ಸದಸ್ಯ:Kathegaara/ನನ್ನ ಪ್ರಯೋಗಪುಟ

ಸಂಸ್ಥೆಯ ಪ್ರಕಾರಸಾರ್ವಜನಿಕ
ಸ್ಥಾಪನೆ೧೯೮೬
ಸಂಸ್ಥಾಪಕ(ರು)ಭಾರತ ಸರ್ಕಾರ
ಮುಖ್ಯ ಕಾರ್ಯಾಲಯಮುಂಬೈ, ಮಹಾರಾಷ್ಟ್ರ, ಭಾರತ
ಪ್ರಮುಖ ವ್ಯಕ್ತಿ(ಗಳು)ವಿನೋದ್ ಕುಮಾರ್ (ಸಿ‍ಇ‍ಓ ಮತ್ತು ಎಂ.ಡಿ)
ಉದ್ಯಮದೂರಸಂಪರ್ಕ
ಆದಾಯ೩.೨ ಶತಕೋಟಿ ಡಾಲರ್ (೨೦೧೪)[೧]
ಆದಾಯ(ಕರ/ತೆರಿಗೆಗೆ ಮುನ್ನ)೧೮೨ ದಶಲಕ್ಷ ಡಾಲರ್ (೨೦೧೧)
ಉದ್ಯೋಗಿಗಳು(೨೦೧೨)
ಪೋಷಕ ಸಂಸ್ಥೆಟಾಟಾ ಸಮೂಹ
ಜಾಲತಾಣwww.tatacommunications.com

ಟಾಟಾ ಕಮ್ಯೂನಿಕೇಶನ್ಸ್ ನಿಯಮಿತ, ಭಾರತೀಯ ಸಂಘಟಿತ ಉದ್ಯಮ ಸಂಸ್ಥೆ ಟಾಟಾ ಸಮೂಹದ ಒಂದು ಜಾಗತಿಕ ದೂರಸಂಪರ್ಕ ಸಂಸ್ಠೆ. ಕಂಪನಿಯ ಸ್ವತ್ತುಗಳಲ್ಲಿ ಸಮುದ್ರಾಂತರ ಮತ್ತು ಭೂಮಿಯ ಮೇಲಿನ ಸಂಪರ್ಕ ಜಾಲಗಳು, ದತ್ತಾಂಶ ಕೇಂದ್ರಗಳು ಒಳಗೊಂಡಿವೆ. ಸಂಸ್ಠೆಯು ಸ್ಥಿರ ಮತ್ತು ನಿಸ್ತಂತು ಸೇವೆಗಳನ್ನು ಒದಗಿಸುತ್ತದೆ. ಇದು ದಕ್ಷಿಣ ಆಫ್ರಿಕಾದ ನಿಯೋಟೆಲ್, ನೇಪಾಳದ ಯುನೈಟೆಡ್ ಟೆಲಿಕಾಂ ಮತ್ತು ಶ್ರೀಲಂಕಾದ ಟಾಟಾ ಕಮ್ಯುನಿಕೇಷನ್ಸ್ ಶ್ರೀಲಂಕಾ ಲಿಮಿಟೆಡ್‍ನ ಷೇರುಗಳನ್ನು ಹೊಂದಿದೆ. [3] ೬೨.೫೭ ದಶಲಕ್ಷ ಚಂದಾದಾರರೊಂದಿಗೆ ಭಾರತದ ಮೊಬೈಲ್ ಸೇವಾದಾರರ ಪಟ್ಟಿಯಲ್ಲಿ ೬ನೇ ಸ್ಠಾನದಲ್ಲಿರುವ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್‍ನಲ್ಲಿಯೂ ಟಾಟಾ ಕಮ್ಯೂನಿಕೇಶನ್ಸ್ ಪಾಲನ್ನು ಹೊಂದಿದೆ.

ಇತಿಹಾಸ ಬದಲಾಯಿಸಿ

ಕಂಪನಿಯನ್ನು ೧೯೮೬ರಲ್ಲಿ ಭಾರತ ನರ್ಕಾರವು ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ (ವಿಎಸ್ಎನ್ಎಲ್) ಎಂದು ಸ್ಥಾಪಿಸಲಾಗಿತ್ತು, ೨೦೦೨ರಲ್ಲಿ ಟಾಟಾ ಸಮೂಹ ವಿಎಸ್ಎನ್ಎಲ್‍ನಲ್ಲಿ ಶೇಖಡ ೪೫ರಷ್ಟು ಪಾಲನ್ನು ಪಡೆದುಕೊಂಡಿತು. ವಿಎಸ್ಎನ್ಎಲ್‍ನ ಅಂತಾರಾಷ್ಟ್ರೀಯ ವಿಭಾಗವನ್ನು ವಿಎಸ್ಎನ್ಎಲ್ ಇಂಟರ್ನ್ಯಾಷನಲ್ ಎಂಬ ಹೆಸರಿನಲ್ಲಿ ೨೦೦೪ರಲ್ಲಿ ಆರಂಭಿಸಲಾಯಿತು.

