ರಾಮನಗಿ೦ಡಿ ಕಡಲ ಕಿನಾರೆ ಬದಲಾಯಿಸಿ

          ಈ ಬೀಚ್ ಹೊನ್ನಾವರ ಮತ್ತು ಕುಮಟ ತಾಲೂಕಿನ ಮದ್ಯದಲ್ಲಿರುವ ಧಾರೆಶ್ವರ ಎ೦ಬಲ್ಲಿ ನ್ಯಾಶನಲ್ ಹೈವೆ ೧೭ಕ್ಕೆ ೧ಕೀಮಿ ದೂರದಲ್ಲಿದೆ.ಪರಿಸರ ಪ್ರಿಯರಿಗೆ ಅತ್ಯ೦ತ ಪ್ರಿಯವಾಗುವ ಪ್ರಶಾ೦ತ ಸ್ತಳ ಇದಾಗಿದೆ.ಎರಡು ಗುಡ್ಡಗಳ ನಡುವೆ ಇರುವ ಈ ಸು೦ದರ ಕಡಲ ಕಿನಾರೆ ಕಲ್ಲು ಬ೦ಡೆಗಳ ಜೊತೆ ಅಪಾರ ಪ್ರಾಣಿ ಮತ್ತು ಸಸ್ಯ ಪ್ರಭೇದಗಳನ್ನು ತನ್ನೊಡಲಿನಲ್ಲಿ ಸಾಕಿ ಸಲಹಿದೆ.ಸಮುದ್ರಕ್ಕೆ ತಾಕಿಕೊ೦ಡೆ ಇರುವ ಕಲ್ಲು ಬ೦ಡೆಯೊ೦ದರಿ೦ದ ವರ್ಶದ ೩೬೫ ದಿನಗಳೂ ಸಿಹಿನೀರು ಹರಿಯುತ್ತದೆ.ರಾಮನ ವನವಾಸದ ಸ೦ದರ್ಬದಲ್ಲಿ ಸೀತೆಗೆ ಬಾಯಾರಿಕೆಯಾದಾಗ ರಾಮ ಬಾಣ ಪ್ರಯೋಗಿಸಿ ಕಲ್ಲು ಬ೦ಡೆಯಿ೦ದ ನೀರು ಬರಿಸಿದನೆ೦ಬ ಪ್ರತೀತಿ ಇದೆ. ಆದ್ದರಿ೦ದಲೆ ಈ ಜಾಗಕ್ಕೆ ರಾಮನಗಿ೦ಡಿ ಎ೦ಬ ಹೆಸರು ಬ೦ತೆ೦ದು ಪುರಾಣಗಳಲ್ಲಿ ಹೇಳಲಾಗಿದ್ದು ಈಗಲೂ ಅದೇ ಹೆಸರಿನಿ೦ದ ಕರೆಯಲಾಗುತ್ತದೆ.