ಸಣ್ಣ ಸಿಡುಬು

ಬದಲಾಯಿಸಿ
 
ಸಣ್ಣ ಸಿಡುಬಿನಿಂದ ನರಳುತ್ತಿರುವ ಮಗು

ಸಣ್ಣ ಸಿಡುಬು ಒಂದು ಸಾಂಕ್ರಾಮಿಕ ರೋಗ.ಈ ರೋಗವು ಎರಡು ಬಗ್ಗೆಯ ವೈರಸ್‌ನಿಂದ ಉಂಟಾಗುತ್ತದೆ.ಒಂದು ವೇರಿಯನ್ಟ್ ಇನ್ನೊಂದು ವೇರಿಯೋಲ.ಲ್ಯಾಟಿನ್ ಭಾಷೆಯಲ್ಲಿ ಈ ರೋಗವನ್ನು ವೇರಿಯೋಲ ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಈ ರೋಗವನ್ನು ಪಾಕ್ಸ್ ಅಥವಾ ರೆಡ್ ಪ್ಲೇಗ್ ಎಂದು ಕರೆಯುತ್ತಾರೆ[]. ೧೫ನೇ ಶತಮಾನದಲ್ಲಿ ಮೊಟ್ಟ ಮೊದಲು ಬ್ರಿಟನ್‍ನವರು ಈ ರೋಗವನ್ನು ಸಣ್ಣ ಸಿಡುಬು ಎಂದು ಬಳಸುತ್ತಿದ್ದರು. ಸಣ್ಣ ಸಿಡುಬಿನ ವೈರಸ್ ಚರ್ಮದ ರಕ್ತ ಕಣಗಳು, ಬಾಯಿ ಮತ್ತು ಗಂಟಲಿನಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತದೆ ಆನಂತರ ದೇಹವೆಲ್ಲಾ ಹರಡಿಕೊಳ್ಳುತ್ತದೆ. ಸುಮಾರು ೧೦,೦೦೦ ಕ್ರಿ.ಪೂ.ದಿಂದಲ್ಲೂ ಜನರು ಸಣ್ಣ ಸಿಡುಬಿನಿಂದ ಬಳಲುತ್ತಿದ್ದರು.೧೮ನೇ ಶತಮಾನದಲ್ಲಿ ಈರೋಪಿನಲ್ಲಿ ವರ್ಷಕ್ಕೆ ಸುಮಾರು ೪೦,೦೦೦ ಜನರು ಈ ರೋಗದಿಂದ ಸಾವನಪ್ಪಿದಾರೆ. ಈ ರೋಗದಿಂದ ಜನರಲ್ಲಿ ಕುರುಡುತನ ಹೆಚ್ಚಿತು,ಸುಮಾರು ೨೦-೩೦ ಶೇಖಡದಷ್ಟು ಮಕ್ಕಳು ಸಾವನಪ್ಪಿದರು. ಆನಂತರ ೧೯೬೭ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪರಿಶೀಲಿಸಿದಂತೆ ಸುಮಾರು ೧೫ ಮಿಲಿಯನ್ ಜನರು ಈ ರೋಗದಿಂದ ಬಳಲುತಿದ್ದರು. ಮತ್ತು ವಾರ್ಷಿಕ ೨ ಮಿಲಿಯನ್ ಜನರು ಸಾಯುತ್ತಿದ್ದರು.ಫ್ರೆನ್ಛ್-ಭಾರತ ಯುದ್ಧದ ಸಮಯದಲ್ಲಿ ಸಣ್ಣಸಿಡುಬಿನ ರೋಗದ ವೈರಸ್‌ನನ್ನು ಯುದ್ಧದ ವಸ್ತುವನಾಗಿ ಬಳಸುತ್ತಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆಯನ್ನು ಕಂಡು ಹಿಡಿದು ಅದನ್ನು ಎಲ್ಲ ಕಡೆ ಪರಿಚಯಿಸಿದ ಮೇಲೆ ೧೯೭೯ರಲ್ಲಿ ಸಣ್ಣ ಸಿಡುಬನ್ನು ವಿಶ್ವದಾದ್ಯಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿತ್ತು.ಸಣ್ಣ ಸಿಡುಬು ಕೊನೆಯದಾಗಿ ೧೯೭೭ರಲ್ಲಿ ಸೊಮಾಲಿಯದಲ್ಲಿ ಕಂಡು ಬಂದಿತ್ತು.[]

ವಿಂಗಡಣೆ/ವರ್ಗೀಕರಣ

ಬದಲಾಯಿಸಿ

ಸಣ್ಣ ಸಿಡುಬನ್ನು ಎರಡು ತರಹವಾಗಿ ಗುರುತ್ತಿಸಲಾಗಿದೆ. ಮೊದಲನೆಯದು ವೇರಿಯೋಲ ಮೇಜರ್,ಇನ್ನೊಂದು ವೇರಿಯೋಲ ಮೈನರ್.

