ಸದಸ್ಯ:Jiji C Joy/ನನ್ನ ಪ್ರಯೋಗಪುಟ

ಅಂಧಕಾಸುರ
ಅಂಧಕನನ್ನು ಶಿವ ಕೊಲ್ಲುವ ಭಾಗ

ಅಂಧಕ ಒಬ್ಬ ರಾಕ್ಷಸ, ತಂದೆ ಕಶ್ಯಪ, ತಾಯಿ ಮಹಾಭಾರತದ ಪ್ರಕಾರ ದಿತಿ, ಮತ್ಸ್ಯಪುರಾಣದ ಪ್ರಕಾರ ದನು. ಶಿವನಿಂದ ಹತನಾದ ಎಂದು ಭಾರತವೂ ವಿಷ್ಣುಪುರಾಣವೂ ಮಹಾಲಕ್ಷ್ಮಿಯಿಂದ ಹತನಾದ ಎಂದು ಮಾರ್ಕಂಡೇಯ ಪುರಾಣವೂ ತಿಳಿಸುತ್ತವೆ. ಶಿವನೊಡನೆ ಹೋರಾಡಿ ಕೊನೆಯಲ್ಲಿ ಅವನನ್ನೇ ಮೊರೆ ಹೊಕ್ಕು ಪ್ರಮಥಗಣದಲ್ಲಿ ಒಬ್ಬನಾದನೆಂದು ಮತ್ಸ್ಯಪುರಾಣ ತಿಳಿಸುತ್ತದೆ.

