Leona Strelita P
ನನ್ನ ಹೆಸರು ಲಿಯೋನಾ ಸ್ಟ್ರೆಲಿಟಾ. ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ. ಪ್ರಸ್ತುತ ನಾನು ಮಂಗಳೂರಿನ ಜೆಪ್ಪು ಎಂಬಲ್ಲಿ ವಾಸಿಸುತ್ತಿದ್ದೇನೆ. ನಾನು ೧ ಮೇ ೧೯೯೬ರಂದು, ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿದೆನು. ನನ್ನ ತಂದೆಯ ಹೆಸರು ಪ್ರಭುರಾಜ್, ತಾಯಿ ಸಾರಾ ಹೆಲೆನ್. ನನಗೆ ಲಿಜೋಹ ಪಿಶೋನ್ ಎಂಬ ಸಹೋದರ ಇದ್ದಾನೆ. ನಾನು ಬಾಲ್ಯವನ್ನು ಉಡುಪಿ ಜಿಲ್ಲೆಯ ಕಾರ್ಕಳ ಎಂಬಲ್ಲಿ ಕಳೆದೆನು. ನಂತರ ಕಳೆದ ಒಂದು ವರ್ಷದಿಂದ ಮಂಗಳೂರಿನಲ್ಲಿ ನೆಲೆಸಿರುತ್ತೇನೆ. ನಾನು ಬಿ.ಎಸ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.ನನಗೆ ಪಠ್ಯವಲ್ಲದೆ ಇತರ ವಿಷಯಗಳಲ್ಲೂ ಆಸಕ್ತಿಯಿದೆ. ನಾನು ೬ನೇ ತರಗತಿಯಿಂದಲೇ ಇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುತ್ತೇನೆ. ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಓದುವುದರಲ್ಲಿ ನನಗೆ ಅಪಾರ ಆಸಕ್ತಿಯಿದೆ.ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಕಾದಂಬರಿಗಳು,ಹಾಗೂ ಪತ್ರಿಕೆಗಳಲ್ಲಿ ಬರುವ ವಿಶಿಷ್ಟವಾದ ಲೇಖನಗಳನ್ನು ಸಂಗ್ರಹಿಸುವುದೆಂದರೆ ಇಷ್ಟ. ನಾನು ಸ್ವತಃ ಯಾವ ಕ್ರೀಡೆಗಳನ್ನಾಡದಿದ್ದರೂ, ಟೆನಿಸ್ ಎಂದರೆ ಪ್ರಿಯ. ರೋಜರ್ ಫೆಡರರ್ ನನ್ನ ಮೆಚ್ಚಿನ ಆಟಗಾರ. ಉಳಿದಂತೆ ನನಗೆ ಜೋರಾದ ಮಳೆಯನ್ನು ಸವಿಯುವುದೆಂದರೆ ಇಷ್ಟ. ಕಾರಂತರು ಹಾಗೂ ತ್ರಿವೇಣಿಯವರ ಕಾದಂಬರಿಗಳನ್ನು ಓದುವಾಗ ಮನಸ್ಸಿಗೆ ಪ್ರಿಯವಾದವು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದುವ ಮೂಲಕ ಈ ಕನ್ನಡ ವಿಕಿಪೀಡಿಯಾದ ಕುರಿತು ತಿಳಿಯುವ ಅವಕಾಶ ದೊರೆತಿದೆ. ಇದಕ್ಕೆ ನಾನು ಸಂತೋಷಿಸುತ್ತೇನೆ. ನಾನು ಕೊಡುವ ಅಲ್ಪ ಕಾಣಿಕೆಯಿಂದ ಇತರರಿಗೆ ಒಳಿತಾಗಲೆಂದು ಬಯಸುತ್ತೇನೆ. ಧನ್ಯವಾದಗಳು