ಸದಸ್ಯ:Kathegaara/sandbox
ಯೊಶಿನೋರಿ ಓಶುಮಿ | |
---|---|
ಜನನ | ಫುಕುವೋಕಾ, ಜಪಾನ್ | ಫೆಬ್ರವರಿ ೯, ೧೯೪೫
ರಾಷ್ಟ್ರೀಯತೆ | ಜಪಾನಿ |
ಕಾರ್ಯಕ್ಷೇತ್ರ | ಜೀವಕೋಶ ವಿಜ್ಞಾನಿ |
ಯೊಶಿನೋರಿ ಓಶುಮಿ (ಜಪಾನಿ - 大 隅 良 典, ಫೆಬ್ರವರಿ ೯, ೧೯೪೫ ರಂದು ಜನನ) ಸ್ವಯಂಭಕ್ಷಣ ಕಾರ್ಯವಿಧಾನದಲ್ಲಿ ಪರಿಣಿತರಾದ ಜಪಾನಿನ ಜೀವಕೋಶ ವಿಜ್ಞಾನಿ. ಓಶುಮಿಯವರು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ನವೀನ ಸಂಶೋಧನೆಯ ಪೀಠದಲ್ಲಿ ಪ್ರಾಧ್ಯಾಪಕರಾಗಿದ್ದಾರೆ[1]. ಇವರಿಗೆ ೨೦೧೨ರಲ್ಲಿ ಮೂಲ ವಿಜ್ಞಾನ ವಿಭಾಗದಲ್ಲಿ ಕ್ಯೋಟೋ ಪ್ರಶಸ್ತಿ ಲಭಿಸಿತು[2] ಮತ್ತು ಸ್ವಯಂಭಕ್ಷಣ ಕಾರ್ಯವಿಧಾನಗಳ ಆವಿಷ್ಕಾರಗಳಿಗಾಗಿ ೨೦೧೬ ಸಾಲಿನ ಶರೀರಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿತು[3].
ಜೀವನ ಮತ್ತು ವೃತ್ತಿ
ಬದಲಾಯಿಸಿಓಶುಮಿಯವರು ಜಪಾನಿನ ಫುಕುವೋಕಾದಲ್ಲಿ ಫೆಬ್ರವರಿ ೯, ೧೯೪೫ ರಂದು ಜನಿಸಿದರು. ಅವರು ಟೋಕಿಯೋ ವಿಶ್ವವಿದ್ಯಾಲಯದಿಂದ ೧೯೬೭ರಲ್ಲಿ ಬ್ಯಾಚ್ಯುಲರ್ ಆಫ್ ಸೈನ್ಸ್ ಹಾಗೂ ೧೯೭೪ರಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿಗಳನ್ನು ಪಡೆದರು. ೧೯೭೪ರಿಂದ -೧೯೭೭ರವರೆಗೆ ಅವರು ನ್ಯೂಯಾರ್ಕ್ ನಗರದಲ್ಲಿ ರಾಕಫೆಲ್ಲರ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್-ಡಾಕ್ಟೊರಲ್ ಸದಸ್ಯರಾಗಿದ್ದರು.[1]
೧೯೭೭ರಲ್ಲಿಅವರು ಸಹಾಯಕ ಸಂಶೋಧಕರಾಗಿ ಟೋಕಿಯೋ ವಿಶ್ವವಿದ್ಯಾಲಯಕ್ಕೆ ಮರಳಿದರು. ಅಲ್ಲಿ ೧೯೮೬ರಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು ಮತ್ತು ೧೯೮೮ರಲ್ಲಿ ಸಹ ಪ್ರಾಧ್ಯಾಪಕರಾಗಿ ಬಡ್ತಿಯಾಯಿತು. ೧೯೯೬ರಲ್ಲಿ ಅವರು ಓಕಾಝಾಕಿ ನಗರದಲ್ಲಿನ, ರಾಷ್ಟ್ರೀಯ ಮೂಲಭೂತ ಜೀವಶಾಸ್ತ್ರ ಸಂಸ್ಥೆಗೆ ತೆರಳಿದರು. ಅಲ್ಲಿ ಅವರನ್ನು ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ೨೦೦೪ರಿಂದ ೨೦೦೯ರವರೆಗೆ ಅವರು ಹಯಾಮದಲ್ಲಿನ ಉನ್ನತ ಅಧ್ಯಯನಗಳ ಪದವೀಧರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ೨೦೦೯ರಲ್ಲಿ ಅವರು ಒಮ್ಮೆಲೆ ರಾಷ್ಟ್ರೀಯ ಮೂಲಭೂತ ಜೀವಶಾಸ್ತ್ರ ಸಂಸ್ಥೆ ಮತ್ತು ಉನ್ನತ ಅಧ್ಯಯನಗಳ ಪದವೀಧರ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕ, ಮತ್ತು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ಸಮಗ್ರ ಸಂಶೋಧನಾ ಪೀಠದಲ್ಲಿ ಪ್ರಾಧ್ಯಪಕ ಈ ಮೂರು ಹುದ್ದೆಗಳಿಗೆ ನೇಮಕಗೊಂಡರು. ೨೦೧೪ರಲ್ಲಿ ತಮ್ಮ ನಿವೃತ್ತಿಯ ನಂತರ ಅವರು ಟೋಕಿಯೋ ತಂತ್ರಜ್ಞಾನ ಸಂಸ್ಥೆಯ ನವೀನ ಸಂಶೋಧನೆಯ ಪೀಠದದಲ್ಲಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ, ಅವರು ನವೀನ ಸಂಶೋಧನೆಯ ಪೀಠದಲ್ಲಿನ ಜೀವಕೋಶ ವಿಜ್ಞಾನ ಸಂಶೋಧನಾ ಘಟಕದ
ಮುಖ್ಯಸ್ಥರಾಗಿರುತ್ತಾರೆ. [4]