ಸದಸ್ಯ:Laxmikantambig/ನನ್ನ ಪ್ರಯೋಗಪುಟ
ವಜ್ರ
ಬದಲಾಯಿಸಿಜನರಿಗೆ ತಮ್ಮ ಶರೀರವನ್ನು ಆಭರಣಗಳಿಂದ ಅಲಂಕಾರಮಾಡಿಕೊಳ್ಳಬೇಕೆಂಬ ಆಸೆಯು ಪೂರ್ವ ಕಾಲದಿಂದಲೂ ಸಹಜವಾಗಿರುವುದು. ಇದರಿಂದ ನಾನಾ ದೇಶಗಳಲ್ಲಿ ನಾನಾ ಬಗೆಯ ಜನರು ನಾನಾ ವಿಧವಾದ ಪದಾರ್ಥಗಳ ಮೂಲಕ ಅವರವರಿಗೆ ಅಂದವೆಂದು ತೋರುವ ನಾನಾ ರೀತಿಯ ಅಲಂಕಾರಗಳನ್ನು ಮಾಡಿಕೊಳ್ಳುತ್ತಿರುವರು. ಈ ಅಲಂಕಾರಗಳಲ್ಲಿ ವಜ್ರವು, ಎಲ್ಲರ ಮನಸ್ಸನ್ನೂ ಆಕರ್ಷಿಸಿರುವ, ಸರ್ವಸಮ್ಮತವಾದ ಆಭರಣವಾಗಿದೆಯೆಂದು ಹೇಳುವುದಕ್ಕೆ ಯಾವ ಸಂಶಯವೂ ಇಲ್ಲ. ಆದರೆ ಈ ರತ್ನವನ್ನೂ, ಇದನ್ನು ಕಟ್ಟುವುದಕ್ಕಾಗಿ ಉಪಯೋಗಿಸುವ ಚಿನ್ನವನ್ನೂ, ಯಾವ ರೀತಿಯಲ್ಲಿ ಸೇರಿಸಿ ಕೆಲಸಮಾಡಿ, ನೋಡುವುದಕ್ಕೆ ಅಂದವಾಗಿರುವಂತೆ ಮಾಡುವರೋ, ಅದರಲ್ಲಿ ಮಾತ್ರ ವಿಶೇಷ ವ್ಯತ್ಯಾಸಗಳು ಕಂಡುಬಂದು, ಆಯಾ ಜನರ ಬುದ್ಧಿ ಕೌಶಲ್ಯದ ತಾರತಮ್ಯವು ವ್ಯಕ್ತವಾಗುವುದು. ಇಷ್ಟೇ ಅಲ್ಲದೆ, ವಜ್ರವು ಯಾರಲ್ಲಿ ಮತ್ತು ಯಾವ ದೇಶದಲ್ಲಿ, ವಿಶೇಷವಾಗಿರುವುದೋ ಅಲ್ಲಿ ಹೆಚ್ಚಾದ ಐಶ್ವರ್ಯವಿರುವುದೆಂದು ನಿಸ್ಸಂಶಯವಾಗಿ ಹೇಳಬಹುದು. ವಜ್ರವು ರತ್ನಗಳಲ್ಲೆಲ್ಲಾ ಅತ್ಯುತ್ತಮವೆಂದೆನಿಸಿ ಎಲ್ಲರ ಮನಸ್ಸನ್ನೂ ಆಕರ್ಷಿಸುವುದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ವಿಚಾರಿಸೋಣ. ಇದರ ವಂಶವನ್ನು ನೋಡಿದರೆ ಕೇವಲ ಸಾಮಾನ್ಯವಾದದ್ದು, ಕಲ್ಲಿದ್ದಲು, ಗ್ರಾಫೈಟ್ ಎಂಬ ರ್ಪೆಸಿಲಿನ ಸೀಸ್- ಇವುಗಳ ಮನೆತನಕ್ಕೆ ಸೇರಿದ್ದು. ಈ ಮೂರು ಪದಾರ್ಥಗಳೂ ರಸಾಯನಶಾಸ್ತ್ರ ರೀತಿಯಾಗಿ ಇಂಗಾಲವೆಂಬ ಒಂದೇ ಮೂಲಪದಾರ್ಥವಾಗಿರುವುವು. ಈ ಮೂರರಲ್ಲಿ ಯಾವುದನ್ನು ಸುಟ್ಟರೂ ವಾಯುಮಂಡಲದಲ್ಲಿರುವ ಆಮ್ಲಜನಕದೊಡನೆ ಸಂಯೋಗ ಹೊಂದಿ ಇಂಗಾಲಾಮ್ಲವೆಂಬ ಅನಿಲರೂಪವಾಗಿ ಹಾರಿಹೋಗುವುದು. ಆದರೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಸಂಸ್ಕಾರ ವ್ಯತ್ಯಾಸದಿಂದ ಅವರವರ ಯೋಗ್ಯತೆಯಲ್ಲಿ ಭೇದವನ್ನು ಹೊಂದುವಂತೆ ವಜ್ರವು, ಸಾಮಾನ್ಯ ಪದಾರ್ಥವಾದರೂ ಅದರಲ್ಲಿರುವ ಅಸಾಮಾನ್ಯವಾದ ಗುಣಗಳಿಂದ ಪ್ರಪಂಚದಲ್ಲೆಲ್ಲಾ ಅತ್ಯಂತ ಗಣ್ಯವಾಗಿರುವುದು. ವಜ್ರವು ಕಲ್ಲಿನಂತಿದ್ದು, ಕಲ್ಲುಗಳಿಗಿಂತಲೂ ಹೆಚ್ಚಾದ ಸಾಂದ್ರತೆಯುಳ್ಳದ್ದಾಗಿದ್ದರೂ, ಕಲ್ಲಿನ ಜಾತಿಗಾಗಲೀ ಲೋಹಗಳ ಜಾತಿಗಾಗಲೀ ಸೇರಿದ್ದಲ್ಲ. ಇದ್ದಲಿನ ಜಾತಿಗೆ ಸೇರಿದ್ದು. ಆದರೂ ಕಾಠಿಣ್ಯದಲ್ಲಿ ಇದರ ಸಮಾನವಾದ ಪದಾರ್ಥವು ಪ್ರಪಂಚದಲ್ಲಿ ಮತ್ತಾವುದೂ ಇಲ್ಲ. ಉಕ್ಕು ಮೊದಲಾದ ಯಾವ ವಸ್ತುವನ್ನಾಗಲೀ ಇದು ಗೀಚುವುದು. ವಜ್ರವನ್ನು ವಜ್ರವನ್ನಲ್ಲದೆ ಮತ್ತಾವ ವಸ್ತುವೂ ಗೀಚಲಾರದು. ಇಷ್ಟು ಗಡಸಾಗಿದ್ದರೂ ವಜ್ರವು ಘರ್ಷಣೆಯಿಂದ ಕ್ರಮೇಣ ಸವೆದು ಹೋಗುವುದು. ಗಡಸಾದ ಮಾತ್ರಕ್ಕೆ ವಜ್ರವನ್ನು ಒಡೆಯಲು ಕಷ್ಟವೆಂದು ತಿಳಿಯಕೂಡದು. ಉಕ್ಕಿನ ಒರಳಿನಲ್ಲಿ ಉಕ್ಕಿನ ಹಾರೆಯಿಂದ ವಜ್ರವನ್ನು ಪುಡಿಮಾಡಬಹುದು. ವಜ್ರವನ್ನು ಸಾಣೆ ಹಿಡಿಯುವುದಕ್ಕೂ, ಮೆರಗು ಹಾಕುವುದಕ್ಕೂ ವಜ್ರದ ಪುಡಿಯನ್ನೇ ಉಪಯೋಗಿಸಬೇಕು. ವಜ್ರವು ಅಮೂಲ್ಯವಾಗಿರುವುದಕ್ಕೆ ಅದರ ಅಸಮಾನವಾದ ಹೊಳಪೇ ಕಾರಣ. ಅದರಮೇಲೆ ಬಿದ್ದ ಬೆಳಕನ್ನು, ಇತರ ಸ್ಫಟಿಕ ಪದಾರ್ಥಗಳು ಪ್ರತಿಫಲಿಸುವುದಲ್ಲದೆ, ನಾನಾ ಬಣ್ಣಗಳಾಗಿಯೂ ಒಡೆದು ಚದುರಿಸುವುದು. ಈ ಅನುಪಮವಾದ ಗುಣದಿಂದಲೇ ಜನರು, ಮುಖ್ಯವಾಗಿ ಸ್ತ್ರೀಯರು, ವಜ್ರಕ್ಕೆ ಬೆರಗಾಗಿ ಸೋತುಹೋಗುವುದು. ಈ ಹೊಳಪು, ಭೂಮಿಯಲ್ಲಿ ಸಿಕ್ಕುವ ವಜ್ರಗಳಲ್ಲಿ ಸ್ವಭಾವವಾಗಿ ಕೊಂಚಮಟ್ಟಿಗೆ ಇದ್ದರೂ, ವಜ್ರವನ್ನು ಸರಿಯಾಗಿ ಸಾಣೆಹಿಡಿದು, ಶಾಸ್ತ್ರ ರೀತಿಯಾಗಿ ಪಟ್ಟಿಗಳನ್ನು ಹೊಡೆದು, ಮೆರಗು ಕೊಡುವುದರಿಂದ ಆ ಹೊಳಪನ್ನು ವಿಶೇಷವಾಗಿ ಹೆಚ್ಚುಮಾಡಬಹುದು. ವಜ್ರವನ್ನು ಧರಿಸುವುದರಿಂದ ಯಾವ ವಿಷವೂ ಏರದೆಂದೂ, ಯಾವ ಭೀತಿಯೂ ತಾಕದೆಂದೂ, ಯಾವ ವಿಧವಾದ ಬುದ್ಧಿ ಭ್ರಮಣೆಯೂ ಹಿಡಿಯದೆಂದೂ, ಐಶ್ವರ್ಯವನ್ನೂ ಏಳಿಗೆಯನ್ನೂ ತರುವುದೆಂದೂ, ಗಂಡ ಹೆಂಡಿರ ಮನಸ್ತಾಪವನ್ನು ಶಾಂತಿಗೊಳಿಸುವುದೆಂದೂ ನಂಬಿಕೆ ಇತ್ತು. ಕಡೆಯಲ್ಲಿ ಹೇಳಿದ ಗುಣವು ಮಾತ್ರ ವಜ್ರಕ್ಕೆ ಈಗಲೂ ಇರುವುದೆಂದು ಹೇಳಬಹುದು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ವಜ್ರವನ್ನು ಅರೆದು ಕುಡಿಯುವರೆಂದು ಪೂರ್ವಕಾಲದಿಂದಲೂ ಹೇಳುತ್ತಿದ್ದಾರೆ. ಆದರೆ ಅರೆಯವುದು ಹೇಗೆ ಎಂಬ ವಿಷಯ ಮಾತ್ರ ನಮಗೆ ತಿಳಿಯದು. ವಜ್ರವು ವಿಷವಲ್ಲ, ಏಕೆಂದರೆ ದಕ್ಷಿಣ ಆಫ್ರಿಕದ ಗಣಿಗಳಲ್ಲಿ ವಜ್ರಗಳನ್ನು ಕದ್ದು ದಕ್ಕಿಸಿಕೊಳ್ಳುವುದಕ್ಕಾಗಿ ಕೆಲಸಗಾರರು ಅವನ್ನು ನುಂಗಿ, ಯಾವ ತೊಂದರೆಯನ್ನೂ ಅನುಭವಿಸದ ವಿಷಯವು ಚೆನ್ನಾಗಿ ತಿಳಿದುಬಂದಿದೆ. ವಜ್ರದ ಪುಡಿಯನ್ನು ನುಂಗಿದಲ್ಲಿ ಅದರ ಕಾಠಿಣ್ಯದಿಂದ, ಗಾಜಿನ ಪುಡಿಯಂತೆಯೇ, ಕರುಳನ್ನು ಕುಯಿದು, ಅದು ವಿಷದಂತೆ ಪರಿಣಮಿಸಹುದು.
ವಜ್ರಗಳು ಭೂಮಿಯಲ್ಲಿ ಮೂರು ತೆರವಾಗಿ ಸಿಕ್ಕುವುವು
ಬದಲಾಯಿಸಿ(1)ಆಭರಣಗಳಿಗಾಗಿ ಉಪಯೋಗಿಸುವ ಸ್ಫಟಕಾಕೃತಿಯ ವಜ್ರ: ಇದು ಸ್ವಾಭಾವಿಕವಾಗಿ ಎಂಟು ತ್ರಿಕೋಣಾಕಾರದ ಪಟ್ಟಿಗಳು ಹೊಡೆದಂತೆ ಇರುತ್ತದೆ. ಕೆಲವು ವೇಳೆ ಪಟ್ಟಿಗಳು ಎಂಟಕ್ಕಿಂತಲೂ ಹೆಚ್ಚಾಗಿಯೂ ಅಥವಾ ಕಡಿಮೆಯಾಗಿಯೂ ಇರಬಹುದು. ಈ ಪಟ್ಟಿಗಳು ಸಾಮಾನ್ಯವಾಗಿ ಚಪ್ಪಟೆಯಾಗಿರುವುದಿಲ್ಲ, ಸ್ವಲ್ಪ ಗುಂಡುತಿರುಗಿರುತ್ತವೆ. (2)ಕೊಂಚಮಟ್ಟಿಗೆ ಸ್ಫಟಿಕಾಕೃತಿಯಿದ್ದು ಮೊದಲಿನದಕ್ಕಿಂತ ಗಡುಸಾಗಿರುವ “ಬೋರ್ಟ್’’ ಎನ್ನುವ ವಜ್ರ: ಆಭರಣಗಳಿಗೆ ಉಪಯೋಗವಾಗದ ಸ್ಫಟಿಕಾಕೃತಿಯ ವಜ್ರದ ಚೂರುಗಳನ್ನೂ ಈ ಹೆಸರಿಂದ ವ್ಯಾಪಾರಸ್ಥರು ಕರೆಯುವುದುಂಟು. ಈ ವಜ್ರಗಳು ಗಾಜು ಮೊದಲಾದುವನ್ನು ಸೀಳುವ, ಅಥವಾ ಅವುಗಳಲ್ಲಿ ಕಂಡಿಮಾಡುವ ಆಯುಧಗಳಿಗಾಗಿ ಉಪಯೋಗವಾಗುತ್ತವೆ, ಕಲ್ಲುಗಳನ್ನು ಕುಯ್ಯುವ ಗರಗಸಗಳನ್ನು ಮಾಡುವುದಕ್ಕೂ ಒದಗಿಸುತ್ತವೆ. (3)ಸ್ಫಟಿಕಾಕೃತಿಯೇ ಇಲ್ಲದೆ ಇದ್ದಲಿನಂತೆ ಕಪ್ಪಗಿರುವ ಮತ್ತು ಮೇಲೆ ಹೇಳಿದ ಎರಡು ಜಾತಿಗಳಿಗಿಂತಲೂ ಹೆಚ್ಚು ಗಡುಸಾಗಿರುವ “ಕಾರ್ಪೊನೇಡೋ’’ ಎನ್ನುವ ಕರೀವಜ್ರ: ಇದನ್ನು ಭೂಮಿಯಲ್ಲಿ ಸಾವಿರಾರು ಅಡಿಗಳ ಆಳಕ್ಕೆ ಕಂಡಿಗಳನ್ನು ಕೊರೆಯುವುದಕ್ಕಾಗಿ ತಯಾರುಮಾಡುವ ಬೈರಿಗೆಗಳಿಗೆ ಉಪಯೋಗಿಸುವರು. ಇದು ಎಂತಹ ಗಟ್ಟಿ ಬಂಡೆಯನ್ನಾದರೂ ಸುಲಭವಾಗಿ ಕೊರೆದುಹಾಕುವುದು. ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಗಣಿಗಳನ್ನು ಕಂಡುಹಿಡಿಯುವುದಕ್ಕಾಗಿ ಈ ಬೈರಿಗೆಯನ್ನು ಉಪಯೋಗಿಸುವರು. ಈ ತರದ ವಜ್ರವು ಬ್ರೆಜಿಲ್ ದೇಶದ ಒಂದು ಪ್ರಾಂತ್ಯದಲ್ಲಿ ಮಾತ್ರ ದೊರೆತಿರುವುದು. ಬೋರ್ಟ್ ವಜ್ರವನ್ನೂ ಬೈರಿಗೆಯ ಕೆಲಸಕ್ಕೆ ಉಪಯೋಗಿಸುವರು, ಆದರೆ ಕರೀವಜ್ರದಂತೆ ಇದು ತಡೆಯಲಾರದು. ಮೇಲೆ ಹೇಳಿದ ಮೂರು ಜಾತಿಯ ವಜ್ರಗಳಲ್ಲಿ ಮೊದಲೆನೆಯದು ಪ್ರಪಂಚಕ್ಕೆ ಅಷ್ಟು ಉಪಯೋಗವಿಲ್ಲದಿದ್ದರೂ, ಅದರ ಥಾಳಥಳ್ಯದಿಂದ ಎಲ್ಲರ ಮನಸ್ಸನ್ನೂ ಸೆಳೆದು ಚಕ್ರವರ್ತಿಗಳೇ ಮೊದಲಾದವರ ಉತ್ತಮಾಂಗದಲ್ಲಿ ಸೇರುವುದು. ಮಿಕ್ಕವೆರಡೂ ಅತಿ ಕಾಠಿಣ್ಯ ಸ್ವಭಾವವುಳ್ಳವುಗಳಾದುದರಿಂದ, ಈ ರೀತಿಯಾದ ಮನ್ನಣೆಯನ್ನು ಹೊಂದದೆ, ಕಲ್ಲುಬಂಡೆ ಮೊದಲಾದವನ್ನು ಕೊರೆಯುವ ಕೆಲಸದಲ್ಲಿ ಉಪಯೋಗಿಸಲ್ಪಡುವವು. ಕರೀವಜ್ರಕ್ಕಿರುವ ಕಾಠಿಣ್ಯವೂ ಶಕ್ತಿಯೂ ಪ್ರಪಂಚದಲ್ಲಿ ಮತ್ತಾವ ಪದಾರ್ಥಕ್ಕೂ ಇಲ್ಲ. ಈ ಕಾರಣದಿಂದ ಇದರ ಬೆಲೆಯೂ ಹೆಚ್ಚಾಗಿಯೇ ಇರುವುದು. ಸ್ವಭಾವಸ್ಥಿತಿಯಲ್ಲಿಯೇ ಕ್ಯಾರಟ್ ಒಂದಕ್ಕೆ ಇನ್ನೂರ ಐವತ್ತು ರೂಪಾಯಿಗಳಾಗಬಹುದು. ವಜ್ರವು ನದಿಗಳು ಹೊಡೆದುಕೊಂಡುಬಂದ ,ಗ್ರಾವೆಲ್ , ಮರಳು, ಅಥವಾ ಜೇಡಿಮಣ್ಣಿನಲ್ಲಿ ಬೆಣಚುಕಲ್ಲು, ಕುರಂಗದಕಲ್ಲು ಮೊದಲಾದ ಕಲ್ಲುಗಳೊಡನೆಯೂ, ಚಿನ್ನ, ಪ್ಲಾಟಿನಮ್ ಲೋಹಗಳೊಡನೆಯೂ, ಬೇರೆ ಬೇರೆ ಹಳಕುಗಳಾಗಿ ಸೇರಿಯೂ, ಕಂಗ್ಲಾಮರೇಟ್ ಎಂಬ ಶಿಲಾ ವಿಶೇಷದಲ್ಲಿಯೂ, ದಕ್ಷಿಣ ಆಫ್ರಿಕದ ,ಕಿಂಬರ್ಲಿ’ ಪ್ರಾಂತದಲ್ಲಿ ಸಿಕ್ಕುವ “ಕಿಂಬರ್ಲೈಟ್’’ ಎಂಬ ಹಸಿರು ಮತ್ತು ನೀಲಿ ಮಿಶ್ರವಾದ ಖನಿಜ ವಿಶೇಷದಲ್ಲಿಯೂ ದೊರೆಯುವುದು. ಪ್ರಪಂಚದಲ್ಲಿ ವಜ್ರಗಳು ಸಿಕ್ಕುವ ಮುಖ್ಯವಾದ ಪ್ರದೇಶಗಳು ಮೂರು. (1)ಇಂಡಿಯಾ ದೇಶ- ಇಲ್ಲಿ ಬಹಳ ಪೂರ್ವ ಕಾಲದಿಂದಲೂ ಮೊನ್ನೆ ಮೊನ್ನೆಯವರೆಗೂ ಎಂದರೆ, 19ನೇ ಶತಮಾನದ ಅಂತ್ಯದವರೆಗೂ, ವಜ್ರಗಳನ್ನು ತೆಗೆಯುತ್ತಿದ್ದರು. 