ಸದಸ್ಯ:Jessanajoseph/ನನ್ನ ಪ್ರಯೋಗಪುಟ/1
ಗೈಲ್ ಅಶ್ಲೇ(ಜನನ ೨೯ ಜನವರಿ ೧೯೪೧) ಇವರು ಸಂಚಯವಿಜ್ಞಾನಿಯಾಗಿದ್ದರು. ಈಕೆ ಓಲ್ಡುವಾಯಿ ಗಾರ್ಜ್‍ಲ್ಲಿ ಮಾಡಿದ ಶಿಲಾಶಾಸ್ತ್ರದ ಅಧ್ಯಯನದಿಂದ ಪ್ರಖ್ಯಾತಿ ಪಡೆದಿದ್ದಾರೆ, ಇವರು ಹವಾಮಾನಶಾಸ್ತ್ರ, ಸಮುದ್ರಶಾಸ್ತ್ರ, ಪುರಾತತ್ವಶಾಸ್ತ್ರ ಮುಂತಾದ ಹಲವು ಅಧ್ಯಯನಗಳಲ್ಲಿ ಭಾಗವಹಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಇವರು ಮುಖ್ಯ ಹುದ್ದೆಗಳನ್ನು ಸಹ ಹೊಂದಿದ್ದಾರೆ, ಇವರು ಸಂಚಯವಿಜ್ಞಾನ ಹಾಗು ಭೂವಿಜ್ಞಾನ ವಿಭಾಗದ ಅಧ್ಯಕ್ಷತೆಯನ್ನು ಸಹ ವಹಿಸಿದ್ದಾರೆ, ಜಿಯೋಲಾಜಿಕಲ್ ಸೊಸೈಟಿ ಆಫ಼್ ಅಮೇರಿಕದ ಎರಡನೆಯ ಮಹಿಳಾ ಅಧ್ಯಕ್ಷರು ಸಹ ಆಗಿದ್ದರು.
ಬಾಲ್ಯ ಮತ್ತು ವಿಧ್ಯಾಭ್ಯಾಸ
ಬದಲಾಯಿಸಿಅಶ್ಲೇ ಮಸ್ಸೆಕುಸೆಟ್ಸ್ ನ ಲಿಯೋಮಿನ್ಸ್ಟರ್‍ನಲ್ಲಿ ಗೈಲ್ ಮೌರಿ ಎಂಬ ಗ್ರಾಮದಲ್ಲಿ ಜನವರಿ ೨೮ ೧೯೪೧ ರಲ್ಲಿ ಜನಿಸಿದರು. ಅವರಿಗೆ ಭೂವಿಜ್ಞಾನದಲ್ಲಿದ್ದ ಆಸಕ್ತಿ ಚಿಕ್ಕವಯಸ್ಸಿನಲ್ಲೆ ಹೆಚ್ಚುತ್ತಾ ಹೋಯಿತು, ಇವರ ನೆರೆಮನೆಯವರಾದ ಭೂವಿಜ್ಞಾನದ ಪ್ರಾಧ್ಯಾಪಕರು ಇವರನ್ನು ನೋಡಿಕೊಳ್ಳುತ್ತಿದ್ದರು. ಯೂನಿವೆರ್ಸಿಟಿ ಆಫ಼್ ಮಸ್ಸೆಕುಸೆಟ್ಸ್, ಆಮ್‍ಹರ್ಸ್ಟ್ ನಲ್ಲಿ ಅಶ್ಲೇ ಅವರು ಬಿ.ಎಸ್.ಸಿ ಭೂವಿಜ್ಞಾನ ವಿಭಾಗದಲ್ಲಿ ೧೯೬೩ ಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದರು. ಹಾಗೆ ಅವರು ಅದೇ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್.ಸಿ ಯಲ್ಲಿ ಸ್ನಾತ್ತಕೋತ್ತರ ಪದವಿಯನ್ನು ೧೯೭೨ ರಲ್ಲಿ ಪಡೆದರು. ಇದಾದ ನಂತರ ಇವರು ಡಾಕ್ಟರಲ್ ಅಧ್ಯಯನಕ್ಕಾಗಿ ಯೂನಿವೆರ್ಸಿಟಿ ಆಫ಼್ ಬ್ರಿಟೀಷ್ ಕೊಲಂಬಿಯಗೆ ತೆರಳಿದರು. ೧೯೭೭ರಲ್ಲಿ ಇವರು ಉಬ್ಬರ ನದಿಗಳ ಮೇಲೆ ಮಾಡಿದ ಸಂಚಯನ ಸಂಶೋಧನೆಗಾಗಿ ಇವರಿಗೆ ಪಿ.ಹೆಚ್.ಡಿ ಪದವಿಯನ್ನು ನೀಡಿ ಸನ್ಮಾನಿಸಲಾಯಿತು.[೧]