ವೇರಿಯೋಲ ಮೇಜರ್

ಬದಲಾಯಿಸಿ

ಇದು ಒಂದು ಅತಿ ತೀವ್ರವಾದ ಮತ್ತು ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ. ಈ ರೋಗದಿಂದ ವಂಚಿತರಾದ ರೋಗಿಗಳ ದೇಹವೆಲ್ಲ ದದ್ದುಗಳಿಂದ ತುಂಬಿರುತ್ತದೆ. ಮತ್ತು ಈ ರೋಗಿಗಳು ತೀವ್ರವಾದ ಜ್ವರದಿಂದ ನರಳುತ್ತಿರುತ್ತಾರೆ. ಈ ರೋಗವು ನಾಲ್ಕು ರೀತಿಯಲ್ಲಿ ಹರಡುತ್ತದೆ.ಅವು ಸಾಮಾನ್ಯ ಸಿಡುಬು, ಬದಲಾದ ಸಿಡುಬು, ವೈರತ್ವದ ಸಿಡುಬು, ರಕ್ತಸ್ರಾವದ ಸಿಡುಬು.

ಸಾಮಾನ್ಯ ಸಿಡುಬು

ಬದಲಾಯಿಸಿ

೯೦ ಶೇಖಡದಷ್ಟು ಕಾಣಿಸಿಕೊಳ್ಳುವ ಸಿಡುಬು ಸಾಮಾನ್ಯ ಸಿಡುಬಾಗಿರುತ್ತದೆ. ಇದರಲ್ಲಿ ಗುಳ್ಳೆಗಳು ಚರ್ಮದ ಮೇಲೆ ಅಂಟಿಕೊಂಡತೆ ಕಾಣಿಸಿಕೊಳ್ಳುತ್ತದೆ.

ಬದಲಾದ ಸಿಡುಬು

ಬದಲಾಯಿಸಿ

ಬದಲಾದ ಸಿಡುಬು ಮುಂದೆಯೆ ಲಸಿಕೆಯನ್ನು ತೆಗೆದುಕೊಂಡಿರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲು ಬಂದು ಅಧು ಸಂರ್ಪೂಣವಾಗಿ ವಾಸಿಯಾಗದ ಸಮಯದಲ್ಲಿ ಕಂಡು ಬರುತ್ತದೆ.ಇದು ಸಾಮಾನ್ಯ ಸಿಡುಬಿಗಿಂತ ಕಡಿಮೆ ಅಪಾಯಕಾರಿಯದ್ದದು.

ವೈರತ್ವದ ಸಿಡುಬು

ಬದಲಾಯಿಸಿ

ವೈರತ್ವದ ಸಿಡುಬಿನ ರೋಗದಿಂದ ಉಂಟಗುವ ದದ್ದುಗಳು ಕೀವುನಿಂದಲ್ಲೇ ತುಂಬಿರುತ್ತದೆ.ಅವು ಎಷ್ತೇ ದಿನಗಳಾದರು ಒಣಗುವುದಿಲ್ಲ. ಈ ರೋಗ ಏಕೆ ಬರುತ್ತದೆ ಎಂದು ಇನು ಕಂಡು ಹಿಡಿದಿಲ್ಲ.

