Kruthi M
ಕೃತಿ ಎಂ | |
---|---|
ಜನನ | ೧೮-೦೨-೧೯೯೭ ಬೆಂಗಳೂರು |
ರಾಷ್ಟ್ರೀಯತೆ | ಭಾರತಿ |
ವಿದ್ಯಾಭ್ಯಾಸ | ಬಿ.ಕಾಮ್ ಆನರ್ಸ್ |
ಪರಿಚಯ
ಬದಲಾಯಿಸಿನನ್ನ ಹೆಸರು ಕೃತಿ. ನಾನು ಕ್ರೈಸ್ತ್ ಯೂನಿವರ್ಸಿಟಿ ಬಿ.ಕಾಮ್.ಆನರ್ಸ್ ಎರಡನೆ ಸೆಮಿಸ್ಟೆರ್ ವ್ಯಾಸಂಗ ಮಾಡುತಿದ್ದೆನೆ. ನನಗೆ ವಾಣಿಜ್ಯ ಶಾಸ್ತ್ರದಲ್ಲಿ ಆಸಕ್ತಿಯಿದ್ದು ಲೆಕ್ಕಶಾಸ್ತ್ರ ಬಹಳ ಮೆಚ್ಚಿನ ವಿಷಯ. ನನ್ನ ಮಾತೃ ಭಾಷೆ ಕನ್ನಡವಾಗಿದ್ದು, ನಾನು ಹಿಂದಿ ಮತ್ತು ತೆಲುಗು ಸಹಾ ಮಾತನಾಡಬಲ್ಲೆ. ಆಂಗ್ಲ ಭಾಷೆಯನ್ನು ನಾನು ಶಾಲೆಯಲ್ಲಿ ಕಲಿಯಲು ಆರಂಭ ಮಾಡಿದಾಗಿನಿಂದ ನನ್ನ ನೆಚ್ಚಿನ ಭಾಷೆಯಾಗಿದೆ.
ಶಿಕ್ಷಣ
ಬದಲಾಯಿಸಿನಾನು ಕ್ರೈಸ್ತ್ ಯೂನಿವರ್ಸಿಟಿ ಬಿ.ಕಾಮ್.ಆನರ್ಸ್ ಎರಡನೆ ಸೆಮಿಸ್ಟೆರ್ ವ್ಯಾಸಂಗ ಮಾಡುತಿದ್ದೆನೆ.ನಾನು ಪಿ.ಉ.ಸಿ.ಶಿಕ್ಷಣವನ್ನು ಶ್ರಿ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಪಡೆದೆ.ಶಾಲೆ ವಿದ್ಯಾಭ್ಯಾಸವನ್ನು ಆರ್.ಎನ್.ಎಸ್.ವಿದ್ಯಾನಿಕೆತನ್ನಲ್ಲಿ ಮಾದಿದೆ.
ಹವ್ಯಾಸ
ಬದಲಾಯಿಸಿನಾನು ಆಂಗ್ಲ ಭಾಷೆಯ ಕಥೆ, ಕವನ ಮತ್ತು ಕಾದಂಬರಿಯನ್ನು ಬಹಳ ಓದುತ್ತಿರುತ್ತೇನೆ.ನನಗೆ ಸಣ್ಣ ಕಥೆ ಹಾಗು ಕವನಗಳನ್ನು ಬರೆಯುವ ಹವ್ಯಾಸವಿದೆ. ನನಗೆ ಸಂಗೀತ ಕೇಳುವುದು ಮನಸ್ಸಿಗೆ ಆನಂದ, ಸಂತೋಷವನ್ನು ನೀಡುತ್ತದೆ. ಹಾಗೂ ಇದು ನನ್ನ ಅಚ್ಛುಮೆಚ್ಚಿನ ಹವ್ಯಸವಾಗಿದ್ದು ಮನಸ್ಸು ಉಲ್ಲಾಸದಿಂದಿರಲು ನೆರವಾಗುತ್ತದೆ. ನನಗೆ ಸಿನಿಮಾ ನೋಡುವುದು ಕೂಡ ಮತ್ತೊಂದು ಅಚ್ಛುಮೆಚ್ಚಿನ ವಿಷಯ. ಏಕೆಂದರೆ ನಾನು ಸಿನಿಮಾವನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ನೋಡುವುದಲ್ಲದೆ, ಅದರ ತಯಾರಿ,ತಯಾರಿಯ ಹಿಂದಿನ ಪರಿಶ್ರಮ ಮತ್ತು ಅದರ ಮೌಲ್ಯವನ್ನು ಗಮನಿಸುತ್ತೇನೆ. ನನಗೆ ಬ್ಯಾಡ್ಮಿಂಟನ್ ಆಡುವ ಅಭ್ಯಾಸವಿದೆ ಮತ್ತು ಟಿ.