೨೦೦೮ರ ಫೆಬ್ರವರಿ ೧೩ರಂದು ಟಾಟಾ ಸಮೂಹವು ವಿಎಸ್ಎನ್ಎಲನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡು ಟಾಟಾ ಕಮ್ಯೂನಿಕೇಶನ್ಸ್ ಎಂದು ಮರುನಾಮಕರಣ ಮಾಡತು. ೨೦೦೯ರಲ್ಲಿ ಟಾಟಾ ಕಮ್ಯೂನಿಕೇಶನ್ಸ್ ಮತ್ತು ಟೈಕೋ ಟೆಲಿಕಮ್ಯೂನಿಕೇಶನ್ಸ್ ಟಿಜಿ‍ಎನ್-ಇಂಟ್ರಾ ಏಷ್ಯಾ ಕೇಬಲ್ ವ್ಯವಸ್ಥೆಯನ್ನು ಪೂರ್ಣಗೊಳಿಸಿದವು. ಟಾಟಾ ಕಮ್ಯೂನಿಕೇಶನ್ಸ್ ನಿಯಮಿತ ಮುಂಬೈ ಷೇರು ವಿನಿಮಯ ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆಗಳಲ್ಲಿ ಪಟ್ಟಿಯಗಿದೆ.

 
ಟಾಟಾ ಕಮ್ಯೂನಿಕೇಶನ್ಸ್ ಪ್ರಧಾನ ಕಚೇರಿ, ಮುಂಬೈ

ಸೇವೆಗಳು ಬದಲಾಯಿಸಿ

ಟಾಟಾ ಕಮ್ಯೂನಿಕೇಶನ್ಸ್ ೨೦೧೨ರಲ್ಲಿ ಫಾರ್ಮುಲಾ-೧ ಸ್ಪರ್ಧೆಯೊಂದಿಗೆ ಅಧಿಕೃತ ಸಂಪರ್ಕ ಪೂರೈಕೆದಾರರಾಗುವ ಒಪ್ಪಂದಕ್ಕೆ ಸಹಿ ಹಾಕಿತು. ಇದರೊಂದಿಗೆ ಕಂಪನಿಯೂ ಸ್ಪರ್ಧೆಗೆ ಅಂತರ್ಜಾಲ ತಾಣಾ ಹಾಯಿಸುವ ಮತ್ತು ನೇರ ಸಮಯ ಸೇವೆಗಳನ್ನು ಒದಗಿಸುವಂಥ ಕೋರ್ ಡೇಟಾ ಸೇವೆಗಳನ್ನು ಕೊಡುತ್ತದೆ.[4]

ಜನವರಿ 2016 ರಲ್ಲಿ, ವಿಂಡ್ಸ್ಟ್ರೀಮ್ ಕಮ್ಯುನಿಕೇಷನ್ಸ್, ನ್ಯೂಜೆರ್ಸಿಯ ವಾಲ್ ಟೌನ್‍ಶಿಪ್‍ನಲ್ಲಿರುವ ಟಾಟಾರವರ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‍ನಲ್ಲಿನ (CLS) ಎನ್‍ಜೆ‍ಎಫ಼್‍ಎಕ್ಸ್‍ನ ಉಪಸ್ಥಿತಿಯಿಂದ ಆಶ್ಬರ್ನ್, ವರ್ಜೀನಿಯಾವರೆಗೆ, ತನ್ನ ೧೦೦ಜಿ ಸಂಪರ್ಕ ಜಾಲವನ್ನು ವಿಸ್ತರಿಸುವುದಾಗಿ ಘೋಷಿಸಿತು . ಇದು ವಿಶ್ವದ ಶೇಖಡ ೭೦ರಷ್ಟು ಅಂತರ್ಜಾಲ ಸಂಚಾರದ ಕೇಂದ್ರವಾಗುವುದು ಎಂದು ಅಂದಾಜಿಸಲಾಗಿದೆ. [5]

ಅಧೀನ ಸಂಸ್ಥೆಗಳು ಬದಲಾಯಿಸಿ

  • ಟಾಟಾ ಕಮ್ಯೂನಿಕೇಶನ್ಸ್ ಟ್ರಾನ್ಸ್ಫರ್ಮೇಷನ್ ಸೇವೆಗಳು (ಟಿಸಿಟಿ‍ಎಸ್)
  • ಟಾಟಾ ಕಮ್ಯೂನಿಕೇಶನ್ಸ್ ಡೇಟಾ ಕೇಂದ್ರ ಲಿಮಿಟೆಡ್ (ಟಿಸಿಡಿಸಿ)
  • ಟಾಟಾ ಕಮ್ಯೂನಿಕೇಶನ್ಸ್ ಪೇಮೆಂಟ್ ಸಲ್ಯೂಶನ್ಸ್ ಲಿಮಿಟೆಡ್(ಟಿಸಿಪಿ‍ಎಸ್‍ಎಲ್)
  1. "ಟಾಟಾ ಕಮ್ಯುನಿಕೇಶನ್ಸ್ ಅಂತರ್ಜಾಲ ತಾಣಾ".