ರಕ್ತಸ್ರಾವದ ಸಿಡುಬು

ಬದಲಾಯಿಸಿ

ರಕ್ತಸ್ರಾವದ ಸಿಡುಬಿನ ರೋಗದಲ್ಲಿ ರಕ್ತ ಕಣಗಳು ಮುಳ್ಳೆಯಿಂದ ಚರ್ಮದ ಪದರಕ್ಕೆ ರಕ್ತಸ್ರಾವವಾಗುತ್ತದೆ ಮತ್ತು ಇದುಜ಼್ ತುಂಬ ಅಪಯಕಾರಿ ರೋಗ

ವೇರಿಯೋಲ ಮೈನರ್

ಬದಲಾಯಿಸಿ

ವೇರಿಯೋಲ ಮೈನರ್ ವೇರಿಯೋಲ ಮೇಜರ್‌ಗಿಂತ ಕಡಿಮೆ ಪ್ರಮಾಣದಲ್ಲಿ ತೀವ್ರವಾದ ರೋಗ ಮತ್ತು ಅಪರೂಪದಲ್ಲಿ ಕಾಣಿಸಿಕೊಳ್ಳುವ ರೋಗ.[]

ರೋಗದ ಲಕ್ಷಣಗಳು

ಬದಲಾಯಿಸಿ

ಈ ರೋಗವು ದೇಹವೆಲ್ಲ ಹರಡಲು ಸುಮಾರು ೧೨ ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ರೋಗವು ಗಾಳಿಯಿಂದ ಹೆಚ್ಚಾಗಿ ಹಬ್ಬುತ್ತದೆ. ರೋಗದ ವೈರಸ್ ಉಸಿರಾಟದ ಮೂಲಕ ಮನುಷ್ಯನ ದೇಹವನ್ನು ತಲುಪುತ್ತದೆ. ಅದು ಮೊದಲಿಗೆ ಮನುಷ್ಯನ ಬಾಯಿ ಮತ್ತು ಗಂಟಲು ಅಥವಾ ಶ್ವಾಸ ನಾಳಗಳಲ್ಲಿ ತಲುಪಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ದೇಹವೆಲ್ಲ ಹಬ್ಬುತ್ತದೆ. ಆರಂಭಿಕ ಬೆಳವಣಿಗೆಯ ಹಂತದಲ್ಲಿ ವೈರಸ್ ಒಂದು ಜೀವ ಕೋಶದಿಂದ ಇನ್ನೊಂದು ಜೀವ ಕೋಶಗಳಿಗೆ ಚಲಿಸಿದಂತೆ ತೋರುತ್ತದೆ. ಆದರೆ ೧೨ ನೇ ದಿನಕ್ಕೆ ಸುಮಾರು ಆನೇಕ ಸೋಂಕಿತ ಜೀವ ಕೋಶಗಳಲ್ಲಿ ಲೈಸಿಸ್ ಸಂಭವಿಸುತ್ತದೆ. ಇದರಿಂದ ರಕ್ತ ಪ್ರವಾಹದಲ್ಲಿ ವೈರಸ್ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆನಂತರ ಆ ವೈರಸ್ ಮೂಳೆ ಮಜ್ಜೆ ಮತ್ತು ದುಗ್ಧರಸ ಗ್ರಂಥಿಗಳಲ್ಲಿ ತಮ್ಮ ಬೆಳವಣಿಗೆಯನ್ನು ಆರಂಭಿಸಿ ತನ್ನ ಸಂಖ್ಯೆಯನ್ನು ಹೆಚ್ಚಿಸಿ ಕೊಂಡು ದೇಹವೆಲ್ಲಾ ಹರಡಿಕೊಳ್ಳುತ್ತದೆ. ರೋಗದ ಮೊದ ಮೊದಲ ಲಕ್ಷಣಗಳು: ಇನ್ಫ್ಲುಯೆನ್ಸ, ನೆಗಡಿ, ಕನಿಷ್ಠ 38.3 ° ಸಿ (101 ° F) ಅಷ್ಟು ಜ್ವರ, ಸ್ನಾಯು ನೋವು, ದೇಹಾಲಸ್ಯ, ತಲೆ ನೋವು ಮತ್ತು ಶರಣಾಗತಿ ಜ್ವರದಿಂದ ನರಳುತ್ತಿರುತ್ತಾರೆ. ಸಾಮಾನ್ಯವಾಗಿ ಜೀರ್ಣಾಂಗವು ತೊಡಗಿರುವುದರಿಂದ ವಾಕಳಿಕೆ, ವಾಂತಿ ಮತ್ತು ಬೆನ್ನು ನೋವು ಸಂಭವಿಸುತ್ತದೆ.[][]

