Kruthiraj567
ನನ್ನ ಹೆಸರು ಕೃತಿ ರಾಜ್.ನನ್ನ ತಂದೆಯ ಹೆಸರು ರಾಜಗೋಪಾಲ ಮತ್ತು ನನ್ನ ತಾಯಿಯ ಹೆಸರು ಜಯಶ್ರೀ.ನನಗೆ ಒಬ್ಬಳು ಅಕ್ಕಳಿದ್ದಾಳೆ,ಅವಳ ಹೆಸರು ಕೃಪಾ ರಾಜ್. ನಾನು ಹುಟ್ಟಿದ್ದು ಕುಂದಾಪುರ ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿ.ಕುಂದಾಪುರವು ದಕ್ಷಿಣ ಕನ್ನಡದ ಪ್ರದೇಶದಲ್ಲಿದೆ. ನಾನು ಮತ್ತು ನನ್ನ ಬಂಧುಗಳು ರಜೆಯಲ್ಲಿ ಅಜ್ಜಿ ತಾತನ ಮನೆಗೆ ಹೋಗುತ್ತೇವೆ. ಅಲ್ಲಿ ಸಾಕಷ್ಟು ಆಟವಾಡಿ ಅಜ್ಜಿ ಮಾಡಿದ ತಿಂಡಿಗಳನ್ನು ತಿನ್ನುತ್ತೇವೆ.ಕುಟುಂಬದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಜಗಳ ಮತ್ತು ಮನಸ್ಥಾಪ ಬಂದಾಗ ಅದನ್ನು ಹೇಗೆ ಬಗೆಹರಿಸಬೇಕು ಮತ್ತು ಒಗ್ಗಟ್ಟಿನಿಂದ ಹೇಗಿರಬೇಕು ಎಂದು ನಾನು ಅಜ್ಜಿಮನೆಯಲ್ಲೇ ಕಲಿತಿದ್ದು. ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲೇ ಮಾಡುತ್ತಿದ್ದೇನೆ.ನಾನು ನೆಹರು ಸ್ಮಾರಕ ವಿದ್ಯಾ ಕೇಂದ್ರದಲ್ಲಿ ಒಂದನೇ ತರಗತಿಯಿಂದ ಮೂರನೇ ತರಗತಿವರೆಗೆ ಮತ್ತು ಕಾರ್ಮೆಲ್ ಶಾಲೆಯಲ್ಲಿ ನಾಲ್ಕನೇ ತರಗತಿಯಿಂದ ಹತ್ತನೇ ತರಗತಿವರೆಗೆ ಓದಿದ್ದೇನೆ . ನಾನು ವಿ ವಿ ಪುರಂನ ಜೈನ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ್ದೇನೆ. ನನ್ನ ಹವ್ಯಾಸಗಳು ಚಿತ್ರ ಬಿಡಿಸುವುದು,ಕಾದಂಬರಿಗಳನ್ನು ಓದುವುದು,ಬಾಸ್ಕೆಟ್ ಬಾಲ್ ಆಡುವುದು .ನನ್ನ ಶಾಲೆಯಲ್ಲಿ ಕಿಶೋರ್ ಸರ್ ನನಗೆ ಬಾಸ್ಕೆಟ್ ಬಾಲ್ ಆಡಲು ಉತ್ತೇಜನ ನೀಡಿದ್ದರು . ಅವರು ನನಗೆ ಶಾಲೆ ಮುಗಿಸಿಕೊಂಡು ಬಂದ ನಂತರ ಎರಡು ಗಂಟೆ ತರಬೇತಿ ನೀಡುತಿದ್ದರು. ಅವರು ನೀಡಿದ ತರಬೇತಿ ಮತ್ತು ಉತ್ತೇಜನದಿಂದ ನಾನು ಬಾಸ್ಕೆಟ್ ಬಾಲ್ ಆಟವನ್ನು ಚೆನ್ನಾಗಿ ಕಲಿತೆ. ನಾನು ನನ್ನ ಶಾಲೆ ಮತ್ತು ಕಾಲೇಜನ್ನು ಪ್ರತಿನಿಧಿಸಿ ಅಂತರ ಶಾಲೆ ಮತ್ತು ಅಂತರ ಕಾಲೇಜು ವಿಭಾಗದಲ್ಲಿ ಪ್ರಶಸ್ತಿಗಳನ್ನು ಗಳಿಸಿದೆನು. ಅಂತರ ರಾಜ್ಯ ಮಟ್ಟದಲ್ಲೂ ನಮ್ಮ ರಾಜ್ಯವನ್ನು ಪ್ರತಿನಿಧಿಸಬೇಕೆಂಬುವ ಆಸೆ ಇದೆ.
ನನಗೆ ಸುಧಾ ಮೂರ್ತಿ ಮತ್ತು ಶಿವರಾಂ ಕಾರಂತರು ಬರೆದಿರುವ (ಮೂಕಜ್ಜಿಯ ಕನಸುಗಳು )ಕಾದಂಬರಿಗಳನ್ನು ಓದಲು ಬಹಳ ಇಷ್ಟ. ನನಗೆ ಸಮಯ ದೊರೆತಾಗ ನನ್ನ ಸ್ನೇಹಿತರೊಡನೆ ಬಾಸ್ಕೆಟ್ ಬಾಲ್ ಆಡಲು ಕ್ರೀಡಾಂಗಣಕ್ಕೆ ಹೋಗುತ್ತೇನೆ. ನಾನು ಮತ್ತು ನನ್ನ ಸ್ನೇಹಿತರು ಬೇಸಿಗೆ ರಜೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೋಗಿದ್ದೆವು .ನಾವು ಪ್ರಯಾಣದ ಸಮಯದಲ್ಲಿ ಹಾಡುಗಳ್ಳನ್ನು ಹಾಡುತ್ತಾ ಮತ್ತು ಮೈಸೂರಿನ ಬಗ್ಗೆ ನಮ್ಮ ಹಿರಿಯರು ಹೇಳಿದ್ಧ ವಿಷಯಗಳನ್ನು ಹಂಚಿಕೊಂಡೆವು .ಅಲ್ಲಿನ ಅರಮನೆ ,ಕೆ ಆರ್ ಎಸ್ ಅಣೆಕಟ್ಟು, ಸಂಗ್ರಹಾಲಯ ಮತ್ತು ಮ್ರಿಗಾಲಯಕ್ಕೆ ಭೇಟಿ ನೀಡಿದೆವು .ಚಾಮುಂಡಿ ಬೆಟ್ಟವನ್ನು ಹತ್ತಿ ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿದೆವು. ನಾವು ಮೈಸೂರಿಗೆ ಭೇಟಿನೀಡಿದ್ದರಿಂದ ಅಲ್ಲಿನ ಸಾಂಸ್ಕೃತಿಕ ಕಲೆ ,ವೈಭವ ,ಜನರು ಮತ್ತು ಖಾದ್ಯಗಳ ಬಗ್ಗೆ ತಿಳಿದುಕೊಂಡಂತಾಯಿತು .ನಾವು ಅಲ್ಲಿಂದ ಬೆಂಗಳೂರಿಗೆ ಬರುವಾಗ ಮನೆಯವರಿಗೆ ತಿಂಡಿ ತಿನಿಸು ,ಅಲಂಕಾರಿಕ ವಸ್ತುಗಳು ಖರೀದಿಸಿದೆವು .