1891 ನೆಯ ಸುಮಾರಿನಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿ ಮಾತ್ರ, ವರುಷ 1ಕ್ಕೆ ಒಂದುಸಾವಿರ ಕ್ಯಾರೆಟ್ ವಜ್ರಗಳನ್ನು ತೆಗೆಯುತ್ತಿದ್ದರೆಂದು ತಿಳಿದುಬಂದಿದೆ. (2)ದಕ್ಷಿಣ ಅಮೇರಿಕ- ಇಲ್ಲಿ 18ನೆಯ ಶತಮಾನದ ಮಧ್ಯದಿಂದ ವಜ್ರಗಳನ್ನು ತೆಗೆಯುತ್ತಿದ್ದಾರೆ. (3)ದಕ್ಷಿಣ ಆಫ್ರಿಕ- ಇಲ್ಲಿ 1870 ನೆ ಇಸವಿಯಿಂಯುವ ವಜ್ರ ತೆಗೆಯುವ ಕೆಲಸವು ದಿನೇ ದಿನೇ ಅಭಿವೃದಿ ಹೊಂದಿ, ಈಗ ಪ್ರಪಂಚದ ಇತರ ದೇಶಗಳಲ್ಲಿ ಆ ಕೆಲಸವು ನಿಂತುಹೋಗುವಂತೆ ಆಗಿರುತ್ತದೆ. ಇಲ್ಲಿನ ಗಣಿಗಳಿಂದ ತೆಗೆದ ವಜ್ರಗಳೇ ಪ್ರಪಂಚಕ್ಕೆಲ್ಲಾ ಈಗ ಸರಬರಾಜು ಆಗುತ್ತಿರುವುದು. ಸಾಧಾರಣವಾಗಿ ಪೂರ್ವಕಾಲದಲ್ಲಿ ಮಾನನಿಯವಾದವುಗಳಿಗೆಲ್ಲಾ ಇಂಡಿಯಾ ದೇಶವೇ ತೌರುಮನೆಯಾಗಿದ್ದಂತೆ ವಜ್ರಕ್ಕೂ ಇದೇ ತೌರುಮನೆಯಾಗಿತ್ತು. 18ನೆಯ ಶತಮಾನದ ಆರಂಭದವರೆಗೂ ಪ್ರಪಂಚದ ಎಲ್ಲಾ ಪ್ರಾಂತ್ಯಗಳಿಗೂ ಇಂಡಿಯಾ ದೇಶದಿಂದಲೇ ವಜ್ರಗಳು ಹೋಗಬೇಕಾಗಿತ್ತು. ಪ್ರಸಿದ್ಧಿ ಹೊಂದಿದ ಗೋಲುಕೊಂಡೆಯ ವಜ್ರದ ಗಣಿಗಳಿಂದಲೇ ‘ಕೋಹಿನೂರ್’ ಮೊದಲಾದ ಸುಪ್ರಸಿದ್ಧಗಳಾದ ರತ್ನಗಳು ಬಂದದ್ದು. 1665 ನೆ ಇಸವಿಯಲ್ಲಿ ಗೋಲ್ಕೊಂಡೆಗೆ ವಜ್ರವ್ಯಾಪಾರಕ್ಕಾಗಿ ಬಂದಿದ್ದ ಫ್ರೆಂಚ್ ದೇಶಸ್ಥನಾದ ,ಟ್ಯಾನರ್ನಿಯರ್’ ಎಂಬ ದೇಶ ಸಂಚಾರಿಯು ಆ ಪ್ರಾಂತ್ಯದಲ್ಲಿ ಆಗ ಅರವತ್ತು ಸಾವಿರ ಜನರು ವಜ್ರವನ್ನು ತೆಗೆಯುವ ಕೆಲಸದಲ್ಲಿ ನಿಯತರಾಗಿದ್ದರೆಂದು ಬರೆದಿರುತ್ತಾನೆ. ಈ ಗಣಿಗಳು ಈಗ ಬಿದ್ದಿವೆ. ಪ್ರಕೃತದಲ್ಲಿ ಇಂಡಿಯಾ ದೇಶದ ವಜ್ರದ ಗಣಿಗಳು ಮುಂದೆ ಹೇಳುವ ಪ್ರಾಂತಗಳಲ್ಲಿರುವವು. (1)ಪೆನ್ನಾರು ನದಿ ತೀರದಲ್ಲಿ ಕಡಪಾಬಳಿ ಚೆನ್ನೂರು ಪ್ರಾಂತ.
(2) ಪೆನ್ನಾರು ಕೃಷ್ಣಾನದಿಗಳಿಗೆ ಮಧ್ಯೆ ಇರುವ ಕರ್ನೂಲು ಪ್ರಾಂತ.
(3) ಕೃಷ್ಣಾ ತೀರದಲ್ಲಿ ಬೆಜವಾಡದ ಬಳಿ ಕೊಲ್ಲೇರ್ (ಕೊಲ್ಲೂರು?) ಪ್ರಾಂತ,
(4) ಮಹಾನದಿ ತೀರದಲ್ಲಿ ಸಾಂಬಲಪುರದ ಪ್ರಾಂತ,
(5) ಬಂದಲಖಂಡಿನಲ್ಲಿ ಪನ್ನಾಪ್ರಾಂತ.
ದಕ್ಷಿಣ ಆಫ್ರಿಕಾ ದೇಶದಲ್ಲಿ ವಜ್ರಗಳು ವಿಶೇಷವಾಗಿ ತೆಗೆಯುವುದು ಪ್ರಾರಂಭವಾದಾಗಿನಿಂದ ಇಂಡಿಯಾ ದೇಶದಲ್ಲಿನ ವಜ್ರಗಳ ಸಂಗ್ರಹವು ಮೂಲೆಗೆ ಬಿತ್ತೆಂದೇ ಹೇಳಬೇಕು. ಚರಿತ್ರೆಯಲ್ಲಿ ಸುಪ್ರಸಿದ್ಧಗಳಾದ ದೊಡ್ಡ ವಜ್ರಗಳೆಲ್ಲವೂ ಇಂಡಿಯಾ ದೇಶದಲ್ಲಿ ಸಿಕ್ಕಿದವುಗಳೇ. ಸಾಮಾನ್ಯವಾಗಿ ಗೋಲ್ಕೊಂಡದ ಗಣಿಗಳೆಂದು ಹೆಸರನ್ನು ಪಡೆದ ಕೊಲ್ಲೇರು ಪ್ರಾಂತ್ಯದ ಗಣಿಗಳಲ್ಲಿಯೇ ಈ ದೊಡ್ಡ ವಜ್ರಗಳನೇಕವು ಸಿಕ್ಕಿರುವುವು. 1881ನೆ ಇಸವಿಯಲ್ಲಿ ಚೆನ್ನೂರು ಪ್ರಾಂತದ ವಜ್ರ ಕರೂರಿನಲ್ಲಿ 67/0 ಕ್ಯಾರಟ್ ತೂಕದ ಒಂದು ವಜ್ರವು ದೊರೆಯಿತು.
