ಕವಿತಾ ಕುಸುಗಲ್ಲ ಬದಲಾಯಿಸಿ

ಕವಿತಾ ಶಿವಯೋಗಿ ಕುಸುಗಲ್ಲ ಅವರು ಹುಟ್ಟಿದ್ದು ಜೂನ್ ೧೮, ೧೯೭೮ರಂದು ಬೆಳಗಾವಿಯ ದೊಡವಾಡದಲ್ಲಿ.

ಶಿಕ್ಷಣ ಬದಲಾಯಿಸಿ

ಪ್ರಾಥಮಿಕ ಶಿಕ್ಷಣ ಮಹಾಂತೇಶ ನಗರದ ಸರಕಾರಿ ಶಾಲೆಯಲ್ಲಿ. ಪ್ರೌಢ ಶಿಕ್ಷಣ ವನಿತಾ ವಿದ್ಯಾಲಯದಲ್ಲಿ.ಕಾಲೇಜು ಶಿಕ್ಷಣವನ್ನುವಿದ್ಯಾ ಲಿಂಗರಾಜ ಮಹಾವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಇಂಗ್ಲಿಶ ಹಾಗೂ ಕನ್ನಡ ಎರಡರಲ್ಲೂ ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್.ಡಿ.ಯನ್ನು ಕನಾ‍ಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪಡೆದುಕೊಂಡಿದ್ದಾರೆ.

ಉದ್ಯೋಗ ಬದಲಾಯಿಸಿ

ಕಾಲೇಜು ಬದಲಾಯಿಸಿ

ಬೆಳಗಾವಿಯ ಆರ್.ಎಲ್.ಎಸ್., ಕಾರವಾದ ಉಳಗಾದ ಮಹಾಸತಿ ಕಾಲೇಜು, ಬೆಂಗಳೂರಿನ ಪೀಣ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಕೆ.ಕೊಪ್ಪ, ಖಾನಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲು ಇಂಗ್ಲಿಶ ಬೋಧಿಸಿದ್ದಾರೆ.

ವಿಶ್ವವಿದ್ಯಾಲಯ ಬದಲಾಯಿಸಿ

ನಂತರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಶ್ ಅಧ್ಯಯನ ವಿಭಾಗ ಹೀಗೆ ಒಟ್ಟು ಇಪ್ಪತ್ತೊಂದು ವರ್ಷಗಳ ಬೋಧನಾ ಅನುಭವ ಇದೆ.

ಸಾಹಿತ್ಯ ಬದಲಾಯಿಸಿ

ಸೃಜನಶೀಲ ಬರವಣಿಗೆ, ಭಾಷಾಂತರ, ಸಂಪಾದನೆ ಹಾಗೂ ಸಮಶೋಧನೆಯಲ್ಲಿ ತೊಡಗಿರುವ ಇವರ ಈವರೆಗೆ ಒಟ್ಟು ಒಂಬತ್ತು ಪುಸ್ತಗಳು ಪ್ರಕಟವಾಗಿವೆ[೧]. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ಅಕಾಡೆಮಿಯ ಅನಿಕೇತನ(ಇಂಗ್ಲಿಶ) ಜರ್ನಲ್ ದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಿಗೂ ತಮ್ಮ ಸೇವೆಯನ್ನು ನೀಡಿದ್ದಾರೆ.



ಉಲ್ಲೇಖಗಳು ಬದಲಾಯಿಸಿ

  1. https://books.google.co.in/books/about/BETWEEN_THE_LINES.html?id=MRTBDwAAQBAJ&redir_esc=y