ಸದಸ್ಯ:Karthiik gowda/sandbox
ಮೇರಿ ಕ್ಯೂರಿ;
ಮೇರಿ ಕ್ಯೂರಿ ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರಿ ಕ್ಯೂರಿಯೊಂದಿಗೆ ವಿವಾಹವಾದ ನಂತರ ಇವರ ಹೆಸರು ಮೇರಿ ಕ್ಯೂರಿ ಎಂದಾಯಿತು. ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು, ಪ್ರೌಢಶಾಲೆ ಯಲ್ಲೇ ಚಿನ್ನದ ಪದಕವನ್ನ ಗಳಿಸಿದ್ದರು. ೧೮೯೧ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ ತೆರಳಿದರು. ಅಲ್ಲಿನ ಸೌಖನ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು. ಅಲ್ಲೇ ಇವರಿಗೆ ಪಿಯರಿ ಕ್ಯೂರಿಯ ಪರಿಚಯವಾಗಿದ್ದು. ವಿವಾಹದ ನಂತರ ಇಬ್ಬರೂ ಜತೆಗೂಡಿ ಸಂಶೋಧನೆಯನ್ನ ಕೈಗೊಂಡರು.