ಇಂಡಿಯಾ ದೇಶದಲ್ಲಿ ದೊರೆತ ಪ್ರಸಿದ್ಧವಾದ ವಜ್ರಗಳು
ಬದಲಾಯಿಸಿಗ್ರೇಟ್ ಮೊಗಲ್
ಬದಲಾಯಿಸಿಇದನ್ನು 1665ನೆ ಇಸವಿಯಲ್ಲಿ “ಟ್ಯಾಮ್ನಯರ್’’ ಎಂಬಾತನು ಔರಂಗಜೇಬನ ಖಜಾನೆಯಲ್ಲಿ ನೋಡಿದ್ದನೆಂದು ಬರೆದಿರುತ್ತಾನೆ. ಇದು ಗೋಲ್ಕೊಂಡದ ಗಣಿಗಳಲ್ಲಿ ದೊರೆತದ್ದು. ಇದು, ಕತ್ತರಿಸುವುದಕ್ಕೆ ಮೊದಲು, 787 ಕ್ಯಾರಟ್ ತೂಕವಿತ್ತೆಂದೂ, ಕತ್ತರಿಸಿ ಸಾಣೆಹಿಡಿದ ಮೇಲೆ 280 ಕ್ಯಾರಟ್ಟಿತ್ತೆಂದು ತಿಳಿದುಬರುತ್ತದೆ. ಇದನ್ನು ನೂದರ್ ಷಾಹನು ದೆಹಲಿಯಿಂದ ಪರಿಷ್ಯಾ ದೇಶಕ್ಕೆ ತೆಗೆದುಕೊಂಡು ಹೋದನೆಂದೂ ಅಲ್ಲಿನ ಅರಮನೆಯ ಜವಾಹಿರುಗಳಲ್ಲಿ ಇರಬಹುದೆಂದು ಹೇಳುವರು.
ಓರ್ ಲಾಫ್
ಬದಲಾಯಿಸಿಇದು ಒಂದು ಹಿಂದೂ ದೇವಾಲಯದಲ್ಲಿ ವಿಗ್ರಹದ ಕಣ್ಣಿಗೆ ಇಟ್ಟಿದ್ದ ವಜ್ರವೆಂದು ಕಂಡುಬರುತ್ತದೆ. ಈ ವಜ್ರವನ್ನು ಒಬ್ಬ ಫ್ರೆಂಚ ಸಿಫಾಯಿಯು ದೇವಸ್ಥಾನದಿಂದ ಲೂಟಿಮಾಡಿದನು; ಇದು ಅವನಿಂದ ಕಳವಾಗಿ ಮತ್ತೊಬ್ಬನಿಗೆ ಸೇರಿ, ಈ ಕಳ್ಳನಿಂದ “ಪ್ರ್ರಿಸು ಓರ್‍ಲಾಫ್’’ ಎಂಬಾತನು 13||0 ಲಕ್ಷ ರೂಪಾಯಿಗಳಿಗೆ ಕೊಂಡುಕೊಂಡನು. ಇದರ ತೂಕ 194|||0 ಕ್ಯಾರಟ್ಟು ; ಕೊಂಚ ಹಳದೀಬಣ್ಣ ಮಿಶ್ರಣವಾಗಿದೆ. ಈಗ ರಷ್ಯಾ ಸಂಸ್ಥಾನದ ಬೊಕ್ಕಸದಲ್ಲಿದೆ.
ಕೋಹಿನೂರ್
ಬದಲಾಯಿಸಿಈ ವಜ್ರದ ವಿಷಯವಾಗಿ ವಿಚಿತ್ರವಾದ ಅನೇಕ ಕಥೆಗಳಿರುವುವು. ಐದು ಸಾವಿರ ವರುಷಗಳ ಹಿಂದೆ ಇದು ಕರ್ಣನ ವಜ್ರ ಕುಂಡಲದಲ್ಲಿತ್ತೆಂದು ಒಂದು ಕಥೆ. ಕೆಲವರು ಈ ವಜ್ರವು ಮತ್ತು ಮೇಲೆ ಹೇಳಿದ ‘ಓರ್‍ಲಾಫ್’’ ಎಂಬ ವಜ್ರವೂ “ಗ್ರೇಟ್‍ಮೊಗಲ್’’ ಎಂಬುದನ್ನು ಕತ್ತರಿಸಿದ್ದರಿಂದ ಬಂದ ತುಂಡುಗಳೆಂದು ಹೇಳುವರು. ಈ ವಿಷಯದಲ್ಲಿ ನಂಬಿಕೆ ಕಡಿಮೆ. 1739 ರಲ್ಲಿ ಪರಿಷ್ಯಾ ದೇಶದ ನಾದರ್ ಷಾಹನು ಮೊಗಲಾಯಿ ರಾಜ್ಯವನ್ನು ಗೆದ್ದಾಗ, ಈ ವಜ್ರವು ಆತನಿಗೆ ಸೇರಿತು. ತರುವಾಯ ಪಂಜಾಬು ಮಹಾರಾಜನಾದ ರನಜಿತಸಿಂಗನ ಬಳಿಗೆ ಹೋಯಿತು. ಆತನು ತನ್ನ ತೋಳಿನಲ್ಲಿ ಧರಿಸುತ್ತಿದ್ದನು. ಪಂಜಾಬು ದೇಶವು ಬ್ರಿಟಷರ ಸ್ವಾಧೀನವಾದಾಗ ಅದು ಈಸ್ಟ್ ಇಡಿಯಾ ಕಂಪೆನಿಗೆ ಸೇರಿ, ಅವರು 1850 ರಲ್ಲಿ ಶ್ರೀರ್ಮ ವಿಕ್ಟೋರಿಯಾ ಮಹಾರಾಣಿಯವರಿಗೆ ನಜರು ಒಪ್ಪಿಸಿದರು. ಆಗ ಅದರ ತುಕ 186 –ಕ್ಯಾರಟ್ಟು; ಕತ್ತರಿಸಿ ಸಾಣಿ ಹೀಡಿದ ಮೇಲೆ, ತೂಕ 106 – ಕ್ಯಾರಟ್ಟು. ಇದು ಈಗ ನಮ್ಮ ಚಕ್ರವರ್ತಿ ಸಾರ್ವಭೌಮರ ಕಿರೀಟದಲ್ಲಿ ಮೆರೆಯುತ್ತಿದೆ.