ರೋಗದ ಬೆಳವಣಿಗೆ

ಬದಲಾಯಿಸಿ

ಸಣ್ಣ ಸಿಡುಬಿನ ವೈರಸ್ ಸಾಮಾನ್ಯವಾಗಿ ಚರ್ಮದ ಜೀವ ಕೋಶಗಳನ್ನು ಆಕ್ರಮಿಸುತ್ತದೆ. ಆಕ್ರಮಿಸಿದ ಸ್ವಲ್ಪ ಸಮಯದ ನಂತರ ಚರ್ಮದ ಮೇಲೆ ಗುಳ್ಳೆ ಆಗಲು ಶುರುವಾಗುತ್ತದೆ. ಮ್ಯುಕಸ್ ಮೆಮರೆನ್ ಮೇಲೆ ಲೈಸಿಸ್ ಕಾಣಿಸಿಕೊಂಡಾಗ ಗುಳ್ಳೆಗಳಲ್ಲಿ ಕೀವು ತುಂಬಿಕೊಂಡು ದದ್ದುಗಳಂತೆ ೨೪ ರಿಂದ ೪೮ ಗಂಟೆಗಳ ಒಳಗೆ ಪರಿವರ್ತನೆಗೊಳ್ಳುತ್ತದೆ. ಸಾಮಾನ್ಯವಾಗಿ ಗುಳ್ಳೆಗಳು ಮೊದಲಿಗೆ ನೆತ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ ಆನಂತರ ಅದು ಮುಖ, ಕೈ-ಕಾಲುಗಳು, ಹೊಟ್ಟೆ ಮತ್ತು ಮುಂತಾದ ದೇಹದ ಭಾಗಗಳಲ್ಲಿ ೨೪ ರಿಂದ ೩೬ ಗಂಟೆಗಳಲ್ಲಿ ಹರಡಿಕೊಳ್ಳುತ್ತದೆ. ಆನಂತರ ಯಾವುದೇ ಹೊಸ ಗುಳ್ಳೆ ಅಥವಾ ದದ್ದುಗಳು ದೇಹದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಗುಳ್ಳೆಗಳು ಸಂಪೂರ್ಣವಾಗಿ ಉದುರುವವರೆಗೂ ರೋಗ ಹರಡುವ ಸಾಧ್ಯತೆಗಳು ಇರುತ್ತದೆ.

ರೋಗಕಾರಕ

ಬದಲಾಯಿಸಿ
 
ಸಣ್ಣ ಸಿಡುಬನ್ನು ಉಂಟು ಮಾಡುವ ವೈರಸ್-ವೇರಿಯೋಲ ವೈರಸ್

ಸಣ್ಣ ಸಿಡುಬು ವೇರಿಯೋಲ ವೈರಸ್ ಎಂಬ ವೈರಸ್ ನಿಂದ ಹರಡುತ್ತದೆ. ಇದರ ಕುಲದ ಹೆಸರು ಆರ್ಥೋಫಾಕ್ಸ್‌ವೈರಸ್ ಇದು ಪಾಕ್ಸ್ ವಿರಿಡೆ ಎಂಬ ಫ್ಯಾಮಿಲಿಗೆ ಸೇರುತ್ತದೆ. ಸಬ್-ಫ್ಯಾಮಿಲಿ ಖೊರ್ಡೊಪೊಕ್ಸಿನೆ. ವೇರಿಯೋಲ ವೈರಸ್ ದೊಡ್ಡ ಇಟ್ಟಿಗೆಯ ಆಕಾರದಲ್ಲಿದೆ. ಇದು ೩೦೨ ರಿಂದ ೩೫೦ ನ್ಯಾನೊ ಮೀಟರ್/೨೪೪ ರಿಂದ ೨೭೦ ನ್ಯಾನೊ ಮೀಟರ್ ಉದ್ದವಾಗಿದೆ. ಇದರಲ್ಲಿ ಎರಡು ತಂತಿಯ ಡಿ.ಎನ್.ಎ ಜಿನೊಂಮ್ ಒಂದು ರೇಖೆ ಎಳೆದಂತೆ ಇದೆ. ಇದು ೧೮೦ ಕಿಲೋ ಬೇಸ್ ಪೇರ್ಸ್ (ಕೆ.ಪಿ.ಪಿ) ಅಷ್ಟು ತೂಕವಿದೆ.[][]