   ಶಿವಪುರಾಣದಲ್ಲಿ ಅಂಧಕನ ಕಥೆ ಹೀಗೆ ವಿವರಿಸಲಾಗಿದೆ
 ಒಂದು ದಿನ ಶಿವ ಮಂದಾರ ಪರ್ವತದ ಮೇಲೆ ಕುಳಿತು ದ್ಯಾನ ಮಾಡುತ್ತಿದ್ದರು.ಅಲ್ಲಿಗೆ ಬಂದ ಪಾರ್ವತಿಯು ಕಳಿತಭಾವದಿಂದ ಶಿವನ ಕಣ್ಣುಗಳನ್ನು ಮುಚ್ಚಿಕೊಂಡಳು.ಕಣ್ಣುಗಳನ್ನು ಮುಚ್ಚಿದ ತಕ್ಷಣವೆ ಇಡೀ ಪ್ರಪಂಚ ಕತ್ತಳಿಂದ ಮೂಡಿತು.ಆಗ ಪಾರ್ವತಿಯ ಕೈಗಳು ಬೆವರಿನಿಂದ ತುಂಬಿ,ಆ ಬೆವರು ನೆಲದ ಮೇಲೆ ಬಿದ್ದು,ಒಂದು ಬಯಂಕರವಾಗಿ ನೋಡುತ ಅಂಧಕ ಹುಡುಗನು ಜನಿಸಿದನು.ಪಾರ್ವತಿ ತಮ್ಮ ಕೈಗಳು ಶಿವನ ಕಣ್ಣುಗಳಿಂದ ತೆಗೆದಾಗ ಪ್ರಪಂಚದಲ್ಲಿ ಮತ್ತೆ ಬೆಳಕು ಮೂಡಿತು.ಪಾರ್ವತಿ ಆ ಹುಡುಗನನ್ನು ನೋಡಿ ಹೆದರಿದಳು.ಆಗ ಶಿವನು, ತಾನು ಮತ್ತು ಪಾರ್ವತಿ ಒಬ್ಬರಿಗೋಬ್ಬರು ತಾಕಿದಾಗ ಹುಟ್ಟಿದ ಮಗನಾಗಿದರಿಂದ ಅವನು ತಮ್ಮ ಮಗನೆಂದು ಹೇಳಿದರು.
   ಅದೇ ಸಂಧರ್ಬದಲ್ಲಿ ಹಿರಿಯಕ್ಷಣ,ಒಬ್ಬ ಅಸುರ ರಾಜ ಮಕ್ಕಳಿಲ್ಲದ ಕಾರಣ, ಒಂದು ಮಗುವಿಗಾಗಿ ಪ್ರಾರ್ಥಿಸುತ್ತಿದ್ದರು.ಅವನ ಪ್ರಾರ್ಥನೆಗೆ ಉತ್ತರವಾಗಿ,ದಂಪತ್ತಿಗಳು ಆ ಮಗುವನ್ನು ಹಿರಿಯಕ್ಷಣನಿಗೆ ಕೊಡಲು ನಿರ್ಧಾರ ಮಾಡಿದರು.ಹಿರಿಯಕ್ಷಣ ಆ ಮಗುವನ್ನು ದತ್ತು ತೆಗೆದುಕೊಂಡು,ಆ ಮಗುವಿಗೆ ಅಂಧಕ ಎಂದು ನಾಮಕರಣ ಮಾಡಿದರು.ಅಂಧಕ ಬೆಳೆದು ದೊಡ್ಡವನಾದಾಗ ಅವನ ತಂದೆ ಅವನನ್ನು ರಾಜನಾಗಿ ಮಾಡಿದರು.ಅವನು ಅಂಧಕಾಸುರನೆಂದು ಪ್ರಸಿದ್ದನಾದನು.ಅವನು ಬ್ರಹ್ಮನಿಗೆ ಹಲವಾರು ತಪಸುಗಳನ್ನು ಮಾಡಿದನು. ಅವನ ಭಕ್ತಿಯನ್ನು ಕಂಡು ಪ್ರಭಾವಿತನಾಗಿ, ಬ್ರಹ್ಮ "ನೀನು ಎನನ್ನು ಬಯಸುವ" ಎಂದು ಕೇಳಿದರು.ಆಗ ಅಂಧಕನು "ಜೀವನ ಪೂರ್ತಿ ಜಯವು ಮತ್ತು ಅಮರತ್ವವನ್ನು ಕೇಳಿದನು.ಬ್ರಹ್ಮ ಅವನ ಮೊದಲ ಆಸೆಯನ್ನು ಸಾದಿಸಿಕೊಟ್ಟ ಅದರ ಜೋತೆ ಹೀಗೆ ಹೇಳಿದರು ನನಗೆ  ಅಮರತ್ವವನ್ನು ಕೊಡಲು ಸಾದ್ಯವಿಲ್ಲ ಯಾಕೆಂದರೆ ಈ ಭೂಮಿಯಲ್ಲಿ ಬಂದ ಎಲ್ಲಾ ಜೀವ ಜಂತುಗಳು ಒಂದು ದಿನ ಸಾಯಲೇ ಬೇಕು" ಎಂದು ಹೇಳಿ ಅದರ ಬದಲಾಗಿ ಅಂಧಕನು ಬಯಸಲಾರದನ್ನು ಬಯಸುವಾಗ ಸಾವು ತನನ್ನು ತಲುಪಿಸುತ್ತದೆ ಎಂದು ಹೇಳಿ ಅಶೀರ್ವಾದ ಮಾಡಿದರು.
     ಅಂಧಕಾಸುರ ಬ್ರಹ್ಮ ದೇವನ ಅಶೀರ್ವಾದವನ್ನು ತಮ್ಮ ಶಸ್ತ್ರಗಲು ಮತ್ತು ರಕ್ಷಣೆಗಿದೆ ಎಂದು ತಿಳಿದುಕೊಂಡು, ದೇವತೆಗಳ ಮೇಲೆ ಯುದ್ದಕ್ಕೆ ಹೋಗುತ್ತಾನೆ.ಅಂಧಕಾಸುರನ ಮುಂದೆ ಶಕ್ತಿಹೀನರು ಎಂದು ತಿಳಿದ ದೇವತೆಗಳು ಶಿವನ ಅಶ್ರಯವನ್ನು ಪಡೆದರು. ಇವರ ಅಪೇಕ್ಷೆಯನ್ನು ಕೇಳಿದ ಶಿವನು ಅಂಧಕಾಸುರನನ್ನು ಸೋಲಿಸಲು ಮುಂದುವರೆಯುತ್ತಾರೆ.
