Kushalkl1810349
Joined ೧೯ ಜೂನ್ ೨೦೧೮
ಕುಟುಂಬ :
ನನ್ನ ಹೆಸರು ಕುಶಾಲ್ ಕೆ ಎಲ್. ನಾನು ೨೪/೦೮/೨೦೦೦ರಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಜನಿಸಿದೆ.ನನ್ನ ತಂದೆಯ ಹೆಸರು ಲೋಕೇಶ್ ಕೆ ಎಲ್, ನನ್ನ ತಾಯಿ ಸುಜನ ಕೆ ಎಸ್ ,ನನ್ನ ಅಣ್ಣನ ಹೆಸರು ವಿಶಾಲ್ ಕೆ ಎಲ್.ನನ್ನದು ಒಂದು ಮಧ್ಯಮ ವರ್ಗದ ಕುಟುಂಬ.ನನ್ನ ತಂದೆ ಸರಬರಾಜು ಅಂಗಡಿಯ ಮಾಲೀಕರು, ನನ್ನ ತಾಯಿ ಗೃಹಿಣಿ.ಅಣ್ಣ ಚಾರ್ಟೆಡ್ ಅಕೌಂಟೆಂಟ್.
ಶಿಕ್ಷಣ:
ನಾನು ಎರಡನೇ ತರಗತಿಯವರೆಗು 'ಬ್ಲಾಸಮ್' ಶಾಲೆಯಲ್ಲಿ ವ್ಯಾಸಂಗ ಮಾಡಿದೆ.ಮೂರನೇ ತರಗತಿಯಿಂದ ಹತ್ತನೇ ತರಗತಿವರೆಗು 'ಜೈನ್ ಪಬ್ಲಿಕ್ ಶಾಲೆ' ಜಕ್ಕಸಂದ್ರದಲ್ಲಿ ವ್ಯಾಸಂಗ ಮಾಡಿದೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು 'ಜೈನ್ ವಿದ್ಯಾನೀಕೇತನ್ ಪದವಿ ಪೂರ್ವ' ಕಾಲೇಜಿನಲ್ಲಿ ಮಾಡಿದೆ.ಪ್ರಸ್ತೂತ ಪದವಿ ಶಿಕ್ಷಣವನ್ನು 'ಕ್ರೈಸ್ಟ್ ವಿಶ್ವವಿದ್ಯಾಲಯ'ದಲ್ಲಿ ಮಾಡುತ್ತಿದ್ದೇನೆ.
ಹವ್ಯಾಸ:
ನನ್ನ ಹವ್ಯಾಸಗಳು ನನ್ನ ಸ್ನೇಹಿತರ ಹವ್ಯಾಸಗಳಿಗೆ ಹೋಲಿಸಿದರೆ ತುಂಬಾ ವಿಭಿನ್ನ.ನನಗೇ ಚದುರಂಗ ಆಟವೆಂದರೆ ಬಲು ಇಷ್ಟ. ,ಕಬ್ಬಡ್ಡಿಕ್ಕೋಕ್ಕೊ ಹೀಗೆ ಹಲವು ರೀತಿಯ ದೇಸಿ ಆಟವೆಂದರೆ ತುಂಬಾ ಪ್ರೀತಿ. ನಾನು ನನ್ನ ಬಾಲ್ಯದಲ್ಲಿ ಸಂಗೀತ ತರಗತಿಗಳಿಗೆ ಹೋಗುತ್ತಿದ್ದೆ.ನನ್ನ ತಾಯಿಯು ಒಳ್ಳೆಯ ಗಾಯಕರು.ಅನೇಕ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.ಅವರಿಂದ ಪ್ರೇರಿತನಾದ ನಾನು ಹಲವು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.ನಾನು ಒಬ್ಬ ಕಲಾತ್ಮಕ ವ್ಯಕ್ತಿ, ಏಕೆಂದರೆ ಅನೇಕ ಚಿತ್ರಕಲೆ, ಗಾಯನ, ನೃತ್ಯ ಪ್ರದರ್ಶನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ನನಗೆ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಕರ್ನಾಟಕ ಸಂಗೀತ ಇವೆರೆಡರಲ್ಲಿಯು ತುಂಬಾ ಆಸಕ್ತಿ ಇದೆ.ಪ್ರಸ್ತುತ ಪಾಪ್ ಸಂಗೀತದ ಕಡೆಗು ನನ್ನ ಮನ ವಾಲುತ್ತಿದೆ.ಅನೇಕ ಪಾಪ್ ಗಾಯಕರಿಂದ ನಾನು ಪ್ರೇರಿತನಾಗಿ ಅವರಂತೆ ನಾನು ಶ್ರೇಷ್ಠ ಪಾಪ್ ಗಾಯಕನಾಗಬೇಕೆಂಬ ಹಂಬಲವಿದೆ.
ಪ್ರಶಸ್ತಿ:
ನಾನು ಚಿಕ್ಕವನಿದ್ದಾಗಿನಿಂದಲೂ ಅನೇಕ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೆ.ಅನೇಕ ಪ್ರಶಸ್ತಿಗಳು ಸಂದಿವೆ.೨೦೧೭ ಮಾಗಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಭಾವಗೀತೆ ಸ್ಪರ್ಧೆಗೆ ಮೂರನೇ ಬಹುಮಾನ ದೊರೆಯಿತು.ಕನಕಪುರದಲ್ಲಿ ನಡೆದ ಕನಕೋತ್ಸವದ ಚಿತ್ರಕಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಎರಡನೇ ಬಹುಮಾನ ನನ್ನಾದಾಹಿತು. ಎರಡನೇ ಪಿಯುಸಿ ಪರೀಕ್ಷೆಯ ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರದಲ್ಲಿ ೧೦೦ ಅಂಕಕ್ಕೆ ೧೦೦ ಪಡೆದಿದ್ದಕ್ಕೆ , ಹಾಗೂ ಇಡೀ ಕಾಲೇಜಿಗೆ ಮೂದಲು ಬಂದಿದ್ದಕ್ಕೆ ನನಗೆ ಹಲವು ಪ್ರಶಸ್ತಿಗಳು ಲಭಿಸಿವೆ.