ರೋಗ ಹರಡುವಿಕೆ

ಬದಲಾಯಿಸಿ

ಸಾಮಾನ್ಯವಾಗಿ ಈ ರೋಗವು ಗಾಳಿಯಿಂದ ಹರಡುತ್ತದೆ. ಈ ರೋಗಿಗಳು ಉಸಿರಾಡಿದಗ ಉಸಿರಾಟದ ಮುಖಾಂತರ ವೈರಸ್‌ ಗಾಳಿಯನ್ನು ಸೇರುತ್ತದೆ. ಆ ಗಾಳಿಯನ್ನು ಆರೋಗ್ಯಕರ ವ್ಯಕ್ತಿಯು ಉಸಿರಾಡಿದಾಗ ಆ ವೈರಸ್ ಉಸಿರಾಟದ ಮೂಲಕ ಆರೋಗ್ಯಕರ ವ್ಯಕ್ತಿಯ ಶರೀರವನ್ನು ಹೊಕ್ಕಿ ಅವರಿಗೆ ರೋಗವನ್ನು ತರುತ್ತದೆ. ಈ ರೋಗವು ಎಂಜಲು, ಗೊಣ್ಣೆ, ಶರೀರದಿಂದ ಹೊರಹೊಮ್ಮುವ ದ್ರವಗಳಿಂದ ಮತ್ತು ರೋಗಿ ಬಳಸಿದ ವಸ್ತುಗಳಿಂದ ಹಾಗೂ ಮುಂತಾದವುಗಳಿಂದ ಹರಡುವ ಸಾಧ್ಯತೆಗಳಿವೆ. ಈ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಬಳಿಯಲ್ಲಿ ಅಂದರೆ ಆರು ಅಡಿಗಳ ಹತ್ತಿರದಲ್ಲಿ ನಿಂತು ಮಾತನಾಡಿದರು ಸಹ ಈ ರೋಗ ಹರಡುತ್ತದೆ. ಇದಲ್ಲದೆ ರೋಗಿಗಳ ರಕ್ತ ಕಣಗಳು ಅಥವಾ ಎಂಜಲು ತಾಕುವುದರಿಂದಲು ಕೂಡ ಈ ರೋಗ ಹರಡುವ ಸಾಧ್ಯತೆ ಇದೆ. ವೈರಸ್ ಶರೀರಕ್ಕೆ ಸೇರುವಾಗ ಅದು ಸಾಂಕ್ರಾಮಿಕವಾಗಿ ಇರುವುದಿಲ್ಲ ಆದರೆ ದದ್ದುಗಳು ಬರುವುದು ಶುರುವಾದಂತೆ ಅದು ಸಾಂಕ್ರಾಮಿಕವಾಗುತ್ತದೆ. ಈ ಸಣ್ಣ ಸಿಡುಬು ಪೂರ್ತಿಯಾಗಿ ವಾಸಿಯಾಗುವವರೆಗೂ ಬೇರೆಯವರಿಗೆ ಹರಡುವ ಸಾಧ್ಯತೆಗಳು ಇವೆ. ಅದರಲ್ಲೂ ದದ್ದುಗಳ ಮೇಲೇ ಲೈಸಿಸ್ ಕಾಣಿಸಿಕೊಳ್ಳುವ ಸಮಯದಲ್ಲಿ ಹರಡುವ ಸಾಧ್ಯತೆಗಳು ತುಂಬ ಹೆಚ್ಚಾಗಿ ಇರುತ್ತದೆ. ಸಣ್ಣ ಸಿಡುಬು ಒಂದು ತುಂಬ ಸುಲಭವಾಗಿ ಹರಡುವ ರೋಗ. ಆದರೆ ದೇಹದಲ್ಲಿ ಇದರ ವೈರಸ್ ನಿಧಾನವಾಗಿ ಹರಡಲು ಆರಂಭಿಸುತ್ತದೆ.ಇದು ಬೇರೆ ವೈರಲ್ ರೋಗಗಳಂತೆ ವಿಶಾಲವಾಗಿ ಹರಡುವುದಿಲ್ಲ. ಈ ರೋಗ ಕಡಿಮೆ ಅವಧಿಯಲ್ಲಿ ಹೆತೇಚ್ಚಾವಾಗಿ ಹರಡಿಕೊಳ್ಳುತ್ತದೆ. ಈ ರೋಗವು ತುಂಬ ಹತ್ತಿರದ ಸಂಪರ್ಕದಲ್ಲಿ ಇದ್ದರೆ ಮಾತ್ರ ಹರಡಲು ಸಾಧ್ಯ. ಈ ರೋಗವು ಚಳಿಗಾಲ ಮತ್ತು ವಸಂತಕಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಯಾವುದೇ ಕ್ರೀಮಿ-ಕೀಟಗಳಿಂದ ಅಥವಾ ಪ್ರಾಣಿಗಳಿಂದ ಹರಡುವುದಿಲ್ಲ.ಈ ರೋಗ ಬಂದಿರುವ ಸೂಚನೆಯನ್ನು ಪ್ರಯೋಗ ಶಾಲೆಯಲ್ಲಿ ಮುಂತಾದ ಪರೀಕ್ಷೆಗಳಿಂದ ಕಂಡು ಬರುತ್ತದೆ. ಈ ರೋಗವನ್ನು ಲಸಿಕೆಯ ಮೂಲಕ ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.[][]

