ನಾಗಭೌದ್ಧರಹಳ್ಳಿಯ ಗವಿ ಬೆಟ್ಟ - ನಾಗೇನಹಳ್ಳಿ( ಉಚ್ಚಾಂಗಿ)

  ಪ್ರಕೃತಿಯ ರಾಮ್ಯ ಸೊಬಗನ್ನು ಅಕ್ಷರಶಃ ಸವಿಯಬೇಕಾದರೆ ಒಮ್ಮೆಯಾದರೂ ನೋಡಲೇಬೇಕು. ಕರ್ನಾಟಕ ರಾಜ್ಯದ ಹಾಸನ ಜಿಲ್ಲಯ ಸಕಲೇಶಪುರ ತಲ್ಲುಕಿನ ಚಂಗಡಿಹಳ್ಳಿಯ ಪಂಚಾಯತಿ ವ್ಯಾಪ್ತಿಯ ಹೇರೂರು ದಾಖಲೆ ನಗಭೌದ್ಧರಹಳ್ಳಿ( ನಾಗೇನಹಳ್ಳಿ)ಯನ್ನು.
    ಈ ವನ್ಯ ಸಿರಿಯ ಸೊಬಗಿನ ರಾಶಿ ಮೊಗೆದಷ್ಟೂ ಮುಗಿಯದು ಒಂದೆಡೆ ಕಡಿದಾದ ಬೆಟ್ಟ ಇನ್ನೊಂದೆಡೆ ರಣಪ್ರಪಾತ ಜಲಪಾತದಿಂದ ಬೇಳುವ ನೀರಿನ ಭೋರ್ಗರೆತ , ಮೇಲೆ ಕಣ್ಣೆತ್ತಿ ನೋಡಿದರೆ ನಿಧಾನವಾಗಿ ಚಲಿಸುವ ಮೋಡಗಳು , ಬೆಟ್ಟದ ನಡುವಿನಿಂದ ಭುಗಿಲೆದ್ದ ಬೆಂಕಿಯ ದಟ್ಟ ಹೋಗೆಯಂತೆ ಮೇಲೇರುವ ಆವಿ , ಬೆಟ್ಟದ ನಡುವೆ ಕಿರಿದಾಗಿ ಹರಿಯುವ ನೂರಾರು ತೊರೆಗಳು , ಪ್ರಶಾಂತ ವಾತಾವರಣದಲ್ಲಿ ವ್ಯಯಾರದಿಂದ ಜೀವನ ಸಾಗಿಸುವ ಕಾಡು ಪ್ರಾಣಿಗಳು, ನೋಡಿದಷ್ಟೂ ಮತ್ತೆ ಮತ್ತೆ ನೋಡುವ ತವಕ.

ಏನು ವಿಶೇಷ?...

  ಉತ್ತರಕ್ಕೆ, ಹೇರೂರು ಹಾಗೂ ನಗಭೌದ್ದರಹಳ್ಳಿ , ದಕ್ಷಿಣಕ್ಕೆ ಹುಲಗುತ್ಹೂರು ಒಡಳ್ಳಿ, ಪೂರ್ವಕ್ಕೆ ಉಚ್ಚಂಗಿ , ಪಶ್ಚಿಮಕ್ಕೆ , ಕೊಡಗು ಜಿಲ್ಲೆಗೆ ಕೇವಲ ೩ ಕಿ.ಮೀ ದೂರದ ಕೂತಿ, ಕುಂದಳ್ಳಿ ಗ್ರಾಮಗಳು ಈ ಎಲ್ಲ ಹಳ್ಳಿಗಳಿಂದ ಸುಮಾರು ೩೦೦೦ ಅಡಿ ಎತ್ತರದ ೫೦೦೦ ಎಕರೆ ಭೂ ಪ್ರದೇಶವುಳ್ಳ ಆಕಾಶಕ್ಕೆ ಮುತಿಕ್ಕುವತಿರುವಾಂತಹ ನಗಭೌದ್ಧರಹಳ್ಳಿಯ ಗವಿಬೆಟ್ಟ.
  ಸಕಲೇಶಪುರಕ್ಕೆ ಬಂದವರು ಈ ನಗಭೋದ್ಧರಹಳ್ಳಿಯ ಗವಿ ಬೆಟ್ಟವನ್ನು ನೋಡಲೇ ಬೇಕೆಂಬ ಮನಸ್ಸು ನಿಮ್ಮದಿದ್ದರೆ ಸಕಲೇಶಪುರದಿಂದ ೫೦ಕೀ.ಮಿ. ಬಿಸಲೆ ಘಾಟಿನಿಂದ ೨೦ ಕೀ.ಮೀ. (ಕೊಡಗು) ಸೋಮರಪೇಟೆಯಿಂದ ೩೦ ಕೀ.ಮೀ. ಶನಿವಾರಸಂತೆಯಿಂದ ೧೦ ಕೀ.ಮೀ., ಚಂಗಡಿಹಳ್ಳ - ಸುಬ್ರಹ್ಮಣ್ಯ ರಸ್ತೆ ಉಚ್ಚಂಗಿ ಸಮೀಪ ನಾಗಭೋದ್ಧರ ಹಳ್ಳಿಯಿಂದ ೨ ಕೀ.ಮೀ., ಶ್ರಮಿಸಿದರೆ ಕಾಡುಗಳ ಮಧ್ಯೆ ಸುತ್ತಲಿನ ರಮಣೀಯ ದೃಶ್ಯಗಳು ಧನ್ಯತೆಯ ಆಹ್ಲಾದ ನೀಡುತ್ತದೆ.