ವ್ರುತ್ತಿ ಜೀವನ
ಬದಲಾಯಿಸಿ೧೯೭೭ ರಲ್ಲಿ ಇವರು ಪಿ.ಹೆಚ್.ಡಿ ಪದವಿಯನ್ನು ಪಡೆದರು, ರುಟ್ಜರ್ಸ್ ಯೂನಿವೆರ್ಸಿಟಿಯಲ್ಲಿ ಇವರನ್ನು ಖಾಯಂ ಪ್ರಾಧ್ಯಾಪಕರಾಗಿ ನೇಮಕ ಮಾಡಿದರು, ಮೊದಲ ೨೩ ವರ್ಷಗಳಲ್ಲಿ ಇವರು ಆ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಇವರು ಜರ್ನಲ್ ಆಫ಼್ ಸೆಡಿಮೆಂಟರಿ ರಿಸರ್ಚ್‍ನಲ್ಲಿ ಭೂಗೋಳಶಾಸ್ತ್ರದ ಪ್ರಧಾನ ಸಂಪಾದಕರಾಗಿ, ಇವರ ನೇತೃತ್ವದ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಣ್ಣು ಭೂವಿಜ್ಞಾನಿಗಳಿಗೆ ಮಾರ್ಗದರ್ಷಿಯಾಗಿ ಆದರ್ಶ ರೂಪದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಇವರು ಉನ್ನತ ಸಾಮಾಜಿಕ ಸಂಸ್ಥೆಗಳಾದಂತಹ ಎಸ್.ಇ.ಪಿ.ಎಮ್ (ಸೊಸೈಟಿ ಫ಼ಾರ್ ಸೆಡಿಮೆಂಟರಿ ಜಿಯೋಲಜಿ), ಜಿ.ಎಸ್.ಎ (ಜಿಯೋಲಾಜಿಕಲ್ ಸೊಸೈಟಿ ಆಫ಼್ ಅಮೇರಿಕ), ಹಾಗೂ ಎ.ಜಿ.ಐ (ಅಮೇರಿಕನ್ ಜಿಯೋಸೈನ್ಸ್ ಇನ್ಸ್ಟಿಟ್ಯೂಟ್) ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಹಾಗೆಯೇ ಎನ್.ಎಸ್.ಎಫ಼್ (ನ್ಯಾಷನಲ್ ಸೈನ್ಸ್ ಫ಼ೌಂಡೇಷನ್), ಮತ್ತು ಎನ್.ಆರ್.ಸಿ (ನ್ಯಾಷನಲ್ ರಿಸೋರ್ಸ್ ಕ್ಯಾನಡ)ಗಳಂತಹ ಸಂಚಿತ ಭೂವಿಜ್ಞಾನದಲ್ಲಿ ಸಂಶೋಧನಾ ನಿರ್ದೇಶನಗಳನ್ನು ಪಟ್ಟಿ ಮಾಡುವ ಕೇಂದ್ರಗಳಿಗೆ ನಾಯಕತ್ವವನ್ನು ವಹಿಸಿದ್ದಾರೆ. ಇವರು ಇವರ ಅಧಿಕಾರಾವಧಿಯಲ್ಲಿದ್ದ ಇಲಾಖೆಯಲ್ಲಿನ ಏಕೈಕ ಮಹಿಳಾ ಪ್ರಾಧ್ಯಾಪಕರಾಗಿದ್ದರು. ಅಮೆರಿಕಾ ಬುಲೆಟಿನ್ ಜಿಯಲಾಜಿಕಲ್ ಸೊಸೈಟಿ (ಸಹಾಯಕ, ೧೯೮೯-೧೯೯೫) ಸೇರಿದಂತೆ ಹಲವು ಜರ್ನಲ್ಗಳ ಸಂಪಾದಕರಾಗಿದ್ದರು. ಇದರಲ್ಲಿ ಜರ್ನಲ್ ಆಫ್ ಸೆಡಿಮೆಂಟರಿ ರಿಸರ್ಚ್ (ಸಹವರ್ತಿ, ೧೯೮೭-೧೯೯೦ ಮತ್ತು ೧೯೯೨-೧೯೯೫; ಚೀಫ್, ೧೯೯೬-೨೦೦೦) ಈ ಸಂಸ್ಥೆಯ ಮೊದಲ ಮಹಿಳಾ ಸಂಪಾದಕರಾಗಿದ್ದರು. ಈಕೆ ರುಟ್ಜರ್ಸ್ ಯೂನಿವೆರ್ಸಿಟಿಯಲ್ಲಿ "ಹ್ಯೂಮನ್ ಎವಲ್ಯೂಷನ್ ಆಫ್ ಪ್ಯಾಲೆಯೊಕ್ಲೈಮೇಟ್ ಫ್ರೇಮ್ವರ್ಕ್, ಲೆಸನ್ಸ್ ಫ್ರಮ್ ಓಲ್ಡುವಾಯಿ ಗಾರ್ಜ್, ಟಾಂಜಾನಿಯಾ" ಇದರ ಕುರಿತು ಸಾರ್ವಜನಿಕವಾಗಿ ಉಪನ್ಯಾಸವನ್ನು ನೀಡಿದರು. ಇದಕ್ಕೆ ವೈಸ್ (ವುಮೆನ್ ಇನ್ ಸೈಂಟಿಫ಼ಿಕ್ ಎಡುಕೇಷನ್) ೨೦೧೪ ರಲ್ಲಿ ಪ್ರಚಾರ ನೀಡಿದರು. ಈಕೆಯ ೩೪ ವರ್ಷದ ವೃತ್ತಿ ಜೀವನದಲ್ಲಿ ಇವರು ೯೧ ವೈಜ್ಞಾನಿಕ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ, ಸುಮಾರು ೧೫೦ ಪತ್ರಿಕೆಗಳನ್ನು ಹಲವಾರು ಸಭೆಗಳಲ್ಲಿ ಪ್ರಸ್ತುತಪಡಿಸಿದ್ದರೆ ಹಾಗು ೮೫ ಆಹ್ವಾನಿತ ಉಪನ್ಯಾಸಗಳನ್ನು ಸಹ ನೀಡಿದ್ದಾರೆ.
ಗೈಲ್ ಅಶ್ಲೇಯವರ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನಗಳು ಓಲ್ಡುವಾಯಿ ಗಾರ್ಜ್‍ನಲ್ಲಿ ನಡೆಯಿತು. ಅಶ್ಲೇ ಅವರ ಸಂಶೋಧನಾ ವೃತ್ತಿಜೀವನವು ಹಿಮನದಿ ಮತ್ತು ಪಾಲಿಯೊಕಾಲಜಿ ಮೇಲೆ ಕೇಂದ್ರೀಕರಿಸಿದೆ. ಈಕೆ ಮಾಡಿರುವ ಓಲ್ಡುವಾಯಿ ಗಾರ್ಜ್‍ನಲ್ಲಿನ ಅವಶೇಷಗಳ ಅಧ್ಯಯನಗಳು, ಆರಂಭಿಕ ಹಾರ್ಮಿನಿಡ್ಗಳೊಂದಿಗೆ ಮತ್ತು ಕಾಲದಲ್ಲಿ ನೀರಿನ ಮೂಲಗಳಾಗಿರುವ ಅವುಗಳ ಸಂಭಾವ್ಯತೆಯನ್ನು ಹೊಂದಿದ್ದ ಸ್ಪ್ರಿಂಗ್ಗಳ ಅಧ್ಯಯನಗಳನ್ನು ಒಳಗೊಂಡಿವೆ. ಗ್ಲೇಶಿಯೇಶನ್ ಕುರಿತಾದ ಇವರ ಕೆಲಸವು ಅಂಟಾರ್ಕ್ಟಿಕ, ಬ್ರೂಕ್ಸ್ ರೇಂಜ್, ಐರ್ಲ್ಯಾಂಡ್, ಮತ್ತು ಈಶಾನ್ಯ ಯುನೈಟೆಡ್ ಸ್ಟೇಟ್ಸ್ ನಲ್ಲಿನ ಗ್ಲೇಶಿಯಲ್ ಸ್ಥಿರತೆಯ ಅಧ್ಯಯನಗಳನ್ನು ಒಳಗೊಂಡಿದೆ. ಯು.