ರೀಜೆಂಟ್’ ಅಥವಾ ,ಪಿಟ್’ ವಜ್ರ
ಬದಲಾಯಿಸಿಇದು 1701 ರಲ್ಲಿ ಸಿಕ್ಕಿತು. ಆಗ ಮದ್ರಾಸ್ ಗವರ್ನರ್ ಆಗಿದ್ದ ,,ಪಿಟ್’’ ಅವರು ಇದನ್ನು ಮೂರುಲಕ್ಷದ ಆರು ಸಾವಿರ ರೂಪಾಯಿಗೆ ಕೊಂಡುಕೊಂಡು 12 ಲಕ್ಷಕ್ಕೆ 1717 ರಲ್ಲಿ ಫ್ರಾನ್ಸ್ ದೇಶದ ರೀಜೆಂಟರಾಗಿದ್ದ, ,,ಡ್ಯೂಕ್ ಆಫ್ ಆರ್‍ಲೀನ್ಸ್’’ ಅವರಿಗೆ ಮಾರಿದರು. ಕತ್ತರಿಸಿ ಸಾಣಿಹಿಡಿಯುವುದಕ್ಕೆ 75 ಸಾವಿರ ರೂಪಾಯಿಗಳ ಕೂಲಿಯನ್ನು ಕೊಟ್ಟರು. ಇದು ಈಗಲೂ ಫ್ರಾನ್ಸ್ ದೇಶದಲ್ಲಿದೆ. ಅತಿಚಾತುರ್ಯವಾಗಿ ಸಾಣೆ ಹಿಡಿದಿರುವುದರಿಂದ ಶೋಭಿಸುತ್ತಿರುವ ಈ ವಜ್ರವು ಪ್ರಪಂಚದಲ್ಲಿ ಈಗಿರುವ ಶ್ರೇಷ್ಠತುಮವಾದ ವಜ್ರಗಳಲ್ಲಿ ಒಂದೆಂದು ಹೇಳುವರು. ಆಕಾರ, ಅತ್ಯುತ್ತಮವಾದ ಕಮಲ ; ತೂಕ, ಕತ್ತರಿಸುವುದಕ್ಕೆ ಮೊದಲು 410 ಕ್ಯಾರಟ್ಟು ; ಕತ್ತರಿಸಿ ಸಾಣೆಹಿಡಿದ ಮೇಲೆ 136||| ಕ್ಯಾರಟ್ಟು.
ಅಕ್ಬರ್ ಷಾ
ಬದಲಾಯಿಸಿಇದರ ಮೇಲೆ ಅರಬ್ಬಿ ಭಾಷೆಯಲ್ಲಿ ಅಕ್ಷರಗಳು ಕೆತ್ತಿದ್ದವು ; ಕತ್ತರಿಸಿ ಸಾಣೆಹಿಡಿದ ಮೆಲೆ 116 ಕ್ಯಾರಟ್ಟಿನಿಂದ 71 ಕ್ಯಾರಟ್ಟಿಗೆ ಇಳಯಿತು. ಇದನ್ನು ಬರೋಡಾ ಗಾಯಕವಾಡರು 5|0 ಲಕ್ಷ ರೂಪಾಯಿಗೆ ಕೊಂಡುಕೊಂಡರು.
ನೈಜಾಂ
ಬದಲಾಯಿಸಿಇದು ಹೈದರಾಬಾದು ನಿಜಾಮರ ಬಳಿಯಿದೆ ; ತೂಕ 277 ಕ್ಯಾರಟ್ಟು.
ದರ್ಯಾಯಿನೂರ್ ಯೂಜೀನೀ
ಬದಲಾಯಿಸಿಇದು ಪರಿಷ್ಯಾದೇಶದ ಷಾಯವರ ಬಳಿಯಿದೆ. ತೂಕ 186 ಕ್ಯಾರೆಟ್==ಎಂಪ್ರೆಸ ಯೂಜೀನೀ== ಟಿದು ಬರೋಡಾ ಗಯಕವಾಡರ ಬಳಯಿದೆ. ತೂಕ 51 ಕ್ಯಾರಟ್ ಶುಭ್ರಚ್ಛಾಯೆಯ ವಜ್ರಗಳಲ್ಲಿ ಮೇಲೆ ಹೇಳಿದ ಮುಖ್ಯವಾದುವುಗಳಲ್ಲದೆ ಇನ್ನೂ ಕೆಲವು ಇರುವುವು. ಮಿಶ್ರವರ್ಣಚ್ಛಾಯೆಯ ವಜ್ರಗಳು ತೂಕ ಕಡಿಮೆ. ಇವುಗಳಲ್ಲಿ ಪ್ರಮುಕವಾದವುಗಳು.
‘ಹೋಫ್’
ಬದಲಾಯಿಸಿಇದು ಸೊಗಸಾದ ನೀಲಚ್ಛಾಯೆಯ ಕಮಲ. ತೂಕ 44||0 ಕ್ಯಾರಟ್ಟು ಮಾತ್ರವಾದರೂ ಅದರ ಕಾಂತಿಯ ಸೊಗಸಿಗಾಗಿ 2||0 ಲಕ್ಷ ರೂಪಾಯಿಗಳ ಬೆಲೆ ಬಂತು.
ಡ್ರೆಸ್ರ್ಡಗ್ರ್ರಿ
ಬದಲಾಯಿಸಿಸುಮಾರು ಹಸಿರು ಛಾಯೆ;40 ಕ್ಯಾರಟ್ಟು ತೂಕ ಸ್ಯಾಕ್ಸನೀ ರಾಜರ ಜವಾಹಿರಿನಲ್ಲಿದೆ.
ಫ್ಳಾರ್ರೆ ರ್ಟೈ
ಬದಲಾಯಿಸಿಹಳದಿ ಛಾಯೆ 133 ಕ್ಯಾರಟ್ ತೂಕ ಆಸ್ಟ್ರಿಯಾ ಚಕ್ರವರ್ತಿಯ ಜವಾಹರಿನಲ್ಲಿದೆ. ದಕ್ಷಿಣ ಅಮೇರಿಕದ ಬ್ರೆಜಿಲ್ ದೇಶದ ಪ್ರಸಿದ್ಧವಾದ ವಜ್ರಗಳಲ್ಲಿ 1853ರಲ್ಲಿ ದೊರೆತ ,ಸ್ಟಾರ್ ಆಫ್ ದಿ ಸೌತ್’ ಎಂಬುದು ಅತ್ಯತ್ತಮವಾದುದು. ಇದರ ತೂಕ 254||0 ಕ್ಯಾರಟ್ಟು. ಇದನ್ನು ಮೊದಲು 6 ಲಕ್ಷ ರೂಪಾಯಿಗಳಿಗೆ ಮಾರಿದರು. ಕತ್ತರಿಸಿ ಸಾಣಿಹಿಡಿದ ಮೇಲೆ 125 ಕ್ಯಾರಟ್ಟು ತೂಕಕ್ಕಿಳಿಯಿತು. ಇದನ್ನು ಬರೊಡಗಾಯಕವಾಡರು 12 ಲಕ್ಷ ರೂಪಾಯಿಗಳಿಗೆ ಕೊಂಡುಕೊಂಡರು. ದಕ್ಷಿಣ ಆಫ್ರಿಕದಲ್ಲಿಯೂ ಅನೇಕ ದೊಡ್ಡ ವಜ್ರಗಳು ಸಿಕ್ಕಿರುವುವು. – ಇವುಗಳಲ್ಲಿ ವಿಕ್ಟೋರಿಯಾ ಎಂಬುದು ಮೊದಲು 457||0 ಕ್ಯಾರಟ್ಟು ತೂಕವಿತ್ತು: ಸಾಣಿಹಿಡಿದ ಮೇಲೆ 180 ಕ್ಯಾರಟ್ಟಿಗೆ ಇಳಿಯಿತು. ಇದನ್ನು ಹೈದ್ರಾಬಾದ್ ನಿಜಾಮರು 60 ಲಕ್ಷ ರೂಪಾಯಿಗೆ ಕೊಂಡುಕೊಂಡರು.