾಯಿಸಿ

ಕಲ್ಲಿದ್ದಲು ಸುಮಾರು ೩೫೦ ಮಿಲಿಯನ್ ವರುಷಗಳ ಹಿಂದೆ ಕಾಡುಗಳಲ್ಲಿ ರಚನೆಯಾಗಲು ಪ್ರಾರಂಭವಾಯಿತು. ಈ ಕಾಲವನ್ನು ಕಾರ್ಬೋನಿಫೆರಸ್ ಕಾಲ ಎನ್ನುತ್ತಾರೆ. ಕೊಳೆಯುವ ಗಿಡಗಳು ಮಣ್ಣಿನ ಪದರದೊಂದಿಗೆ ಹೂತುಹೋಗುತ್ತವೆ. ಉಷ್ಣತೆ ಹೆಚ್ಚಾದಂತೆ ಈಗಿಡಗಳು ನಿಧಾನವಾಗಿ ಕಲ್ಲಿದ್ದಲಾಗುತ್ತದೆ.

ಇಂದು ಮೂರು ವಿಧದ ಕಲ್ಲಿದ್ದಲುಗಳಿವೆ- ೧.ಲಿಗ್ನೈಟ್ ೨.ಬಿಟುಮಿನಸ್ ೩.ಆಂತ್ರಸೈಟ್.

  • ಪೀಟ್:- ಇದು ಕಲ್ಲಿದ್ದಲು ರೂಪುಗೊಳ್ಳುವುದರ ಪ್ರಥಮ ಹಂತ. ಇದು ಮೃದುವಾಗಿ,ಹಾಗೂ ತೇವಾಶ ಹೊಂದಿರುತ್ತದೆ. ಆದರೂ ಇದನ್ನು ಸುಟ್ಟಾಗ ಇಂಧನ ದೊರೆಯುತ್ತದೆ.
  • ಲಿಗ್ನೈಟ್:- ಅಥವಾ ಕಂದು ಕಲ್ಲಿದ್ದಲು. ಇದು ಕೆಳಮಟ್ಟದ ಹಾಗೂ ೬೦% ಇಂಗಾಲ ಹಾಗೂ ಕೊಳೆತ ಗಿಡಗಳ ಮಿಶ್ರಣ ಇರುವ ಕಲ್ಲಿದ್ದಲು.
  • ಬಿಟುಮಿನಸ್:- ಇದು ಉತ್ತಮ ಇಂಧನ. ೮೦% ಇಂಗಾಲ ಹೊಂದಿದೆ. ಇಂಧನ ತಯಾರಕರ ಮೆಚ್ಚಿನ ಕಲ್ಲಿದ್ದಲು ಇದಾಗಿದೆ.
  • ಆಂತ್ರಸೈಟ್:- ಇದು ಅತ್ಯುತ್ತಮ ಕಲ್ಲಿದ್ದಲು. ೯೦% ಇಂಗಾಲ ಹೊಂದಿದೆ.

ಕಲ್ಲಿದ್ದಲು ಗಣಿಗಾರಿಕೆ

ಬದಲಾಯಿಸಿ

ಸುಮಾರು ೫ ಬಿಲಿಯನ್ ಟನ್ ಕಲ್ಲಿದ್ದಲು ಪ್ರತಿವರುಷ ತೆಗೆಯಲ್ಪಡ್ಉತ್ತದೆ. ಚೀನಾ ಹಾಗೂ ಅಮೆರಿಕ ವಾರ್ಷಿಕ ೧.೬ ಬಿಲಿಯನ್ ಟನ್ ತೆಗೆದು ಮುಂಚೂಣಿಯಲ್ಲಿವೆ. ಕಲ್ಲಿದ್ದಲು ದಾಸ್ತಾನುಗಳು ಸುಮಾರು ೨೦ಮ ದಪ್ಪದ ಹಾಳೆಗಳನ್ನು ಹೊಂದಿರುತ್ತವೆ.

೨ ರೀತಿಯ ಗಣಿಗಾರಿಕೆ:-

  1. ಸ್ಟ್ರಿಪ್ ಮೈನಿಂಗ್:- ಇದು ಮುಕ್ತ ಗಣಿಗಾರಿಕೆ. ನೆಲದ ಮೇಲೆಯೇ ಸಲಕರಣೆಗಳ ಮೂಲಕ ಅಗೆದು ಮಾಡುವುದು. ಕಲ್ಲಿದ್ದಲು ಉದ್ದ ಹಾಳೆಗಳಲ್ಲಿ ಸಿಗುತ್ತದೆ. ಇದನ್ನು ತೆಗೆದು ಮಣ್ಣಿನ ಪದರವನ್ನು ಆ ಜಾಗದಲ್ಲಿ ಹಾಕಲಾಗುತ್ತದೆ.
  2. ಶಾಫ್ಟ್ ಮೈನಿಂಗ್:- ಇದು ನೆಲದ ಆಳದಲ;fಲಿ ಹುದುಗಿರುವ ಕಲ್ಲಿದ್ದಲನ್ನು ತರುವುದು. ದೊಡ್ಡ ಕೊಳವೆಗಳನ್ನು ಮಾಡಿ ಹೈಡ್ರಾಲಿಕ್ ಉಪಕರಣ ಬಳಸಿ ತೆಗೆಯಲಾಗುತ್ತದೆ.

ಇಂಧನ-ಶಕ್ತಿ

ಬದಲಾಯಿಸಿ

ಸುಮಾರು ೨೫% ಜಗತ್ತನ ಶಕ್ತಿಯ ಪೂರೈಕೆ ಕಲ್ಲಿದ್ದಲಿನಿಂದ ಆಗುತ್ತದೆ. ಈ ಘಟಕಗಳಲ್ಲಿ ಕಲ್ಲಿದ್ದಲನ್ನು ಪುಡಿಮಾಡಿ ಅದನ್ನು ಸುಟ್ಟು ಹಾಕುತ್ತಾರೆ. ಈ ಅನಿಲಗಳನ್ನು ಟ್ಯೂಬ್ ಗಳಲ್ಲಿ ಸೇರಿಸಿ ನೀರನ್ನು ಆವಿಯಾಗಿ ಮಾರ್ಪಡಿಸುತ್ತಾರೆ. ಈ ಆವಿಯು ಶಕ್ತಿಯುತವಾದ ಟರ್ಬೋಜನರೇಟರ್ ಅನ್ನು ಚಾಲನೆ ಮಾಡುತ್ತದೆ. ಇದರಿಂದ ವಿದ್ಯುತ್ ಶಕ್ತಿ ದೊರೆಯುತ್ತದೆ.

ಕಲ್ಲಿದ್ದಲಿನ ಉತ್ಪಾದನೆಗಳು

ಬದಲಾಯಿಸಿ

ಕಲ್ಲಿದ್ದಲನ್ನು ಬೆಲೆಯುಳ್ಳ ಸಾಮಾಗ್ರಿ ಮಾಡಲು ಉಪಯೋಗಿಸುತ್ತಾರೆ. ಇದನ್ನು ಡಿಸ್ಟ್ರಕ್ಟಿವ್ ಡಿಸ್ಟಿಲ್ಲೇಶನ್ ಎನ್ನುತ್ತಾರೆ. ಕಲ್ಲಿದ್ದಲನ್ನು ೧೩೦೦ ಸೆಲ್ಶಿಯಸ್ ತಾಪಮಾನದಲ್ಲಿ ಬಿಸಿಮಾಡಿ, ಅದರ ಅನಿಲಗಳನ್ನು ವಿಭಜಿಸುತ್ತಾರೆ. ಉಳಿದ ಘನ ವಸ್ತುವನ್ನು ಕೋಕ್ ಎನ್ನುತ್ತಾರೆ. ಇದು ಅತ್ಯಂತ ಉಪಯುಕ್ತವಾಗುದೆ.

ಕಲ್ಲಿದ್ದಲಿನ ಟಾರ್

ಬದಲಾಯಿಸಿ

ಇದು ಕಪ್ಪು ದ್ರವ್ಯವಾಗಿದೆ ಹಾಗೂ ಇದರಲ್ಲಿ ರಾಸಾಯನಿಕಗಳಾದ ಬೆನ್ಝೀನ್, ಫಿನಾಲ್, ಸಿರೋಸೋರ್ ಅಧಿಕವಾಗಿವೆ. ಇದನ್ನು ಡೈ, ಬಣ್ಣಗಳು, ಹಾಗೂ ಇತರ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.


ಭೌತಿಕ ರಾಸಾಯನಶಾಸ್ತ್ರ

ಬದಲಾಯಿಸಿ