ಎಸ್ ಪ್ರದೇಶದ ಕೆಲವು ಪರಿಸರದ ಪ್ರಮುಖ ಜವುಗು ಪ್ರದೇಶ ಮತ್ತು ತೇವ ಭೂಮಿಯಲ್ಲಿ ಇವರು ಪೂರ್ವ ಗ್ಲೇಶಿಯನ್ ಪರಿಣಾಮಗಳನ್ನು ಪರಿಶೀಲಿಸಿದ್ದಾರೆ. ಪುರುಷ ವಿಜ್ಞಾನಿಗಳಿಗಿದ್ದಂತೆ ೧೯೭೦ ರ ದಶಕದಲ್ಲಿ ಮಹಿಳಾ ವಿಜ್ಞಾನಿಗಳಿಗೆ ಅವರ ವೃತ್ತಿಜೀವನದಲ್ಲಿ ಅನೇಕ ಅವಕಾಶಗಳು ಇರಲಿಲ್ಲ. ಇದು ಆ ಕಾಲದಲ್ಲಿ ಭಾಗಶಃ ಅಸ್ತಿತ್ವದಲ್ಲಿದ್ದ ಸಾಮಾಜಿಕ ನಿರೀಕ್ಷೆಗಳ ಕಾರಣದಿಂದಾಗಿರಬಹುದು. ಆದರೂ ಅಶ್ಲೇ ಅವರು ಹಿಂಜರಿಯದೆ ತಮ್ಮ ವೃತ್ತಿಯಲ್ಲಿ ಪ್ರಖ್ಯಾತಿ ಪಡೆದರು. ಅಶ್ಲೇ ಅವರು ಈಗ ಹಲವಾರು ಪ್ರಗತಿಯಲ್ಲಿರುವ ಯೋಜನೆಗಳನ್ನು ಕೈಗೊಂಡಿದ್ದಾರೆ, ಪೂರ್ವ ಆಫ್ರಿಕಾದಲ್ಲಿನ ಅವರ ಸಂಶೋಧನೆಯು ಕೀನ್ಯಾ ಮತ್ತು ತಾನ್ಜಾನಿಯ ಪ್ರದೇಶದ ಪೂರ್ವ ಭಾಗದಲ್ಲಿನ ರಿಫ್ಟ್ ಕಣಿವೆಯಲ್ಲಿ ನಡೆಸಲ್ಪಡುತ್ತದೆ. ಇಲ್ಲಿ ಪಾಲಿಯೊನ್ ಪರಿಸರಗಳು ಮತ್ತು ಪ್ಯಾಲೆಯೊಕ್ಲೈಮೇಟ್ ಮೂಲಗಳನ್ನು ಮರುನಿರ್ಮಾಣ ಮಾಡಲು ಈ ಸಂಶೋಧನೆಯ ಮೂಲಕ ಕೇಂದ್ರೀಕರಿಸಿದ್ದಾರೆ, ಪಾಲಿಯೊಎನ್ವಿರೋನ್ಮೆಂಟ್ ಕುರಿತು ಅವರ ವ್ಯಾಖ್ಯಾನಗಳು ಆಧುನಿಕ ಭೌತಿಕ ಪ್ರಕ್ರಿಯೆಗಳ ಅಧ್ಯಯನ ಮತ್ತು ಗ್ಲೇಶಿಯಲ್, ಫ್ಲವಿಯಲ್, ಲ್ಯಾಕ್ರೊಸೈನ್, ಶುಷ್ಕ ಭೂದೃಶ್ಯಗಳಿಂದ ಸಂಗ್ರಹವಾದ ಮಾಹಿತಿಯನ್ನು ಆಧರಿಸಿವೆ. ಆಕೆಯ ಇತರ ನಡೆಯುತ್ತಿರುವ ಸಂಶೋಧನೆಗಳಲ್ಲಿ, ತೇವಾಂಶ ಪ್ರದೇಶಗಳಲ್ಲಿನ ಭೂಗರ್ಭದ ನೀರಿನ ಉಷ್ಣಾಂಶದ ಇತಿಹಾಸ ಒಂದಾಗಿದೆ ಹಾಗೂ ಕ್ರಿಟಿಕಲ್ ಜೋನ್ ಪರಿಕಲ್ಪನೆಯಲ್ಲಿನ ಸಮಯ ಅನ್ವಯದ ಸಂಶೋಧನೆಯು ಒಳಗೊಂಡಿದೆ.[೨]
ಪ್ರ್ರಶಸ್ತಿ ಮತ್ತು ಗೌರವಗಳು
