Karthiik gowda
ಲಿಯನಾರ್ಡೊ ಡ ವಿಂಚಿ;
ಲಿಯನಾರ್ಡೊ ಡ ವಿಂಚಿ (ಏಪ್ರಿಲ್ ೧೫, ೧೪೫೨-ಮೇ ೨, ೧೫೧೯) ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ. ಇವರನ್ನು ಆದರ್ಶ "ನವೋದಯ ಮನುಷ್ಯ" ಮತ್ತು ಹಲವಾರು ವಿಷಗಳಲ್ಲಿ ಇವರು ತೋರಿರುವ ಅಮಿತ ಕುತೂಹಲ, ಆಸಕ್ತಿ ಮತ್ತು ಸೃಜನಶೀಲತೆಯಿಂದಾಗಿ ಸಾರ್ವತ್ರಿಕವಾಗಿ ಮೇಧಾವಿ ಎಂದು ಪರಿಗಣಿಸಲಾಗಿದೆ. ಇವರನ್ನು ಈ ಜಗತ್ತು ಕಂಡ ಅತಿ ಶ್ರೇಷ್ಠ ವರ್ಣಚಿತ್ರಗಾರ ಎಂದು ಕೂಡ ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಇವರು ವಿಶ್ವವಿಖ್ಯಾತ ಮೋನಾಲಿಸಾ ಮತ್ತು ಲಾಸ್ಟ್ ಸಪ್ಪರ್ ವರ್ಣಚಿತ್ರಗಳು ರಚಿಸಿದಲ್ಲದೆ ಹೆಲಿಕಾಪ್ಟರ್, ಯುದ್ದ ಟ್ಯಾಂಕ್, ಸೌರಶಕ್ತಿ ಬಳಕೆ ಇತ್ಯಾದಿ ಈ ಕಾಲದ ಸಂಶೋಧನೆಗಳ ಕುರಿತು ಶತಮಾನಗಳ ಹಿಂದೆಯೇ ವಿನ್ಯಾಸಗಳನ್ನು ರಚಿಸಿದ್ದರು. ಇವರ ವೈಯಕ್ತಿಕ ಪುಸ್ತಕಗಳಲ್ಲಿ, ಶರೀರ ರಚನಾ ಶಾಸ್ತ್ರ, ಖಗೋಳಶಾಸ್ತ್ರ , ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಅನೇಕ ವಿಚಾರಗಳು, ಟಿಪ್ಪಣಿಗಳು ಮತ್ತು ಚಿತ್ರಗಳಿವೆ.