ಸದಸ್ಯ:Khatheejath Rasheeda/ನನ್ನ ಪ್ರಯೋಗಪುಟ


ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಜ್ಞಾನ ಲೇಖನ ಇದೆ.


---ವಿಜ್ಞಾನ--

ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರೀಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.ಶಾಸ್ತ್ರೀಯ ಪ್ರಾಚೀನತೆಯಿಂದಲೂ, ಜ್ಞಾನದ ಒಂದು ಪ್ರಕಾರವಾಗಿ ವಿಜ್ಞಾನವನ್ನು ತತ್ವಶಾಸ್ತ್ರಕ್ಕೆ ನಿಕಟವಾಗಿ ಸಂಬಂಧಿಸಲಾಗಿದೆ. ಆರಂಭಿಕ ಆಧುನಿಕ ಅವಧಿಯಲ್ಲಿ "ವಿಜ್ಞಾನ" ಮತ್ತು "ಪ್ರಕೃತಿಯ ತತ್ವಶಾಸ್ತ್ರ" ಪದಗಳನ್ನು ಕೆಲವೊಮ್ಮೆ ಅದಲುಬದಲಾಗಿ ಬಳಸಲಾಗಿತ್ತು.೧೭ನೇ ಶತಮಾನದಿಂದ, ಪ್ರಾಕೃತಿಕ ತತ್ವಶಾಸ್ತ್ರವನ್ನು (ಇಂದು ಇದನ್ನು ಪ್ರಕೃತಿ ವಿಜ್ಞಾನ"ವೆಂದು ಕರೆಯಲಾಗುತ್ತದೆ) ತತ್ವಶಾಸ್ತ್ರದ ಒಂದು ಪ್ರತ್ಯೇಕ ಶಾಖೆಯಾಗಿ ಪರಿಗಣಿಸಲಾಗಿತ್ತು. ಆಧುನಿಕ ಬಳಕೆಯಲ್ಲಿ, "ವಿಜ್ಞಾನ" ಪದವು ಹೆಚ್ಚಾಗಿ ಜ್ಞಾನವನ್ನು ಅನುಸರಿಸುವ ಒಂದು ರೀತಿಯನ್ನು ಸೂಚಿಸುತ್ತದೆ, ಕೇವಲ ಜ್ಞಾನವನ್ನೇ ಅಲ್ಲ. ಅದು ಹಲವುವೇಳೆ ವಿಷಯಕ ಬ್ರಹ್ಮಾಂಡದ ವಿದ್ಯಮಾನಗಳನ್ನು ವಿವರಿಸಲು ಯತ್ನಿಸುವ ಅಧ್ಯಯನ ಶಾಖೆಗಳಿಗೆ ಸೀಮಿತವಾಗಿದೆ.೧೭ನೇ ಮತ್ತು ೧೮ನೇ ಶತಮಾನಗಳಲ್ಲಿ ವಿಜ್ಞಾನಿಗಳು ಹೆಚ್ಚಾಗಿ ಜ್ಞಾನವನ್ನು ನ್ಯೂಟನ್‍ನ ಚಲನೆಯ ನಿಯಮಗಳಂಥ ನಿಸರ್ಗದ ನಿಯಮಗಳ ರೂಪದಲ್ಲಿ ಸೂತ್ರೀಕರಿಸಲು ಯತ್ನಿಸಿದರು. ಮತ್ತು ೧೯ನೇ ಶತಮಾನದ ಅವಧಿಯಲ್ಲಿ, "ವಿಜ್ಞಾನ" ಶಬ್ದವು ಹೆಚ್ಚೆಚ್ಚು ವೈಜ್ಞಾನಿಕ ವಿಧಾನದೊಂದಿಗೇನೇ ಒಡಗೂಡಿತು, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಒಳಗೊಂಡಂತೆ, ನೈಸರ್ಗಿಕ ಪ್ರಪಂಚವನ್ನು ಅಧ್ಯಯನಿಸುವ ಒಂದು ಶಿಸ್ತುಬದ್ಧ ರೀತಿಯಾಗಿ. ೧೯ನೇ ಶತಮಾನದಲ್ಲಿಯೇ ಸಹ ನಿಸರ್ಗವಾದಿ-ದೇವತಾಶಾಸ್ತ್ರಜ್ಞ ವಿಲಿಯಮ್ ಹ್ಯೂವಲ್‍ರಿಂದ, ನಿಸರ್ಗದ ಮೇಲಿನ ಜ್ಞಾನವನ್ನು ಅರಸುವವರನ್ನು ಇತರ ಬಗೆಗಳ ಜ್ಞಾನವನ್ನು ಅರಸುವವರಿಂದ ಪ್ರತ್ಯೇಕಿಸಲು, ವಿಜ್ಞಾನಿ ಪದ ಸೃಷ್ಟಿಯಾಯಿತು. ಆದರೂ, "ವಿಜ್ಞಾನ" ಶಬ್ದವು ವಿಶಾಲ ಅರ್ಥದಲ್ಲಿ, ಗ್ರಂಥಾಲಯ ವಿಜ್ಞಾನ ಅಥವಾ ಗಣಕ ವಿಜ್ಞಾನಗಳಂತಹ ಆಧುನಿಕ ಪದಗಳಲ್ಲಿರುವಂತೆ, ಒಂದು ವಿಷಯದ ಬಗ್ಗೆ ವಿಶ್ವಾಸಾರ್ಹ, ಕಲಿಸಬಲ್ಲ ಜ್ಞಾನವನ್ನು ಸೂಚಿಸಲು ಬಳಕೆಯಾಗುವುದು ಮುಂದುವರೆದಿದೆ. ಇದು "ಸಮಾಜ ವಿಜ್ಞಾನ" ಅಥವಾ "ರಾಜಕೀಯ ವಿಜ್ಞಾನ"ಗಳಂತಹ ಕೆಲವು ಶೈಕ್ಷಣಿಕ ಅಧ್ಯಯನ ಕ್ಷೇತ್ರಗಳ ಹೆಸರುಗಳಲ್ಲಿ ಸಹ ಪ್ರತಿಬಿಂಬಿತವಾಗಿದೆ. ಸ್ವಲ್ಪ ವೈಜ್ಞಾನಿಕ ಸಂಶೋಧನೆಯು ವೈಜ್ಞಾನಿಕ ಸಮಸ್ಯೆಗಳಲ್ಲಿನ ಅನ್ವಯಿಕ ಸಂಶೋಧನೆಯಾದರೂ, ನಮ್ಮ ತಿಳುವಳಿಕೆಯ ದೊಡ್ಡ ಪ್ರಮಾಣವು ಮೂಲಭೂತ ಸಂಶೋಧನೆಯ ಕುತೂಹಲ ಚಾಲಿತ ವ್ಯವಹಾರದಿಂದ ಬರುತ್ತದೆ. ಇದು ಯೋಜಿತವಾಗಿರದ ಅಥವಾ ಕೆಲವೊಮ್ಮೆ ಭಾವಿಸಬಹುದಾಗಿರದ ತಾಂತ್ರಿಕ ಪ್ರಗತಿಗೆ ಆಯ್ಕೆಗಳಿಗೆ ಕಾರಣವಾಗುತ್ತದೆ. ಈ ವಾದವನ್ನು ಮೈಕಲ್ ಫ್ಯಾರಡೆಯ "ಮೂಲಭೂತ ಸಂಶೋಧನೆಯ ಉಪಯೋಗವೇನು?" ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಅವರು "ಸರ್, ಆಗತಾನೆ ಹುಟ್ಟಿದ ಮಗುವಿನ ಉಪಯೋಗವೇನು?" ಎಂದು ಪ್ರತಿಕ್ರಿಯಿಸುತ್ತಾ ಮಾಡಿದರು.ಉದಾಹರಣೆಗೆ, ಮಾನವ ಕಣ್ಣಿನ ರಾಡ್ ಕೋಶಗಳ ಮೇಲೆ ಕೆಂಪು ಬೆಳಕಿನ ಪರಿಣಾಮಗಳಲ್ಲಿನ ಸಂಶೋಧನೆಯು ಯಾವುದೇ ಕಾರ್ಯೋಪಯೋಗಿ ಉದ್ದೇಶ ಹೊಂದಿದಂತೆ ಕಾಣಲಿಲ್ಲ; ಅಂತಿಮವಾಗಿ, ನಮ್ಮ ರಾತ್ರಿ ದೃಷ್ಟಿಯು ಕೆಂಪು ಬೆಳಕಿನಿಂದ ತೊಂದರೆಗೀಡಾಗುವುದಿಲ್ಲ ಎಂಬ ಪರಿಶೋಧನೆಯು ಹುಡುಕಾಟ ಮತ್ತು ರಕ್ಷಣಾ ತಂಡಗಳು ಜೆಟ್‍ಗಳು ಮತ್ತು ಹೆಲಿಕಾಪ್ಟರ್‌ಗಳ ಚಾಲಕ ಕೊಣೆಗಳಲ್ಲಿ ಕೆಂಪು ಬೆಳಕನ್ನು ಅಳವಡಿಸಿಕೊಳ್ಳಲು ಕಾರಣವಾಯಿತು.ಸಂಕ್ಷಿಪ್ತವಾಗಿ, ಮೂಲಭೂತ ಸಂಶೋಧನೆಯು ಜ್ಞಾನಕ್ಕಾಗಿ ಹುಡುಕಾಟ.