ಬದಲಾಯಿಸಿಅಶ್ಲೇ ತನ್ನ ವೃತ್ತಿಜೀವನದಲ್ಲಿ ಅನೇಕ ವೈಜ್ಞಾನಿಕ ಸಂಸ್ಥೆಗಳ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ವೃತ್ತಿಪರ ಸಮಾಜಗಳಲ್ಲಿ ಬಹಳ ಸಕ್ರಿಯವಾಗಿಯೂ ಇದ್ದರು. ೧೯೯೧-೧೯೯೨ ರವರೆಗೆ ಇವರು ಸೊಸೈಟಿ ಆಫ಼್ ಇಕನಾಮಿಕ್ ಆಂಡ್ ಪೆಟ್ರೋಲಿಯಂ ಮಿನರಲೋಜಿಸ್ಟ್ಸ್ ಸೊಸೈಟಿಯ ಅಧ್ಯಕ್ಷರಾಗಿದ್ದರು ಮತ್ತು ಜಿಯಲಾಜಿಕಲ್ ಸೊಸೈಟಿ ಆಫ್ ಅಮೆರಿಕದ ಈಶಾನ್ಯ ವಿಭಾಗದ ಅಧ್ಯಕ್ಷರಾಗಿದ್ದರು. ಅವರು ಅಸೋಸಿಯೇಶನ್ ಆಫ಼್ ವುಮೆನ್ ಜಿಯೋಸೈಂಟಿಸ್ಟ್ಸ್ ನಲ್ಲಿ ಸಹ ಭಾಗವಹಿಸಿದ್ದರು ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಮಹಿಳೆಯರನ್ನು ತರುವ ಉದ್ದೇಶದಿಂದ ಮಾಡಿದ ಪ್ರಯತ್ನಗಳಿಗೆ ವೈಯಕ್ತಿಕ ಮತ್ತು ವೃತ್ತಿಪರ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ೧೯೯೮-೧೯೯೯ರವರೆಗೆ, ಅವಳು ಜಿಎಸ್ಎ ಅಧ್ಯಕ್ಷತೆ ವಹಿಸಿದ್ದರು ಹಾಗೂ ಅದರ ಇತಿಹಾಸದಲ್ಲೇ ಎರಡನೇ ಮಹಿಳಾ ಅಧ್ಯಕ್ಷರಾಗಿದ್ದರು. ೧೯೯೮ ರಲ್ಲಿ ಅವರು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಸೆಡಿಮೆಂಟಲಜಿಸ್ಟ್ಸ್ನ ಉಪಾಧ್ಯಕ್ಷರಾಗಿಯೂ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದರು, ೨೦೦೨ ರವರೆಗೂ ಅವರು ಈ ಸ್ಥಾನದಲ್ಲಿದ್ದರು. ಆಶ್ಲೇ ಅವರು ಜೀವಮಾನದ ಸಾಧನೆಗಾಗಿ ಜಿಯೋಲಾಜಿಕಲ್ ಸೊಸೈಟಿ ಆಫ಼್ ಅಮೇರಿಕದ ಲಾರೆನ್ಸ್ ಎಲ್. ಸ್ಲೊಸ್ ಪ್ರಶಸ್ತಿಯನ್ನು ೨೦೧೨ ರಲ್ಲಿ ಸ್ವೀಕರಿಸಿದರು.
ವೈಯಕ್ತಿಕ ಜೀವನ
ಬದಲಾಯಿಸಿಗೈಲ್ ಅಶ್ಲೇರವರು ಮೊದಲು ಸ್ಟುವರ್ಟ್ ಆಶ್ಲೇ ಎಂಬುವವರನ್ನು ಮದುವೆಯಾಗಿದ್ದರು, ಹಾಗೂ ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ, ಅಶ್ಲೇರವರು ತಮ್ಮ ೪೧ನೆಯ ವಯಸ್ಸಿನಲ್ಲಿ ಸ್ಟುವರ್ಟ್ ಅಶ್ಲೇ ಅವರಿಂದ ವಿವಾಹ ವಿಚ್ಛೇದನವನ್ನು ಪಡೆದರು, ನಂತರ ಇವರು ಜೆರೆಮಿ ಡೆಲಾನೆಯೊಂದಿಗೆ ಮರುವಿವಾಹವಾದರು.