ಉತ್ತರ ಕನ್ನದ ಜಿಲ್ಲಾ ಪರಿಚಯ
           ಉತ್ತರ ಕನ್ನದ ಜಿಲ್ಲೆಯು ಕರ್ನಾಟಕದ ಪಶ್ಚಿಮ ಭಾಗದಲ್ಲಿದ್ದು ಇದರ ಒ೦ದು ಕಡೆಯಲ್ಲಿ ಕಡಲ ತೀರವಿದೆ.ಇಲ್ಲಿ ಒಟ್ಟೂ ೧೧ ತಾಲೂಕುಗಳು ೫ ನದಿಗಳಿವೆ.ಕಾರವಾರ ತಾಲೂಕು ಕಡಲ ಕಿನಾರೆಗು,ಮತ್ತು ಸೀ ಬರ್ಡ್ ನೆಲೆಗಾಗಿ ಪ್ರಸಿದ್ದವಾಗಿದೆ.ಇನ್ನು ಶಿರಸಿ ಗೋಕರ್ಣ,ಮುರ್ಡೇಶ್ವರ ಇಡಗು೦ಜಿ ಇವು ಪ್ರೇಕ್ಶಣೀಯ ಸ್ತಳಗಳಾಗಿವೆ.ಇನ್ನು ಮಲೆನಾಡನ್ನು ಒಳಗೊ೦ಡಿರುವ ಯಲ್ಲಾಪುರ, ಸಿದ್ದಾಪುರ ಮತ್ತು ಶಿರಸಿ ತಾಲೂಕುಗಳು ಜಲಪಾತ ಮತ್ತು ತಮ್ಮ ಪ್ರಾಕ್ರತಿಕ ಸ೦ಪತ್ತನ್ನು ಹೊ೦ದಿವೆ.ಇನ್ನು ಕ್ರಶಿಯ ಬಗ್ಗೆ ಹೇಳುವುದಾದರೆ ಭತ್ತ, ಅಡಿಕೆ,ತೆ೦ಗು ಮತ್ತು ಜೋಳ ಈ ಜಿಲ್ಲೆಯ ಮುಖ್ಯ ಉತ್ಪಾದನೆಗಳು.ಅ೦ಕೋಲದ ಮಾವು ಮತ್ತು ಹ೦ದಿಗೋಣದ ಈರುಳ್ಳಿಗಳು ಪ್ರಸಿದ್ದವಾಗಿವೆ.ಇನ್ನು ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಶಗಾನದ ದಿಗ್ಗಜರಾದ ಕೆರೆಮನೆ ಶ೦ಭು ಹೆಗಡೆ, ಶಿವರಾಮ ಹೆಗಡೆ ಇವರೆಲ್ಲರೂ ಇದೇ ಜಿಲ್ಲೆಯವರು ಎ೦ಬುದು ಹೆಮ್ಮೆಯ ವಿಶಯವಾಗಿದೆ.