ತಡೆಗಟುವಿಕೆ

ಬದಲಾಯಿಸಿ

ಸಣ್ಣ ಸಿಡುಬು ರೋಗವನ್ನು ಇನಾಕ್ಯುಲೇಷನ್ ಮುಖಾಂತರ ತಡೆಗಟ್ಟಬಹುದು. ಇನಾಕ್ಯುಲೇಷನ್‌ನನ್ನು ಮೊದಲಿಗೆ ಭಾರತ ಮತ್ತು ಚೈನ ದೇಶದಲ್ಲಿ ಬಳಸುತ್ತಿದ್ದರು. ಹಿಂದಿನ ದಿನಗಳಲ್ಲಿ ಸಣ್ಣ ಸಿಡುಬನ್ನು ತಡೆಗಟ್ಟಲು ಇನಾಕ್ಯುಲೇಷನ್‌ನನ್ನು ಬಳಸುತ್ತಿದ್ದರು. ಈ ಇನಾಕ್ಯುಲೇಷನ್‌ನನ್ನು ಲೇಡಿ ಮೇರಿ ವರ್ಟ್ಲೆ ಮಂಟಗುರವರು ಕಂಡು ಹಿಡಿದಿದ್ದಾರೆ. ಸಣ್ಣ ಸಿಡುಬು ತಡೆಗಟ್ಟಲು ಲಸಿಕೆಯನ್ನು ದೇಶದಾದ್ಯಂತ ಬಳಸಲು ಆರಂಭಿಸಿದರು. ಇತ್ತಿಚ್ಛಿಗೆ ವ್ಯಕ್ಸಿನ ಎಂಬ ವೈರಸ್‌ನನ್ನು ಸಣ್ಣ ಸಿಡುಬನ್ನು ತಡೆಗಟ್ಟಲು ಬಳಸುತ್ತಿದ್ದಾರೆ ಆದರೆ ಈ ವೈರಸ್ ಹೇಗೆ ಹುಟ್ಟಿಕೊಂಡಿತು ಎಂದು ಯಾರಿಗೂ ತಿಳಿದ್ದಿಲ್ಲ.

ಚಿಕಿತ್ಸೆ

ಬದಲಾಯಿಸಿ

ಸಣ್ಣ ಸಿಡುಬು ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆಯನ್ನು ನೀಡುವುದರಿಂದ ವಾಸಿ ಮಾಡುತ್ತಾರೆ. ಈ ಲಸಿಕೆಯನ್ನು ಸೋಂಕು ಕಾಣಿಸಿಕೊಂಡ ಮೂರು ದಿನಗಳ ಒಳಗೆ ನೀಡಿದರೆ ಆದು ಸಣ್ಣ ಸಿಡುಬಿನ ರೋಗದ ಲಕ್ಷಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುತ್ತದೆ. ಇದೇ ಲಸಿಕೆಯನ್ನು ನಾಲ್ಕು ದಿನದಿಂದ ಏಳು ದಿನಗಳ ಒಳಗೆ ನೀಡಿದರೆ ಸಣ್ಣ ಪ್ರಮಾಣದಲ್ಲಿ ರೋಗದ ಹರಡುವಿಕೆಯನ್ನು ತಡೆಯಬಹುದು. ಈ ರೋಗಕ್ಕೆ ಯಾವುದೇ ರೀತಿಯ ಮದ್ದು ಅಥವಾ ಮಾತ್ರೆಯನ್ನು ಇದ್ದುವರೆಗೂ ಅಂಗೀಕರಿಸಲಿಲ್ಲ. ಆದರೆ ಅಂಟಿವೈರಲ್ ಚಿಹಿತ್ಸೆಗಳು ಬಳಕೆಯಲ್ಲಿದೆ.