    ಅಂಧಕಾಸುರ ಶಿವ ತನ್ನ ಮೇಲೆ ಯುದ್ದಕ್ಕೆ ಬರುತ್ತಿದ್ದಾನೆ ಎಂಬುವುದನ್ನು ತಿಳಿದು ತನ್ನ ವಿಶ್ವಸ್ತ ಸೈನಿಕರನ್ನು ಶಿವನೊಡನೆ ಯುದ್ದ ಮಾಡಲು ಕಳುಹಿಸಿದನು.ಶಿವ ಅವರನೆಲ್ಲ ಕೊಂದು, ಅಂಧಕಾಸುರನ ಜೋತೆ ಯುದ್ದ ಮಾಡಲು ಹೋಗುತ್ತಾರೆ.ಅಂಧಕಾಸುರ ಮತ್ತು ಶಿವನ ನಡುವೆ ಯುದ್ದ ಪ್ರಾರಂಭವಾಗುತೆ.ಶಿವನನ್ನು ಕೊಲ್ಲಲು ಸಾಧ್ಯವಾಗುವುದ್ದೆಲ್ಲ ಎಂದು ತಿಳಿದ ಅಂಧಕಾಸುರ ಅಲ್ಲಿಂದ ಪಾಲಯನ ಮಾಡಿ,ಪಾರ್ವತಿಯ ಕೋಣೆಗಳಲ್ಲಿ ಬಚ್ಚಿಕೊಳ್ಳುತ್ತಾನೆ.ಅವನು ಅಲ್ಲಿ,ಪಾರ್ವತಿಯನ್ನು ಅಪಹರಣೆ ಮಾಡಿ, ಶಿವನಿಗೆ ಒಂದು ಪಾಠವನ್ನು ಕಳಿಸಬೇಕು ಎಂಬು ಉದ್ದೇಶ ಅವನದಾಗಿರುತೆ.ಇದನ್ನು ತಿಳಿದ ಶಿವ, ಕೋಪಗೊಂಡು ತನ್ನ ತ್ರಿಶೂಲದಿಂದ ಅಂಧಕಾಸುರನನ್ನು ಹೊಡೆದನು.ಆಗ ಅವನ ದೇಹದಿಂದ ರಕ್ತ ಸುರಿದು ನೆಲಕೆ ಬಿದ್ದ ತಕ್ಷಣ ಸಾವಿರಾರು ರಾಕ್ಷಸರು ಜನ್ಮ ತಾಳಿದರು.
      ವಿಷ್ಣುವು ಸ್ವಲ್ಪ ದೂರದಿಂದ ಈ ಯುದ್ದವನ್ನು ನೋಡುತ್ತಿದ್ದಾಯಿದರು.ಪರಿಸ್ಥಿತಿಯು ತಮ್ಮ ಕೈಯಲ್ಲಿ ತಡೆಹಿಡಿಯಲು ಸಾದ್ಯವಾಗುವುದ್ದೆಲ್ಲ ಎಂಬುದನ್ನು ತಿಳಿದ ವಿಷ್ಣು ತಮ್ಮ ಸುಧರ್ಶನ ಚಕ್ರದಿಂದ ಅಂಧಕನ ರಕ್ತದಿಂದ ಹುಟ್ಟಿದ ಎಲ್ಲಾ ಅಸುರರನ್ನು ಕೊಂದನ್ನು.ಕೊನೆಗೆ,ಶಿವನು ಅಂಧಕಾಸುರನನ್ನು ಸಾವಿರೂರು ವರ್ಷಗಳ ಕಾಲ ತಮ್ಮ ತ್ರಿಶೂಲದ ಮೇಲೆ ಹಿಡಿದರು.ಅಂಧಕನ ದೇಹದಿಂದ ಬಿದ್ದ ಒಂದೊಂದು ಹಣಿ ರಕ್ತವನ್ನು ಸಂಗ್ರಹಿಸಿದರು ಯಾಕೆಂದರೆ ಇದರಿಂದ ಇನ್ನು ರಾಕ್ಷಸರು ಜನ್ಮ ತಾಳಬಾರದು ಎಂಬ ಕಾರಣಕ್ಕಾಗಿ.
       ಸಾವಿರಾರು ವರ್ಷಗಳ ಕಾಲ ಶಿವನ ತ್ರಿಶೂಲದ ಮೇಲೆ ತೂಗುಹಾಕಿದ ನಂತರ,ಅಂಧಕಾಸುರನಿಗೆ ತಮ್ಮ ತಪ್ಪುಗಳನ್ನು ಅರ್ಥವಾಯಿತು.ತಾನು ಮಾಡಿದ ಎಲ್ಲಾ ತಪ್ಪುಗಳಿಗಾಗಿ ಶಿವನ ಬಳ್ಳಿ ಕ್ಷಮೆಯನ್ನು ಕೇಳಿಕೊಳ್ಳುತ್ತಾನೆ.
         ಹೀಗೆ ಶಿವ ಪುರಾಣದಲ್ಲಿ ಅಂಧಕನ ಕಥಯು ವಿವರಿಸಲಗಿದೆ.ಹಾಗೆಯೆ ಹಲವಾರು ಪುರಣದಲ್ಲಿ ಅಂಧಕನ ಕಥ ಬೇರೆ ಬೇರೆ ರೀತಿಯಲ್ಲಿ ವಿವರಿಸಲಗಿದೆ.

ಉಲ್ಲೇಖನ

 ೧.[]
 ೨.[]
  1. www.theholidayspot.com/shivratri/shiva-tales/andhaka.htm
  2. hindumythologybynarin.blogspot.com/2013/08/story-of-andhakasura-part-3.html