ವಿ.ಯಲ್ಲಿ ಟೆನ್ನಿಸ್ ಸ್ಪರ್ದೆಯನ್ನು ನೋಡುವುದಕ್ಕೆ ಇಷ್ಟವಾಗುತ್ತದೆ. ನನಗೆ ಪ್ರಾಣಿ-ಪಕ್ಷಿಗಳೆಂದರೆ ಪ್ರೇಮ. ಅದರಲ್ಲೂ ನಾಯಿಗಳೆಂದರೆ ವಿಶೇಷವಾದ ಆಸಕ್ತಿ,ಪ್ರೀತಿ ಹಾಗು ಕಾಳಜಿ. ಬೀದಿ ನಾಯಿಗಳ ಸಮಸ್ಯೆ ಮತ್ತು ಆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಎನ್.ಜಿ.ಒ.ಗಾಗಿ ವಾರ್ಷಿಕ ರಜೆಯಲ್ಲಿ ಸಮಯವನ್ನು ಕೊಡುತ್ತೇನೆ ಮತ್ತು ನಾನು ವಾಸಿಸುತ್ತಿರುವ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು ನಮ್ಮ ಬಡಾವಣೆಯ ಸಂಘದ ಮೂಲಕ ಪ್ರಯತ್ನಿಸುತ್ತಿರುತ್ತೆನೆ. ಬೆಂಗಳೂರು ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿಯೂ ಸಹಾ ಒಂದು ಪ್ರಮುಖ ಸಮಸ್ಯೆಯಾಗಿದ್ದು ಸಾರ್ವಜನಿಕರ ಸಹಾಯದಿಂದ ಮಹಾನಗರ ಪಾಲಿಕೆಯು ಸಮಸ್ಯೆಯನ್ನು ಕಡಿಮೆ ಮಾಡಬಹುದು. ನನ್ನ ಅಭಿಪ್ರಾಯದಲ್ಲಿ ಪ್ರತಿಯೊಬ್ಬ ನಾಗರೀಕರು ಪ್ರಾಣಿ,ಪಕ್ಷಿ ಹಾಗು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಮತ್ತು ಅದರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನನಗೆ ಹಿಂದಿನ ಸೆಮಿಸ್ಟೆರ್ ನಲ್ಲಿ ನೀಡಲಾಗಿದ್ದ ಸಿ.ಐ.ಎ.ನಲ್ಲಿ ಬೆರಳಚ್ಚು ಮಾಡುವ ಕಾರ್ಯ ಬಹಳ ಇಷ್ಟವಾಯಿತು ಏಕೆಂದರೆ ಹಳೆಯ ಕನ್ನಡ ಪುಸ್ತಕವನ್ನು ಗಣಕಿಕೃತಗೊಳಿಸಲು ಹೇಳಲಾಗಿತ್ತು, ಅಲ್ಲದೆ ಈ ಯೋಜನೆ ನನಗೆ ತುಂಬ ವಿಶಿಷ್ಟವಾಗಿಯೂ ಸಹಾ ಇತ್ತು.ಈ ಕೆಲಸದಲ್ಲಿ ನನಗೆ ಬಹಳ ಆಸಕ್ತಿ ಇರುವುದರಿಂದ ಸಾಧ್ಯವಾದರೆ ಈ ಯೋಜನೆಯಲ್ಲಿ ಭಾಗವಹಿಸಲು ಮುಂದೆ ಅವಕಾಶವನ್ನು ನೀಡಿದರೆ ನನಗೆ ತುಂಬ ಆನಂದವಾಗುತ್ತದೆ. ನೀಡುವಿರಿ ಎಂದು ಆಶಿಸುತ್ತೇನೆ.