ರೋಗದ ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಲದಿಂದಲ್ಲೂ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಈ ರೋಗದ ಬಗ್ಗೆ ಭಾರತದ ಪ್ರಾಚೀನ ಪುಸ್ತಕಗಳಲ್ಲಿ ಸಹ ಕಂಡು ಬಂದಿದೆ. ಇದು ಮೊದಲಿಗೆ ಈಜಿಪ್ಟ್‌ನಲ್ಲಿ ಕಂಡು ಬಂದಿದೆ. ಆನಂತರ ವ್ಯಾಪಾರಿಗಳ ಮುಖಾಂತರ ಈ ರೋಗ ಭಾರತಕ್ಕೆ ಹಬ್ಬಿತು ಎಂಬ ಇತಿಹಾಸವಿದ್ದೆ. ಭಾರತದಲ್ಲಿ ಹಿಂದೂ ಜನಾಂಗದವರು ಸಣ್ಣ ಸಿಡುಬು ಬಂದಾಗ ಶೀತಲಾ ದೇವಿ ಎಂಬ ದೇವತೆಯನ್ನು ಪೂಜಿಸುವುದರ ಅವರ ರೋಗವನ್ನು ವಾಸಿ ಮಾಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ೧೮ ನೇ ಶತಮಾನದಲ್ಲಿ ಈ ಸಣ್ಣ ಸಿಡುಬು ಸ್ಥಳೀಯ ರೋಗವಾಗಿ ಕಂಡು ಬಂದಿತ್ತು. ಪ್ರಪಾಂಚದಾದ್ಯಂತ ಹೆಚ್ಚು ಕಡಿಮೆ ಎಲ್ಲಾ ದೇಶದ ಜನರು ಈ ರೋಗದಿಂದ ನರಳುತ್ತಿದ್ದರು. ಈ ರೋಗವು ಹೆಚ್ಚಿನ ಸಾವಿಗೆ ಕಾರಣವಾಯಿತ್ತು.[೧೦]

ರೋಗ ನಿರ್ಮೂಲನೆ

ಬದಲಾಯಿಸಿ

ಈ ರೋಗವನ್ನು ನಿರ್ಮೂಲನೆಗೊಳಿಸಲು ಅಮೇರಿಕ ಹಾಗೂ ಫಿಲಿಪೈನ್ಸ್ ನಲ್ಲಿ ಮಾಸ್ ವ್ಯಾಕ್ಸಿನೇಷನ್ ಪ್ರೋಗ್ರಮ್ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ೧೮೧೩ ನಲ್ಲಿ ಯು.ಎಸ್ ಕಾಂಗ್ರೆಸ್ ಸರ್ಕಾರವು ವ್ಯಾಕ್ಸಿನ್ ಆಕ್ಟ್‌ನನ್ನು ಪ್ರಾರಂಭಿಸಿದರು. ಸಣ್ಣ ಸಿಡುಬಿನ ಲಸಿಕೆಯನ್ನು ಅಮೇರಿಕದ ಸಾರ್ವಜನಿಕರಿಗೆ ಸುಲಾಭವಾಗಿ ಲಭಿಸಬೇಕೆಂಬುದು ಈ ಆಕ್ಟ್‌ನ ಮುಖ್ಯ ಉದ್ದೇಶವಾಗಿತ್ತು. ಈ ರೀತಿಯಾಗಿ ಮುಂತಾದ ಕಾರ್ಯಕ್ರಮಗಳನ್ನು ಕೈ ಗೊಳ್ಳುತ್ತಾ ಸಣ್ಣ ಸಿಡುಬನ್ನು ವಿಶ್ವದಾದ್ಯಂತ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿತ್ತು.[೧೧]

ಉಲ್ಲೇಖನಗಳು

ಬದಲಾಯಿಸಿ