ಎಕ್ಸೆಲ್ಸಿಯರ್ – ಇದು 1863 ರಲ್ಲಿ ಸಿಕ್ಕಿತು. ಇದನ್ನು ಗಣಿಯಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಬಂಡಿಯವನು ಮಣ್ಣನ್ನು ಬಂಡಿಗೆ ತುಂಬುತ್ತಿರುವಾಗ ಅಕಸ್ಮಾತ್ತಾಗಿ ಕಂಡನು. ಇದರ ತೂಕ 671 ಕ್ಯಾರಟ್ಟು. 'ಕಲ್ಲಿನನ್’ ವಜ್ರ – 1905 ರವರೆಗೂ ಪ್ರಪಂಚದಲ್ಲಿ ಸಿಕ್ಕಿದ ವಜ್ರಗಳಲೆಲ್ಲಾ ಎಕ್ಸೆಲ್ಸಿಯರ್ ಎಂಬುದೇ ಕೇವಲ ದೊಡ್ಡ ವಜ್ರವಾಗಿತ್ತು. ಈ ಸಂವತ್ಸರ ದಕ್ಷಿಣ ಆಫ್ರಿಕದ ಟ್ರ್ರಾಸ್ವಾಲಿನ ಪ್ರೆಮಿಯರ್ ಗಣಿಯಲ್ಲಿ ಅಕಸ್ಮಾತ್ತಾಗಿ ಒಂದು ವಜ್ರವು ದೊರೆಯಿತು. ಇದರ ತೂಕ 3025||0 ಕ್ಯಾರಟ್ಟು. ಇದು ಅತ್ಯಂತ ಶುಭ್ರವಾಗಿಯೂ ನೀರಿನ ಬಣ್ಣವಾಗಿಯೂ ಇತ್ತು. ಇದರ ಅಗಲವಾದ ಮುಖವೊಂದ ನ್ನು ನೋಡಿದರೆ ಈ ವಜ್ರವು ಇದಕ್ಕಿಂತಲೂ ದೊಡ್ಡದಾದ ವಜ್ರದ ಭಾಗವಾಗಿರಬಹುದೆಂದು ತೋರುವುದು. ಇದನ್ನು ,,ಕಲ್ಲಿನನ್’’ ವಜ್ರವೆನ್ನುವರು. ಇದನ್ನು ಟ್ರಾನ್ಸ್‍ವಾಲ್ ಸರಕಾರದವರು 1907ನೆ ಇಸವಿಯಲ್ಲಿ ಗಣಿಯ ಕಂಪೆನಿಯವರಿಂದ ಕೊಂಡುಕೊಂಡು ಏಳನೆಯ ಎಡ್ವರ್ಡ್ ಸಾರ್ವಭೌಮರಿಗೆ ಷಷ್ಟಪೂರ್ತಿಯ ಮುಹೂರ್ತದಲ್ಲಿ ಮರ್ಯಾದಾರ್ಥವಾಗಿ ಕೊಟ್ಟರು. ಇದನ್ನು ಆಂಸ್ಟರಡಾಮಿಗೆ 1908 ರಲ್ಲಿ ಕಳುಹಿಸಿ, 9 ದೊಡ್ಡ ವಜ್ರಗಳಾಗಿಯೂ 96 ಚಿಕ್ಕ ಕಮಲಗಳಾಗಿಯೂ ಮಾಡಿಸಿದರು. ಇವುಗಳಲ್ಲಿ ಮೊದಲೆರಡು ವಜ್ರಗಳು 516|0 ಕ್ಯಾರಟ್ಟು, 309 = ಕ್ಯಾರಟ್ಟು ತೂಗುವುವು. ಇ ಎರಡು ಕಮಲಗಳೂ ಪ್ರಪಂಚದಲ್ಲಿ ಈಗಿರುವ ನಯಮಾಡಿದ ವಜ್ರಗಳಲ್ಲಿ ಕೇವಲ ದೊಡ್ಡವುಗಳು. ಮೊದಲೆನೆಯದರ ಬೆಲೆ ಸುಮಾರು 80 ಲಕ್ಷ ರೂಪಾಯಿಗಳು. ,,ಕಲ್ಲಿನನ್’’ ವಜ್ರದಿಂದ ಕತ್ತರಿಸಿಬಂದ ತುಂಡುಗಳೆಲ್ಲವೂ ಅತ್ಯುತ್ತಮವಾದ ನೀರುಳ್ಳವುಗಳು ; ದೋಷವಿಲ್ಲದವುಗಳು. ಇಂಡಿಯ ದೇಸದಲ್ಲಿ ವಜ್ರಗಳು ಸಿಕ್ಕುವ ಪ್ರಾಂತಗಳಲ್ಲಿ, ನದಿಯ ಎಕ್ಕಲು ಮಣ್ಣನ್ನೂ, ಮರಳನ್ನೂ, ಮತ್ತು ವಿಶೇಷ ಆಳವಿಲ್ಲದ ಗುಂಡಿಗಳಿಂದ ತೆಗೆದ ಮಣ್ಣನ್ನೂ, ಜರಡಿಯಾಗಿ, ತೊಳೆದು, ಅದರಲ್ಲಿ ವಜ್ರಗಳನ್ನು ಹುಡುಕುತ್ತಿದ್ದರು. ದಕ್ಷಿಣ ಆಫ್ರಿಕಾ ದೇಶದಲ್ಲಿ 1867ನೆ ಇಸವಿಯಲ್ಲಿ ,ಬಾರ್ಕಲಿ’ ಎಂಬ ವೂರಿನ ಒಬ್ಬ ರೈತನ ಮಗನು ವಾಲ್ ನದೀ ತೀರದಲ್ಲಿ ಆಡುತ್ತಿರುವಾಗ ನಾನಾ ಬಣ್ಣದ ಕಲ್ಲುಗಳ ಮೆಧ್ಯೆ ಹೆಚ್ಚಾಗಿ ಹೊಳೆಯುತ್ತಿರುವ ಒಂದು ಕಲ್ಲನ್ನು ಕಂಡು ಅದನ್ನು ಮನೆಗೆ ತಂದನು. ಆ ಕಲ್ಲಿನ ಯೋಗ್ಯತೆಯು ಯಾರಿಗೂ ತಿಳಿಯದಿದ್ದರಿಂದ ಲಕ್ಷವಿಲ್ಲದೆ ಅದನ್ನು ಎಸೆದರು. ನೆರೆಮನೆಯ ,ರೀಲೀ’ ಎಂಬಾತನಿಗೆ ಈ ಸಂಗತಿಯು ತಿಳಿದು, ಆ ಕಲ್ಲನ್ನು ನೋಡಿ ಭ್ರಮೆಹೊಂದಿ, ತಾನು ಅದನ್ನು ಕೊಂಡುಕೊಳ್ಳುವುದಾಗಿ ಹೇಳಿದನು. ಇದಕ್ಕೆ ಎಲ್ಲರೂ ನಕ್ಕು, ಆ ಕಲ್ಲನ್ನು ಆತನಿಗೆ ಕೊಟ್ಟುಬಿಟ್ಟರು. ರೀಲಿಯ ಸುತ್ತಮುತ್ತಲಿರುವ ಪಟ್ಟಣಗಳಲ್ಲಿನ ವರ್ತಕರಿಗೆ ಆ ಕಲ್ಲನ್ನು ತೋರಿಸಲು, ಅವರು ಅದನ್ನು ನೋಡಿ ಬಹಳ ಚೆನ್ನಾಗಿದೆಯೆಂದು ಹೇಳುತ್ತಾ ಬಂದರೇ ವಿನಾ, ಕೊಂಡುಕೊಳ್ಳಲು ಒಬ್ಬರೂ ಆಶೆ ಪಡಲಿಲ್ಲ. ರೀಲಿಗೆ ಬೇಸರವಾಗಿ ಅದನ್ನು ಬಿಸಾಟುಬಿಡಬೇಕೆಂದಿರುವ ಸಂದರ್ಭದಲ್ಲಿ ಒಬ್ಬ ಸರದಾರನು ಅದನ್ನು ಅಕಸ್ಮತ್ತಾಗಿ ಕಂಡು, ವಜ್ರವಿರಬಹುದೆಂದು ಊಹಿಸಿ, ಅದನ್ನು ಒಬ್ಬ ಖನಿಜಪರೀಕ್ಷಕನ ಬಳಿಗೆ ಕಳುಹಿಸಲು, ಆತನು ಅದು ವಜ್ರವೆಂದು, 21|0 ಕ್ಯಾರಟ್ಟು ತೂಕವಿರುವುದೆಂದೂ, ಸುಮಾರು 8 ಸಾವಿರ ರೂಪಾಯಿ ಬೆಲೆಬಾಳುವುದೆಂದು ತಿಳಿಸಿದನು; ಇಷ್ಟೇ ಅಲ್ಲದೆ, ಅದು ಎಲ್ಲಿ ಸಿಕ್ಕಿತೋ ಅಲ್ಲಿ ವಜ್ರಗಳು ವಿಶೇಷವಾಗಿ ಸಿಕ್ಕಬಹುದೆಂದೂ ಬರೆದನು. ಇದೇ ದಕ್ಚಿಣ ಆಫ್ರಿಕಾದ ವಜ್ರದ ಗಣಿಗಳು ಪ್ರಸಿದ್ಧಿಗೆ ಬರುವುದಕ್ಕೆ ಮೂಲಕಾರಣವಾಯಿತು. ಹೀಗೆ ಒಬ್ಬ ಎಳೇ ಹುಡುಗನ ದೆಶೆಯಿಂದ ಪ್ರಪಂಚದ ವಜ್ರದ ವ್ಯಾಪಾರವೆಲ್ಲವೂ ತಲೆಕೆಳಗಾಗಿ, ದಕ್ಷಿಣ ಆಫ್ರಿಕಾದ ಚರಿತ್ರೆಯೇ ಬದಲಾಯಿಸಿ, ಪ್ರಪಂಚಕ್ಕೆಲ್ಲಾ ವಜ್ರದ ಬೆಲೆಯನ್ನು ಠರಾವು ಮಾಡುವ ಅಧಿಕಾರವು ರ್ಲರ್ಡ ಪಟ್ಟಣದಲ್ಲಿನ ಒಂದು ಸಂಘಕ್ಕೆ ಸೇರುವಂತಾಯಿತು. ಈ ವಜ್ರವು ಸಿಕ್ಕಿದ ಸಮಾಚಾರವು ಕ್ರಮೇಣ ಎಲ್ಲೆಲ್ಲಿಯೂ ಹರಡಿಕೊಂಡು ಆಫ್ರಿಕಾದ ಜನರು ನದಿಗಳಲ್ಲೆಲ್ಲೆಲ್ಲಿಯೂ ವಜ್ರಗಳನ್ನು ಹುಡುಕಸಾಗಿದರು. ಒಳ್ಳೆಯ ವಜ್ರಗಳು ಆಗಾಗ ಸಿಕ್ಕುತ್ತ ಬಂದದ್ದರಿಂದ, ಆಸ್ಟ್ರೇಲಿಯಾ ದೇಶದ ಚಿನ್ನದಗಣಿಯ ಮಾಹಿತಿ ಇರುವ ಕೆಲಸಗಾರರಿಬ್ಬರು ಅಲ್ಲಿಗೆ ಬಂದು, ವಜ್ರತೆಗೆಯುವ ಕೆಲಸವನ್ನು ಕ್ರಮವಾಗಿ ಆರಂಭಿಸಿದರು. ಭೂಮಿಯ ಮೇಲಿನ ಮಣ್ಣನ್ನೂ ಮರಳನ್ನೂ ಬಿಟ್ಟು ಕೆಳಕ್ಕೆ ಹೋಗಸಾಗಿದರು. ಅಲ್ಲಿ ಇನ್ನೂ ಒಳ್ಳೆಯ ವಜ್ರಗಳು ಸಿಕ್ಕುತ್ತ ಬಂದವು. 1871ನೆಯ ಇಸವಿಯ ವರೆಗೆ ಅನೇಕ ಜನರು ನಾನಾ ಕಡೆಗಳಿಂದ ಆ ಪ್ರಾಂತ್ಯಗಳಿಗೆ ಬಂದು ಸೇರಿದರು. ಈ ಸಮಯದಲ್ಲಿಯೇ ವಜ್ರಗಳ ಮಾತೃಸ್ಥಾನವಾದ ,ಕಿಂಬರ್ಲಿ’ ಎಂಬ ಪ್ರದೇಶದ ಗಣಿಗಳು ಆರಂಭವಾದದ್ದು. ಈ ಪ್ರದೇಶವು ಸುಮಾರು 33 ಎಕರೆಗಳಿರುವುದು. ಇದರಲ್ಲಿ ವರುಷ 1ಕ್ಕೆ 20 ಲಕ್ಷ ಕ್ಯಾರಟ್ಟು ವಜ್ರಗಳನ್ನು ತೆಗೆಯುವರು. 1904ನೆ ಇಸವಿಯ ಅಂತ್ಯದವರೆಗೆ ಈ ಗಣಿಗಳಿಂದ ಹತ್ತು ಟನ್ ತೂಕದ ವಜ್ರಗಳು ಹೊರಕ್ಕೆ ಬಂದಿವು. ಇದರ ಬೆಲೆ 90 ಕೋಟಿ ರೂಪಾಯಿಗಳು. ಈ ವಜ್ರಗಳೆಲ್ಲವೂ 5 ಅಡಿ ಉದ್ದ, 5 ಅಡಿ ಅಗಲ, 6 ಅಡಿ ಎತ್ತರದ ಒಂದು ಪೆಟ್ಟಿಗೆಯಲ್ಲಿ ಅಡಕವಾಗುವುವು.